newsfirstkannada.com

INDvsNZ: ‘ಶಕ್ತಿಮಾನ್’ ಶಮಿ ಡೆಡ್ಲಿ ದಾಳಿಗೆ ಕಿವೀಸ್ ಧೂಳೀಪಟ..! ಸೇಡಿನ ಸಮರದಲ್ಲಿ ಗೆದ್ದು ಬೀಗಿದ ಭಾರತ

Share :

16-11-2023

    23 ವಿಕೆಟ್ ಪಡೆದ ಶಮಿ ಗರಿಷ್ಠ ವಿಕೆಟ್ ಟೇಕರ್​

    ತ್ರಿಮೂರ್ತಿಗಳ ಆರ್ಭಟಕ್ಕೆ ಬೆಚ್ಚಿ ಬಿದ್ದ ಕಿವೀಸ್​​​..!

    ಹೋಮ್​​ ಗ್ರೌಂಡ್​ನಲ್ಲಿ ಶ್ರೇಯಸ್ ಸೆಂಚುರಿ ಧಮಾಕ..!

ಟೀಮ್ ಇಂಡಿಯಾ, ನ್ಯೂಜಿಲೆಂಡ್​​​​ ವಿರುದ್ಧ ನಾಕೌಟ್​​ ಫೋಬಿಯಾದಿಂದ ಹೊರಬಂದಿದೆ. ಸೆಮೀಸ್ ಬ್ಯಾಟಲ್​​​ನಲ್ಲಿ ಕಿವೀಸ್​​​​​ ತಂಡವನ್ನ ಎನ್​ಕೌಂಟ್ ಮಾಡಿದೆ. ಆ ಮೂಲಕ 4 ವರ್ಷಗಳ ಹಿಂದಿನ ಸೋಲಿಗೆ ತಕ್ಕ ರಿವೆಂಜ್ ತೀರಿಸಿಕೊಂಡಿದೆ. ಈ ರಿವೆಂಜ್ ಹಿಂದಿನ ಸೂತ್ರಧಾರಿಗಳು ಈ ತ್ರಿಮೂರ್ತಿಗಳು. ಅವಱರು, ಕಿವೀಸ್ ಕಿವಿ ಹಿಂಡಿದ್ದೇಗೆ ಅನ್ನೋದನ್ನ ತಿಳಿಯಲು ಈ ಸ್ಟೋರಿ ಓದಿ.

ಕೊನೆಗೂ ಸೇಡಿನ ಸಮರದಲ್ಲಿ ಟೀಮ್ ಇಂಡಿಯಾ ಗೆದ್ದಿದೆ. ವಾಂಖೆಡೆಯಲ್ಲಿ ನಡೆದ ಸೆಮಿಫೈನಲ್​​​ ಕಾಳಗದಲ್ಲಿ ಬಲಾಢ್ಯ ನ್ಯೂಜಿಲೆಂಡ್​​ ತಂಡವನ್ನ ಸೋಲಿಸಿ, ಫೈನಲ್​​ಗೆ ಎಂಟ್ರಿಕೊಟ್ಟಿದೆ. ಆ ಮೂಲಕ 2019ರ ವಿಶ್ವಕಪ್ ಸೆಮೀಸ್​ ಸೋಲಿಗೆ ಪ್ರತಿಕಾರ ತೀರಿಸಿಕೊಂಡಿದ್ದು,3ನೇ ಬಾರಿ ಟ್ರೋಫಿ ಮೇಲೆ ಕಣ್ಣಿಟ್ಟಿದೆ.

ಭಾರತಕ್ಕೆ ಫೈನಲ್​​​​​​ ಟಿಕೆಟ್​​​​ ಗಿಟ್ಟಿಸಿಕೊಂಡ ಶ್ರೇಯಸ್ಸು ಈ ಮೂವರಿಗೆ ಸಲ್ಲಬೇಕು..ಇವರ ಟಾಪ್​ ಪರ್ಫಾಮೆನ್ಸ್​ನಿಂದಲೇ ರೋಹಿತ್​​​​ ಹಿಸ್ಟಾರಿಕಲ್ ಗೆಲುವು ಸಾಧಿಸಿದೆ. ಆ ಪೈಕಿ ಕಿಂಗ್ ಕೊಹ್ಲಿನೇ ಪಂದ್ಯದ ಮೊದಲ ಗೆಲುವಿನ ರೂವಾರಿ.

ಐಕಾನಿಕ್​​​ ಮೈದಾನದಲ್ಲಿ ಕೊಹ್ಲಿ ಹಿಸ್ಟಾರಿಕ್​​​​​​​​ 50ನೇ ಶತಕ

ನಿನ್ನೆ ವಾಂಖೆಡೆ ಸ್ಟೇಡಿಯಂನಲ್ಲಿ ನಡೆದಿದ್ದು ಒನ್ ಆ್ಯಂಡ್ ಒನ್ಲಿ ಕಿಂಗ್ ಕೊಹ್ಲಿ ದರ್ಬಾರ್​​​. ಅಗೈನ್​ ಕ್ಲಾಸ್​ ಇನ್ನಿಂಗ್ಸ್ ಕಟ್ಟಿದ್ರು. ಕೆಚ್ಚದೆಯ ಹೋರಾಟ ನಡೆಸಿದ ವಿರಾಟ್ ಒನ್ಡೇಯಲ್ಲಿ 50ನೇ ಶತಕ ಸಿಡಿಸಿ ಹೊಸ ಭಾಷ್ಯ ಬರೆದ್ರು. ವಿರಾಟರ್ಭಟದ ಪರಿಣಾಮ ಭಾರತ, ಎದುರಾಳಿಗೆ ಬೃಹತ್ ಟಾರ್ಗೆಟ್ ನೀಡಿ, ಸೋಲಿನ ಪ್ರಪಾತಕ್ಕೆ ತಳ್ತು.

ಹೋಮ್​ ಗ್ರೌಂಡ್​ ಅಡ್ವಾಂಟೇಜ್​​​​​​ ಪಡೆದ ಶ್ರೇಯಸ್ ಅಯ್ಯರ್​​​​​​ ಕಿವೀಸ್​​​​ಗೆ ಸರಿಯಾಗೇ ಗುಮ್ಮಿದ್ರು. ಶ್ರೇಯಸ್ ಕೊಟ್ಟ ಒಂದೊಂದು ಏಟಿಗೆ ವಿಲಿಯಮ್ಸನ್ ಪಡೆ ಪತರುಗುಟ್ಟಿ ಹೋಯ್ತು. ಆ ಪರಿ ಮುಂಬೈಕರ್ ಆರ್ಭಟಿಸಿದ್ರು. ಜಸ್ಟ್​​​ 70 ಎಸೆತಗಳಲ್ಲಿ ಸಿಡಿಲಬ್ಬರದ 105 ರನ್ ಗಳಿಸಿ ಕಂಪ್ಲೀಟ್​​​ ಕಿವೀಸ್​​​​ ಬೌಲರ್ಸ್​ ಮೇಲೆ ಡಾಮಿನೆಂಟ್​ ನಡೆಸಿದ್ರು.

ಪ್ರಕಸ್ತ ವಿಶ್ವಕಪ್​​ನಲ್ಲಿ ಮೂರನೇ ಬಾರಿ 5 ವಿಕೆಟ್ ಸಾಧನೆ

ಬ್ಯಾಟಿಂಗ್​​​​​ನಲ್ಲಿ ಕಿಂಗ್ ಕೊಹ್ಲಿ, ಶ್ರೇಯಸ್ ಅಯ್ಯರ್​​ ಗೇಮ್ ಚೇಂಜರ್​ಗಳಾದ್ರೆ ಬೌಲಿಂಗ್​ನಲ್ಲಿ ಸ್ವಿಂಗ್ ಮಾಸ್ಟರ್​ ಮೊಹಮ್ಮದ್​ ಶಮಿ ರಾಕಿಂಗ್ ಪರ್ಫಾಮೆನ್ಸ್​ ನೀಡಿದ್ರು. ಆರಂಭದಲ್ಲಿ ಡೆವೋನ್​ ಕಾನ್ವೆ, ಡೇಂಜರಸ್​​​​​ ರಚಿನ್ ರವೀಂದ್ರ ವಿಕೆಟ್ ಕಬಳಿಸಿ ಆರಂಭಿಕ ಮೇಲುಗೈ ತಂದುಕೊಟ್ರು.

ಇನ್ನೇನು ಪಂದ್ಯ ಭಾರತದಿಂದ ಕೈ ಜಾರಿ ಹೋಗುವ ಸಿಚುವೇಶನ್ ಎದುರಾಗಿತ್ತು. ಆಗ ಅಗೈನ್​​​ ಶಕ್ತಿಮಾನ್ ಶಮಿ ಬೆಂಕಿ ಉಗುಳಿದ್ರು. ವೆಲ್ ಸೆಟಲ್ಡ್​ ಕೇನ್​​ ವಿಲಿಯಮ್ಸನ್​​​​​​​​​ ವಿಕೆಟ್​ ಬೇಟೆಯಾಡಿ ಪಂದ್ಯಕ್ಕೆ ತಿರುವು ತಂದುಕೊಟ್ರು. ಬಳಿಕ ಮತ್ತಷ್ಟು ವೈಲೆಂಟ್​​ ಆದ ತೂಫಾನ್ ಶಮಿ ಭಾರತಕ್ಕೆ ಮಾರಕವಾಗಿದ್ದ ಡೇರಿ ಮಿಚೆಲ್​, ಟಾಮ್ ಲಾಥಮ್​ ಹಾಗೂ ಟಿಮ್ ಸೌಥಿಗೆ ಖೆಡ್ಡಾ ತೋಡಿದ್ರು.

ತನ್ನ ಬೆಂಕಿಯುಂಡೆಯಂತಹ ಸ್ಪೆಲ್ ಮೂಲಕ ಕಿವೀಸ್ ಬ್ಯಾಟಿಂಗ್​ ಭದ್ರಕೋಟೆಯನ್ನ ಛಿದ್ರಗೊಳಿಸಿದ ಶಮಿ 7 ವಿಕೆಟ್ ಪಡೆದು ಶೈನ್ ಆದ್ರು. ಆ ಮೂಲಕ ಇದೇ ವಿಶ್ವಕಪ್​ನಲ್ಲಿ 3ನೇ ಬಾರಿ 5 ವಿಕೆಟ್ ಸಾಧಿನೆ ಮಾಡಿದ್ರು..ಟೂರ್ನಮೆಂಟ್​​ನಲ್ಲಿ 23 ವಿಕೆಟ್​​​ ಕಬಳಿಸಿ ಗರಿಷ್ಠ ವಿಕೆಟ್ ಟೇಕರ್ ಆಗಿ ಹೊರಹೊಮ್ಮಿದ್ರು..

ಫೈನಲಿ ಹೈ ಪ್ರಶರ್ ಗೇಮ್​​ನಲ್ಲಿ ಹೈ ಲೆವೆಲ್​ ಪರ್ಫಾಮೆನ್ಸ್​ ನೀಡಿ ತ್ರಿಮೂರ್ತಿಗಳು ತಂಡವನ್ನ ಫೈನಲ್​ಗೇರಿಸಿದ್ದಾರೆ. ಸಂಡೇ ಬ್ಯಾಟಲ್​ನಲ್ಲಿ ಈ ವೀರ ಕಲಿಗಳಿಂದ ಇಂತಹದೇ ಸೂಪರ್ ಡೂಪರ್ ಪರ್ಫಾಮೆನ್ಸ್​ ಮೂಡಿ ಬರಲಿ..ಭಾರತ ಟ್ರೋಫಿ ಜಯಿಸಿ ಚಾರಿತ್ರಿಕ ಸಾಧನೆ ನಿರ್ಮಿಸುವಂತಾಗಲಿ ಎಂಬುದು ನಮ್ಮ ಆಶಯ.

ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್‌ ಫಸ್ಟ್‌ ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ

INDvsNZ: ‘ಶಕ್ತಿಮಾನ್’ ಶಮಿ ಡೆಡ್ಲಿ ದಾಳಿಗೆ ಕಿವೀಸ್ ಧೂಳೀಪಟ..! ಸೇಡಿನ ಸಮರದಲ್ಲಿ ಗೆದ್ದು ಬೀಗಿದ ಭಾರತ

https://newsfirstlive.com/wp-content/uploads/2023/11/Shami.webp

Load More