newsfirstkannada.com

ಸರ್ಕಾರಿ ಶಾಲೆ ಅಂದ್ರೆ ಮೂಗು ಮುರಿಯೋ ಜನ.. ಈ ಸ್ಟೋರಿ ಓದಲೇಬೇಕು!

Share :

03-09-2023

    ಮಾದರಿ ಶಾಲೆಯಾದ ಕರ್ನಾಟಕ ಪಬ್ಲಿಕ್ ಸ್ಕೂಲ್

    ನಾ.ತಿಪ್ಪೇಸ್ವಾಮಿ ಶ್ರಮದಿಂದ ಶಾಲೆಗೆ ಹೈಟೆಕ್‌ ಸ್ಪರ್ಶ

    ಹಿರಿಯೂರು ಹೊಸ ಯಳನಾಡು ಶಾಲೆಗೆ ಪ್ರಸಂಸೆ

ಚಿತ್ರದುರ್ಗ: ಸರ್ಕಾರಿ ಶಾಲೆ ಅಂದ್ರೆ ಮೂಗು ಮುರಿಯುವ ಜನರೇ ಹೆಚ್ಚು. ಯಾಕಂದ್ರೆ, ಗುಣಮಟ್ಟದ ಶಿಕ್ಷಣ ಸಿಗಲ್ಲ, ಸೌಲಭ್ಯಗಳು ಇರಲ್ಲ ಅಂತಾ ಖಾಸಗಿ ಶಾಲೆಯತ್ತ ಮುಖ ಮಾಡುತ್ತಾರೆ. ಆದ್ರೆ, ಇಲ್ಲೊಂದು ಸರ್ಕಾರ ಶಾಲೆ ಮಾತ್ರ ತೀರಾ ವಿಭಿನ್ನ. ಈ ಸ್ಕೂಲ್‌ಗೆ ಅಡ್ಮಿಷನ್‌ ಮಾಡಿಸಲು ಪೋಷಕರು ನಾಮುಂದು ತಾಮುಂದು ಅಂತಾ ಮಕ್ಕಳನ್ನು ಕರೆದುಕೊಂಡು ಬರ್ತಾರೆ. ಅದೆಷ್ಟೋ ಮಕ್ಕಳಿಗೆ ಅಡ್ಮಿಷನ್‌ ಸಿಗದೇ ವಾಪಸ್‌ ಹೋಗ್ತಾರೆ. ಇದು ಚಿತ್ರದುರ್ಗ ಜಿಲ್ಲೆ ಹಿರಿಯೂರು ತಾಲೂಕಿನ ಹೊಸ ಯಳನಾಡು ಗ್ರಾಮದಲ್ಲಿರೋ ಕರ್ನಾಟಕ ಪಬ್ಲಿಕ್ ಸ್ಕೂಲ್. ಇಡೀ ರಾಜ್ಯದಲ್ಲಿಯೇ ಮಾದರಿ ಶಾಲೆಯಾಗಿ ಗುರುತಿಸಿಕೊಂಡಿದೆ. ಸುಮಾರು 11 ಎಕರೆ ವಿಸ್ತಾರವಾದ ಜಾಗದಲ್ಲಿರೋ ಈ ಶಾಲೆ ಯಾವುದೇ ಖಾಸಗಿ ಶಾಲೆಗೂ ಕಮ್ಮಿ ಇಲ್ಲದಷ್ಟು ಹೈಟೆಕ್ ಲ್ಯಾಬ್, ಆಡಿಟೋರಿಯಂ, ಅತ್ಯುತ್ತಮ ಗುಣಮಟ್ಟದ ಶಿಕ್ಷಣವನ್ನು ಹೊಂದಿದೆ.

ಶಾಲೆಗೆ ಹೈಟೆಕ್‌ ಸ್ಪರ್ಶ ನೀಡಿದ ನಾ.ತಿಪ್ಪೇಸ್ವಾಮಿ
ಶಾಲೆಯ ಅಭಿವೃದ್ಧಿಗೆ ಪಣತೊಟ್ಟು ಶ್ರಮಿಸಿದ್ದಾರೆ

ಸರ್ಕಾರಿ ಶಾಲೆ ಈ ಮಟ್ಟಿಗೆ ಹೈಟೆಕ್ ಇದೇಯಾ ಅಂತ ಮೂಗಿನ ಮೇಲೆ ಬೆರಳು ಇಟ್ಕೊ ಬೇಡಿ ಇದು ಸತ್ಯ. 1964ರಲ್ಲಿ ಆರಂಭವಾದ ಈ ಕರ್ನಾಟಕ ಪಬ್ಲಿಕ್ ಸ್ಕೂಲ್ ಇಡೀ ರಾಜ್ಯದಲ್ಲೇ ಹೆಸರಾಂತ ಶಾಲೆಯಾಗಿ ಹೊರಹೊಮ್ಮಿದೆ. ಇದಕ್ಕೆಲ್ಲ ಕಾರಣ ಅಂದರೆ ಇದೇ ಶಾಲೆಯ ಹಳೆ ವಿದ್ಯಾರ್ಥಿ ನಾ.ತಿಪ್ಪೇಸ್ವಾಮಿ ಅವರಾಗಿದ್ದಾರೆ. ಇವರು ತಮ್ಮ ಹುಟ್ಟೂರಿಗೆ ಏನಾದ್ರೂ ಮಾಡಬೇಕು ಅಂತ ನನ್ನ ಊರು ನನ್ನ ತೀರ್ಥಯಾತ್ರೆ ಎಂಬ ಕಾನ್ಸಪ್ಟ್ ಮೂಲಕ ಹೊಸ ಯಳನಾಡು ಶಾಲೆಯನ್ನ ಪುಲ್ ಹೈಟೆಕ್ ಶಾಲೆಯನ್ನಾಗಿ ಮಾಡಿದ್ದಾರೆ. 1964ರಲ್ಲಿ ಆರಂಭವಾದ ಶಾಲೆ 2014 ಹೊತ್ತಿಗೆ ಮುಚ್ಚುವ ಹಂತಕ್ಕೆ ಬಂದಿತ್ತು. ಪ್ರಾಥಮಿಕ, ಫ್ರೌಡ ಶಾಲೆ, ಕಾಲೇಜು ಸೇರಿ ಕೇವಲ 120 ವಿದ್ಯಾರ್ಥಿಗಳು ಮಾತ್ರ ಇದ್ದರು. ಆದ್ರೆ, ಅಂದಿನ ದಿನಗಳಲ್ಲಿ ತಮ್ಮೂರಿ ಶಾಲೆಯ ಪರಿಸ್ಥಿತಿಯನ್ನ ಗಮನಿಸಿದ ತಿಪ್ಪೇಸ್ವಾಮಿ ಅವರು ತಮ್ಮೂರ ಶಾಲೆಯನ್ನ ರಾಜ್ಯ ಮಟ್ಟದಲ್ಲಿ ಬೆಳೆಸಬೇಕು ಅಂತ ಪಣ ತೊಟ್ಟು ಕಾರ್ಯಾಚಣೆಗೆ ಇಳಿಯುತ್ತಾರೆ. 11 ಎಕರೆ ವಿಸ್ತಾರವಾದ ಕರ್ನಾಟಕ ಪಬ್ಲಿಕ್ ಸ್ಕೂಲ್ ನಲ್ಲಿ ವಿಶಾಲವಾದ ಮೈದಾನ, ನೂರಾರು ಕಂಪ್ಯೂಟರ್, ಹೈಟೆಕ್ ಸ್ಮಾರ್ಟ್ ಕ್ಲಾಸ್, ಲೈಬ್ರರಿ ಮಾಡಿ ಸಾವಿರಾರು ಪುಸ್ತಕದ ವ್ಯವಸ್ಥೆ, ಸ್ಮಾರ್ಟ್ ಲೈಬ್ರರಿ, ಪರಿಣಿತ ಶಿಕ್ಷಕರಿಂದ ಬೋಧನೆ, ಸೈನ್ಸ್ ಪಾರ್ಕ್, ಜಿಮ್‌ಗಳನ್ನು ನಿರ್ಮಾಣ ಮಾಡಿಸುತ್ತಾರೆ. ಇಂಥಾ ಸೌಲಭ್ಯವನ್ನು ಇಂದಿನ ದಿನಮಾನಗಳಲ್ಲಿ ಸರ್ಕಾರಿ ಶಾಲೆಯಲ್ಲಿ ಇರಲಿ, ಖಾಸಗಿ ಶಾಲೆಯಲ್ಲಿಯೂ ನೋಡಲು ಸಾಧ್ಯವಿಲ್ಲ. ಅಷ್ಟೊಂದು ಸೌಲಭ್ಯಗಳನ್ನು ಹೊಂದಿರೋ ಶಾಲೆ ಅಂದ್ರೆ ಅದು ಚಿತ್ರದುರ್ಗ ಜಿಲ್ಲೆ ಹಿರಿಯೂರು ತಾಲೂಕಿನ ಹೊಸ ಯಳನಾಡು ಗ್ರಾಮದಲ್ಲಿರೋ ಕರ್ನಾಟಕ ಪಬ್ಲಿಕ್ ಸ್ಕೂಲ್.

ನಾ.ತಿಪ್ಪೇಸ್ವಾಮಿ

ಈ ಸ್ಕೂಲ್‌ನಲ್ಲಿ ಪ್ರೇರಣಾ ಹೈಟೆಕ್ ಸಭಾಂಗಣ ನಿರ್ಮಾಣವಾಗಿದ್ದು ಇಲ್ಲಿ 800 ಜನರ ಕೂತು ಕಾರ್ಯಕ್ರಮ ಮಾಡುವಂತಹ ವಿಶಾಲ ಸಭಾಂಗಣ ಮಾಡಲಾಗಿದೆ. ಮಕ್ಕಳಿಗೆ ನ್ಯೂಟ್ರಿಶನ್ ನೀಡಲಾಗುತ್ತೆ. ಅಲ್ಲದೆ ದೈಹಿಕವಾಗಿ ಮಕ್ಕಳು ಗಟ್ಟಿಯಾಗಲು ಅವರಿಗೆ ಶಾಲೆ ಒಳಾಂಗಣದಲ್ಲೆ ಜಿಮ್ ವ್ಯವಸ್ಥೆ ಮಾಡಲಾಗಿದೆ. ಅಂದ ಹಾಗೇ ಇಷ್ಟೆಲ್ಲ ವ್ಯವಸ್ಥೆ ಮಾಡಿದ್ದು RSS ಮಧ್ಯ ದಕ್ಷಿಣ ಕೇತ್ರದ ಕಾರ್ಯಪಾಲ, ಕೆಪಿಎಸ್‌ ಶಾಲೆಯ ಮಹಾಪೋಷಕರಾದ ನಾ.ತಿಪ್ಪೇಸ್ವಾಮಿ ಅವರು. ಇವರು ತಮ್ಮ ಪ್ರಭಾವ ಬಳಸಿ ತಾವು ಕೂಡ ದೇಣಿಗೆ ನೀಡಿ ಬೇರೆಯವರಿಂದ ಕೂಡ ದೇಣಿಗೆ ಕೊಡಿಸಿ ಶಾಲೆಗೆ ಫುಲ್ ಹೈಟೆಕ್ ಸ್ಪರ್ಶ ಮಾಡಿದ್ದಾರೆ. ಈ ಶಾಲೆಯನ್ನ ಖಾಸಗಿ ಶಾಲೆಗೆ ಸೆಡ್ಡು ಹೊಡೆಯುವ ರೀತಿಯಲ್ಲಿ ನಿರ್ಮಾಣ ಮಾಡಲಾಗಿದೆ. ಜೊತೆಗೆ ಉಚಿತವಾಗಿಯೇ ಮಕ್ಕಳಿಗೆ ಶಿಕ್ಷಣ ನೀಡಿ ಪೋಷಕರ ಪ್ರೀತಿಗೂ ತಿಪ್ಪೇಸ್ವಾಮಿ ಪಾತ್ರರಾಗಿದ್ದಾರೆ.

ಖಾಸಗಿ ಶಾಲೆಯಿಂದ ಕರ್ಕೊಂಡು ಬಂದು ಇಲ್ಲಿ ದಾಖಲಾತಿ!
ಗುಣಮಟ್ಟದ ಶಿಕ್ಷಣಕ್ಕೆ ಮಕ್ಕಳು, ಪೋಷಕರು ಫುಲ್‌ ಖುಷ್‌!

ಶಾಲೆಯೊಂದು ತೆರೆದರೆ ದೇಗುಲವೊಂದು ತೆರೆದಂತೆ ಅನ್ನೋ ಮಾತಿದೆ. ಇದು ಅಕ್ಷರಶಃ ಸತ್ಯ. ಚಿತ್ರದುರ್ಗ ಜಿಲ್ಲೆ ಹಿರಿಯೂರು ತಾಲೂಕಿನ ಹೊಸ ಯಳನಾಡು ಗ್ರಾಮದಲ್ಲಿರೋ ಈ ಸ್ಕೂಲ್‌ ಹೈಟೆಕ್‌ ಆಗಿರೋದ್ರಿಂದ ಈ ಭಾಗದ ಪೋಷಕರು ಮತ್ತು ಮಕ್ಕಳು ಭಾರೀ ಖುಷಿಯಾಗಿದ್ದಾರೆ. ಖಾಸಗಿ ಶಾಲೆಯಲ್ಲಿಯೂ ಸಿಗದ ಗುಣಮಟ್ಟದ ಶಿಕ್ಷಣ ಸರ್ಕಾರಿ ಶಾಲೆಯಲ್ಲಿ ಸಿಗ್ತಿದೆ ಅನ್ನೋ ಸಂತೋಷ ಅವರದಲ್ಲಿದೆ. ಇಂದಿನ ದಿನಮಾನದಲ್ಲಿ ಗುಣಮಟ್ಟದ ಶಿಕ್ಷಣಕ್ಕೆ ಬೇಕಾಗಿರೋ ಸ್ಮಾರ್ಟ್ ಕ್ಲಾಸ್ ಲ್ಯಾಬ್, ಕಂಪ್ಯೂಟರ್ ತಮಗೂ ಕೂಡ ಸಿಗುತ್ತಿದೆ ಅನ್ನೋದಕ್ಕೆ ಮಕ್ಕಳು ಖುಷಿಯಾಗಿದ್ದಾರೆ. ಇನ್ನೊಂದ್‌ ವಿಶೇಷ ಅಂದ್ರೆ, ಈ ಶಾಲೆಯಲ್ಲಿರೋ ಗುಣಮಟ್ಟದ ಸೌಲಭ್ಯವನ್ನು ನೋಡಿ ಅದೆಷ್ಟೋ ಪೋಷಕರು ಖಾಸಗಿ ಶಾಲೆಯಲ್ಲಿರೋ ತಮ್ಮ ಮಕ್ಕಳನ್ನು ಕರ್ಕೊಂಡು ಬಂದು ಈ ಶಾಲೆಗೆ ಸೇರಿಸುತ್ತಿದ್ದಾರೆ. ಈ ಸ್ಕೂಲ್‌ನ ಹೈಟೆಕ್‌ ಸ್ಪರ್ಶ ನೋಡಿ ಆದಿಚುಂದನಗಿರಿ ಶ್ರೀ ನಿರ್ಮಲಾನಂದನಾಥ ಸ್ವಾಮೀಜಿ, ಮಾಜಿ ಶಿಕ್ಷಣ ಸಚಿವ ಸುರೇಶ್‌ ಕುಮಾರ್‌, ಅನೇಕ ಸಚಿವರು, ಶಾಸಕರು, ಚಿಂತಕರು ಶಾಲೆಗೆ ಭೇಟಿ ನೀಡಿ ಪ್ರಶಂಸೆ ವ್ಯಕ್ತಪಡಿಸಿದ್ದಾರೆ.

ಇನ್ನು ಈ ಶಾಲೆಯ ಇತಿಹಾಸವನ್ನು ತೆರೆದು ನೋಡ್ತಾ ಹೋದ್ರೆ 1964 ರಲ್ಲಿ ಆರಂಭವಾಗಿರೋದು ಗೊತ್ತಾಗುತ್ತಿದೆ. ಆರಂಭದಲ್ಲಿ ಶಾಲೆ ಚೆನ್ನಾಗಿಯೇ ಇತ್ತು. ಆದ್ರೆ, ಈ ಮಧ್ಯೆ ಖಾಸಗಿ ಶಾಲೆಗಳ ಹಾವಳಿಯಿಂದ ಹಾಜರಾತಿ ಕಡಿಮೆ ಆಗುತ್ತಾ ಬಂದಿತ್ತು. ಇದರಿಂದ ಶಾಲೆ ಎಲ್ಲಿ ಮುಚ್ಚುತ್ತೋ ಅನ್ನೋ ಭಯ ಆತಂಕ ಸಹಜವಾಗಿ ಈ ಭಾಗದ ಜನರಲ್ಲಿಯೂ ಇತ್ತು, ಶಾಲಾ ಶಿಕ್ಷಕರಲ್ಲಿಯೂ ಇತ್ತು. ಆದ್ರೆ, ಅದ್ಯಾವಾಗ ನಾ.ತಿಪ್ಪೇಸ್ವಾಮಿ ಅವರು ಶಾಲೆ ಉಳಿಸುವ ಬಗ್ಗೆ ತೀರ್ಮಾನ ತೆಗೆದುಕೊಂಡರೋ ಅಲ್ಲಿಂದ ಶಾಲೆಯ ಚಿತ್ರಣವೇ ಬದಲಾಗಿ ಹೋಯಿತು. 2014 ರಲ್ಲಿ ಹೊಸ ಯಳನಾಡು ಶಾಲೆಯಲ್ಲಿ ಕೆಪಿಎಸ್ ಆರಂಭವಾಯಿತು. KPS ಶಾಲೆ ಅಂದರೆ ಇಲ್ಲಿ LKG, UKG ಯಿಂದ ಹಿಡಿದು ಪಿಯುಸಿವರೆಗೆ ಶಿಕ್ಷಣ ನೀಡಲಾಗ್ತಿದೆ. ಕನ್ನಡ ಮಿಡಿಯಂ, ಇಂಗ್ಲಿಷ್ ಮಿಡಿಯಂ ಎರಡೂ ಇದೆ. ಪಿಯುಸಿಯಲ್ಲಿ ಸೈನ್ಸ್, ಕಾಮರ್ಸ್, ಆರ್ಟ್ಸ್ ಕೂಡ ಇದ್ದು ನೂರಾರು ವಿದ್ಯಾರ್ಥಿಗಳಿದ್ದಾರೆ. ಈ ಶಾಲೆಗೆ ಸುತ್ತ ಮುತ್ತಲಿನ 20ಕ್ಕೂ ಅಧಿಕ ಹಳ್ಳಿ ಮಕ್ಕಳು ಬರುತಿದ್ದು, ಇವರಿಗೆ ಶಾಲೆಯಿಂದ ಬಸ್ ವ್ಯವಸ್ಥೆ ಕೂಡ ಮಾಡಲಾಗಿದೆ. ಅಲ್ಲದೇ ಪ್ರೈಮರಿ, ಹೈಸ್ಕೂಲ್ ಶಾಲೆಯ ಮಕ್ಕಳನ್ನ ಜೊತೆ ಪಿಯುಸಿ ವಿದ್ಯಾರ್ಥಿಗಳಿಗೂ ಮಧ್ಯಾಹ್ನದ ಬಿಸಿಯೂಟ ವ್ಯವಸ್ಥೆ ಮಾಡಲಾಗುತ್ತಿದೆ. ಜೊತೆಗೆ ಮೂರು ತಿಂಗಳಿಗೊಮ್ಮೆ ಶಾಲೆಯಲ್ಲಿ ಹೆಲ್ತ್‌ ಕ್ಯಾಂಪ್ ಮಾಡಿಸಿ ಮಕ್ಕಳಿಗೆ ಉಚಿತ ವೈದ್ಯಕೀಯ ತಪಾಸಣೆ ಮಾಡಿ ಅವರಿಗೆ ಫ್ರೀ ಔಷಧಿಯನ್ನ ಕೂಡ ನೀಡಲಾಗ್ತಿದೆ. ವಿಶೇಷ ಅಂದ್ರೆ, 2014ರಲ್ಲಿ ಈ ಶಾಲೆ ಮುಚ್ಚುವ ಹಂತಕ್ಕೆ ಬಂದಿತ್ತು. ಆದರೆ ನಾ.ತಿಪ್ಪೇಸ್ವಾಮಿ ಅವರ ಶ್ರಮದಿಂದಾಗಿ ಶಾಲೆ ಖಾಸಗಿ ಶಾಲೆಗೆ ಸೆಡ್ಡು ಹೊಡೆಯುವಷ್ಟು ಬೆಳೆದು ನಿಲ್ಲುವಂತಾಗಿದೆ. ಇದೀಗ 900ಕ್ಕೂ ಹೆಚ್ಚಿನ ವಿದ್ಯಾರ್ಥಿಗಳು ಇಲ್ಲಿದ್ದಾರೆ. ಇಲ್ಲಿ ಅಡ್ಮಿಶನ್ ಸಿಗದೇ ಅದೆಷ್ಟೋ ವಿದ್ಯಾರ್ಥಿಗಳು ಪ್ರತಿ ವರ್ಷ ವಾಪಸ್ ತೆರಳುವಂತ ಪರಿಸ್ಥಿತಿಯೂ ಇದೆ. ಅಂದ್ರೆ ಶಾಲೆಯಲ್ಲಿ ಗುಣಮಟ್ಟದ ಶಿಕ್ಷಣ ಆ ಪರಿಪ್ರಮಾಣದಲ್ಲಿದೆ ಅಂತಾ ಅರ್ಥ.

ಇಂದಿನ ದಿನಗಳಲ್ಲಿ ಮಕ್ಕಳ ಪೋಷಕರು ಗುಣಾತ್ಮಕ ಶಿಕ್ಷಣ ಕೊಡಿಸಬೇಕು ಅಂತ ಖಾಸಗಿ ಶಿಕ್ಷಣ ಸಂಸ್ಥೆ ಹಿಂದೆ ಬಿದ್ದು, ಲೋನ್ ಮಾಡಿ ಲಕ್ಷಾಂತರ ಡೊನೇಷನ್ ಕಟ್ಟುತಿದ್ದಾರೆ. ಆದರೆ, ಇಲ್ಲಿ ಯಾವುದೇ ಡೊನೇಷನ್ ಇಲ್ಲದೆ ಎಲ್ಲವೂ ಉಚಿತವಾಗಿ ಸರ್ಕಾರಿ ಶಾಲೆಯಲ್ಲಿ ಸಿಗುತ್ತಿರುವುದಕ್ಕೆ ಖಾಸಗಿ ಶಾಲೆ ಮಕ್ಕಳು ಪೋಷಕರು ಗಾಬರಿಯಾಗಿದ್ದಾರೆ. ಒಂದು ಸರ್ಕಾರಿ ಶಾಲೆ ಈ ಮಟ್ಟಿಗೆ ಹೆಸರು ಮಾಡ್ತಿದೆ ಅಂದ್ರೆ ಖಂಡಿತ ನಾವು ನೀವು ಖುಷಿ ಪಡುವ ವಿಚಾರ. ಅದ್ರಲ್ಲಿಯೂ ಶಾಲೆಗೆ ಹೈಟೆಕ್‌ ಸ್ಪರ್ಶ ನೀಡಿರೋ ನಾ.ತಿಪ್ಪೇಸ್ವಾಮಿ ಅವ್ರ ಕಾರ್ಯ ಪ್ರಶಂಸನೀಯ. ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಸರ್ಕಾರಿ ಶಾಲೆಯನ್ನು ಉಳಿಸ್ಕೊಂಡು ಹೋಗುವ ಅನಿವಾರ್ಯತೆ ಖಂಡಿತವಿದೆ. ಅಂತಾ ಕೆಲಸಗಳು ಆಗಬೇಕು ಅಂತಾದ್ರೆ ನಾ.ತಿಪ್ಪೇಸ್ವಾಮಿ ಅವರಂತೆ ಸಾಮಾಜಿಕ ಕಾಳಜಿ ಉಳ್ಳವರು ಮುಂದೆ ಬರಬೇಕು. ಹಾಗಾದ್ರೆ ಮಾತ್ರ ನಮ್ಮ ಸರ್ಕಾರಿ ಶಾಲೆಗಳು ಖಾಸಗಿ ಶಾಲೆಗೆ ಸ್ಪರ್ಧೆ ನೀಡಲು ಸಾಧ್ಯ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಸರ್ಕಾರಿ ಶಾಲೆ ಅಂದ್ರೆ ಮೂಗು ಮುರಿಯೋ ಜನ.. ಈ ಸ್ಟೋರಿ ಓದಲೇಬೇಕು!

https://newsfirstlive.com/wp-content/uploads/2023/09/school-5.jpg

Load More