ಮಕ್ಕಳ ಜಗಳ ನೋಡಿ ಸುಸ್ತಾದ ಮೋಹನ್ ಬಾಬು, ಆಸ್ತಿ ಹಂಚಿಕೆ ಮಾಡಿದ್ರಾ?
ಹೈದರಾಬಾದ್‌ನಲ್ಲಿರುವ ಆಸ್ತಿಯನ್ನು ಚಿಕ್ಕ ಮಗ ಮನೋಜ್‌ಗೆ ನೀಡಿದ ನಟ
ಮಗನ 2ನೇ ಮದುವೆಗೆ ಬಾಬು ಲೇಟ್ ಆಗಿ ಬಂದಿದ್ದೆ ಇದಕ್ಕೆ ಕಾರಣವಾಯಿತಾ?
ಹುಟ್ಟುತ್ತ ಅಣ್ಣ ತಮ್ಮಂದಿರು ಬೆಳೆಯುತ್ತಾ ದಾಯಾದಿಗಳು ಅನ್ನೋ ಮಾತಿದೆ. ಆಸ್ತಿಗಾಗಿ ಒಡಹುಟ್ಟಿದವರ ನಡುವೆ ಸಾಕಷ್ಟು ಕದನಗಳು ನಡೆದಿರೋ ಅದೇಷ್ಟೋ ಉದಾಹರಣೆಗಳು ನಮ್ಮ ಕಣ್ಣಾ ಮುಂದಿವೆ. ಇದೀಗ ರೆಬೆಲ್ ಸ್ಟಾರ್ ಅಂಬರೀಶ್ ಅವರ ಆಪ್ತಮಿತ್ರನ ಮನೆಯಲ್ಲಿ ದಾಯಾದಿ ಕಲಹ ಜೋರಾಗಿದೆ. ಕಳೆದ ಕೆಲ ದಿನಗಳಿಂದ ಮಂಚು ಫ್ಯಾಮಿಲಿಯಲ್ಲಿ ಅಣ್ಣ ತಮ್ಮನ ನಡುವೆ ಜಗಳಗಳು ನಡೆಯುತ್ತಲೇ ಇದ್ದು, ಇದಕ್ಕೆಲ್ಲ ಆಸ್ತಿಯೇ ಕಾರಣ ಎನ್ನಲಾಗ್ತಿದೆ. ಮಕ್ಕಳ ಜಗಳ ನೋಡಿ ಸುಸ್ತಾದ ಮೋಹನ್ ಬಾಬು ಈಗ ಇದಕ್ಕೆಲ್ಲಾ ಫುಲ್‌ಸ್ಟಾಪ್ ಹಾಕೋಕೆ ಮುಂದಾಗಿದ್ದಾರಂತೆ. ತೆಲುಗು ನಟ ಮೋಹನ್ ಬಾಬು ಫ್ಯಾಮಿಲಿ ಬಗ್ಗೆ ಹೇಳಬೇಕು ಅಂದ್ರೆ ಅದಕ್ಕೂ ಮೊದಲೇ ಅಂಬಿ ಜೊತೆಗಿನ ಸ್ನೇಹದ ಬಗ್ಗೆ ಹೇಳಲೇಬೇಕು.
ರೆಬೆಲ್ ಸ್ಟಾರ್ ಅಂಬರೀಶ್ಗೆ ಮೋಹನ್ ಬಾಬು ಆಪ್ತಮಿತ್ರರು. ರಜನಿಕಾಂತ್, ಚಿರಂಜೀವಿ ಬಾಲಿವುಡ್ ನಟ ಶತ್ರುಜ್ಞ ಸಿನ್ಹಾ ಇವರೆದ್ದೆಲ್ಲ ಒಂದು ಬ್ಯಾಚ್. ಈ ಗ್ಯಾಂಗ್ನ ಯಾರದೇ ಮನೆಯಲ್ಲಿ ಏನೇ ಸಂಭ್ರಮ ನಡೆಯಲಿ, ಏನೇ ವಿಷಾದವಾಗಲಿ ಈ ಕುಚಿಕುಗಳು ಹಾಜರ್ ಆಗ್ತಾರೆ. ಎಲ್ಲರೂ ಬೇರೆ ಬೇರೆ ಇಂಡಸ್ಟ್ರಿಯಲ್ಲಿದ್ದರೂ ಅವಕಾಶ ಸಿಕ್ಕಾಗೆಲ್ಲ ಒಂದೇ ಮನೆಯವರಂತೆ ಭಾವಿಸ್ತಾರೆ. ಅಂಬರೀಶ್ ಕೊನೆಯುಸಿರೆಳೆದಾಗಂತೂ ಇಡೀ ಕುಟುಂಬ ಸಮೇತ ಬೆಂಗಳೂರಿಗೆ ಬಂದಿದ್ದ ಮೋಹನ್ ಬಾಬು ಅಂಬಿ ಪಾರ್ಥಿವ ಶರೀರ ಮುಂದೆ ಬಿಕ್ಕಿ ಬಿಕ್ಕಿ ಅತ್ತಿದ್ದು ಈಗಲೂ ಕಣ್ಣಾಮುಂದಿದೆ. ಅಂಬರೀಶ್ ಅವರ ಪುತ್ರ ಅಭಿಷೇಕ್ ವಿವಾಹ ಮಹೋತ್ಸವದಲ್ಲೂ ಭಾಗಿಯಾಗಿ ನವಜೋಡಿಯನ್ನ ಹಾರೈಸಿದ್ದರು ಮೋಹನ್ ಬಾಬು.
ಹೀಗೆ ಅಂಬರೀಶ್ ಕುಟುಂಬದ ಜೊತೆ ದಶಕಗಳ ಕಾಲ ಸ್ನೇಹ ಹೊಂದಿದ್ದ, ಅಂಬಿ ಕುಟುಂಬದಲ್ಲಿ ಒಬ್ಬರು ಎನಿಸಿಕೊಂಡಿದ್ದ ಮೋಹನ್ ಬಾಬು ಮನೆಯಲ್ಲಿ ಈಗ ದಾಯಾದಿ ಕಲಹ ಸೃಷ್ಟಿಯಾಗಿದೆ. ಹುಟ್ಟುತ್ತಾ ಅಣ್ಣ ತಮ್ಮಂದಿರು, ಬೆಳೆಯುತ್ತಾ ದಾಯಾದಿಗಳು ಅನ್ನೋದು ಸಾಬೀತಾಗ್ತಿದೆ. ಅಣ್ಣ-ತಮ್ಮನ ಜಗಳವನ್ನ ಎಷ್ಟೇ ಗೌಪ್ಯವಾಗಿ ಬಗೆಹರಿಸಲು ಪ್ರಯತ್ನಿಸಿದರೂ ಅದು ಬಗೆಹರಿಯುವ ಲಕ್ಷಣ ಕಾಣ್ತಿಲ್ಲ. ಹಾಗಾಗಿ, ಒಂದು ಹೆಜ್ಜೆ ಮುಂದೆ ಹೋಗಿರುವ ಮೋಹನ್ ಬಾಬು ತಮ್ಮ ಆಸ್ತಿಯನ್ನ ತನ್ನ ಮಕ್ಕಳಿಗೆ ಸಮಾನಾಗಿ ಹಂಚಲು ನಿರ್ಧರಿಸಿದ್ದಾರೆ ಎಂಬ ಸುದ್ದಿ ಈಗ ತೆಲುಗು ಮಾಧ್ಯಮಗಳಲ್ಲಿ ಸದ್ದು ಮಾಡ್ತಿದೆ.
ಸಹೋದರರ ಕಾಳಗ ನಿಲ್ಲಿಸಲು ಆಸ್ತಿ ಹಂಚಿಕೆ ನಿರ್ಧಾರ!
ದಾಯಾದಿಗಳ ಆಸ್ತಿ ಕಲಹದ ಬಗ್ಗೆ ಹೇಳೋದಕ್ಕಿಂತ ಮುಂಚೆ ಮೋಹನ್ ಬಾಬು ಫ್ಯಾಮಿಲಿ ಬಗ್ಗೆ ನೀವು ತಿಳಿದುಕೊಳ್ಳಬೇಕು. ಮೋಹನ್ ಬಾಬುಗೆ ಇಬ್ಬರು ಪತ್ನಿಯರು. ಮಂಚು ವಿಷ್ಣು ಮತ್ತು ಲಕ್ಷ್ಮಿ ದೊಡ್ಡೆಂಡ್ತಿ ವಿದ್ಯಾ ಅವರ ಮಕ್ಕಳು. ಮಂಚು ಮನೋಜ್ ಎರಡನೇ ಹೆಂಡತಿ ನಿರ್ಮಲಾ ದೇವಿ ಮಗ. ಸವತಿ ಮಕ್ಕಳಾದರೂ ಎಲ್ಲರೂ ಒಂದೇ ತಾಯಿಯ ಮಕ್ಕಳಂತೆ ಇದ್ದಿದ್ದನ್ನ ಇಡೀ ಇಂಡಸ್ಟ್ರಿ ನೋಡಿದೆ. ಆದ್ರೆ ಇತ್ತೀಚೆಗೆ ಮೋಹನ್ ಬಾಬು ಕಿರಿಯ ಮಗ ನಟ ಮನೋಜ್ 2ನೇ ಮದುವೆ ಆದರು. ಈ ವೇಳೆ ಕುಟುಂಬದಲ್ಲಿರುವ ಮನಸ್ತಾಪಗಳು ರಟ್ಟಾಗಿತ್ತು. ಆರಂಭದಿಂದ ಎಲ್ಲಿಯೂ ಕಾಣಿಸದ ಕೊನೆ ಕ್ಷಣದಲ್ಲಿ ಮೋಹನ್ ಬಾಬು ಮದುವೆಗೆ ಹಾಜರಾಗಿದ್ದರು.
ಅದಾದ ಕೆಲವೇ ದಿನಗಳಲ್ಲಿ ಮಂಚು ಮನೋಜ್ ವಿಡಿಯೋಂದನ್ನ ಶೇರ್ ಮಾಡಿದ್ದರು. ಮಂಚು ವಿಷ್ಣು ತನ್ನ ಮನೆ ಮೇಲೆ ದಾಳಿ ಮಾಡಿ ಹಲ್ಲೆ ಮಾಡೋಕೆ ಮುಂದಾಗಿದ್ದಾನೆ ಅಂತ ವಿಡಿಯೋದಲ್ಲಿ ದೂರಿದ್ದರು.. ಈ ವಿಡಿಯೋ ವೈರಲ್ ಆಗ್ತಿದ್ದಂತೆ ಮಂಚು ಫ್ಯಾಮಿಲಿಯಲ್ಲಿ ದಾಯಾದಿ ಕಲಹವಿರೋದು ಬಹಿರಂಗವಾಗಿತ್ತು. ಆಮೇಲೆ ಈ ಬಗ್ಗೆ ಮಂಚು ಫ್ಯಾಮಿಲಿ ಎಷ್ಟೇ ಸಮಾಜಾಯಿಷಿ ಕೊಡೋ ಪ್ರಯತ್ನ ಮಾಡಿದ್ರು ಅದನ್ನ ಮರೆಮಾಚೋಕೆ ಆಗ್ಲಿಲ್ಲ. ಈ ದಾಯಾದಿ ಕಲಹ ಈಗ ಇನ್ನೊಂದು ಲೆವೆಲ್ಗೆ ಬಂದು ನಿಂತಿದೆ.
ರಿಜಿಸ್ಟರ್ ಆಫೀಸ್ನಲ್ಲಿ ಕಾಣಿಸಿಕೊಂಡ ಮೋಹನ್ ಬಾಬು!
ಮೋಹನ್ ಬಾಬು ಫ್ಯಾಮಿಲಿಯಲ್ಲಿ ಅಣ್ಣ-ತಮ್ಮನ ನಡುವೆ ಜಗಳ ಇದೆ, ಆಸ್ತಿ ಹಂಚಿಕೆ ಮಾಡಿ ಅನ್ನೋ ಆಗ್ರಹ ಇದೆ ಎನ್ನುವ ಬೆಳವಣಿಗೆಯ ನಡುವೆಯೇ ಬಾಬು ಷಾದ್ ನಗರದ ರಿಜಿಸ್ಟರ್ ಆಫೀಸ್ನಲ್ಲಿ ಕಾಣಿಸಿಕೊಂಡಿದ್ದಾರೆ. ಮಕ್ಕಳ ಹೆಸರಿಗೆ ಆಸ್ತಿ ಸಮನಾಗಿ ಹಂಚೋಕೆ ಮೋಹನ್ ಬಾಬು ರಿಜಿಸ್ಟರ್ ಕಚೇರಿಗೆ ಭೇಟಿ ಕೊಟಿದ್ದಾರೆ ಅನ್ನೋ ಸುದ್ದಿ ಈಗ ಚಾಲ್ತಿಗೆ ಬಂದಿದೆ. ಇನ್ನು ಮೋಹನ್ ಬಾಬು ರಿಜಿಸ್ಟರ್ ಆಫೀಸ್ನಿಂದ ಹೊರಗೆ ಬರ್ತಿದ್ದಂತೆ ಮುಗಿಬಿದ್ದ ಮಾಧ್ಯಮದವರ ಮೇಲೆ ರೇಗಾಡಿದ ವಿಡಿಯೋ ಈಗ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗ್ತಿದೆ..
ಮೋಹನ್ ಬಾಬು ಒಟ್ಟು ಆಸ್ತಿ ಎಷ್ಟಿದೆ?
ಮೋಹನ್ ಬಾಬು ಅವರ ಬಳಿ ಒಟ್ಟು 580 ಕೋಟಿಗೂ ಹೆಚ್ಚು ಆಸ್ತಿ ಇದೆ ಎನ್ನಲಾಗಿದೆ. ಇದರಲ್ಲಿ ಈಗಾಗಲೇ ಒಂದಷ್ಟು ಆಸ್ತಿಯನ್ನು ತನ್ನ ಮೂವರು ಮಕ್ಕಳಿಗೂ ಹಂಚಿದ್ದಾರಂತೆ. ಹೈದರಾಬಾದ್‌ನಲ್ಲಿರುವ ಒಂದಷ್ಟು ಆಸ್ತಿಯನ್ನು ಚಿಕ್ಕ ಮಗ ಮನೋಜ್‌ಗೆ ನೀಡಿದ್ದಾರಂತೆ. ಫಿಲ್ಮ್ ನಗರ್‌ನಲ್ಲಿರುವ ಮನೆ ಮಗಳಿಗೆ ಕೊಟ್ಟಿದ್ದಾರೆ. ಇನ್ನು ವಿದ್ಯಾನಿಕೇತನ್ ಶಾಲೆ ಮೋಹನ್ ಬಾಬು ಕುಟುಂಬಕ್ಕೆ ದೊಡ್ಡ ಆದಾಯದ ಮೂಲವಾಗಿದ್ದು, ಇದನ್ನು ಪ್ರಸ್ತುತ ವಿಷ್ಣು ನೋಡಿಕೊಳ್ಳುತ್ತಿದ್ದಾರೆ ಎನ್ನಲಾಗಿದೆ. ಸದ್ಯಕ್ಕೆ ಎಲ್ಲರೂ ಬೇರೆ ಬೇರೆ ಮನೆಗಳಲ್ಲಿಯೇ ವಾಸಿಸುತ್ತಿದ್ದಾರಂತೆ. ಇರುವ ಇನ್ನು ಒಂದಷ್ಟು ಆಸ್ತಿಯನ್ನು ಮಕ್ಕಳ ಹೆಸರಿಗೆ ವರ್ಗಾವಣೆ ಮಾಡೋ ಕಾರಣದಿಂದ ಇತ್ತೀಚೆಗೆ ರಿಜಿಸ್ಟರ್ ಆಫೀಸ್ಗೆ ಭೇಟಿ ಕೊಟ್ಟಿದ್ದರು ಎನ್ನಲಾಗ್ತಿದೆ.
ಮೋಹನ್ ಬಾಬು ತೆಲುಗು ಇಂಡಸ್ಟ್ರಿ ಕಂಡ ಅದ್ಭುತ ಕಲಾವಿದ. 70, 80ರ ದಶಕದಲ್ಲಿ ಹೆಚ್ಚು ಜನಪ್ರಿಯತೆ ಗಳಿಸಿದ ಕಲಾ ಚತುರ. ಹೆಡ್ಮಾಸ್ಟರ್ ಒಬ್ಬರ ಮಗನಾಗಿ ಜನಿಸಿದ ಮೋಹನ್ ಬಾಬು ಈ ಬಣ್ಣದ ಲೋಕಕ್ಕೆ ಬಂದಿದ್ದೇ ಒಂದು ರೋಚಕ. ಯಾವುದೇ ಬ್ಯಾಕ್ಗ್ರೌಂಡ್ ಇಲ್ಲದೇ ಸಿನಿಮಾ ಜಗತ್ತಿನಲ್ಲಿ ಭವಿಷ್ಯ ಹುಡುಕುತ್ತಾ ಬಂದ ಮೋಹನ್ ಬಾಬು ದಾಸರಿ ನಾರಾಯಣರಾವ್ ಗರಡಿಯಲ್ಲಿ ಬೆಳೆದ ಪ್ರತಿಭೆ. ಸಣ್ಣಪುಟ್ಟ ಪಾತ್ರಗಳಲ್ಲಿ ನಟಿಸಿ ತನ್ನ ಸಾಮರ್ಥ್ಯ ಸಾಬೀತುಪಡಿಸಿಕೊಂಡ ಮೋಹನ್ ಬಾಬು, ನಿಧಾನಕ್ಕೆ ಪ್ರಮುಖ ಪಾತ್ರಗಳನ್ನ ಗಿಟ್ಟಿಸಿಕೊಂಡ್ರು.
ಎನ್ಟಿಆರ್, ಅಕ್ಕಿನೇನಿ ನಾಗೇಶ್ವರ್ ರಾವ್, ಶೋಬನ್ ಬಾಬು ಅಂಥಾ ಸ್ಟಾರ್ ಚಿತ್ರಗಳಲ್ಲಿ ನಟಿಸೋಕೆ ಆರಂಭಿಸಿದ್ರು. ಚಿರಂಜೀವಿ, ಬಾಲಕೃಷ್ಣ, ನಾಗಾರ್ಜುನ, ವೆಂಕಟೇಶ್ ಸಿನಿಮಾಗಳಲ್ಲಿಯೂ ಮೋಹನ್ ಬಾಬು ವಿಲನ್ ಪಾತ್ರಗಳನ್ನೇ ಮಾಡ್ತಿದ್ರು. 1991ರಲ್ಲಿ ಬಂದ ಅಲ್ಲುಡುಗಾರು, ಅಸೆಂಬ್ಲಿ ರೌಡಿ ಚಿತ್ರಗಳ ಮೂಲಕ ಸೋಲೋ ಹೀರೋ ಆದ ಬಾಬು ಮತ್ತೆ ಹಿಂತಿರುಗಿ ನೋಡಲೇ ಇಲ್ಲ.
ಸಿನಿಮಾ ಮತ್ತು ರಾಜಕೀಯರಂಗದಲ್ಲಿ ಪ್ರಭಾವಿ ಮತ್ತು ಯಶಸ್ವಿ ವ್ಯಕ್ತಿಯಾಗಿ ರೂಪುಗೊಂಡಿರೋ ಮೋಹನ್ ಬಾಬು ಸದ್ಯ ಮಕ್ಕಳು, ಮೊಮ್ಮಕ್ಕಳು ಅಂತ ಲೈಫ್ನ ತಾವುಂದುಕೊಂಡಂತೆ ಎಂಜಾಯ್ ಮಾಡ್ತಿದ್ದಾರೆ. ಆದ್ರೀಗ ತನ್ನಿಷ್ಟದ ಪ್ರಪಂಚದಲ್ಲಿ ಕೋಲಾಹಲ ಸೃಷ್ಟಿಯಾಗಿದ್ದು, ಇದನ್ನ ಅದ್ಹೇಗೆ ಬಗೆಹರಿಸಿಕೊಳ್ತಾರೋ ಕಾದುನೋಡಬೇಕಿದೆ.
ವಿಶೇಷ ಸೂಚನೆ: ಸಿನಿಮಾ ಲೋಕದ ಸ್ಪೆಷಲ್ ಸುದ್ದಿಗಳಿಗಾಗಿ ಪ್ರತಿದಿನ ಸಂಜೆ 6.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್ನಲ್ಲಿ ‘ಫಿಲ್ಮಿ ಫಸ್ಟ್’ ವೀಕ್ಷಿಸಿ