/newsfirstlive-kannada/media/post_attachments/wp-content/uploads/2024/10/bigg-boss-8.jpg)
ಕನ್ನಡದ ಬಿಗ್​ ರಿಯಾಲಿಟಿ ಶೋ ಬಿಗ್​ಬಾಸ್​ ಸೀಸನ್​ 11 ಶುರುವಾಗಿ 26 ದಿನ ಕಳೆದಿದೆ. ಆದರೆ ನಾಲ್ಕು ವಾರದಲ್ಲಿ ಬಿಗ್​ಬಾಸ್​ ಮನೆ ಸಾಕಷ್ಟು ಬದಲಾವಣೆಗಳು ಆಗಿವೆ. ನಿನ್ನೆ ನಡೆದ ಎಪಿಸೋಡ್​ನಲ್ಲೂ ಸ್ಪರ್ಧಿಗಳ ಬಾಯಿಂದ ಕೆಲವೊಂದು ಅಚ್ಚರಿಯ ಹೇಳಿಕೆಗಳು ಹೊರ ಬಿದ್ದಿವೆ.
ಇದನ್ನೂ ಓದಿ: BBK11: ಅಮ್ಮನ ಅಗಲಿಕೆಯ ನೋವಲ್ಲಿ ಕಿಚ್ಚ ಸುದೀಪ್​.. ಈ ವಾರ ಇಬ್ಬರಿಂದ ಬಿಗ್ ಬಾಸ್ ನಿರೂಪಣೆ; ಯಾರವರು?
/newsfirstlive-kannada/media/post_attachments/wp-content/uploads/2024/10/BBK11-8.jpg)
ಬಿಗ್​ಬಾಸ್ ಕಾರ್ಯಕ್ರಮಕ್ಕೆ ವಿಶೇಷ ಅತಿಥಿಯಾಗಿ ರಾಧಾ ಹಿರೇಗೌಡರ್ ಎಂಟ್ರಿ ಕೊಟ್ಟಿದ್ದರು. ಎರಡು ಪಕ್ಷಗಳ ಮುಖಾಮುಖಿ ಚಟುವಟಿಕೆಯನ್ನ ರಾಧಾ ಹಿರೇಗೌಡರ್ ನಡೆಸಿಕೊಟ್ಟರು. ಈ ಚಟುವಟಿಕೆಯಲ್ಲಿ ಮೋಕ್ಷಿತಾ ಪೈ ಅಚ್ಚರಿ ಹೇಳಿಕೆ ನೀಡಿದ್ದಾರೆ. ಅದು ಕೂಡ ಚೈತ್ರಾ ಕುಂದಾಪುರ, ಐಶ್ವರ್ಯಾ ಅವರ ಮುಂದೆ ಹೇಳಿದ ಕೆಲವೊಂದು ಮಾತಿಯನ್ನು ಬಿಚ್ಚಿಟ್ಟಿದ್ದಾರೆ.
/newsfirstlive-kannada/media/post_attachments/wp-content/uploads/2024/10/bbk1120.jpg)
ಈ ವಾರ ದೊಡ್ಮನೆಯಲ್ಲಿ ಬಿಗ್​ಬಾಸ್ ಸೌಧ ಆಗಿ ಪರಿವರ್ತನೆ ಆಗಿದೆ. ಒಂದು ಪಕ್ಷಕ್ಕೆ ತ್ರಿವಿಕ್ರಮ್ ನಾಯಕನಾದರೆ, ಇನ್ನೊಂದು ಪಕ್ಷಕ್ಕೆ ಐಶ್ವರ್ಯಾ ಸಿಂಧೋಗಿ ನಾಯಕಿಯಾಗಿದ್ದಾರೆ. ಪಕ್ಷಗಳ ಚರ್ಚಾಕೂಟ ನಡೆಸಲು ‘ಮುಖಾಮುಖಿ’ ಎಂಬ ವಿಶೇಷ ಚಟುವಟಿಕೆಯನ್ನ ಬಿಗ್​ಬಾಸ್ ಆಯೋಜಿಸಿದ್ದರು.
ಇದನ್ನೂ ಓದಿ:ಹಸುವಿನ ಸಗಣಿಯಿಂದ ತಯಾರಿಸಲಾದ ಗಡಿಯಾರವಿದು.. ವಿದೇಶದಲ್ಲಿ ಇದಕ್ಕೆ ಡಿಮ್ಯಾಂಡಪ್ಪೋ ಡಿಮ್ಯಾಂಡ್
/newsfirstlive-kannada/media/post_attachments/wp-content/uploads/2024/10/bbk11-9.jpg)
ಇದೇ ಚರ್ಚಾ ಕೂಟದಲ್ಲಿ ಮೋಕ್ಷಿತಾ ಅವರು ನನ್ನ ಪ್ರಕಾರ ನಯವಂಚಕಿ ಚೈತ್ರಾ ಕುಂದಾಪುರ ಅಂತ ಹೇಳಿದ್ದಾರೆ. ಕಳೆದ ವಾರ ಅಪ್ರಾಮಾಣಿಕ, ಕುತಂತ್ರಿ ಚಟುವಟಿಕೆ ನೀಡಲಾಗಿತ್ತು. ಅದರಲ್ಲಿ ಅತೀ ಹೆಚ್ಚು ವೋಟ್ ಬಂದಿದ್ದು ಚೈತ್ರಾ ಅವರಿಗೆ. ಇದೇ ವೇಳೆ ತ್ರಿವಿಕ್ರಮ್ ಜೊತೆ ಚೆನ್ನಾಗಿದ್ದರೆ ಈ ಮನೆಯಲ್ಲಿ ಜಾಸ್ತಿ ಕಾಲ ಉಳಿಯಬಹುದು. ಆ ತರಹ ಒಬ್ಬರು ಪ್ಲಾನ್ ಮಾಡುತ್ತಿದ್ದಾರೆ ಅಂತ ಐಶ್ವರ್ಯಾ ಬಳಿ ಚೈತ್ರಾ ಕುಂದಾಪುರ ಹೇಳಿದ್ದಾರೆ. ಯಾರು ಅಂತ ಕೇಳಿದಾಗ ಚೈತ್ರಾ ಭವ್ಯಾ ಅವರನ್ನ ತೋರಿಸಿದ್ದಾರೆ ಎಂದು ಮೋಕ್ಷಿತಾ ಪೈ ಹೇಳಿದ್ದಾರೆ. ಇದೇ ಮಾತನ್ನು ಕೇಳಿಸಿಕೊಂಡ ಭ್ಯವಾ ಹಾಗೂ ತ್ರಿವಿಕ್ರಮ್​ ಶಾಕ್​ ಆಗಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us