ಬಾಂಗ್ಲಾದೇಶ-ಪಾಕಿಸ್ತಾನದ ನಡುವೆ ಮೊದಲ ಟೆಸ್ಟ್
ಪಾಕ್ ನಾಯಕ ಮಸೂದ್ ಮಾಡಿದ ತಪ್ಪೇನು ಗೊತ್ತಾ?
ರಾವಲ್ಪಿಂಡಿ ಕ್ರಿಕೆಟ್ ಸ್ಟೇಡಿಯಂನಲ್ಲಿ ಮೊದಲ ಟೆಸ್ಟ್ ಪಂದ್ಯ
ಬಾಂಗ್ಲಾದೇಶ ವಿರುದ್ಧ ನಡೆಯುತ್ತಿರುವ ಮೊದಲ ಟೆಸ್ಟ್ ಪಂದ್ಯದಲ್ಲಿ ಪಾಕಿಸ್ತಾನ ತಂಡದ ನಾಯಕ ಮಸೂದ್ ಪಾಕ್ ಕ್ರಿಕೆಟ್ ಅಭಿಮಾನಿಗಳ ಕೆಂಗಣ್ಣಿಗೆ ಗುರಿಯಾಗಿದ್ದಾರೆ.
ಆಗಿದ್ದೇನು..?
ಟಾಸ್ ಗೆದ್ದಿರುವ ಬಾಂಗ್ಲಾದೇಶ ಬೌಲಿಂಗ್ ಆಯ್ಕೆ ಮಾಡಿಕೊಂಡಿತು. ಅಂತೆಯೇ ಮೊದಲು ಬ್ಯಾಟ್ ಮಾಡಿದ ಪಾಕಿಸ್ತಾನ 6 ವಿಕೆಟ್ ಕಳೆದುಕೊಂಡು 448 ರನ್ಗಳಿಗೆ ಡಿಕ್ಲೈರ್ ಮಾಡಿಕೊಂಡಿದೆ. ಇಲ್ಲಿ ವಿವಾದಕ್ಕೆ ಕಾರಣವಾಗಿರೋದು ವಿಕೆಟ್ ಕೀಪರ್ ರಿಜ್ವಾನ್ ವಿಚಾರ. ರಿಜ್ವಾನ್ ಬಾಂಗ್ಲಾ ವಿರುದ್ಧ ಅದ್ಭುತ ಬ್ಯಾಟಿಂಗ್ ಪ್ರದರ್ಶನ ನೀಡಿದರು. 171 ರನ್ಗಳಿಸಿ ಆಡುತ್ತಿದ್ದ ರಿಜ್ವಾನ್ಗೆ ಪಾಕ್ ನಾಯಕ ದ್ವಿಶತಕ ಬಾರಿಸಲು ಅವಕಾಶ ಮಾಡಿಕೊಡಲಿಲ್ಲ. 6 ವಿಕೆಟ್ ಕಳೆದುಕೊಂಡು 448 ರನ್ಗಳಿಸುತ್ತಿದ್ದಂತೆಯೇ ನಾಯಕ ಮಸೂದ್ ಡಿಕ್ಲೈರ್ ಮಾಡಿಕೊಂಡಿದ್ದಾರೆ.
ರಿಜ್ವಾನ್ಗೆ ದ್ವಿಶತಕ ಬಾರಿಸಲು ಕೇವಲ 29 ರನ್ ಬೇಕಿತ್ತು. ಅದಕ್ಕೆ ಮಸೂದ್ ಅವಕಾಶ ಮಾಡಿಕೊಡಲಿಲ್ಲ ಎಂದು ರಿಜ್ವಾನ್ ಅಭಿಮಾನಿಗಳು ಆಕ್ರೋಶ ವ್ಯಕ್ತಪಡಿಸ್ತಿದ್ದಾರೆ. ಕ್ರೀಸ್ನಿಂದ ಪೆವಿಲಿಯನ್ಗೆ ಬರುತ್ತಿದ್ದಂತೆಯೇ ರಿಜ್ವಾನ್, ತಮ್ಮ ಬ್ಯಾಟ್ ಅನ್ನು ಮಾಜಿ ನಾಯಕ ಬಾಬರ್ ಅಜಂನತ್ತ ಎಸೆದಿದ್ದಾರೆ. ಆಗ ಬಾಬರ್ ಅಜಂ ಬ್ಯಾಟನ್ನು ಕ್ಯಾಚ್ ಹಿಡಿದು ನಕ್ಕಿದ್ದಾರೆ.
ಇತ್ತ 4 ವಿಕೆಟ್ ಕಳೆದುಕೊಂಡಿರುವ ಬಾಂಗ್ಲಾದೇಶ 201ರನ್ಗಳಿಸಿದೆ. 247 ರನ್ಗಳ ಹಿನ್ನಡೆ ಅನುಭವಿಸಿರುವ ಬಾಂಗ್ಲಾ ಪಾಕ್ಗೆ ಟಕ್ಕರ್ ನೀಡುವ ಛಲದಲ್ಲಿದೆ. ರಾವಲ್ಪಿಂಡಿ ಕ್ರಿಕೆಟ್ ಸ್ಟೇಡಿಯಂನಲ್ಲಿ ಟೆಸ್ಟ್ ಪಂದ್ಯ ನಡೆಯುತ್ತಿದೆ.
ಇದನ್ನೂ ಓದಿ:ಕಳೆದ ಬಾರಿ ಹಸರಂಗ ಯಾಕೆ IPL ಆಡಲಿಲ್ಲ? ಇಲ್ಲೂ ಇದೆ ಆರ್ಸಿಬಿಯ ಒಂದು ನಿರ್ಧಾರದ ಕತೆ..!
Muhammad Rizwan threw his bat towards Babar Azam after the innings was declared.
They are always having fun 😂❤️#PAKvBAN #PakistanCricket pic.twitter.com/Sbwfq6LHPN— Rao kashif (@raokash) August 22, 2024

ವಿಶೇಷ ಸೂಚನೆ: ಕ್ರಿಕೆಟ್ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ ‘ರನ್ ಭೂಮಿ’ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್