newsfirstkannada.com

ಅಂತೂ ಇಂತೂ ದುಬೈನಿಂದ ಬಂತು 10 KG ಟೊಮಾಟೊ.. ಅಮ್ಮನ ಆಸೆಯನ್ನು ಈಡೇರಿಸಿದ ಮಗಳು

Share :

22-07-2023

    ಅಮ್ಮನ ಆಸೆ ಬೇರೇನಿಲ್ಲ ಬರೀ 10 ಕೆ.ಜಿ ಟೊಮಾಟೊ ಅಷ್ಟೇ

    ದುಬೈನಿಂದ ವಿಮಾನದಲ್ಲಿ ಬಂತು ಅಮ್ಮನಿಗಾಗಿ ಟೊಮಾಟೊ

    ಅಮ್ಮನ ಆಸೆ ಈಡೇರಿಸಿದ ಮಗಳು.. ಈ ಸ್ಟೋರಿ ಸಖತ್ತಾಗಿದೆ

ತಾಯಿ ಏನನ್ನೂ ಆಸೆ ಪಡುವವಳಲ್ಲ. ಒಂದು ವೇಳೆ ಆಸೆ ಪಟ್ಟರೆ ಅದು ಮಕ್ಕಳಿಗಾಗಿ ಮತ್ತು ಕುಟುಂಬಕ್ಕಾಗಿಯೇ ಹೊರತು ಮತ್ತೇನಕ್ಕಲ್ಲ. ಆದರೆ ಇಲ್ಲೊಂದು ಮುಗ್ಧ ಹೃದಯ ತನ್ನ ದುಬೈನಲ್ಲಿರುವ ಮಗಳ ಜೊತೆ ತನ್ನಾಸೆಯನ್ನ ಹೇಳಿಕೊಂಡಿದೆ. ಅದೇನು ಗೊತ್ತಾ? ಈ ಸ್ಟೋರಿ ಪೂರ್ತಿ ಓದಿ.

ದುಬೈನಲ್ಲಿ ಸೆಟಲ್​ ಆಗಿದ್ದ ಮಗಳೊಬ್ಬಳು ರಜೆಗೆ ತನ್ನ ಮಕ್ಕಳೊಂದಿಗೆ ಊರಿಗೆ ಬರಲು ಮುಂದಾಗಿದ್ದಾಳೆ. ಈ ವೇಳೆ ತನ್ನ ತಾಯಿಗೆ ಕರೆ ಅಮ್ಮ ನಿನಗೇನು ಬೇಕು? ಎಂದು ಕೇಳಿದ್ದಾಳೆ. ಅದಕ್ಕೆ ತಾಯಿ ನನಗೇನು ಬೇಡ ಟೊಮಾಟೊ ಇದ್ದರೆ ತೆಗೆದುಕೊಂಡು ಬಾ ಎಂದಿದ್ದಾರೆ. ಅದಕ್ಕೆ ತಾಯಿಯ ಆಸೆಯಂತೆ ಮಗಳು 10 ಕೆ.ಜಿ ಟೊಮಾಟೊ ದುಬೈನಿಂದ ತೆಗೆದುಕೊಂಡು ಬಂದಿದ್ದಾಳೆ.

ಸದ್ಯ ಈ ಸಂಗತಿ ಎಲ್ಲೆಡೆ ವೈರಲ್​ ಆಗಿದೆ. ಒಂದು ವೇಳೆ ಟೊಮಾಟೊ ಬೆಲೆ ಗಗನಕ್ಕೇರಿರದಿದ್ದರೆ ಈ ವಿಚಾರ ಸುದ್ದಿಯಾಗುತ್ತಿರಲಿಲ್ಲ. ಆದರಲ್ಲೂ ದೆಹಲಿಯಲ್ಲಿ ಇತ್ತೀಚೆಗೆ ಟೊಮಾಟೊ ಬೆಲೆ 200 ಗಡಿ ಮುಟ್ಟಿತ್ತು. ಆದರೀಗ ಭಾರತದಾದ್ಯಂತ 100 ರೂಪಾಯಿ ಆಸುಪಾಸಿನಲ್ಲಿ ಟೊಮಾಟೋ ಬೆಲೆ ಇದೆ.

ಟೊಮಾಟೊ ಕುರಿತಂತೆ ಇಂತಹ ಸಾಕಷ್ಟು ಸುದ್ದಿಗಳ:ಉ ಬೆಳಕಿಗೆ ಬಂದಿವೆ. ರೈತರು ಟೊಮಾಟೊ ಕಾಯಲು ಸಿಸಿಕ್ಯಾಮೆರಾ ಇಟ್ಟ ಪ್ರಸಂಗ, ಬಾಡಿಗಾರ್ಡ್​ ನೇಮಿಸಿದ ಪ್ರಸಂಗ ಹೀಗೆ ಇದರೊಂದಿಗೆ ತಾಯಿ ತನ್ನ ಮಗಳಿಗೆ ಭಾರತದಲ್ಲಿ ಟೊಮಾಟೊ ಬೆಲೆ ಜಸ್ತಿ ಎಮದು ದುಬೈನಿಂದ ಟೊಮಾಟೊ ತರಲು ಹೇಳಿರುವುದು ಕೂಡ ವೈರಲ್​ ಆಗಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಅಂತೂ ಇಂತೂ ದುಬೈನಿಂದ ಬಂತು 10 KG ಟೊಮಾಟೊ.. ಅಮ್ಮನ ಆಸೆಯನ್ನು ಈಡೇರಿಸಿದ ಮಗಳು

https://newsfirstlive.com/wp-content/uploads/2023/07/Tomato-1-2.jpg

Load More