newsfirstkannada.com

ಗಣಪತಿ ಹಬ್ಬಕ್ಕೆ ಕೇಂದ್ರದಿಂದ ಬಿಗ್​ ಗಿಫ್ಟ್​​.. ಮಹಿಳಾ ಮೀಸಲಾತಿ ಮಸೂದೆಗೆ ಅನುಮೋದನೆ

Share :

18-09-2023

    ಗೌರಿ ಗಣೇಶ ಹಬ್ಬದ ಪ್ರಯುಕ್ತ ಮಹಿಳೆಯರಿಗೆ ಬಿಗ್​ ಗಿಫ್ಟ್​​

    ಪ್ರಧಾನಿ ಮೋದಿ ನೇತೃತ್ವದ ಕೇಂದ್ರ ಸರ್ಕಾರದಿಂದ ಗಿಫ್ಟ್​..!

    ಮಹಿಳಾ ಮೀಸಲಾತಿಗೆ ಕೇಂದ್ರ ಸಂಪುಟದಿಂದ ಅನುಮೋದನೆ

ನವದೆಹಲಿ: ಗೌರಿ ಗಣೇಶ ಹಬ್ಬದ ಪ್ರಯುಕ್ತ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಮಹಿಳೆಯರಿಗೆ ಬಿಗ್​ ಗಿಫ್ಟ್​ ಕೊಟ್ಟಿದೆ. ಇಂದು ಮಹಿಳಾ ಮೀಸಲಾತಿ ಮಸೂದೆಗೆ ಕೇಂದ್ರ ಸಂಪುಟ ಸಭೆ ಅನುಮೋದನೆ ನೀಡಿದೆ. ಕೇಂದ್ರ ಸಂಪುಟ ಸಮ್ಮತಿ ನೀಡಿದ್ದು, ಇನ್ಮುಂದೆ ಮಹಿಳೆಯರಿಗೆ ಶೇ.33% ರಾಜಕೀಯ ಮೀಸಲಾತಿ ಸಿಗಲಿದೆ. ಸರ್ಕಾರದ ಮಹತ್ವದ ನಿರ್ಧಾರಕ್ಕೆ ಇಡೀ ದೇಶಾದ್ಯಂತ ಭಾರೀ ಮೆಚ್ಚುಗೆ ವ್ಯಕ್ತವಾಗಿದೆ.

ಇಂದಿನಿಂದ ಆರಂಭವಾದ ಸಂಸತ್ತಿನ ವಿಶೇಷ ಅಧಿವೇಶನದಲ್ಲಿ ಮಹಿಳಾ ಮೀಸಲಾತಿ ಮಸೂದೆ ಮಂಡಿಸಬೇಕು ಎಂದು ಕಾಂಗ್ರೆಸ್ ಸೇರಿದಂತೆ ಕೇಂದ್ರ ವಿಪಕ್ಷಗಳು ಪಟ್ಟು ಹಿಡಿದಿದ್ದವು. ಬಿಜೆಪಿಯವರಿಗೆ ಮಹಿಳೆಯವರ ಮೇಲೆ ಗೌರವ ಇದ್ದರೆ ಕಾಯ್ದೆಗೆ ಅನುಮೋದನೆ ನೀಡಲಿದೆ ಎಂದು ಒತ್ತಾಯಿಸಿದ್ದವು.

ಕೊನೆಗೂ ಮಹಿಳಾ ಮೀಸಲಾತಿ ಮಸೂದೆಯನ್ನು ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರ ಜಾರಿಗೆ ತರಲು ಮುಂದಾಗಿದೆ. ಹಾಗಾಗಿಯೇ ಮಸೂದೆಗೆ ಕೇಂದ್ರ ಸಂಪುಟ ಸಮ್ಮತಿ ನೀಡಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಗಣಪತಿ ಹಬ್ಬಕ್ಕೆ ಕೇಂದ್ರದಿಂದ ಬಿಗ್​ ಗಿಫ್ಟ್​​.. ಮಹಿಳಾ ಮೀಸಲಾತಿ ಮಸೂದೆಗೆ ಅನುಮೋದನೆ

https://newsfirstlive.com/wp-content/uploads/2023/09/modi-13.jpg

Load More