newsfirstkannada.com

×

ನಾಳೆ ಬೆಂಗಳೂರು ಬಂದ್​.. ಶಾಲೆಗಳಿಗೆ ರಜೆ ಇದೆಯಾ? ಇಲ್ಲಿದೆ ಮಾಹಿತಿ

Share :

Published September 10, 2023 at 12:02pm

Update September 10, 2023 at 12:20pm

    ಬೆಂಗಳೂರು ಬಂದ್​ಗೆ ಕರೆ ಕೊಟ್ಟ ಖಾಸಗಿ ಸಾರಿಗೆ ಒಕ್ಕೂಟ

    ಇವತ್ತು ಮಧ್ಯರಾತ್ರಿಯಿಂದಲೇ ಆಟೋ, ಕ್ಯಾಬ್, ಸಿಗೋದು ಡೌಟ್​

    ಬೆಂಗಳೂರು ಬಂದ್​ಗೆ 7 ಲಕ್ಷಕ್ಕೂ ಹೆಚ್ಚು ವಾಹನಗಳು ಸಾಥ್

ನಾಳೆ ಖಾಸಗಿ ಸಾರಿಗೆ ಒಕ್ಕೂಟ ಬೆಂಗಳೂರು ಬಂದ್​ಗೆ ಕರೆ ಕೊಟ್ಟಿದೆ. ಇವತ್ತು ಮಧ್ಯರಾತ್ರಿಯಿಂದಲೇ ಆಟೋ, ಕ್ಯಾಬ್, ಏರ್ಪೋರ್ಟ್ ಟ್ಯಾಕ್ಸಿ ಸಿಗೋದು ಡೌಟ್ ಆಗಿದೆ. ಈ ಮುಷ್ಕರಕ್ಕೆ 30ಕ್ಕೂ ಹೆಚ್ಚು ಸಂಘಟನೆಗಳ 7 ಲಕ್ಷಕ್ಕೂ ಹೆಚ್ಚು ವಾಹನಗಳು ಸಾಥ್ ಕೊಟ್ಟಿದ್ದು, ರಾಜ್ಯ ರಾಜಧಾನಿ ಸಂಪೂರ್ಣವಾಗಿ ಸ್ತಬ್ಧವಾಗಲಿದೆ.

ಚಾಲಕರಿಗೆ 10 ಸಾವಿರ ಮಾಸಿಕ ಪರಿಹಾರ ಧನ ನೀಡಬೇಕು, ಱಪಿಡೋ ಬೈಕ್ ಟ್ಯಾಕ್ಸಿಗಳನ್ನ ಸಂಪೂರ್ಣವಾಗಿ ನಿಷೇಧಿಸಬೇಕು, ಸಾರಿಗೆ ಅಭಿವೃದ್ಧಿ ನಿಗಮ ಸ್ಥಾಪಿಸಬೇಕು, ಹೀಗೆ ಹತ್ತು ಹಲವು ಬೇಡಿಕೆಗಳನ್ನ ಮುಂದಿಟ್ಟುಕೊಂಡು ಖಾಸಗಿ ಸಾರಿಗೆ ಒಕ್ಕೂಟ ಬಂದ್​ಗೆ ಕರೆ ಕೊಟ್ಟಿದೆ.

ಇದರೊಂದಿಗೆ ನಾಳೆ ಬಂದ್ ಗೆ ಬೆಂಬಲ ಸೂಚಿಸಿ ಕೆಲವು ಶಾಲೆಗಳು ರಜೆ ಘೋಷಣೆ ಮಾಡಿವೆ. ಈಗಾಗಲೇ ಹೆಬ್ಬಾಳದ ವಿದ್ಯಾ ನಿಕೇತನ ಶಾಲೆ ರಜೆ ಘೋಷಿಸಿದೆ. ಆರ್ಕಿಡ್ ಆಡಳಿತ ಮಂಡಳಿಯು ಕೂಡ ರಜೆ ಘೋಷಣೆ ಮಾಡಿದೆ. ಇದಲ್ಲದೆ, CBZ ವ್ಯಾಪ್ತಿಗೆ ಬರುವ ಹಲವು ಶಾಲೆಗಳು ರಜೆ ಅನೌನ್ಸ್ ಮಾಡಿವೆ. ರಜೆ ನೀಡದ ಶಾಲೆಗಳ ಮಕ್ಕಳನ್ನ ಸ್ವಂತ ಗಾಡಿಯಲ್ಲಿ ಕರೆ ತರುವಂತೆ ಕ್ಯಾಮ್ಸ್ ಪ್ರಧಾನ ಕಾರ್ಯದರ್ಶಿ ಡಿ.ಶಶಿಕುಮಾರ್ ಸೂಚನೆ ನೀಡಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ನಾಳೆ ಬೆಂಗಳೂರು ಬಂದ್​.. ಶಾಲೆಗಳಿಗೆ ರಜೆ ಇದೆಯಾ? ಇಲ್ಲಿದೆ ಮಾಹಿತಿ

https://newsfirstlive.com/wp-content/uploads/2023/09/bengaluru-Bandh.png

Load More