ರಕ್ತದಾನವನ್ನು ಫೋಟೋಶೂಟ್ ಸರಕಾಗಿಸಿಕೊಂಡ ಬಿಜೆಪಿಯ ಮಹಾಶಯ
ಮೊರದಾಬಾದ್ ಬಿಜೆಪಿ ಕಚೇರಿಯಲ್ಲಿ ನಗೆಪಾಟಲಿಗೆ ಈಡಾಗಿಬಿಟ್ಟ ಮೇಯರ್
ರಕ್ತ ಕೊಟ್ಟಂತೆ ಪೋಸ್ ಕೊಟ್ಟು, ಫೋಟೋ ತೆಗೆದ ತಕ್ಷಣ ಎಸ್ಕೇಪ್ ಆದ ಆಸಾಮಿ
ರಕ್ತದಾನ ಹಾಗೂ ನೇತ್ರದಾನ ಈಗ ದೊಡ್ಡ ಮಟ್ಟದ ಶ್ರೇಷ್ಠತೆಯನ್ನು ಪಡೆದಿವೆ. ಹುಟ್ಟು ಹಬ್ಬದಂದು ಅಥವಾ ನಮ್ಮ ನೆಚ್ಚಿನವರ ಹುಟ್ಟುಹಬ್ಬದಂದು ನಾವು ರಕ್ತದಾನ ಮಾಡಿ ಅದನ್ನು ಫೋಟೋ ಶೇರ್ ಮಾಡುವ ಮೂಲಕ ಅನೇಕರಿಗೆ ಸ್ಪೂರ್ತಿಯಾದೆವು ಅನ್ನೋ ಖುಷಿ ನಮ್ಮದಾಗಿರುತ್ತದೆ. ಆದ್ರೆ ಈ ದಾನವೂ ಕೂಡ ಕೇವಲ ಪ್ರಮೋಷನ್ಗೆ, ಫೋಟೋಶೂಟ್ಗೆ ಸೀಮಿತವಾದ್ರೆ ನಾವು ಜನರ ಬಾಯಲ್ಲಿ ನಗೆಪಾಟಲಿಗೆ ಈಡಾಗುತ್ತೇವೆ. ಹೀಗೆಯೇ ನಗೆಪಾಟಲಿಗೆ ಈಡಾಗಿದ್ದಾರೆ ಬಿಜೆಪಿಯ ಮೇಯರ್ ವಿನೋದ್ ಅಗ್ರವಾಲ್.
ಮೊರಾದಾಬಾದ್ ಮೇಯರ್ ವಿನೋದ್ ಅಗರ್ವಾಲ್ ವಿಡಿಯೋ ವೈರಲ್ ಆಗಿದ್ದು ನೆಟ್ಟಿಗರು ತಮಾಷೆ ಮಾಡುತ್ತಿದ್ದಾರೆ. ಇದು ಪ್ರಧಾನಿ ಮೋದಿಯವರ ಜನ್ಮದಿನ ಸೆ.17ರಂದು ನಡೆದ ಘಟನೆ. ಮೋದಿ ಹುಟ್ಟುಹಬ್ಬದಂದು ಉತ್ತರ ಪ್ರದೇಶದ ಮೊರಾದಾಬಾದ್ ಬಿಜೆಪಿ ಕಚೇರಿಯಲ್ಲಿ ರಕ್ತ ದಾನ ಶಿಬಿರ ಆಯೋಜಿಸಲಾಗಿತ್ತು. ಅಲ್ಲಿಗೆ ರಕ್ತದಾನ ಮಾಡಲು ಬಂದ ಮೊರಾದಾಬಾದ್ ಮೇಯರ್ ವಿನೋದ್ ಅಗರ್ವಾಲ್, ರಕ್ತ ನೀಡಲು ಬೆಡ್ ಮೇಲೆ ಮಲಗಿದ್ದಾರೆ. ಆದರೆ ವೈದ್ಯರು ರಕ್ತ ತೆಗೆದುಕೊಳ್ಳಲು ಬಂದಾಗ ದಿಢೀರ್ ಅಂತ ನಗುತ್ತಾ ಎದ್ದು ಕೂತಿದ್ದಾರೆ.
ಇದನ್ನೂ ಓದಿ: ತಿರುಪತಿ ಲಡ್ಡುವಿನಲ್ಲಿ ದನದ ಕೊಬ್ಬು; ಡಿಸಿಎಂ ಪವನ್ ಕಲ್ಯಾಣ್ ವಿರುದ್ಧ ನಟ ಪ್ರಕಾಶ್ ರಾಜ್ ಆಕ್ರೋಶ
ये मुरादाबाद BJP मेयर विनोद अग्रवाल हैं PM के जन्मदिन पर रक्तदान करने गए थे। खून देने के लिए मेयर साहब बेड पर तो लेटे लेकिन जैसे ही डॉक्टर ने खून निकालने का प्रयास किया, नेता जी हाथ खड़े कर दिये। बोले हम सिर्फ़ फ़ोटो खिंचाने आये थे। मोदी जी इन्हें दिल माफ नहीं करेंगे #Moradabad pic.twitter.com/RISqTfMIuU
— Arun (आज़ाद) Chahal 🇮🇳 (@arunchahalitv) September 20, 2024
ಮೇಯರ್ ವರ್ತನೆಗೆ ಒಂದು ಕ್ಷಣ ಆರೋಗ್ಯ ಸಿಬ್ಬಂದಿಯೇ ಗಲಿಬಿಲಿಗೊಳಗಾಗಿದ್ದಾರೆ. ರಕ್ತದಾನ ಮಾಡಲು ಬಿಜೆಪಿಗೆ ಕಚೇರಿ ಬಂದ ಮೇಯರ್ ರಕ್ತದಾನ ಮಾಡುವ ಮುನ್ನ ಬೆಡ್ ಮೇಲೆ ಮಲಗಿ ಫೋಟೋ ಶೂಟ್ ಮಾಡಿಸಿಕೊಂಡಿದ್ದಾರೆ. ಬಳಿಕ ವೈದ್ಯರು ಅಗರ್ವಾಲ್ ಅವರ ಬಿಪಿ ಪರೀಕ್ಷಿಸಿದ್ದಾರೆ. ಬಳಿಕ ರಕ್ತದಾನ ಪ್ರಕ್ರಿಯೆ ಪ್ರಾರಂಭಿಸಿದ್ದಾರೆ. ತಕ್ಷಣ ಎದ್ದು ಕೂತ ಮೇಯರ್ ‘ಡಾಕ್ಟರ್ ಸಾಹೇಬ್ರೇ ಬಿಡಿ. ನಾವು ರಕ್ತದಾನ ಮಾಡಲು ಬಂದಿಲ್ಲ. ಹೀಗೆ ಸುಮ್ಮನೆ ಬಂದಿದ್ದು’ ಅಂತ ಎದ್ದು ಕೂತಿದ್ದಾರೆ.
ಇದನ್ನೂ ಓದಿ: tirupati laddu: ಲಡ್ಡು ಪ್ರಸಾದದಲ್ಲಿ ಪ್ರಾಣಿಯ ಕೊಬ್ಬು.. ಹೊಸ ಬೇಡಿಕೆಯಿಟ್ಟ ಪವನ್ ಕಲ್ಯಾಣ್!
ಮೊರಾದಾಬಾದ್ ಮೇಯರ್ ವಿನೋದ್ ಅಗರ್ವಾಲ್ರ ಈ ನಟನೆಯ ವಿಡಿಯೋ ವೈರಲ್ ಆಗುತ್ತಿದೆ. ವಿಡಿಯೋ ವೈರಲ್ ಬಳಿಕ ಸ್ಪಷ್ಟನೆ ನೀಡಿರುವ ಮೇಯರ್ ವಿನೋದ್, ‘ನಾನು ಮಧುಮೇಹಿ ರೋಗಿ. ಹೃದ್ರೋಗಿ ಕೂಡ. ಹಾಗಾಗಿ ರಕ್ತದಾನ ಮಾಡಲು ಸಾಧ್ಯವಿಲ್ಲ.’ ಅಂತ ಸ್ಪಷ್ಟನೆ ನೀಡಿದ್ದಾರೆ.
ಮೇಯರ್ ವಿನೋದ್ ವಿಡಿಯೋ ವೈರಲ್ ಆಗಿದ್ದು ನೆಟ್ಟಿಗರು ಬಗೆಬಗೆಯ ಕಮೆಂಟ್ ಮಾಡಿದ್ದಾರೆ. ನಿಮ್ಮನ್ನು ಮೋದಿ ಕ್ಷಮಿಸಿದ್ರು ನಾವು ಕ್ಷಮಿಸಲ್ಲ ಎಂದು ನೆಟ್ಟಿಗರು ಕಮೆಂಟ್ ಮಾಡಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ