newsfirstkannada.com

ಕರ್ನಾಟಕ ರೈತರಿಗೆ ಸಿಹಿ ಸುದ್ದಿ ಕೊಟ್ಟ ಕೇಂದ್ರ ಸರ್ಕಾರ; ಬೆಂಬಲ ಬೆಲೆಯಲ್ಲಿ ಮತ್ತೆರಡು ಬೆಳೆಗಳ ಖರೀದಿಗೆ ಅನುಮತಿ

Share :

Published August 30, 2024 at 12:05pm

Update August 30, 2024 at 12:09pm

    ರಾಜ್ಯಾದ್ಯಂತ ಖರೀದಿ ಕೇಂದ್ರಗಳ ಆರಂಭಿಸುವಂತೆ ಸೂಚನೆ

    ಬೆಂಬಲ ಬೆಲೆಯಲ್ಲಿ ಉದ್ದು, ಸೋಯಾಬಿನ್ ಖರೀದಿಗೆ ಅನುಮತಿ

    ರಾಜ್ಯದಲ್ಲಿ 90 ದಿನಗಳ ಅವಧಿಗೆ ಖರೀದಿ ಕೇಂದ್ರ ತೆರೆಯಲು ಸೂಚನೆ

ಬೆಂಗಳೂರು: ರಾಜ್ಯದ ರೈತರಿಗೆ ಕೇಂದ್ರ ಸರ್ಕಾರ ಸಿಹಿ ಸುದ್ದಿ ನೀಡಿದ್ದು, ಮತ್ತೆರಡು ಬೆಳೆಗಳನ್ನು ಬೆಂಬಲ ಬೆಲೆ ಅಡಿಯಲ್ಲಿ ಖರೀದಿಸಲು ಅನುಮತಿ ನೀಡಿದೆ. ಈ ಹಿಂದೆ ಹೆಸರು ಕಾಳು (Mung bean), ಸೂರ್ಯಕಾಂತಿ ಬೆಳೆಯನ್ನು ಬೆಂಬಲ ಬೆಲೆಗೆ ಖರೀದಿಸಲು ಅನುಮತಿ ನೀಡಿದ್ದ ಕೇಂದ್ರ, ಇದೀಗ ಉದ್ದು (Black gram) ಹಾಗೂ ಸೋಯಾಬಿನ್ (Soybean) ಅನ್ನೂ ಬೆಂಬಲ ಬೆಲೆಯಲ್ಲಿ ಖರೀದಿಸುವಂತೆ ರಾಜ್ಯ ಸರ್ಕಾರಕ್ಕೆ ನಿರ್ದೇಶನ ಮಾಡಲಾಗಿದೆ ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ತಿಳಿಸಿದ್ದಾರೆ.

ರೈತರಿಗೆ ಗಣೇಶ ಹಬ್ಬಕ್ಕೆ ಗಿಫ್ಟ್
ಕಳೆದ ನಾಲ್ಕೈದು ದಿನಗಳ ಹಿಂದಷ್ಟೇ ಸೂರ್ಯಕಾಂತಿ ಹಾಗೂ ಹೆಸರು ಬೆಳೆಯನ್ನು ಬೆಂಬಲ ಬೆಲೆಯಲ್ಲಿ ಖರೀದಿಸುವಂತೆ ಕೇಂದ್ರ ತಿಳಿಸಿತ್ತು. ಇದೀಗ ರಾಜ್ಯದ ರೈತರಿಗೆ ಗಣೇಶ ಹಬ್ಬದ ಉಡುಗೊರೆ ಎಂದು ಬಣ್ಣಿಸಿರುವ ಕೇಂದ್ರ ಸಚಿವರು, ಕರ್ನಾಟಕದಲ್ಲಿ 2024-25ರ ಮುಂಗಾರು ಹಂಗಾಮಿಗೆ ಬೆಂಬಲ ಬೆಲೆ ಯೋಜನೆಯಡಿ ಉದ್ದು ಮತ್ತು ಸೋಯಾಬೀನ್ ಖರೀದಿಗೆ ಕೃಷಿ ಸಚಿವಾಲಯ ಅನುಮತಿ ನೀಡಿದೆ.

ಮುಕ್ತ ಮಾರುಕಟ್ಟೆಯಲ್ಲಿ ಈ ಬೆಳೆಗಳಿಗೆ ಬೆಲೆ ಕಡಿಮೆ ಇರುವುದರಿಂದ MSP ಅಡಿಯಲ್ಲಿ ಉದ್ದು ಮತ್ತು ಸೋಯಾಬೀನ್ ಗಳಿಗೆ ಪ್ರತೀ ಕ್ವಿಂಟಾಲ್​ಗೆ 7,400 ರೂಪಾಯಿ ಮತ್ತು 4,892 ರೂಪಾಯಿ ಮೌಲ್ಯದಲ್ಲಿ ಖರೀದಿಸಿ ರೈತರಿಗೆ ಅನುಕೂಲ ಕಲ್ಪಿಸುವಂತೆ ಸೂಚಿಸಿದೆ. ರಾಜ್ಯದ ರೈತರು ಬೆಳೆದ 19,760 ಮೆಟ್ರಿಕ್ ಟನ್ ಉದ್ದಿನ ಬೇಳೆ ಹಾಗೂ 1,03,315 ಮೆಟ್ರಿಕ್ ಟನ್ ಸೋಯಾಬೀನ್ ಬೆಳೆಗಳನ್ನು ಖರೀದಿ ಮಾಡಲು ರಾಜ್ಯ ಸರ್ಕಾರಕ್ಕೆ ನಿರ್ದೇಶನ ಮಾಡಿದೆ. ಕರ್ನಾಟಕ ಸರ್ಕಾರ ತಕ್ಷಣವೇ ರಾಜ್ಯಾದ್ಯಂತ ಖರೀದಿ ಕೇಂದ್ರಗಳನ್ನು ಆರಂಭಿಸಿ ಖರೀದಿ ಪ್ರಕ್ರಿಯೆಗೆ ಚಾಲನೆ ನೀಡಬೇಕೆಂದು ಕೇಂದ್ರ ಸಚಿವರು ಒತ್ತಾಯಿಸಿದ್ದಾರೆ.

ಇದನ್ನೂ ಓದಿ:ಮೋದಿಗೆ ಆಹ್ವಾನ ನೀಡಿದ ಪಾಕಿಸ್ತಾನ; ಹೊಸ ಚರ್ಚೆ ಹುಟ್ಟುಹಾಕಿದ ಪಾಕ್​ನ ಬಿಗ್​ ಸ್ಟೇಟ್​​ಮೆಂಟ್..!

ಅಂದಹಾಗೆಯೇ ರಾಜ್ಯದಲ್ಲಿ 90 ದಿನಗಳ ಅವಧಿಗೆ ಖರೀದಿ ಕೇಂದ್ರ ತೆರೆದು ಉದ್ದು ಮತ್ತು ಸೋಯಾಬಿನ್ ಖರೀದಿಸುವಂತೆ ತಿಳಿಸಲಾಗಿದೆ. ಉದ್ದಿನ ಕಾಳು 7400 ರೂಪಾಯಿ ಮತ್ತು 4892 ರೂಪಾಯಿ ಬೆಂಬಲ ಬೆಲೆಯನ್ನು ನಿಗದಿಪಡಿಸಿದೆ. ಕಳೆದ ವರ್ಷ 6950 ರೂಪಾಯಿ ಇದ್ದ ಉದ್ದಿನ ಬೆಂಬಲ ಬೆಲೆ ಪ್ರಸಕ್ತ ಮುಂಗಾರು ಹಂಗಾಮಿನಲ್ಲಿ 450 ರೂಪಾಯಿ ಹೆಚ್ಚಳ ಕಂಡಿದೆ. 4600 ದರವಿದ್ದ ಸೋಯಾಬಿನ್ ಬೆಂಬಲ ಬೆಲೆ ಈಗ 292 ರೂಪಾಯಿ ಹೆಚ್ಚಳವಾಗಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಕರ್ನಾಟಕ ರೈತರಿಗೆ ಸಿಹಿ ಸುದ್ದಿ ಕೊಟ್ಟ ಕೇಂದ್ರ ಸರ್ಕಾರ; ಬೆಂಬಲ ಬೆಲೆಯಲ್ಲಿ ಮತ್ತೆರಡು ಬೆಳೆಗಳ ಖರೀದಿಗೆ ಅನುಮತಿ

https://newsfirstlive.com/wp-content/uploads/2024/08/NARENDRA-MODI-2.jpg

Load More