ಶಮಿ ಆಟಕ್ಕೆ ಬಾಲಿವುಡ್ ಬೆಡಗಿ ಕ್ಲೀನ್ಬೋಲ್ಡ್
ಬಾಲಿವುಡ್ ನಟಿಯ ಅಂತರಂಗದ ಮಾತು ಬಹಿರಂಗ
ಯಾರು ಆ ನಟಿ.? ಏನಿದು ಕಥೆ.? ಕಂಡಿಷನ್ ಏನು.?
ವಿಶ್ವಕಪ್ ಅಖಾಡದಲ್ಲಿ ಟೀಮ್ ಇಂಡಿಯಾ ವೇಗಿ ಮೊಹಮ್ಮದ್ ಶಮಿ ಎಲ್ಲರನ್ನ ನಿಬ್ಬೆರಗಾಗಿಸಿದ್ದಾರೆ. ಶಮಿ ಅಮೋಘ ಆಟಕ್ಕೆ ಎಲ್ರೂ ಮನಸೋತಿದ್ದಾರೆ. ಇಲ್ಲೊಬ್ಲು ಬಾಲಿವುಡ್ ಬೆಡಗಿಯಂತೂ ಶಮಿ ಆಟ ನೋಡಿ ಎಷ್ಟು ಇಂಪ್ರೆಸ್ ಆಗಿದ್ದಾಳೆ ಅಂದ್ರೆ, ಮದುವೆಯಾಗೋಕೇ ರೆಡಿಯಾಗಿ ಬಿಟ್ಟಿದ್ದಾಳೆ. ಯಾರು ಆ ಬೆಡಗಿ.? ಏನಿದು ಕಥೆ.? ಈ ಸ್ಟೋರಿ ಓದಿ.
ವಿಶ್ವಕಪ್ ರಣರಂಗದಲ್ಲಿ ಸ್ಪೀಡ್ಸ್ಟರ್ ಮೊಹಮ್ಮದ್ ಶಮಿ ಸೆನ್ಸೇಶನ್ ಸೃಷ್ಟಿಸಿದ್ದಾರೆ. ಅಕ್ಷರಶಃ ಹಸಿದ ಹೆಬ್ಬುಲಿಯಂತೆ ಶಮಿಯ ವಿಕೆಟ್ ಬೇಟೆಯಾಡ್ತಿದ್ದಾರೆ. ಮೊಹಮ್ಮದ್ ಶಮಿಯ ಕರಾರುವಕ್ ದಾಳಿಗೆ ಬ್ಯಾಟ್ಸ್ಮನ್ಗಳು ಬಳಲಿ ಬೆಂಡಾಗಿಬಿಟ್ಟಿದ್ದಾರೆ.
ಆನ್ಫೀಲ್ಡ್ ಆಟಕ್ಕೆ ಆಫ್ ದ ಫೀಲ್ಡ್ನ ಬೆಡಗಿ ಕ್ಲೀನ್ಬೋಲ್ಡ್.!
ಆನ್ಫೀಲ್ಡ್ ಮೊಹಮ್ಮದ್ ಶಮಿಯ ಬೌಲಿಂಗ್ ಮುಂದೆ ಬ್ಯಾಟ್ಸ್ಮನ್ಗಳು ಕಕ್ಕಾಬಿಕ್ಕಿಯಾಗ್ತಿದ್ದಾರೆ. ಚಿಕ್ಕ ಕ್ಲ್ಯೂ ಕೂಡ ಇಲ್ಲದೇ ಕ್ಲೀನ್ ಬೋಲ್ಡ್ ಆಗ್ತಿರೋ ಪರಿಯನ್ನ ನೀವು ನೋಡಿದ್ದೀರಾ. ಅಖಾಡದಲ್ಲಿ ಘಟಾನುಘಟಿ ಆಟಗಾರರನ್ನ ತನ್ನ ಪೇಸ್ & ಸ್ವಿಂಗ್ನ ಮ್ಯಾಜಿಕ್ನಿಂದ ಮೋಡಿ ಮಾಡ್ತಿರೋ ಪರಿಗೆ ಆಫ್ ದ ಫೀಲ್ಡ್ನ ಬೆಡಗಿಯೊಬ್ಬಳು ಕ್ಲೀನ್ ಬೋಲ್ಡ್ ಆಗಿದ್ದಾಳೆ.
ಬಾಲಿವುಡ್ ಬೆಡಗಿಯ ಅಂತರಂಗದ ಮಾತು ಬಹಿರಂಗ..!
ಯೆಸ್. ವಿಶ್ವಕಪ್ ಶಮಿ ಮಾಡ್ತಿರೋ ಮೋಡಿಗೆ ಎದುರಾಳಿ ಆಟಗಾರರು ಬೆಸ್ತು ಬಿದ್ರೆ, ಫ್ಯಾನ್ಸ್ ಫುಲ್ ಇಂಪ್ರೆಸ್ ಆಗಿದ್ದಾರೆ. ಹೀಗೆ ಫುಲ್ ಇಂಪ್ರೆಸ್ ಆಗಿರುವವರಲ್ಲಿ ಈ ಬಾಲಿವುಡ್ ನಟಿ ಕೂಡ ಒಬ್ಬಳು. ಶಮಿ ಆಟಕ್ಕೆ ಮನಸೋತಿರೋ ಈಕೆ ಇದೀಗ ಅಂತರಂಗದ ಮಾತನ್ನ ಬಹಿರಂಗ ಪಡಿಸಿದ್ದಾಳೆ. ನಿಮ್ಮನ್ನ ಮದುವೆಯಾಗಲು ನಾನು ರೆಡಿ ಎಂದಿದ್ದಾಳೆ. ಅಂದಹಾಗೆಯೇ ಹೀಗೆ ಹೇಳಿರೋ ಆ ಬೆಡಗಿಯ ಹೆಸರು ಪಾಯಲ್ ಘೋಷ್..!
ಮದುವೆಗೆ ರೆಡಿ ಆದ್ರೆ ಕಂಡಿಷನ್ ಅಪ್ಲೈ..!
ಶಮಿಯನ್ನ ಮದುವೆಯಾಗಲು ರೆಡಿ ಅಂದಿರುವ ಬಾಲಿವುಡ್ ಬೆಡಗಿ ಪಾಯಲ್ ಘೋಷ್ ಒಂದು ಕಂಡಿಷನ್ ಬೇರೆ ಹಾಕಿದ್ದಾಳೆ. ಇಂಗ್ಲೀಷ್ ಚಾಲೆಂಜ್ನಲ್ಲಿ ಶಮಿ ಗೆಲ್ಬೇಕಂತೆ. ಹೌದು..! ಶಮಿ ತನ್ನ ಇಂಗ್ಲೀಷ್ ಅನ್ನ ಇಂಪ್ರೂವ್ ಮಾಡಿಕೊಂಡ್ರೆ, ಮಾತ್ರ ವಿವಾಹಕ್ಕೆ ಪಾಯಲ್ ಘೋಷ್ ರೆಡಿಯಂತೆ. ಹೀಗಂತ ಅಧಿಕೃತ ಸೋಷಿಯಲ್ ಮೀಡಿಯಾ ಅಕೌಂಟ್ಗಳಲ್ಲಿ ಪೋಸ್ಟ್ ಮಾಡಿದ್ದಾಳೆ.
ಯಾರು ಈ ಪಾಯಲ್ ಘೋಷ್.?
ಈ ಪ್ರಶ್ನೆ ನಿಮ್ಮನ್ನ ಈಗಾಗಲೇ ಕಾಡಿರುತ್ತೆ ಬಿಡಿ. ಪಾಯಲ್ ಘೋಷ್ ಪ್ರಯಾಣಮ್, ಪಟೇಲ್ ಕಿ ಪಂಜಾಬಿ ಶಾದಿ, ಫೈರ್ ಆಫ್ ಲವ್, ಮಿಸ್ಟರ್ ರಾಸ್ಕಲ್ ಹೀಗೆ ಹಲವು ಚಿತ್ರಗಳಲ್ಲಿ ನಟಿಸುವ ನಟಿ. ಕನ್ನಡದಲ್ಲೂ ವರ್ಷಧಾರೆ ಅನ್ನೋ ಒಂದು ಚಿತ್ರದಲ್ಲೂ ಪಾಯಲ್ ಘೋಷ್ ಸ್ಕ್ರೀನ್ ಶೇರ್ ಮಾಡಿದ್ದಾಳೆ. ಆದ್ರೆ, ಈಕೆ ಚಿತ್ರದಲ್ಲಿ ನಟಿಸಿದ್ದಕ್ಕಿಂತ ಕಾಂಟ್ರವರ್ಸಿ ಹಾಗೂ ಪೊಲಿಟಕ್ಸ್ನಿಂದಲೇ ಸುದ್ದಿಯಾಗಿದ್ದೇ ಹೆಚ್ಚು.
ಬಾಲಿವುಡ್ ಡೈರೆಕ್ಟರ್ ಅನುರಾಗ್ ಕಶ್ಯಪ್ ವಿರುದ್ಧ ಇದೇ ಪಾಯಲ್, ಈ ಹಿಂದೆ ಅತ್ಯಾಚಾರದ ಆರೋಪ ಮಾಡಿದ್ರು. ಅದ್ರ ಕೇಸ್ ಇನ್ನೂ ನಡೀತಾಲೆಯಿದೆ. ಜೊತೆಗೆ ರಾಮಾದಾಸ್ ಅಠಾವಳೆಯ ರಿಪಬ್ಲಿಕನ್ ಪಾರ್ಟಿ ಆಫ್ ಇಂಡಿಯಾ ಪಕ್ಷದಲ್ಲೂ ಪ್ರಮುಖ ಹುದ್ದೆಯಲ್ಲಿ ಪಾಯಲ್ ಇರೋದ್ರಿಂದ ಆಗಾಗ ಸುದ್ದಿಯಾಗ್ತಲೆ ಇರ್ತಾಳೆ.
ಅದೇನೆ ಇರಲಿ. ವೈಯಕ್ತಿಕ ಜೀವನದಲ್ಲಿ ಸಾಕಷ್ಟು ನೋವನ್ನ ಅನುಭವಿಸಿ ಮೊಹಮ್ಮದ್ ಶಮಿ ಕಮ್ಬ್ಯಾಕ್ ಮಾಡಿದ್ದಾರೆ. ಸಾಲಿಡ್ ಪರ್ಫಾಮೆನ್ಸ್ ನೀಡ್ತಿರೋ ಇದೆಲ್ಲದರಿಂದ ವಿಚಲಿತರಾಗದೇ ಟೂರ್ನಿಯಲ್ಲಿ ಅದೇ ಫಾರ್ಮ್ ಮುಂದುವರೆಸಲಿ. ಟೀಮ್ ಇಂಡಿಯಾದ ಗೆಲುವಿಗೆ ಕಾರಣರಾಗಲಿ ಅನ್ನೋದು ಅಭಿಮಾನಿಗಳ ಆಶಯ.
ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್ನಲ್ಲಿ ‘ರನ್ ಭೂಮಿ’ ವೀಕ್ಷಿಸಿ