newsfirstkannada.com

Super Six: ಕ್ಯಾಚ್​ ಬಿಟ್ಟ ಕೊಹ್ಲಿ ವಿರುದ್ಧ ಕೈಫ್​ ಕಿಡಿ, INDvsPAK ಸೂಪರ್​​ 4​​ ಪಂದ್ಯಕ್ಕೂ ಮಳೆ ಭೀತಿ!

Share :

07-09-2023

    ಏಕದಿನ ಱಂಕಿಂಗ್​ನಲ್ಲಿ ಕಿಶನ್​, ಗಿಲ್​ಗೆ ಬಡ್ತಿ

    ಕೌಂಟಿ ಕ್ರಿಕೆಟ್​ನತ್ತ ಮುಖ ಮಾಡಿದ ಚಹಲ್​​

    ಮಹಿಳಾ CPLನಲ್ಲಿ ಕನ್ನಡತಿ ಶ್ರೇಯಾಂಕಾ ಮಿಂಚು

ಇಂಡೋ – ಪಾಕ್ ಸೂಪರ್​​ 4​​ ಪಂದ್ಯಕ್ಕೂ ಮಳೆ ಭೀತಿ.!

ಏಷ್ಯಾಕಪ್​ ಟೂರ್ನಿಯ ಸೂಪರ್​ 4 ಪಂದ್ಯಗಳು ಅಧಿಕೃತವಾಗಿ ಆರಂಭವಾಗಿವೆ. ಸೂಪರ್​​-4 ಹಂತದಲ್ಲಿ ಮುಂದಿನ ಭಾನುವಾರ ಮತ್ತೆ ಭಾರತ- ಪಾಕಿಸ್ತಾನ ತಂಡಗಳು ಮುಖಾಮುಖಿಯಾಗ್ತಿವೆ. ಈ ಹೈವೋಲ್ಟೆಜ್​ ಕದನಕ್ಕೂ ಮಳೆಯ ಭೀತಿ ಆವರಿಸಿದೆ. ಕೊಲಂಬೋದಲ್ಲಿ ಸದ್ಯ ಮಳೆಯ ವಾತಾವರಣವಿದ್ದು, ಭಾನುವಾರದ ಪಂದ್ಯಕ್ಕೂ ಅಡ್ಡಿ ಪಡಿಸುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ಪಲ್ಲೆಕೆಲೆಯಲ್ಲಿ ನಡೆದಿದ್ದ ಟೂರ್ನಿಯ ಲೀಗ್​ ಹಂತದ ಮುಖಾಮುಖಿಗೆ ಮಳೆ ಅಡ್ಡಿಪಡಿಸಿತ್ತು. 2ನೇ ಇನ್ನಿಂಗ್ಸ್​ ಆರಂಭಿಸಲು ವರುಣ ಅವಕಾಶ ಕೊಡದ ಕಾರಣ ಪಂದ್ಯವನ್ನ ರದ್ದುಗೊಳಿಸಲಾಗಿತ್ತು.

ಏಷ್ಯಾಕಪ್​ ಟೂರ್ನಿಯ ಪಾಕಿಸ್ತಾನ ವಿರುದ್ಧದ ಪಂದ್ಯದಲ್ಲಿ ಬೊಂಬಾಟ್​ ಪ್ರದರ್ಶನ ನೀಡಿದ ಭಾರತದ ಇಶಾನ್​ ಕಿಶನ್​ ಱಂಕಿಂಗ್​ನಲ್ಲಿ ಏರಿಕೆ ಕಂಡಿದ್ದಾರೆ. ಐಸಿಸಿ ಪ್ರಕಟಿಸಿರುವ ನೂತನ ಏಕದಿನ ಱಂಕಿಂಗ್​ನಲ್ಲಿ 12 ಸ್ಥಾನ ಮೇಲೆರಿರುವ ಕಿಶನ್​, 24ನೇ ಸ್ಥಾನ ಪಡೆದುಕೊಂಡಿದ್ದಾರೆ. ಇನ್ನು, ನೇಪಾಳದ ವಿರುದ್ಧ ಅರ್ಧಶತಕದ ಆಟವಾಡಿದ ಶುಭ್​ಮನ್​ ಗಿಲ್​, 750 ಅಂಕಗಳೊಂದಿಗೆ 3ನೇ ಸ್ಥಾನಕ್ಕೇರಿದ್ದಾರೆ. ನಂಬರ್​ 1 ಬ್ಯಾಟ್ಸ್​ಮನ್​ ಆಗಿ ಬಾಬರ್​ ಅಝಂ ಮುಂದುವರೆದಿದ್ದು, 10ನೇ ಸ್ಥಾನದಲ್ಲಿ ವಿರಾಟ್​ ಕೊಹ್ಲಿ ಇದ್ದಾರೆ.

ಕ್ಯಾಚ್​ ಬಿಟ್ಟ ಕೊಹ್ಲಿ ವಿರುದ್ಧ ಕೈಫ್​ ಕಿಡಿ

ಕ್ಯಾಚ್​ ಬಿಟ್ಟ ಕೊಹ್ಲಿ ವಿರುದ್ಧ ಕೈಫ್​ ಕಿಡಿನೇಪಾಳ ವಿರುದ್ಧದ ಪಂದ್ಯದಲ್ಲಿ ಸುಲಭದ ಕ್ಯಾಚ್​ ಕೈ ಚೆಲ್ಲಿದ ವಿರಾಟ್​ ಕೊಹ್ಲಿ ವಿರುದ್ಧ ಮಾಜಿ ಕ್ರಿಕೆಟಿಗ ಮೊಹಮ್ಮದ್​ ಕೈಫ್​ ಪರೋಕ್ಷವಾಗಿ ಕಿಡಿ ಕಾರಿದ್ದಾರೆ. ಏಷ್ಯಾಕಪ್​ ಟೂರ್ನಿಯ ಕಾಮೆಂಟೇಟರ್​ ಆಗಿರುವ ಕೈಫ್​, ಕೊಹ್ಲಿಯ ಆನ್​ಫೀಲ್ಡ್​ ಪ್ರಸೆನ್ಸ್​ ಬಗ್ಗೆ ಪ್ರಶ್ನಿಸಿದ್ದಾರೆ. ನೀವು ಜಿಮ್​ನಲ್ಲಿ ಹೆಚ್ಚು ಕಾಲ ವರ್ಕೌಟ್​ ಮಾಡಬಹುದು. ಆ ಫೋಟೋಗಳನ್ನ ಇನ್ಸ್​​ಸ್ಟಾಗ್ರಾಂನಲ್ಲಿ ಪೋಸ್ಟ್​ ಕೂಡ ಮಾಡಬಹುದು. ಆದ್ರೆ, ಅದ್ಯಾವುದೂ ವ್ಯತ್ಯಾಸವನ್ನ ಉಂಟು ಮಾಡಲ್ಲ.. ನೀವು ಮೈದಾನದಲ್ಲಿ ಎಷ್ಟು ಫಿಟ್​ ಆಗಿರ್ತಿರಾ ಅನ್ನೋದಷ್ಟೇ ಮುಖ್ಯ ಎಂದು ಕೈಫ್ ಪರೋಕ್ಷವಾಗಿ ತಿವಿದಿದ್ದಾರೆ.

ಕೌಂಟಿ ಕ್ರಿಕೆಟ್​ನತ್ತ ಮುಖ ಮಾಡಿದ ಚಹಲ್​​

ವಿಶ್ವಕಪ್​ ತಂಡದಲ್ಲಿ ಸ್ಥಾನ ವಂಚಿತರಾದ ಟೀಮ್​ ಇಂಡಿಯಾ ಸ್ಪಿನ್ನರ್​ ಯುಜುವೇಂದ್ರ ಚಹಲ್​, ಕೌಂಟಿ ಕ್ರಿಕೆಟ್​ನತ್ತ ಮುಖ ಮಾಡಿದ್ದಾರೆ. ಇಂಗ್ಲೆಂಡ್​​ನ ಕೌಂಟಿ ತಂಡ ಕೆಂಟ್​ ಪರ ಆಡಲು ಚಹಲ್​ ಮುಂದಾಗಿದ್ದಾರೆ. ಕೌಂಟಿ ಪಂದ್ಯವನ್ನಾಡಲು ಈಗಾಗಲೇ ಬಿಸಿಸಿಐ ಚಹಲ್​ಗೆ NOC ನೀಡಿದೆ ಎಂದು ತಿಳಿದುಬಂದಿದೆ. ಈವರೆಗೆ ಟೀಮ್​ ಇಂಡಿಯಾ ಪರ ಚಹಲ್​​, ಏಕದಿನ ಮತ್ತು ಟಿ20 ಮಾದರಿಯಲ್ಲಿ ಮಾತ್ರ ಕಾಣಿಸಿಕೊಂಡಿದ್ದಾರೆ. ಇದೇ ಮೊದಲ ಬಾರಿ ವೈಟ್​ ಬಾಲ್​ ಸ್ಪೆಷಲಿಸ್ಟ್ ಸ್ಪಿನ್ನರ್​​​, ವಿದೇಶದಲ್ಲಿ ರೆಡ್​ ಬಾಲ್​ ಕ್ರಿಕೆಟ್​ನಲ್ಲಿ ಆಡಲು ಮುಂದಾಗಿದ್ದಾರೆ.

ಮಹಿಳಾ CPLನಲ್ಲಿ ಕನ್ನಡತಿ ಶ್ರೇಯಾಂಕಾ ಮಿಂಚು

ಮಹಿಳಾ ಕೆರಬಿಯನ್​ ಪ್ರೀಮಿಯರ್​ ಲೀಗ್​ನಲ್ಲಿ ಕನ್ನಡತಿ ಶ್ರೇಯಾಂಕಾ​ ಪಾಟೀಲ್​ ಅದ್ಭುತ ಪ್ರದರ್ಶನ ಮುಂದುವರೆಸಿದ್ದಾರೆ. ಆಡಿದ 2ನೇ ಪಂದ್ಯದಲ್ಲಿ 4 ವಿಕೆಟ್​ ಕಬಳಿಸಿ ದಾಖಲೆ ಬರೆದಿದ್ದ ಶ್ರೇಯಾಂಕಾ, ಮೂರನೇ ಪಂದ್ಯದಲ್ಲೂ ಸ್ಪಿನ್​ ಜಾದೂ ಮಾಡಿದ್ದಾರೆ. ಟ್ರಿಬಾಗೂ ನೈಟ್​​ ರೈಡರ್ಸ್​ ವಿರುದ್ಧದ ಪಂದ್ಯದಲ್ಲಿ ಎಕಾನಮಿಕಲ್​ ಸ್ಪೆಲ್​ ಹಾಕಿದ ಕನ್ನಡತಿ 2 ಪ್ರಮುಖ ವಿಕೆಟ್​ ಪಡೆದು ಮಿಂಚಿದ್ದಾರೆ. 4 ಓವರ್​ಗಳಲ್ಲಿ ಕೇವಲ 15 ರನ್​ ಬಿಟ್ಟುಕೊಟ್ಟ ಶ್ರೇಯಾಂಕಾ, 2 ವಿಕೆಟ್​ ಕಬಳಿಸಿ ಗಯಾನಾ ಅಮೇಜಾನ್​ ವಾರಿಯರ್ಸ್​​ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದ್ರು.

ಭರ್ಜರಿ ಸಿಕ್ಸರ್​ ಸಿಡಿಸಿ ಅಬ್ಬರಿಸಿದ ಭುವನೇಶ್ವರ್​

ಭಾರತದ ವಿಶ್ವಕಪ್​ ತಂಡದಲ್ಲಿ ಸ್ಥಾನ ಗಿಟ್ಟಿಸಿಕೊಳ್ಳುವಲ್ಲಿ ವಿಫಲರಾಗಿರುವ ವೇಗಿ ಭುವನೇಶ್ವರ್​ ಕುಮಾರ್​ ಆಲ್​​ರೌಂಡ್​ ಆಟದಿಂದ ಗಮನ ಸೆಳೆದಿದ್ದಾರೆ. ಸದ್ಯ ಉತ್ತರ ಪ್ರದೇಶ ಪ್ರೀಮಿಯರ್​ ಲೀಗ್​ ಆಡ್ತಿರುವ ಭುವನೇಶ್ವರ್​ ಕುಮಾರ್​​, ಸಾಲಿಡ್​​ ಬೌಲಿಂಗ್​ ಮೂಲಕ ಮಿಂಚುತ್ತಿದ್ದಾರೆ. ಇದ್ರ ಜೊತೆಗೆ ಮೀರತ್​ ವಿರುದ್ಧದ ಪಂದ್ಯದಲ್ಲಿ ನೊಯ್ಡಾ ತಂಡದ ಭುವನೇಶ್ವರ್​, ಬ್ಯಾಕ್​ ಟು ಬ್ಯಾಕ್​ ಸಿಕ್ಸರ್​ ಸಿಡಿಸಿದ್ದಾರೆ. 3 ಎಸೆತಗಳಲ್ಲಿ 2 ಭರ್ಜರಿ ಸಿಕ್ಸರ್​ ಸಿಡಿಸಿ ಅಬ್ಬರಿಸಿದ್ದಾರೆ.

ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್‌ ಫಸ್ಟ್‌ ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ

Super Six: ಕ್ಯಾಚ್​ ಬಿಟ್ಟ ಕೊಹ್ಲಿ ವಿರುದ್ಧ ಕೈಫ್​ ಕಿಡಿ, INDvsPAK ಸೂಪರ್​​ 4​​ ಪಂದ್ಯಕ್ಕೂ ಮಳೆ ಭೀತಿ!

https://newsfirstlive.com/wp-content/uploads/2023/09/kohli-2-1.jpg

Load More