ಬಹುನಿರೀಕ್ಷಿತ 2023ರ ಏಕದಿನ ವಿಶ್ವಕಪ್ ಟೂರ್ನಿ
49ನೇ ಶತಕ ಸಿಡಿಸಿದ ಕಿಂಗ್ ಕೊಹ್ಲಿ ಹೊಸ ಸಾಧನೆ
ಕೊಹ್ಲಿ ಒಬ್ಬ ಸ್ವಾರ್ಥಿ ಎಂದು ಮೊಹಮ್ಮದ್ ಹಫೀಜ್
ಇತ್ತೀಚೆಗೆ ಸೌತ್ ಆಫ್ರಿಕಾ ವಿರುದ್ಧ ನಡೆದ ಐಸಿಸಿ ಏಕದಿನ ವಿಶ್ವಕಪ್ ಪಂದ್ಯದಲ್ಲಿ ಟೀಂ ಇಂಡಿಯಾದ ಸ್ಟಾರ್ ಪ್ಲೇಯರ್ ವಿರಾಟ್ ಕೊಹ್ಲಿ ತನ್ನ 49ನೇ ಶತಕ ಸಿಡಿಸೋ ಮೂಲಕ ಸಚಿನ್ ದಾಖಲೆಯನ್ನು ಸರಿಗಟ್ಟಿದರು. ಇದಕ್ಕೆ ಇಡೀ ಕ್ರೀಡಾ ಜಗತ್ತೇ ಕೊಹ್ಲಿಯನ್ನು ಹಾಡಿಹೊಗಳುತ್ತಿದೆ. ಆದರೆ, ಪಾಕ್ ಮಾಜಿ ಕ್ರಿಕೆಟರ್ ಮೊಹಮ್ಮದ್ ಹಫೀಜ್ ಮಾತ್ರ ಕೊಹ್ಲಿ ಬಗ್ಗೆ ಕೊಂಕು ಮಾತುಗಳನ್ನು ಆಡಿದ್ದಾರೆ.
ಸದ್ಯ ನಡೆಯುತ್ತಿರೋ ವಿಶ್ವಕಪ್ ಟೂರ್ನಿಯಲ್ಲಿ ವಿರಾಟ್ ಕೊಹ್ಲಿ ಬ್ಯಾಟಿಂಗ್ ಸ್ವಾರ್ಥದಿಂದ ಕೂಡಿದೆ. ನಾನು ಮೂರನೇ ಬಾರಿಗೆ ಕೊಹ್ಲಿ ಬ್ಯಾಟಿಂಗ್ನಲ್ಲಿ ಸ್ವಾರ್ಥವನ್ನು ಕಂಡಿದ್ದೇನೆ. ಕೊಹ್ಲಿ ಶತಕಕ್ಕೆ ಇನ್ನೇನು ಒಂದು ರನ್ ಬೇಕಿತ್ತು. 49ನೇ ಓವರ್ನಲ್ಲಿ ಕೊಹ್ಲಿ ಬೇಕಂತಲೇ ಸಿಂಗಲ್ ತೆಗೆದುಕೊಂಡರು. ಆಗ ಕೊಹ್ಲಿಗೆ ತಂಡ ನೆನಪಾಗಲಿಲ್ಲ ಎಂದರು ಹಫೀಜ್.
ರೋಹಿತ್ ಶರ್ಮಾ ಸ್ವಾರ್ಥಿ ಅಲ್ಲ ಎಂದ ಹಫೀಜ್
ರೋಹಿತ್ ಶರ್ಮಾ ಕೂಡ ಸ್ವಾರ್ಥದಿಂದ ಕ್ರಿಕೆಟ್ ಆಡಬಹುದಿತ್ತು. ಆದರೆ, ರೋಹಿತ್ ಟೀಮ್ಗಾಗಿ ಪಂದ್ಯ ಆಡಿದ್ರು. ತಮ್ಮ ಸ್ವಾರ್ಥಕ್ಕಾಗಿ ಎಂದೂ ಕ್ರಿಕೆಟ್ ಆಡಿಲ್ಲ ಎಂದರು.
ನಾನು ಕೊಹ್ಲಿ ಚೆನ್ನಾಗಿ ಆಡಲಿಲ್ಲ ಎಂದು ಹೇಳುತ್ತಿಲ್ಲ. ಬದಲಿಗೆ 97 ರನ್ ಗಳಿಸೋವರೆಗೂ ಚೆನ್ನಾಗಿಯೇ ಆಡಿದ ಕೊಹ್ಲಿ ಬಳಿಕ ಶತಕಕ್ಕಾಗಿ 3 ಸಿಂಗಲ್ ತೆಗೆದುಕೊಂಡರು. ಬೌಂಡರಿ ಬಾರಿಸದೆ ಸಿಂಗಲ್ಗಾಗಿ ಎದುರು ನೋಡುತ್ತಿದ್ದರು. ಇದರ ಬಗ್ಗೆ ನಾನು ಮಾತಾಡುತ್ತಿದ್ದೇನೆ ಎಂದರು.
ವಿಶೇಷ ಸೂಚನೆ: ಕ್ರಿಕೆಟ್ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ ‘ರನ್ ಭೂಮಿ’ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್