newsfirstkannada.com

ಸಿಎಂ ಸಿದ್ದರಾಮಯ್ಯಗೆ ಭಾರೀ ನಿರಾಸೆ; ಅಕ್ಕಿ ಕೊಡಕ್ಕಾಗಲ್ಲ ಎಂದ ಮೋದಿ ಸರ್ಕಾರ!

Share :

24-06-2023

  ಸಿದ್ದು ಅಕ್ಕಿ ಆಕಾಂಕ್ಷೆಗೆ ಕೇಂದ್ರ ಸರ್ಕಾರ ರೆಡ್​​​ ಸಿಗ್ನಲ್​​​​!

  ರಾಜ್ಯಕ್ಕೆ ಅಕ್ಕಿ ನೀಡಲು ಮೋದಿ ಸರ್ಕಾರ ನಿರಾಕರಣೆ

  ಅಕ್ಕಿ ಸಿಗದೇ ಬರಿಗೈಯಲ್ಲಿ ಬಂದ ಕೆ.ಹೆಚ್. ಮುನಿಯಪ್ಪ

ಬೆಂಗಳೂರು: ಅನ್ನಭಾಗ್ಯ ಕಾಂಗ್ರೆಸ್ ನೀಡಿದ್ದ ಪಂಚ ಗ್ಯಾರಂಟಿಗಳಲ್ಲಿ ಸಲೀಸಾಗಿ ಜಾರಿಯಾಗಬೇಕಿದ್ದ ಯೋಜನೆ. ಯಾವುದೇ ಗೊಂದಲ ಅಡೆತಡೆ ಇಲ್ಲದೇ ಅನುಷ್ಠಾನಗೊಳ್ಳಬೇಕಿದ್ದ ಗ್ಯಾರಂಟಿ. ಆದ್ರೀಗ ಸಿದ್ದು ಸರ್ಕಾರದ ಅನ್ನಭಾಗ್ಯಕ್ಕೂ ಗ್ರಹಣ ಕವಿದಿದೆ. ಕೊಟ್ಟ ಮಾತಿನಂತೆ 10 ಕೆಜಿ ಅಕ್ಕಿ ಕೊಡಲು ಸರ್ಕಾರ ತಿಣುಕಾಡ್ತಿದೆ. ಅಕ್ಕಿಗಾಗಿ ಕೇಂದ್ರದ ಕದತಟ್ಟಿದ್ದ ರಾಜ್ಯ ಸರ್ಕಾರ ಬರಿಗೈನಲ್ಲಿ ವಾಪಸ್‌ ಆಗಿದೆ.

ನುಡಿದಂತೆ ನಡೆಯಬೇಕು. ಕೊಟ್ಟ ಮಾತಿನಂತೆ ಶೀಘ್ರವೇ ಒಂದೊಂದೇ ಗ್ಯಾರಂಟಿಗಳನ್ನ ಜಾರಿಗೊಳಿಸ್ಬೇಕು ಅಂತಾ ಸಿದ್ದರಾಮಯ್ಯ ಹರಸಾಹಸ ಪಡ್ತಿದ್ದಾರೆ. ಶಕ್ತಿ ಜಾರಿಗೊಳಿಸಿ ಗೃಹಜ್ಯೋತಿ ಕ್ಯೂನಲ್ಲಿ ನಿಲ್ಲಿಸಿ. ಇದೀಗ ಅನ್ನಭಾಗ್ಯ ಜಾರಿಗೆ ಕೈ ಹಾಕಿದ್ದಾರೆ. ಆದ್ರೆ, ಅಕ್ಕಿಗಾಗಿ ರಾಜ್ಯ ಸರ್ಕಾರ ಮಾಡ್ತಿರೋ ಕಸರತ್ತಿಗೆ ಕಿಂಚಿತ್ತು ಬೆಲೆ ಸಿಕ್ಕಿಲ್ಲ. ಅನ್ನಭಾಗ್ಯ ಯೋಜನೆಗೆ ಎದುರಾಗಿರೋ ಅಕ್ಕಿ ಸಂಕಷ್ಟ ಬಗೆಹರಿದಿಲ್ಲ.

‘ಅನ್ನಭಾಗ್ಯ’ಕ್ಕೆ ಅಕ್ಕಿ ನೀಡಲು ಮೋದಿ ಸರ್ಕಾರ ನಿರಾಕರಣೆ

ಅಕ್ಕಿಗಾಗಿ ಕಳೆದ ಒಂದು ವಾರದಿಂದ ಸತತ ಪ್ರಯತ್ನ. ಕೇಂದ್ರ ಸರ್ಕಾರದ ಸಚಿವರ ಭೇಟಿಗೆ ನಿರಂತರ ಯತ್ನ. ಆದ್ರೆ, ಫೈನಲ್ ರಿಸಲ್ಟ್‌ ಮಾತ್ರ ಸಿದ್ದರಾಮಯ್ಯ ಸರ್ಕಾರಕ್ಕೆ ನಿರಾಸೆ ತರಿಸಿದೆ.

ಯೆಸ್‌. ಸಿಎಂ ಸಿದ್ದರಾಮಯ್ಯ, ಆಹಾರ ಸಚಿವ ಮುನಿಯಪ್ಪ ಅಕ್ಕಿಗಾಗಿ ಮೋದಿ ಸರ್ಕಾರದ ಮೊರೆ ಹೋಗಿದ್ರು. ಆಹಾರ ಸಚಿವರ ಭೇಟಿಗೆ ದೆಹಲಿಯಲ್ಲಿ ಭಾರೀ ಸರ್ಕಸ್‌ ನಡೆಸಿದ್ರು. ಆದ್ರೆ, ಸಿಎಂ ಸಿದ್ದರಾಮಯ್ಯ, ಗೃಹ ಸಚಿವ ಅಮಿತ್ ಶಾರನ್ನಷ್ಟೇ ಭೇಟಿ ಮಾಡಿ ವಾಪಸ್ ಬಂದಿದ್ರು. ಇತ್ತ ಆಹಾರ ಸಚಿವ ಮುನಿಯಪ್ಪ, ಕೇಂದ್ರ ಆಹಾರ ಸಚಿವ ಪಿಯೂಷ್ ಗೋಯಲ್ ಭೇಟಿಗೆ ವಾರದಿಂದ ಕಾದು ಕೂತಿದ್ರು. ಆದ್ರೂ ಪಿಯೂಷ್ ಗೋಯಲ್ ಭೇಟಿಗೆ ಅವಕಾಶ ಸಿಕ್ಕಿರ್ಲಿಲ್ಲ. ಕೊನೆಗೂ ಕೆ.ಹೆಚ್. ಮುನಿಯಪ್ಪ, ಗೋಯಲ್‌ರನ್ನ ಭೇಟಿ ಮಾಡಿ ಅಕ್ಕಿ ಆಕಾಂಕ್ಷೆಯನ್ನ ಬಿಚ್ಚಿಟ್ಟಿದ್ರು. ಆದ್ರೆ, ಕರ್ನಾಟಕಕ್ಕೆ ಎಫ್‌ಸಿಐನಿಂದ ಹೆಚ್ಚುವರಿ ಅಕ್ಕಿ ಕೊಡಲು ಕೇಂದ್ರ ಆಹಾರ ಸಚಿವರು ನಿರಾಕರಿಸಿದ್ದಾರೆ. ಈ ಮೂಲಕ ಕೇಂದ್ರ ಸರ್ಕಾರದ ಜೊತೆಗಿನ ರಾಜ್ಯದ ಅಕ್ಕಿ ಸಭೆ ವಿಫಲವಾಗಿದೆ. ರಾಜ್ಯಕ್ಕೆ ಕೇಂದ್ರದ ಹೆಚ್ಚುವರಿ ಅಕ್ಕಿಭಾಗ್ಯ ಸಿಗದಾಗಿದೆ.

‘ಅಕ್ಕಿ’ ಸಭೆಯ ಚರ್ಚೆಯೇನು?

ಪಿಯೂಷ್‌ ಗೋಯಲ್‌ರ ಬಳಿ ಅಕ್ಕಿ ಪೂರೈಕೆ ನೀತಿ ಬದಲಾವಣೆಗೆ ಮುನಿಯಪ್ಪ ಒತ್ತಾಯಿಸಿದ್ದಾರೆ ಎನ್ನಲಾಗಿದೆ. ಆದ್ರೆ, ಅಕ್ಕಿ ಪೂರೈಕೆ ನೀತಿ ಬದಲಾಯಿಸುವುದಕ್ಕೆ ಸಾಧ್ಯವಿಲ್ಲ ಅಂತಾ ಕೇಂದ್ರ ಸರ್ಕಾರ ತಿಳಿಸಿದೆ. ಅಲ್ಲದೇ ಎಲ್ಲಾ ರಾಜ್ಯಗಳಿಗೂ ಹೆಚ್ಚುವರಿ ಅಕ್ಕಿ ಮಾರಾಟ ಸ್ಥಗಿತಗೊಳಿಸಲಾಗಿದೆ. ಬೆಲೆ ಏರಿಕೆ ನಿಯಂತ್ರಣಕ್ಕೆ ಎಫ್‌ಸಿಐ ಈ ಕ್ರಮ ಕೈಗೊಂಡಿರೋದಾಗಿ ತಿಳಿಸಿದೆ. ಅಲ್ಲದೇ ಈಗಾಗಲೇ ಕೇಂದ್ರ ಸರ್ಕಾರ 80 ಕೋಟಿ ಜನರಿಗೆ 5 ಕೆಜಿ ಉಚಿತ ಅಕ್ಕಿ ವಿತರಣೆ ಮಾಡುತ್ತಿದೆ. ಇದ್ರಿಂದ ಉಳಿದ ದೇಶದ 60 ಕೋಟಿ ಜನರಿಗೆ ಅಕ್ಕಿ ಬೆಲೆ ಏರಿಕೆಯ ಬಿಸಿ ತಟ್ಟಬಾರದು. ಒಂದು ವೇಳೆ ಕರ್ನಾಟಕಕ್ಕೆ ಹೆಚ್ಚುವರಿ ಅಕ್ಕಿ ಕೊಟ್ಟರೆ ಭವಿಷ್ಯದಲ್ಲಿ ಎಫ್​ಸಿಐಗೆ ಹೊರೆಯಾಗುವ ಸಾಧ್ಯತೆ ಇದೆ. ಇದ್ರಿಂದ ಉಚಿತ ಅಕ್ಕಿ ನೀಡುವ ಉಳಿದ ರಾಜ್ಯಗಳಿಗೆ ಅಕ್ಕಿ ಪೂರೈಕೆಯ ಹೊರೆ ಎಫ್‌ಸಿಐ ಮೇಲೆ ಬರಲಿದೆ ಅಂತಾ ಕೇಂದ್ರ ಸಚಿವರು ಹೇಳಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.

ಇಷ್ಟೆಲ್ಲಾ ಕಾರಣಗಳನ್ನ ನೀಡಿರೋ ಕೇಂದ್ರ ಸರ್ಕಾರ ಅಕ್ಕಿ ಕೊಡಲು ನಿರಾಕರಿಸಿದೆ. ಇದು ದೆಹಲಿಗೆ ತೆರಳಿದ್ದ ಆಹಾರ ಸಚಿವ ಮುನಿಯಪ್ಪಗೆ ತೀವ್ರ ಬೇಸರ ತರಿಸಿದೆ. ಕೇಂದ್ರದ ವಿರುದ್ಧ ಸಿಡಿದೇಳುವಂತೆ ಮಾಡಿದೆ.

ಕೇಂದ್ರ ಸಚಿವ ಪಿಯೂಷ್ ಗೋಯಲ್‌ ಜೊತೆ ಸಭೆ ನಡೆಸಿದ ಮುನಿಯಪ್ಪ ಅಕ್ಕಿಗಾಗಿ ಬೇಡಿಕೆ ಇಟ್ಟಿದ್ರು. ಆದ್ರೆ, ಎಷ್ಟೇ ಮನವರಿಕೆ ಮಾಡಿದ್ರು ಕೇಂದ್ರ ಆಹಾರ ಸಚಿವರು ಹಾರಿಕೆ ಉತ್ತರ ನೀಡಿದ್ರು ಅಂತಾ ಸಚಿವ ಕೆ.ಹೆಚ್‌. ಮುನಿಯಪ್ಪ ಕೆಂಡಾಮಂಡಲ ಆಗಿದ್ರು. ಕೇಂದ್ರ ಆಹಾರ ಸಚಿವ ಪಿಯೂಷ್ ಗೋಯಲ್ ವಿರುದ್ಧ ಕಿಡಿಕಾರಿದ್ರು.

ಇನ್ನೂ ಕೇಂದ್ರ ಸರ್ಕಾರದ ನಡೆಯ ಬಗ್ಗೆ ಸಿಎಂ ಸಿದ್ದರಾಮಯ್ಯಗೆ ಸಚಿವ ಮುನಿಯಪ್ಪ ಕರೆ ಮಾಡಿ ಮಾಹಿತಿ ನೀಡಿದ್ದು, ಬನ್ನಿ ಬೇರೆ ವ್ಯವಸ್ಥೆ ಮಾಡೋಣ ಅಂತಾ ಸಿಎಂ ಹೇಳಿದ್ದಾರಂತೆ. ಒಟ್ಟಾರೆ ಅನ್ನಭಾಗ್ಯದ ಅಕ್ಕಿ ಖರೀದಿಗೆ ರಾಜ್ಯ ಸರ್ಕಾರಕ್ಕೆ ಇದ್ದ ಭರವಸೆ ಎಫ್‌ಸಿಐ ಕೂಡಾ ಬಾಗಿಲು ಮುಚ್ಚಿದೆ. ಹೀಗಾಗಿ ಸರ್ಕಾರ ಅಕ್ಕಿ ಖರೀದಿಗೆ ಅನ್ಯ ಮಾರ್ಗ ಹುಡುಕುತ್ತಿದೆ. ಅದೇನೆ ಇರಲಿ ರಾಜ್ಯದ ಜನರಿಗೆ ಜುಲೈ 1ಕ್ಕೆ ಅನ್ನಭಾಗ್ಯ ಸಿಗಲ್ಲ ಅನ್ನೋದಂತೂ ಖಚಿತ.

ಸಿಎಂ ಸಿದ್ದರಾಮಯ್ಯಗೆ ಭಾರೀ ನಿರಾಸೆ; ಅಕ್ಕಿ ಕೊಡಕ್ಕಾಗಲ್ಲ ಎಂದ ಮೋದಿ ಸರ್ಕಾರ!

https://newsfirstlive.com/wp-content/uploads/2023/06/Siddu_23.jpg

Load More