newsfirstkannada.com

ಇಸ್ರೋಗೆ ನಮೋ ಸಲಾಂ; ಹೆಮ್ಮೆಯ ವಿಜ್ಞಾನಿಗಳ ಐತಿಹಾಸಿಕ ಸಾಧನೆಗೆ ಪ್ರಧಾನಿ ಮೋದಿ ಹ್ಯಾಟ್ಸ್ಆಫ್..!

Share :

26-08-2023

    ಹೆಚ್​ಎಎಲ್​ ಏರ್ಪೋರ್ಟ್​ನಿಂದ ಇಸ್ರೋ ಭೇಟಿ

    ವಿದೇಶದಿಂದ ಭಾರತಕ್ಕೆ ಬೆಳಗ್ಗೆ ಆಗಮಿಸಿರುವ PM

    ಇಸ್ರೋದಲ್ಲಿ ವಿಜ್ಞಾನಿಗಳಿಗೆ ಆಭಿನಂದನೆ ಸಲ್ಲಿಸುವರು

ಬೆಂಗಳೂರು: ಪೀಣ್ಯದಲ್ಲಿರುವ ಇಸ್ರೋ ಸಂಸ್ಥೆಯ ಮುಖ್ಯ ಕಚೇರಿಗೆ ಪ್ರಧಾನಿ ಮೋದಿಯವರು ಆಗಮಿಸುತ್ತಿದ್ದಂತೆ ಅಧ್ಯಕ್ಷರು ಎಸ್.ಸೋಮನಾಥ್ ಸೇರಿದಂತೆ ವಿಜ್ಞಾನಿಗಳು ಅವರು ಅದ್ಧೂರಿಯಾಗಿ ಸ್ವಾಗತ ಮಾಡಿದರು. ಅಧ್ಯಕ್ಷರು ಎಸ್.ಸೋಮನಾಥ್ ಅವರು ಪ್ರಧಾನಿಗಳಿಗೆ ಹೂಗುಚ್ಚ ನೀಡಿ ಬರಮಾಡಿಕೊಂಡರು.

ಹೆಚ್​ಎಎಲ್​ ವಿಮಾನ ನಿಲ್ದಾಣದಿಂದ ನೇರ ಇಸ್ರೋದ ಮುಖ್ಯ ಕಚೇರಿಗೆ ಆಗಮಿಸಿದ ಪ್ರಧಾನಿ ಮೋದಿರನ್ನು ಅಧ್ಯಕ್ಷರು ಎಸ್.ಸೋಮನಾಥ್ ಸೇರಿದಂತೆ ವಿಜ್ಞಾನಿಗಳು ಆತ್ಮೀಯವಾಗಿ ಬರಮಾಡಿಕೊಂಡರು. ಮೋದಿ ಆಗಮನ ಹಿನ್ನೆಲೆಯಲ್ಲಿ ಸಾಕಷ್ಟು ಜನರು ಇಸ್ರೋ ಕೇಂದ್ರದ ಬಳಿ ಜಮಾಯಿಸಿದ್ದರು. ಅದ್ಧೂರಿ ಸ್ವಾಗತ ಬೆನ್ನಲ್ಲೇ ಹಿರಿಯ ವಿಜ್ಞಾನಿಗಳ ಜೊತೆಗೆ ಪ್ರಧಾನಿ ಮೋದಿ ಸಮಾಲೋಚನೆ ನಡೆಸಿದರು. ಬಳಿಕ ಗ್ರೂಪ್​ ಫೋಟೋಗೆ ಪೋಸ್ ನೀಡಿದರು.

ಇದಾದ ಬಳಿಕ ಎಸ್​ ಸೋಮನಾಥ್ ಅವರು ಇಸ್ರೋದ ಕಚೇರಿಯ ಒಳಗೆ ಮೋದಿಯನ್ನು ಕರೆದುಕೊಂಡು ಹೋಗಿ ಚಂದ್ರಯಾನ-3 ಮಾಡಲ್​ಗಳ ಪ್ರಾತ್ಯಕ್ಷತೆಯನ್ನು ಪ್ರದರ್ಶಿಸಿದರು. ಚಂದ್ರಯಾನ- 3 ನೌಕೆಯನ್ನು ಹೇಗೆ ಉಡಾವಣೆ ಮಾಡಲಾಯಿತು. ಜೊತೆಗೆ ಹೇಗೆ ಚಂದ್ರನ ಅಂಗಳದಲ್ಲಿ ಸಾಫ್ಟ್​ ಲ್ಯಾಂಡಿಂಗ್​ ಮಾಡಲಾಯಿತು. ಈಗ ಲ್ಯಾಂಡರ್ ವಿಕ್ರಮ್ ಮತ್ತು ಪ್ರಜ್ಞಾನ್​ ಯಾವ ರೀತಿ ಕೆಲಸ ಮಾಡುತ್ತಿವೆ ಅನ್ನೋದನ್ನು ಹಿರಿಯ ವಿಜ್ಞಾನಿಗಳು ಮೋದಿಗೆ ಮಾಹಿತಿ ನೀಡಿದರು. ಜೊತೆಗೆ ಚಂದ್ರಯಾನ-3ಗೆ ತಾವು ನಡೆಸಿದ ಸಿದ್ಧತೆಗಳನ್ನು ಬಗ್ಗೆ ವಿವರಣೆ ನೀಡಿದರು.

ನಂತರ ಇಸ್ರೋ ಕಚೇರಿಯಲ್ಲಿ ಲ್ಯಾಂಡರ್ ವಿಕ್ರಮ್ ಕಳುಹಿಸಿದಂತ ವಿಡಿಯೋಗಳನ್ನು ಪ್ರಧಾನಿಗೆ ತೋರಿಸಲಾಯಿತು. ಈ ವೇಳೆ ಪಕ್ಕದಲ್ಲೇ ಕುಳಿತು ಅಧ್ಯಕ್ಷರು ಎಸ್ ಸೋಮನಾಥ್ ಈ ಬಗ್ಗೆ ವಿವರಣೆ ನೀಡುತ್ತಿದ್ದರು.  ಪ್ರಧಾನಿ ಮೋದಿಗೆ ಲ್ಯಾಂಡರ್​ ವಿಕ್ರಮ್ ತೆಗೆದಂತ ಚಂದ್ರನ ಮೇಲ್ಮೈ ಫೋಟೋವನ್ನು ಇಸ್ರೋ ಮುಖ್ಯಸ್ಥರು ನೀಡಿದರು.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಇಸ್ರೋಗೆ ನಮೋ ಸಲಾಂ; ಹೆಮ್ಮೆಯ ವಿಜ್ಞಾನಿಗಳ ಐತಿಹಾಸಿಕ ಸಾಧನೆಗೆ ಪ್ರಧಾನಿ ಮೋದಿ ಹ್ಯಾಟ್ಸ್ಆಫ್..!

https://newsfirstlive.com/wp-content/uploads/2023/08/BNG_MODI_8.jpg

Load More