newsfirstkannada.com

ಬರೋಬ್ಬರಿ 2 ವರ್ಷದ ಬಳಿಕ ಟೆಸ್ಟ್​ ಕ್ರಿಕೆಟ್​​ಗೆ ಮರಳಿದ ಮೊಯೀನ್​ ಅಲಿಗೆ ಬಿತ್ತು ಭಾರೀ ದಂಡ!

Share :

18-06-2023

    2 ವರ್ಷದ ಬಳಿಕ ನಿವೃತ್ತಿ ವಾಪಸ್​ ಪಡೆದು ಟೆಸ್ಟ್​ ಕ್ರಿಕೆಟ್​​ಗೆ ಮರಳಿದ ಮೊಯೀನ್

    ಟೆಸ್ಟ್​ ಕ್ರಿಕೆಟ್​​ಗೆ ಮರಳಿದ ಮೊಯೀನ್ ಅಲಿಗೆ ಐಸಿಸಿಯಿಂದ ಬಿತ್ತು ಭಾರೀ ದಂಡ

    ಸ್ಟಾರ್​​ ಆಲ್​ರೌಂಡರ್​​ ಮೊಯೀನ್​ ಅಲಿಗೆ ಐಸಿಸಿ ದಂಡ ಹಾಕಲು ಕಾರಣವೇನು..?

ಇತ್ತೀಚೆಗಷ್ಟೇ ಟೆಸ್ಟ್​​ ಕ್ರಿಕೆಟ್​​ನಿಂದ ನಿವೃತ್ತಿ ವಾಪಸ್​​ ಪಡೆದ ಸ್ಟಾರ್​ ಆಲ್​​ರೌಂಡರ್​​ ಮೊಯೀನ್ ಅಲಿ ಈಗ ಆಶಸ್ ಸರಣಿಯಲ್ಲಿ ಭಾಗಿಯಾಗಿದ್ದಾರೆ. ಸದ್ಯ ಎಡ್ಜ್‌ಬಾಸ್ಟನ್‌ನಲ್ಲಿ ನಡೆಯುತ್ತಿರೋ ಮೊದಲ ಟೆಸ್ಟ್ ಪಂದ್ಯದಲ್ಲಿ ಇಂಗ್ಲೆಂಡ್​​ ಪರ ಆಡಿದ್ದ ಸ್ಟಾರ್​ ಆಲ್​ರೌಂಡರ್​​ ಮೊಯೀನ್ ಅಲಿ ಬ್ಯಾಟಿಂಗ್​​ನಲ್ಲಿ ವಿಫಲರಾದ್ರೂ ಬೌಲಿಂಗ್‌ನಲ್ಲಿ ಮಿಂಚಿದ್ದರು. ಆದರೀಗ, ಮೊಯೀನ್ ಅಲಿಗೆ ಐಸಿಸಿ ಭಾರೀ ದಂಡ ವಿಧಿಸಿದೆ.

ಕಳೆದ 2 ವರ್ಷಗಳ ಬಳಿಕ ನಿವೃತ್ತಿ ವಾಪಸ್​​ ಪಡೆದು ಇಂಗ್ಲೆಂಡ್​​ ತಂಡಕ್ಕೆ ಮರಳಿದ ಮೊಯೀನ್​​ ಅಲಿ ಐಸಿಸಿ ನೀತಿ ಸಂಹಿತೆ ಉಲ್ಲಂಘಿಸಿದ್ರು. ಐಸಿಸಿ ನೀತಿ ಸಂಹಿತೆ ಆರ್ಟಿಕಲ್ 2.20 ಅನ್ನು ಉಲ್ಲಂಘಿಸಿದ್ದ ಮೊಯೀನ್​ ಅಲಿಗೆ ದಂಡ ಬಿದ್ದಿದೆ.

ಆಸ್ಟ್ರೇಲಿಯಾ ವಿರುದ್ಧದ ಮೊದಲ ಇನ್ನಿಂಗ್ಸ್​​ನಲ್ಲಿ ಬೌಂಡರಿ ಗೆರೆ ಬಳಿ ಫೀಲ್ಡಿಂಗ್ ಮಾಡುವಾಗ ಮೊಯಿನ್ ತನ್ನ ಬೌಲಿಂಗ್ ಕೈಗೆ ಡ್ರೈಯಿಂಗ್ ಏಜೆಂಟ್ ಬಳಸಿದ್ದರು. ಇದು ಐಸಿಸಿ ನೀತಿ ಸಂಹಿತೆಯ ಮೊದಲನೇ ಹಂತದ ಉಲ್ಲಂಘನೆ ಆಗಿದೆ. ಹೀಗಾಗಿ ಮೊಯೀನ್​​ ಅಲಿಗೆ ತನ್ನ ಒಂದು ಪಂದ್ಯದ ಸಂಭಾವನೆಯ ಶೇ. 25ರಷ್ಟು ದಂಡ ಹಾಕಿದ್ದೇವೆ ಎಂದು ಐಸಿಸಿ ತಿಳಿಸಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಬರೋಬ್ಬರಿ 2 ವರ್ಷದ ಬಳಿಕ ಟೆಸ್ಟ್​ ಕ್ರಿಕೆಟ್​​ಗೆ ಮರಳಿದ ಮೊಯೀನ್​ ಅಲಿಗೆ ಬಿತ್ತು ಭಾರೀ ದಂಡ!

https://newsfirstlive.com/wp-content/uploads/2023/06/Moeen-Ali.jpg

Load More