2020ರ ನಂತರ ವೈಟ್ಬಾಲ್ಗೆ ಮಾಸ್ಟರ್ ಆಗಿದ್ದೇಗೆ?
ಅಂದು ಜಸ್ಟ್ ಟೆಸ್ಟ್ ಬೌಲರ್ ಎಂದು ಕಾಲೆಳೆದಿದ್ದರು..!
ಇದು ಮೊಹಮ್ಮದ್ ಶಮಿ ಸಕ್ಸಸ್ ಹಿಂದಿನ ಯಶೋಗಾಧೆ..!
ಈತ ಜಸ್ಟ್ ಟೆಸ್ಟ್ ಬೌಲರ್. ರೆಡ್ ಬಾಲ್ನಲ್ಲಿ ಮಾತ್ರವೇ ಈತನ ದರ್ಬಾರ್. ಈತ ಅಶೋಕ್ ದಿಂಡಾ ಅಕಾಡಮಿ ಬೌಲರ್. ಈ ಸ್ಟೇಟ್ಮೆಂಟ್ಸ್ ಎಲ್ಲಾ ಕೇಳಿಬಂದಿದ್ದು ಸ್ಪೀಡ್ಸ್ಟರ್ ಶಮಿ ಮೇಲೆ. ಅಷ್ಟೇ ಅಲ್ಲ. ಟೀಮ್ ಇಂಡಿಯಾಗೂ ಬೇಡವಾಗಿದ್ದ ಈತ, ಈಗ ವಿಶ್ವಕಪ್ನ ಮೇನ್ ವೇಪನ್. ಆದ್ರೆ ಈ ಸಕ್ಸಸ್ ಹಿಂದೆ ಭಾರೀ ಶ್ರಮವೇ ಅಡಗಿದೆ.
ಮೊಹಮ್ಮದ್ ಶಮಿ.. ಟೀಮ್ ಇಂಡಿಯಾದ ಸ್ಪೀಡ್ಸ್ಟರ್.. ಸುಮಾರು 145 ಅಸುಪಾಸಿನಲ್ಲಿ ಬೌಲಿಂಗ್ ಮಾಡೋ ಈತ, ಟೀಮ್ ಇಂಡಿಯಾದ ಟ್ರಂಪ್ಕಾರ್ಡ್ ಬೌಲರ್ಗಳಲ್ಲಿ ಒಬ್ಬ. ವಿಶ್ವಕಪ್ನಲ್ಲಿ ರೋಹಿತ್ ಪಡೆಯ ಮುಂಚೂಣಿ ಬೌಲರ್. ವಿಶ್ವಕಪ್ನ ಡೆಡ್ಲಿ ಪೇಸರ್ ಆಗಿ ಗುರುತಿಸಿಕೊಂಡಿರುವ ಮೊಹಮ್ಮದ್ ಶಮಿ, 3 ವರ್ಷಗಳ ಹಿಂದೆ ನಿಜಕ್ಕೂ ಟೀಕೆಗೆ ಗುರಿಯಾಗಿದ್ದೇ ಹೆಚ್ಚು.
ಹೌದು.! 2020ರ ತನಕ ಟೆಸ್ಟ್ ಫಾರ್ಮೆಟ್ ಮಾತ್ರವೇ ಸಿಮೀತ ಎನಿಸಿಕೊಂಡಿದ್ದ ಶಮಿ ಈಗ ವೈಟ್ಬಾಲ್ ಫಾರ್ಮೆಟ್ನಲ್ಲೂ ಡೇಂಜರಸ್ ಅನ್ನೋದನ್ನೂ ನಿರೂಪಿಸಿದ್ದಾರೆ. ಅಷ್ಟೇ ಅಲ್ಲ, 33ರ ವಯಸ್ಸಿನಲ್ಲೂ ಯುವ ಬೌಲರ್ಗಳು ನಾಚುವಂತೆ ಬೌಲಿಂಗ್ ಮಾಡಿರೋ ಶಮಿ, ವೈಟ್ಬಾಲ್ಗೆ ಅನ್ಫಿಟ್ ಅಂತಿದ್ದವರಿಂದಲೇ ಈಗ ಉಘೇ ಉಘೇ ಅನಿಸಿಕೊಳ್ತಿದ್ದಾರೆ. ಈ ಸಕ್ಸಸ್ ಹಿಂದೆ ಕಠಿಣ ಶ್ರಮವೇ ಇದೆ.
2020ರ ನಂತರ ಮೊಹಮ್ಮದ್ ಶಮಿ ದೃಢ ಸಂಕಲ್ಪ
ಟೆಸ್ಟ್ನಲ್ಲಿ ಸಕ್ಸಸ್ ಕಂಡಿದ್ದ ಶಮಿ, ಏಕದಿನ ಫಾರ್ಮೆಟ್ನಲ್ಲಿ ಟ್ರೋಲ್ಗೆ ಗುರಿಯಾಗಿದ್ದೆ ಹೆಚ್ಚು. ಅಷ್ಟೇ ಅಲ್ಲ, ಮಾಜಿ ಕ್ರಿಕೆಟಿಗರು ಸಹ ಈತನ ಸಾಮರ್ಥ್ಯವನ್ನ ಅಣುಕಿಸಿದ್ರು. ಇದನ್ನೆಲ್ಲಾ ಕಂಡಿದ್ದ ಮೊಹಮ್ಮದ್ ಶಮಿ, ಮಾಡಿದ್ದೇ ಧೃಡ ಸಂಕಲ್ಪ.. ಅದೇ ಮೂರು ಫಾರ್ಮೆಟ್ ಬೌಲರ್ ಎನಿಸಿಕೊಳ್ಳಬೇಕು ಎಂಬ ಸಂಕಲ್ಪ.
ಲಾಕ್ಡೌನ್ ಎಷ್ಟು ಜನರ ಜೀವನ ಸಂಕಷ್ಟಕ್ಕೆ ದೂಡಿದೆ. ಇದೇ ಲಾಕ್ಡೌನ್ ಶಮಿ ಪಾಲಿಗೆ ವರವಾಯ್ತು. 3 ಫಾರ್ಮೆಟ್ನ ಬೌಲರ್ ಎಂಬ ಆಗಬೇಕೆಂಬ ಸಂಕಲ್ಪ ಹೊಂದಿದ್ದ ಶಮಿಯ ದೃಷ್ಟಿನೆಟ್ಟಿದ್ದು ವೈಟ್ಬಾಲ್ ಬೌಲಿಂಗ್ ಮೇಲೆ.. ಬೆಳ್ಳಂ ಬೆಳಗ್ಗೆಯೇ 6 ಚೆಂಡುಗಳ ಜೊತೆ ಒಂದು ಬಕೆಟ್ ವಾಟರ್ ಕೊಂಡೊಯ್ಯುತ್ತಿದ್ದ ಮೊಹಮ್ಮದ್ ಶಮಿ, ತನ್ನದೇ ಫಾರ್ಮ್ ಹೌಸ್ನಲ್ಲಿ ಕ್ರಿಕೆಟ್ ಪಿಚ್ ರೆಡಿ ಮಾಡಿದ್ರು. ವೆಟ್ ಬಾಲ್ನಲ್ಲೇ ಪ್ರತಿನಿತ್ಯ ಮೂರರಿಂದ ನಾಲ್ಕು ಗಂಟೆಗಳ ಕಾಲ ಅಭ್ಯಾಸ ಮಾಡ್ತಿದ್ರು.
ಸಿರೀಸ್ ಮುಗಿದ ಬೆನ್ನಲ್ಲೇ ಮತ್ತೆ ಅಭ್ಯಾಸಕ್ಕೆ
ಸದ್ಯ ವಿಶ್ವಕಪ್ನಲ್ಲಿ ಮೊಹಮ್ಮದ್ ಶಮಿ, ಅದ್ಬುತವನ್ನೇ ನಡೆಸ್ತಿದ್ದಾರೆ ಅಂದ್ರೆ, ಅದಕ್ಕೆ ರೀಸನ್ ಮೂರು ವರ್ಷಗಳ ಕಠಿಣ ಶ್ರಮ. ಇದಿಷ್ಟೇ ಅಲ್ಲ.! ಇಂಟ್ರೆಸ್ಟಿಂಗ್ ವಿಚಾರ ಅಂದ್ರೆ, ಸಿರೀಸ್ ಮುಗಿದ ಬಳಿಕ ಎಲ್ಲಾ ಆಟಗಾರರು ವಿಶ್ರಾಂತಿ, ಫ್ಯಾಮಿಲಿ ಟೂರ್ನಲ್ಲಿ ಬ್ಯುಸಿಯಾಗ್ತಾರೆ. ಶಮಿ ಮಾತ್ರ ಇದಕ್ಕೆ ವಿಭಿನ್ನ. ಈ ವಿಚಾರವನ್ನ ಸ್ವತಃ ಬಾಲ್ಯದ ಕೋಚ್ ಬದ್ರುದ್ದೀನ್ ಸಿದ್ದಿಕ್ ಬಹಿರಂಗಪಡಿಸಿದ್ದಾರೆ.
ಸರಣಿ ಬಳಿಕ ನೋ ರೆಸ್ಟ್..!
ಸರಣಿಗಳಿಂದ ಹಿಂತಿರುಗಿದ ನಂತರ ಆಟಗಾರರು ಸಾಮಾನ್ಯವಾಗಿ ವಿಶ್ರಾಂತಿ ತೆಗೆದುಕೊಳ್ಳುತ್ತಾರೆ, ವಿಹಾರಕ್ಕೆ ಹೋಗುತ್ತಾರೆ. ಆದರೆ ಮೊಹಮ್ಮದ್ ಶಮಿ ಆಗಲ್ಲ. ಒಂದು ದಿನ ಮಲಗುತ್ತಾನೆ. ಮರುದಿನ ನೇರವಾಗಿ ಅಭ್ಯಾಸಕ್ಕೆ ಮರಳುತ್ತಾನೆ. ಹನ್ನೆರಡು ಮಕ್ಕಳನ್ನು ಕರೆದು ಐದಾರು ಹೆಜ್ಜೆಗಳಿಂದ ಬೌಲ್ ಮಾಡುತ್ತಾನೆ-ಬದ್ರುದ್ದೀನ್ ಸಿದ್ದಿಕ್, ಶಮಿಯ ಬಾಲ್ಯದ ಕೋಚ್
ಬದ್ರುದ್ದೀನ್ ಸಿದ್ದಿಕ್ ಮಾತ್ರವೇ ಅಲ್ಲ. ಪಂಜಾಬ್ ಕಿಂಗ್ಸ್ನ ಕೋಚ್ ಆಗಿದ್ದ ಡೇಮಿಯನ್ ರೈಟ್ ಕೂಡ ಶಮಿ ಸ್ಕಿಲ್ಸ್ ಬಗ್ಗೆ ಗುಣಗಾನ ಮಾಡಿದ್ದಾರೆ. ಅಷ್ಟೇ ಅಲ್ಲ! ಬ್ರೆಟ್ ಲೀ, ಮಿಚೆಲ್ ಜಾನ್ಸನ್ರೊಂದಿಗೆ ಹೋಲಿಸಿ, ಒಂದೇ ಸ್ಪೆಲ್ನಲ್ಲಿ ಪಂದ್ಯಕ್ಕೆ ತಿರುವು ನೀಡಬಲ್ಲ ಎಂದು ಗುಣಗಾನ ಮಾಡಿದ್ದಾರೆ.
ಶಮಿ ಅದ್ಬುತ..!
ನೆಟ್ಸ್‌ನಲ್ಲಿ ಮೊಹಮ್ಮದ್ ಶಮಿ ಬೌಲಿಂಗ್ ಮಾಡುವ ರೀತಿ ನನಗೆ ಆಶ್ಚರ್ಯವಾಯಿತು. ಚೆಂಡನ್ನು ರಿಲೀಸ್ ಮಾಡೋದರಲ್ಲಿ ಶಮಿ ಪರ್ಫೆಕ್ಟ್. ಅದ್ಬುತ ಕೌಶಲ್ಯದ ಹಿಂದೆ ಸಾಧಿಸಬೇಕೆಂಬ ಛಲವಿದೆ. ಸೀಮ್ ಮೇಲೆ ತನ್ನ ಬೆರಳು ಉಪಯೋಗಿಸುತ್ತಾನೆ. ಮೊಹಮ್ಮದ್ ಶಮಿಯ ಮ್ಯಾಜಿಕ್ ನೋಡಲು ಅದ್ಭುತವಾಗಿದೆ. ಪಂಜಾಬ್ ಕಿಂಗ್ಸ್‌ನಲ್ಲಿ ಶಮಿ ಪ್ರಮುಖ ವಿಕೆಟ್ ಟೇಕರ್ ಆಗಿದ್ದರು. ಆಗ ವೈಟ್ಬಾಲ್ ತಂಡಕ್ಕೆ ಎಂಟ್ರಿ ನೀಡುವ ಬಗ್ಗೆ ಹತಾಶರಾಗಿದ್ದರು. ಟೆಸ್ಟ್ನಲ್ಲಿ ಅದ್ಬುತ ಬೌಲರ್ ಆಗಿದ್ದರು. ಆದ್ರೀಗ ವೈಟ್ಬಾಲ್ನಲ್ಲಿ ಸುಧಾರಿಸಿದ್ದಾರೆ. ನ್ಯೂ ಬಾಲ್ನಲ್ಲಿ ಪರಿಣಾಮಕಾರಿಯಾಗಿದ್ದ ಶಮಿ, ಮಿಡಲ್ ಓವರ್ ಹಾಗೂ ಡೆತ್ ಓವರ್ಗಳಲ್ಲಿ ಮತ್ತಷ್ಟು ಇಂಪ್ರೆಸ್ಸಿವ್ ಆಗಿದ್ದಾರೆ-ಡೇಮಿಯನ್ ರೈಟ್, ಪಂಜಾಬ್ ಕಿಂಗ್ಸ್ ಮಾಜಿ ಕೋಚ್
ಸದ್ಯ ಇದೇ ಸೀಮ್ ಸ್ಕಿಲ್ಸ್ ಉಪಯೋಗಿಸ್ತಿರುವ ಮೊಹಮ್ಮದ್ ಶಮಿ, ಬ್ಯಾಟರ್ಗಳ ಪಾಲಿಗೆ ದುಸ್ವಪ್ನವಾಗ್ತಿದ್ದಾರೆ. ಫೈರಿ ಸ್ಪೆಲ್ಗಳ ಮೂಲಕ ಬ್ಯಾಟ್ಸ್ಮನ್ಗಳ ನಿದ್ದೆ ಗೆಡೆಸ್ತಿದ್ದಾರೆ. ವಿಶ್ವಕಪ್ನಲ್ಲಿ ವಿಕೆಟ್ ಬೇಟೆಯಾಡ್ತಿದ್ದಾರೆ ಅನ್ನೋದನ್ನ ಬಿಡಿಸಿ ಹೇಳಬೇಕಿಲ್ಲ. ಅದೇನೇ ಆಗಲಿ.. ಅಂದು ರೆಡ್ಬಾಲ್ ಬೌಲರ್ ಟೀಕಿಸಿದವರ ಮುಂದೆಯೇ, ಇಂದು ರಿಯಲ್ ಗೇಮ್ ಚೇಂಜರ್ ಆಗಿ ಮಿಂಚುತ್ತಿದ್ದಾರೆ. ಟೀಕೆಗಳಿಗೆ ಉತ್ತರಿಸಿದ್ದಾರೆ. ವೈಟ್ ಬಾಲ್ ಮಾಸ್ಟರ್ ಆಗಿ ಮ್ಯಾಜಿಕ್ ನಡೆಸ್ತಾ, ಮೂರು ಫಾರ್ಮೆಟ್ನಲ್ಲೂ ನಾನು ಡೇಂಜರಸ್ ಅನ್ನೋದನ್ನ ನಿರೂಪಿಸಿರುವ ಶಮಿ, ಈಗ ಅದೇ ಡೆಡ್ಲಿ ಬೌಲಿಂಗ್ ಮುಂದುವರಿಸಿ ವಿಶ್ವಕಪ್ ಗೆಲ್ಲಿಸಿಕೊಡಲಿ ಅನ್ನೋದೇ ಕೋಟ್ಯಾಂತರ ಭಾರತೀಯರ ಆಶಯ.
ವಿಶೇಷ ವರದಿ: ಸಂತೋಷ್
ವಿಶೇಷ ಸೂಚನೆ: ಕ್ರಿಕೆಟ್ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ ‘ರನ್ ಭೂಮಿ’ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್