newsfirstkannada.com

76th Independence day: ಚಟ್ನಿ ಕಳಿಸಿಕೊಟ್ಟ ಮಹಿಳೆಗೆ ವಿಶೇಷ ಅತಿಥಿಯಾಗಿ ಭಾಗಿಯಾಗುವ ಆಹ್ವಾನ ಕೊಟ್ಟ ಮೋದಿ!

Share :

13-08-2023

    ಸ್ವಾತಂತ್ರ್ಯ ದಿನಾಚರಣೆಯಂದು ವಿಶೇಷ ಅತಿಥಿಯಾಗುವ ಅವಕಾಶ

    ಆ್ಯಪಲ್​ ಚಟ್ನಿಗೆ ಫಿದಾ ಆದ ಪ್ರಧಾನಿ ನರೇಂದ್ರ ಮೋದಿ

    76ನೇ ಸ್ವಾತಂತ್ರ್ಯೋತ್ಸವದ ಸಂಭ್ರಮ, ಉತ್ತರಾಖಂಡದ ಮಹಿಳೆಗೆ ಆಹ್ವಾನ

ಪ್ರಧಾನಿ ನರೇಂದ್ರ ಮೋದಿಗೆ ಚಟ್ನಿ ಕಳಿಸಿಕೊಟ್ಟ ಮಹಿಳೆಗೆ ಈ ಬಾರಿಯ ಸ್ವಾತಂತ್ರ್ಯ ದಿನಾಚರಣೆಯ ವಿಶೇಷ ಅತಿಥಿಯಾಗುವ ಅವಕಾಶ ಸಿಕ್ಕಿದೆ.

ಉತ್ತರಾಖಂಡದ ಡೆಹ್ರಾಡೂನ್​ನ ಸೇಬು ಬೆಳೆಗಾರ್ತಿ ಸುನೀತಾ ರೌಟೇಲಾ ನಾಲ್ಕು ತಿಂಗಳ ಹಿಂದೆ ಪ್ರಧಾನಿ ಮೋದಿಗಾಗಿ ತಾವೇ ರೆಡಿ ಮಾಡಿದ್ದ ಆ್ಯಪಲ್​ ಚಟ್ನಿಯನ್ನ ಪ್ರಧಾನಿ ಕಚೇರಿಗೆ ಕಳುಹಿಸಿದ್ರು. ಆವತ್ತು ಚಟ್ನಿ ಕಳುಹಿಸಿದ್ದ ಸುನೀತಾರಿಗೆ ಈ ಬಾರಿಯ ಸ್ವಾತಂತ್ರ್ಯ ದಿನಾಚರಣೆಯಲ್ಲಿ ಭಾಗಿಯಾಗಲು ಪ್ರಧಾನಿ ಕಾರ್ಯಾಲಯದಿಂದ ಆಹ್ವಾನ ಹೋಗಿದೆ. ವಿಶೇಷ ಆಹ್ವಾನಿತರಾದ 1800 ಅತಿಥಿಗಳಲ್ಲಿ ಸುನೀತಾ ಅವ್ರು ಕೂಡ ಒಬ್ಬರು.

76ನೇ ಸ್ವಾತಂತ್ರ್ಯೋತ್ಸವದ ಸಂಭ್ರಮ

ಇನ್ನು ಪ್ರಧಾನಿ ನರೇಂದ್ರ ಮೋದಿ ಭಾರತದ 76ನೇ ಸ್ವಾತಂತ್ರ್ಯೋತ್ಸವದ ಸಂಭ್ರಮ ಇಂದಿನಿಂದ ಆರಂಭಗೊಂಡಿದ್ದು, ಹರ್​ ಘರ್ ತಿರಂಗಾ ಅಭಿಯಾನಕ್ಕೆ ಚಾಲನೆ ನೀಡಿದ್ದಾರೆ. ಭಾರತೀಯರು ತಮ್ಮ ಸೋಷಿಯಲ್​ ಮೀಡಿಯಾ ಡಿಪಿಗೆ ತ್ರಿವರ್ಣ ಧ್ವಜವನ್ನಿಡಬೇಕು ಎಂದು ಹೇಳಿದ್ದಾರೆ.

ಆಗಸ್ಟ್​ 13 ರಿಂದ ಆಗಸ್ಟ್​ 15ರವರೆಗೆ ಪ್ರತಿ ಭಾರತೀಯರು ಹರ್​ ಘರ್ ತಿರಂಗಾ ಅಭಿಯಾನದಲ್ಲಿ ಪಾಲ್ಗೊಳ್ಳಬೇಕು. ಈ ಅಭಿಯಾನಕ್ಕೆ ಉತ್ತೇಜನ ನೀಡಲು ಪ್ರತಿಯೊಬ್ಬರು ತಮ್ಮ ವಾಟ್ಸ್​ ಆಪ್​ ಡಿಪಿ ಹಾಗೂ ಟ್ವಿಟ್ಟರ್​, ಇನ್​ಸ್ಟಾ ಸೇರಿದಂತೆ ಇತರೆ ಸೋಷಿಯಲ್​ ಮೀಡಿಯಾ ಡಿಪಿಗೆ ತ್ರಿವರ್ಣ ಧ್ವಜವನ್ನು ಇಡಬೇಕು ಎಂದು ಮೋದಿ ಕರೆ ನೀಡಿದರು.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

76th Independence day: ಚಟ್ನಿ ಕಳಿಸಿಕೊಟ್ಟ ಮಹಿಳೆಗೆ ವಿಶೇಷ ಅತಿಥಿಯಾಗಿ ಭಾಗಿಯಾಗುವ ಆಹ್ವಾನ ಕೊಟ್ಟ ಮೋದಿ!

https://newsfirstlive.com/wp-content/uploads/2023/08/Chutney.jpg

Load More