newsfirstkannada.com

ಫ್ರಾನ್ಸ್​ ಜೊತೆ ಮೋದಿ ಮತ್ತೊಂದು ಬಿಗ್​ ಡೀಲ್.. 96000 ಕೋಟಿ ರೂ. ಮೌಲ್ಯದ ಒಪ್ಪಂದದಲ್ಲಿ ಮತ್ತೆ 26 ರಫೇಲ್ ಖರೀದಿಸಲು ಪ್ಲಾನ್

Share :

11-07-2023

    ಮೋದಿ ಇದೇ ಜುಲೈ ತಿಂಗಳ 13 ಮತ್ತು 14ರಂದು ಫ್ರಾನ್ಸ್​ ಪ್ರವಾಸ

    22 ಯುದ್ಧವಿಮಾನ, 4 ತರಬೇತಿ ವಿಮಾನ ಖರೀದಿಸುವ ನಿರೀಕ್ಷೆ

    ಇದರೊಂದಿಗೆ 3 ಜಲಾಂತರ್ಗಾಮಿಯನ್ನೂ ಭಾರತ ಬಯಸಿದೆ

ಪ್ರಧಾನಿ ನರೇಂದ್ರ ಮೋದಿ ಭಾರತದ ಸೇನೆಯನ್ನು ಮತ್ತಷ್ಟು ಬಲಪಡಿಸಲು ಮುಂದಾಗಿದ್ದಾರೆ. ಹೀಗಾಗಿ 26 ರಫೇಲ್​​ M ನೇವಲ್​ ಯುದ್ಧವಿಮಾನ ಖರೀದಿಸಲು ಮುಂದಾಗಿದ್ದಾರೆ ಎಂದು ಹೇಳಲಾಗುತ್ತಿದೆ.

ಮೋದಿ ಇದೇ ಜುಲೈ ತಿಂಗಳ 13 ಮತ್ತು 14ರಂದು ಫ್ರಾನ್ಸ್​ ಪ್ರವಾಸ ಕೈಗೊಳ್ಳಲಿದ್ದಾರೆ. ಫ್ರಾನ್ಸ್​ ಅಧ್ಯಕ್ಷ ಮ್ಯಾಕ್ರಾನ್​​ ಜೊತೆ ದ್ವಿಪಲ್ಷೀಯ ಮಾತುಕತೆ ನಡೆಸಲಿದ್ದಾರೆ. ಈ ಸಮಯದಲ್ಲಿ 26 ರಫೇಲ್ ಎಮ್​ ನೇವಲ್​​ ಯುದ್ಧ ವಿಮಾನ ಮತ್ತು 3 ಸ್ಕಾರ್ಪೀನ್​ ಜಲಾಂತರ್ಗಾಮಿ ಒಪ್ಪಂದಗಳಿಗೆ ಸಹಿ ಬೀಳುವ ಸಾಧ್ಯತೆಯಿದೆ.

22 ಯುದ್ಧವಿಮಾನ, 4 ತರಬೇತಿ ವಿಮಾನ

ಇನ್ನು 26 ರಫೇಲ್​ ಯುದ್ಧ ವಿಮಾನಗಳ ಪೈಕಿ 4 ತರಬೇತಿ ವಿಮಾನಗಳಾಗಿವೆ. ಉಳಿದ 22 ಯುದ್ಧವಿಮಾನಗಳಾಗಿವೆ. ಇದರೊಂದಿಗೆ ಜಲಾಂತರ್ಗಾಮಿಯನ್ನು ಭಾರತ ಬಯಸಿದೆ. ಚೀನಾ ಮತ್ತು ಇನ್ನಿತರ ಸವಾಲುಗಳನ್ನು ಎದುರಿಸಲು ಇದರ ಅವಶ್ಯಕತೆ ಹೆಚ್ಚಿರುವುದರಿಂದ ಮೋದಿ ಫ್ರಾನ್ಸ್​ ಭೇಟಿ ವೇಳೆ ಒಪ್ಪಂದ ಮಾಡಿಕೊಳ್ಳುವ ನಿರೀಕ್ಷೆಯಿದೆ.

36 ರಫೇಲ್​​ ಯುದ್ಧವಿಮಾನ

ಅಂದಹಾಗೆಯೇ ಭಾರತವು ಈ ಒಪ್ಪಂದಕ್ಕೆ 96 ಸಾವಿರ ಕೋಟಿಗಳನ್ನ ವ್ಯಯಿಸಲಿದೆ ಎಂದು ಹೇಳಲಾಗಿದೆ. ಈ ಮೊದಲು 36 ರಫೇಲ್​​ ಯುದ್ಧವಿಮಾನಗಳನ್ನು ಭಾರತ ಖರೀದಿಸಿತ್ತು. ಇದೀಗ ಮತ್ತೆ 26 ಯುದ್ಧವಿಮಾನಗಳನ್ನು ಖರೀದಿಸಿಲು ಮುಂದಾಗಿರುವ ಮಾತುಗಳು ಕೇಳಿಬಂದಿವೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಫ್ರಾನ್ಸ್​ ಜೊತೆ ಮೋದಿ ಮತ್ತೊಂದು ಬಿಗ್​ ಡೀಲ್.. 96000 ಕೋಟಿ ರೂ. ಮೌಲ್ಯದ ಒಪ್ಪಂದದಲ್ಲಿ ಮತ್ತೆ 26 ರಫೇಲ್ ಖರೀದಿಸಲು ಪ್ಲಾನ್

https://newsfirstlive.com/wp-content/uploads/2023/07/Modi-1.jpg

Load More