newsfirstkannada.com

ಪ್ರಧಾನಿ ಮೋದಿಗೆ ರಾಖಿ ಕಟ್ಟಲು ರೆಡಿಯಾದ ಪಾಕಿಸ್ತಾನದ ಸಹೋದರಿ; ಯಾರು ಈ ಖಮರ್ ಮೊಹ್ಸಿನ್ ಶೇಖ್?

Share :

22-08-2023

    30 ವರ್ಷಗಳಿಂದ ಮೋದಿಗೆ ರಾಖಿ ಕಟ್ಟುತ್ತಿರುವ ಪಾಕಿಸ್ತಾನದ ಸಹೋದರಿ

    ಮೋದಿಗೆ ದೃಷ್ಟಿಯಾಗದಿರಲಿ ಎಂದು ವಿಶೇಷ ರಾಖಿ ತಯಾರಿಸಿದ ತಂಗಿ

    ಕೆಂಪು ಬಣ್ಣದ ರಾಖಿ ತಯಾರಿಸಿದ ಸಹೋದರಿ ಖಮರ್ ಮೊಹ್ಸಿನ್ ಶೇಖ್

ಪ್ರಧಾನಿ ನರೇಂದ್ರ ಮೋದಿ ಅವರ ಪಾಕಿಸ್ತಾನದ ಸಹೋದರಿ ಖಮರ್ ಮೊಹ್ಸಿನ್ ಶೇಖ್ ಅಣ್ಣನಿಗಾಗಿ ವಿಶೇಷವಾದ ರಾಖಿ ತಯಾರಿಸಿದ್ದಾರೆ. ಗುಜರಾತ್ ಅಲಹಾಬಾದ್ ಮೂಲದ ಖಮರ್ ಮೊಹ್ಸಿನ್ ಶೇಖ್ ಸದ್ಯ ಪಾಕಿಸ್ತಾನದಲ್ಲಿದ್ದು, ಈ ಬಾರಿ ಭಾರತಕ್ಕೆ ಬಂದು ನರೇಂದ್ರ ಮೋದಿ ಅವರಿಗೆ ತಾವೇ ಸ್ವತಃ ತಯಾರಿಸಿದ ರಾಖಿ ಕಟ್ಟುತ್ತಿದ್ದಾರೆ.

ಖಮರ್ ಮೊಹ್ಸಿನ್ ಶೇಖ್ ಕಳೆದ 30 ವರ್ಷಗಳಿಂದ ಮೋದಿಗೆ ರಾಖಿ ಕಟ್ಟುತ್ತಾ ಬಂದಿದ್ದಾರೆ. ಮೊದಲ ಬಾರಿಗೆ ಮೋದಿ ಸಂಘದಲ್ಲಿ ಕಾರ್ಯನಿರ್ವಹಿಸೊ ಸಂದರ್ಭದಲ್ಲಿ ರಾಖಿ ಕಟ್ಟಲಾಗಿತ್ತು. ಆಗಿನಿಂದ ಇಲ್ಲಿಯವರೆಗೆ ಪ್ರತಿ ವರ್ಷ ರಾಖಿ ಕಟ್ಟುತ್ತಾ ಬಂದಿದ್ದಾರೆ.

ಮೋದಿಗೆ ದೃಷ್ಟಿಯಾಗದಿರಲಿ

ಈ ಬಾರಿ ವಿಶೇಷವಾದ ರಾಖಿಯನ್ನು ಖಮರ್ ಮೊಹ್ಸಿನ್ ಶೇಖ್ ತಯಾರಿಸಿದ್ದಾರೆ. ಮೋದಿಗೆ ಅವರಿಗೆ ದೃಷ್ಟಿಯಾಗದಿರಲಿ ಎಂದು ವಸ್ತುಬಳಕೆ ಮಾಡಿ ರಾಖಿ ತಯಾರಿಸಿದ್ದಾರೆ. ಜೊತೆಗೆ ಕೆಂಪು ಬಣ್ಣದ ವಸ್ತು ಬಳಕೆ ಮಾಡಿದ್ದಾರೆ.

ಕೆಂಪು ಬಣ್ಣದ ರಾಖಿ

ಕೆಂಪು ಬಣ್ಣ ಶಕ್ತಿಯ ಸಂಕೇತ ಮತ್ತು ಕೆಂಪು ಎಲ್ಲಾ ಶುಭಕಾರ್ಯಗಳಲ್ಲಿ ಬಳಕೆ ಮಾಡಲಾಗುತ್ತೆ ಹಾಗಾಗಿ ಕೆಂಪು ಬಣ್ಣ ಬಳಕೆ ಮಾಡಿದ್ದಾರಂತೆ. ರಾಖಿ ಕಟ್ಟುವ ಸಂದರ್ಭದಲ್ಲಿ ಕೃಷಿಗೆ ಸಂಬಂಧಿಸಿದ ಪುಸ್ತಕವನ್ನು ಉಡುಗೊರೆಯಾಗಿ ನೀಡುತ್ತೇನೆ ಎಂದು ಸಹೋದರಿ ಖಮರ್ ಮೊಹ್ಸಿನ್ ಶೇಖ್ ಹೇಳಿದ್ದಾರೆ.

ಈ ಬಗ್ಗೆ ಮಾತನಾಡಿದ ಖಮರ್ ಮೊಹ್ಸಿನ್ ಶೇಖ್, 2-3 ವರ್ಷಗಳಿಂದ ನಾನು ಕೋವಿಡ್‌ನಿಂದ ಹೋಗಲು ಸಾಧ್ಯವಾಗಲಿಲ್ಲ. ಆದರೆ ಈ ಬಾರಿ ನಾನು ಅವರನ್ನು ವೈಯಕ್ತಿಕವಾಗಿ ಭೇಟಿಯಾಗುತ್ತೇನೆ ಎಂದು ಹೇಳಿದ್ದಾರೆ.

ಯಾವಾಗ ರಕ್ಷಾ ಬಂಧನ?

ಅಣ್ಣ -ತಂಗಿಯರ ಬಂಧನ ಮತ್ತಷ್ಟು ಗಟ್ಟಿಯಾಗಲು ರಕ್ಷಾ ಬಂಧನ ಆಚರಿಸಲಾಗುತ್ತದೆ. ಭಾರತವು ರಕ್ಷಾ ಬಂಧನವನ್ನು ವಿಶೇಷವಾಗಿ ಆಚರಿಸುತ್ತದೆ. ಅದರಲ್ಲೂ ತಂಗಿ ಅಣ್ಣನಿಗಾಗಿ ರಾಖಿ ಖರೀದಿಸಿ ಆತನ ಕೈಗೆ ರಾಖಿಯನ್ನು ಕಟ್ಟುತ್ತಾಳೆ. ಇದು ನನ್ನನ್ನು ರಕ್ಷಣೆ ಮಾಡುವ ಎಂದು ತಂಗಿ ತನ್ನ ಅಣ್ಣ ಬಳಿ ಕೋರುವ ರೀತಿಯಾಗಿದೆ. ಅಂದಹಾಗೆಯೇ ಇದೇ 30ರಂದು ದೇಶದಾದ್ಯಂತ ರಕ್ಷಾ ಬಂಧನ ಹಬ್ಬವನ್ನು ಆಚರಿಸಲಾಗುತ್ತದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಪ್ರಧಾನಿ ಮೋದಿಗೆ ರಾಖಿ ಕಟ್ಟಲು ರೆಡಿಯಾದ ಪಾಕಿಸ್ತಾನದ ಸಹೋದರಿ; ಯಾರು ಈ ಖಮರ್ ಮೊಹ್ಸಿನ್ ಶೇಖ್?

https://newsfirstlive.com/wp-content/uploads/2023/08/Modi-sister.jpg

Load More