newsfirstkannada.com

ಅನಿಲ್​ ಕುಂಬ್ಳೆ ರೆಕಾರ್ಡ್​ ಬ್ರೇಕ್ ಮಾಡಿದ ಮೊಹಮ್ಮದ್ ಶಮಿ.. ಬುಮ್ರಾನೂ ದಾಖಲೆ ಮಾಡ್ತಾರಾ?

Share :

22-10-2023

    ವಿಲ್​ ಯಂಗ್​ ವಿಕೆಟ್​ ಪಡೆಯುವ ಮೂಲಕ ಶಮಿ ವಿಶೇಷ ಸಾಧನೆ

    ಧರ್ಮಶಾಲಾ ಮೈದಾನದಲ್ಲಿ ನಡೆಯುತ್ತಿರುವ 2023ರ ವಿಶ್ವಕಪ್​ ಪಂದ್ಯ

    ಕುಂಬ್ಳೆ ದಾಖಲೆ ಬ್ರೇಕ್ ಮಾಡುವ ಸನಿಹದಲ್ಲಿ ಜಸ್​ಪ್ರೀತ್ ಬುಮ್ರಾ!

2023ರ ವಿಶ್ವಕಪ್​ ಟೂರ್ನಿಯ ಪಂದ್ಯದಲ್ಲಿ ನ್ಯೂಜಿಲೆಂಡ್- ಭಾರತದ ಕ್ರಿಕೆಟ್​ ತಂಡಗಳು ಗೆಲ್ಲಲು ಪೈಪೋಟಿ ನಡೆಸಿವೆ. ಹಿಮಾಚಲ ಪ್ರದೇಶದ ಧರ್ಮಶಾಲಾದಲ್ಲಿ ನಡೆಯುತ್ತಿರುವ ಪಂದ್ಯದಲ್ಲಿ ವೇಗಿ ಮೊಹಮ್ಮದ್​ ಶಮಿ ವಿಶೇಷವಾದ ಸಾಧನೆ ಮಾಡಿದ್ದಾರೆ. ವರ್ಲ್ಡ್​ಕಪ್​ ಟೂರ್ನಿಯ ಭಾರತದ 4 ಪಂದ್ಯಗಳ ಬಳಿಕ ಕಣಕ್ಕೆ ಇಳಿದಿರುವ ಶಮಿ ಅವರು ಅನಿಲ್​ ಕುಂಬ್ಳೆಯವರ ದಾಖಲೆಯಲ್ಲಿ ಸರಿಗಟ್ಟಿದ್ದಾರೆ.

ವಿಶ್ವಕಪ್ ಪಂದ್ಯಗಳಲ್ಲಿ ಅತಿಹೆಚ್ಚು ವಿಕೆಟ್​ಗಳನ್ನು ಪಡೆದ ಭಾರತದ 3ನೇ ಬೌಲರ್​ ಎಂಬ ಹೆಗ್ಗಳಿಕೆಗೆ ಶಮಿ ಪಾತ್ರರಾದರು. ಪಂದ್ಯದ ವೇಳೆ ತಮ್ಮ 2ನೇ ಓವರ್​ ಮಾಡಲು ಆಗಮಿಸಿದ ಶಮಿ ಮೊದಲ ಎಸೆತದಲ್ಲೇ ನ್ಯೂಜಿಲೆಂಡ್​ ಓಪನರ್​ ವಿಲ್​ ಯಂಗ್​ ಅವರ ವಿಕೆಟ್​ ಪಡೆಯುವ ಮೂಲಕ ಈ ಸಾಧನೆ ಮಾಡಿದರು. ವಿಶ್ವಕಪ್​ನಲ್ಲಿ 18 ಇನ್ನಿಂಗ್ಸ್​ ಅನ್ನು ಆಡಿರುವ ಕನ್ನಡಿಗ ಅನಿಲ್ ಕುಂಬ್ಳೆ 31 ವಿಕೆಟ್​ ಪಡೆದು ಈ ವರೆಗೆ 3ನೇ ಸ್ಥಾನದಲ್ಲಿದ್ದರು. ಆದ್ರೆ 12 ಇನ್ನಿಂಗ್ಸ್​ನಲ್ಲಿ 32 ವಿಕೆಟ್​ ಪಡೆಯುವ ಮೂಲಕ ಶಮಿ 3ನೇ ಸ್ಥಾನಕ್ಕೆ ಏರಿ ಕುಂಬ್ಳೆಯವರನ್ನು 4ನೇ ಸ್ಥಾನಕ್ಕೆ ತಳ್ಳಿದ್ದಾರೆ.

ಇನ್ನು ಜಸ್​ಪ್ರೀತ್ ಬುಮ್ರಾ ಅವರು 14 ಇನ್ನಿಂಗ್ಸ್​ನಲ್ಲಿ 28 ವಿಕೆಟ್​ ಪಡೆದು 5ನೇ ಸ್ಥಾನದಲ್ಲಿದ್ದಾರೆ. ಇವರು ಇನ್ನು 4 ವಿಕೆಟ್ ಪಡೆದರೆ ಕುಂಬ್ಳೆಯವರನ್ನು ಹಿಂದಿಕ್ಕಲಿದ್ದಾರೆ. ಈ ವಿಶ್ವಕಪ್​ ಟೂರ್ನಿ ಮುಗಿಯುವಷ್ಟರಲ್ಲಿ ಬುಮ್ರಾ, ಕುಂಬ್ಳೆಯವರಿಗಿಂತ ಮುಂದೆ ಹೋಗಲಿದ್ದಾರೆ ಎಂದು ಹೇಳಲಾಗುತ್ತಿದೆ. ಇದೆಲ್ಲ ಮುಂದಿನ ಪಂದ್ಯಗಳಲ್ಲಿ ತಿಳಿದು ಬರಲಿದೆ.

ವಿಶ್ವಕಪ್​ನಲ್ಲಿ ಅತಿ ಹೆಚ್ಚು ವಿಕೆಟ್​ ಪಡೆದ ಭಾರತದ ಬೌಲರ್​ಗಳು

  • ಜಹೀರ್ ಖಾನ್- 44
  • ಜಾವಗಲ್ ಶ್ರೀನಾಥ್- 44
  • ಮೊಹಮ್ಮದ್ ಶಮಿ- 32

​​ವಿಶ್ವಕಪ್​ನಲ್ಲಿ ಅತಿ ಹೆಚ್ಚು ವಿಕೆಟ್​ ಪಡೆದ ವಿಶ್ವದ ಬೌಲರ್​ಗಳು

  • ಆಸ್ಟ್ರೇಲಿಯಾದ ಗ್ಲೆನ್ ಮೆಕ್​ಗ್ರಾತ್- 71
  • ಮುತ್ತಯ್ಯ ಮುರಳೀಧರನ್- 68
  • ಲಸಿತ ಮಾಲಿಂಗ- 56

ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್‌ಫಸ್ಟ್‌ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ

ಅನಿಲ್​ ಕುಂಬ್ಳೆ ರೆಕಾರ್ಡ್​ ಬ್ರೇಕ್ ಮಾಡಿದ ಮೊಹಮ್ಮದ್ ಶಮಿ.. ಬುಮ್ರಾನೂ ದಾಖಲೆ ಮಾಡ್ತಾರಾ?

https://newsfirstlive.com/wp-content/uploads/2023/10/Mohammed_Shami.jpg

Load More