newsfirstkannada.com

Video: ಅಮೆರಿಕ ಸಂಸತ್​ನಲ್ಲಿ ಮೊಳಗಿದ ಮೋದಿ, ಮೋದಿ, ಮೋದಿ ಘೋಷಣೆ..!

Share :

23-06-2023

    ಕಮಲಾ ಹ್ಯಾರಿಸ್​ರತ್ತ ಮೋದಿ ಕೈ ತೋರಿಸಿದಾಗ ಚಪ್ಪಾಳೆ ಸುರಿಮಳೆ

    ಭಾರತ ಬೆಳೆದಾಗ ಇಡೀ ಜಗತ್ತು ಬೆಳೆಯುತ್ತದೆ -ಮೋದಿ

    ಭಾರತದ ಆರ್ಥಿಕತೆ ಬಗ್ಗೆ ಪ್ರಧಾನಿ ಮೋದಿ ಏನ್ ಹೇಳಿದರು..?

ಮೂರು ದಿನಗಳ ಅಮೆರಿಕ ಪ್ರವಾಸದಲ್ಲಿರುವ ಪ್ರಧಾನಿ ನರೇಂದ್ರ ಮೋದಿ ಶ್ವೇತಭವನಕ್ಕೆ ಭೇಟಿ ನೀಡಿದರು. ಈ ವೇಳೆ US ಅಧ್ಯಕ್ಷ ಬೈಡನ್, ಅಮೆರಿಕ ಫಸ್ಟ್ ಲೇಡಿ ಜಿಲ್ ಬೈಡನ್ ಸೇರಿದಂತೆ ಹಲವು ಗಣ್ಯರು ಆತ್ಮೀಯವಾಗಿ ಸ್ವಾಗತಿಸಿದರು.

ನಂತರ ದ್ವಿಪಕ್ಷೀಯ ಮಾತುಕತೆ, ಹಲವು ಒಪ್ಪಂದ, ಸ್ಟೇಟ್​ ಡಿನ್ನರ್, ಮಾಧ್ಯಮಗೋಷ್ಟಿಗಳು ನಡೆದವು. ಜಂಟಿ ಸುದ್ದಿಗೋಷ್ಠಿ ಬಳಿಕ ಅಮರಿಕಾದ ಸಂಸತ್​ಗೆ ಪ್ರಧಾನಿ ಮೋದಿ ಆಗಮಿಸಿದರು. ಜಂಟಿ ಅಧಿವೇಶನಕ್ಕೆ ಪ್ರಧಾನಿ ನರೇಂದ್ರ ಮೋದಿ ಆಗಮಿಸುತ್ತಿದ್ದಂತೆ ಸದನದ ಸದಸ್ಯರೆಲ್ಲಾ ಜೈಕಾರದ ಘೋಷಣೆ ಕೂಗಿದರು. ಯುಎಸ್ ಕಾಂಗ್ರೆಸ್​ನ ನಾಯಕರು ಮೋದಿ.. ಮೋದಿ.. ಮೋದಿ.. ಅನ್ನೋ ಘೋಷಣೆ ಮೊಳಗಿಸಿದರು.

ಅಮೆರಿಕ ಕಾಂಗ್ರೆಸ್​ನ ಜಂಟಿ ಅಧಿವೇಶನದಲ್ಲಿ ಪ್ರಧಾನಿ ಮೋದಿ ಭಾರತದ ಅರ್ಥಿಕತೆ ಬೆಳೆಯುತ್ತಿರೋ ಶರವೇಗವನ್ನ ಕೊಂಡಾಡಿದ್ದಾರೆ. ಟಾಪ್ 3ಗೆ ಶೀಘ್ರ ಬರೋದಾಗಿಯೋ ಎಕಾನಮಿ ಗೂಗ್ಲಿ ಪ್ರಯೋಗಿಸಿದರು.

ನಾನು ಪ್ರಧಾನಿಯಾಗಿ ಮೊದಲ ಬಾರಿಗೆ ಅಮೇರಿಕಾಕ್ಕೆ ಭೇಟಿ ನೀಡಿದಾಗ, ಭಾರತವು ವಿಶ್ವದ 10 ನೇ ಅತಿದೊಡ್ಡ ಆರ್ಥಿಕತೆಯಾಗಿತ್ತು. ಇಂದು ಭಾರತವು ಅತಿದೊಡ್ಡ ಆರ್ಥಿಕತೆಯಲ್ಲಿ 5 ನೇ ಸ್ಥಾನಕ್ಕೇರಿದೆ. ಭಾರತವು ಅತೀ ಶೀಘ್ರದಲ್ಲೇ 3 ನೇ ಅತಿದೊಡ್ಡ ಆರ್ಥಿಕತೆಯಾಗಲಿದೆ. ನಾವು ದೊಡ್ಡದಾಗಿ ಬೆಳೆಯುವುದು ಮಾತ್ರವಲ್ಲದೆ ವೇಗವಾಗಿ ಬೆಳೆಯುತ್ತಿದ್ದೇವೆ. ಭಾರತ ಬೆಳೆದಾಗ ಇಡೀ ಜಗತ್ತು ಬೆಳೆಯುತ್ತದೆ ಎಂದು ಮೋದಿ ಹೇಳಿದರು.

ಅಮೆರಿಕಾದಲ್ಲಿ ಸಾಧನೆ ಮಾಡ್ತಿರೋ ಅದೆಷ್ಟೋ ಜನರ ಬೇರು ಭಾರತದಲ್ಲಿದೆ ಅನ್ನೋದನ್ನ ಮೋದಿ ಹೆಮ್ಮೆಯಿಂದ ಪ್ರಸ್ತಾಪಿಸಿದ್ರು. ಉದಾಹರಣೆಯಾಗಿ ಕಮಲಾ ಹ್ಯಾರಿಸ್​ರತ್ತ ಮೋದಿ ಕೈ ತೋರಿಸಿದಾಗ ಎದುರಾಗಿದ್ದು, ಚಪ್ಪಾಳೆಯ ಗುಡುಗು, ಹರ್ಷೋದ್ಘಾರ ಮೊಳಗಿತು.

ಎರಡು ದೇಶಗಳ ಬಾಂಧವ್ಯ, ಭಾರತದ ಅಭಿವೃದ್ಧಿ ಹೆಜ್ಜೆ.. ಭವಿಷ್ಯದ ನೋಟ ಹೀಗೆ ಸಾಕಷ್ಟು ವಿಚಾರಗಳನ್ನ ಮೋದಿ ಮಾತಾಡಿದರು. ಈ ವೇಳೆ ತಾವು ಮೊದಲ ಬಾರಿಗೆ ವೈಟ್​​ಹೌಸ್ ನೋಡಿದ ಹಳೇ ನೆನಪನ್ನ ಬಿಚ್ಚಿಟಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Video: ಅಮೆರಿಕ ಸಂಸತ್​ನಲ್ಲಿ ಮೊಳಗಿದ ಮೋದಿ, ಮೋದಿ, ಮೋದಿ ಘೋಷಣೆ..!

https://newsfirstlive.com/wp-content/uploads/2023/06/PM_MODI-4.jpg

Load More