ಟ್ರ್ಯಾಕ್ಟರ್ ಚಾಲಕರು, ಶಾಲೆಗೆ ಹೋಗುವ ಮಕ್ಕಳು ಮಂಗಗಳ ಟಾರ್ಗೆಟ್
ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ ಗ್ರಾಮಸ್ಥರಲ್ಲಿ ಮಂಗಗಳ ಭಯ
ಒಂದೇ ತಿಂಗಳಲ್ಲಿ ನಾಲ್ಕು ಕಡೆ ದಾಳಿ 20 ಜನರಿಗೆ ಗಂಭೀರ ಗಾಯ
ಬೆಣ್ಣೆ ನಗರಿ ದಾವಣಗೆರೆಯ ಅದೊಂದು ಗ್ರಾಮದ ಜನ ಮನೆಯಿಂದ ಆಚೆ ಬರೋಕು ಹೆದರ್ತಿದ್ದಾರೆ. ಆತಂಕ, ಭೀತಿಯಲ್ಲೇ ಜನ ಹಬ್ಬ ಆಚರಿಸಿದ್ದಾರೆ. ಆ ಗ್ರಾಮದ ಭಯಕ್ಕೆ ಕಾರಣವಾಗಿದ್ದು, ಕೋತಿಗಳು ಸಾರ್ ಕೋತಿಗಳು. ಕೋತಿ ದಾಳಿಗೆ ಒಂದು ಜೀವವೇ ಬಲಿಯಾಗಿದ್ದು, ಹೀಂಗೆ ಆದ್ರೆ ಹೆಂಗೆ ಜೀವನ ಅಂತ ಇಡೀ ಗ್ರಾಮವೇ ಕಂಗಾಲಾಗಿ ಕೂತಿದೆ. ದೇಶದ ತುಂಬಾ ಜನರೆಲ್ಲ ದೀಪಾವಳಿ ಹಬ್ಬವನ್ನು ಸಂತೋಷದಿಂದ ಆಚರಿಸ್ತಿದ್ರೆ, ಕರ್ನಾಟಕದಲ್ಲಿರುವ ಈ ಗ್ರಾಮದ ಜನರಿಗೆ ಮಾತ್ರ ಹಬ್ಬದ ದಿನವೂ ನೆಮ್ಮದಿ ಇರಲಿಲ್ಲ. ಭಯ ಅತಂಕದಲ್ಲೇ ಬೆಳಕಿನ ಹಬ್ಬ ಆಚರಿಸಿದ್ದು, ಭೀತಿಯಲ್ಲೇ ದಿನ ದೂಡ್ತಿದ್ದಾರೆ. ಅಷ್ಟಕ್ಕೂ ಇವರ ಭಯಕ್ಕೆ ಭೀತಿಗೆ ಕಾರಣವಾಗಿದ್ದು, ಕೋತಿಗಳು..
ಕೋತಿಗಳ ದಾಳಿಗೆ ಜೀವವೇ ಹೋಯ್ತು.. ಊರಿಗೇ ಭೀತಿ!
ದಾವಣಗೆರೆ ಜಿಲ್ಲೆಯ ಮೆಲೇಬೆನ್ನೂರು ಗ್ರಾಮದ ಜನರಿಗೆ ಕೋತಿಗಳ ಭೀತಿ ಕಾಡ್ತಿದೆ. ಸಿಕ್ಕ ಸಿಕ್ಕವರ ಮೇಲೆ ದಾಳಿ ನಡೆಸ್ತಿರುವ ಕೋತಿಗಳು ಒಂದು ಜೀವವನ್ನೆ ಬಲಿ ಪಡೆದಿವೆ. ಹೊನ್ನಾಳಿ ತಾಲೂಕಿನ ಅರಕೆರೆ ಎಕೆ ಕಾಲನಿಯ ಗುತ್ಯಪ್ಪ ಎಂಬಾತನನ್ನ ಮುಷ್ಯಾ ಕೋತಿ ದಾಳಿ ಮಾಡಿ ಕಚ್ಚಿ ಕಚ್ಚಿ ಸಾಯಿಸಿಬಿಟ್ಟಿದೆ. ಮರುದಿನ ಇದೇ ಗ್ರಾಮದ ವ್ಯಕ್ತಿಯ ಮೇಲೆ ಮಾರಣಾಂತಿಕವಾಗಿ ದಾಳಿ ಮಾಡಿವೆ. ಹೌದು ದಾವಣಗೆರೆಯ ಕುಂದವಾಡ, ಸುರಹೊನ್ನೆ, ಮಲೆಬೆನ್ನೂರು ಸೇರಿದಂತೆ ನಾಲ್ಕೈದು ಗ್ರಾಮಗಳಿಗೆ ಈ ಕೋತಿ ಕಂಟಕ ಕಾಡ್ತಿದೆ. ಬೈಕ್ ಮೇಲೆ ತೆರಳುವವರು, ಟ್ರ್ಯಾಕ್ಟರ್ ಓಡಿಸುವವರು, ಶಾಲೆಗೆ ಹೋಗುವ ಮಕ್ಕಳು, ಇಂಥವರನ್ನೆ ಟಾರ್ಗೆಟ್ ಮಾಡುವ ಈ ಕೋತಿ ಗ್ಯಾಂಗ್ ಅಟ್ಯಾಕ್ ಮಾಡಿ ಕಚ್ಚಿ ಕಚ್ಚಿ ಗಾಯಗೊಳಿಸಿವೆ. ಕಳೆದೊಂದು ತಿಂಗಳಲ್ಲಿ 4 ಕಡೆ ಮುಷ್ಯಾ ಕೋತಿ ದಾಳಿ ನಡೆಸಿವೆ.
ಕುಂದವಾಡ ಗ್ರಾಮದ 20ಕ್ಕೂ ಹೆಚ್ಚು ಜನರ ಮೇಲೆ
ಹೌದು ಕುಂದವಾಡ ಗ್ರಾಮದಲ್ಲಿ ಒಂದು ತಿಂಗಳ ಅಂತರದಲ್ಲಿ ರೌಡಿ ಮುಷ್ಯಾ 20 ಕ್ಕೂ ಹೆಚ್ಚು ಜನರ ಮೇಲೆ ದಾಳಿ ನಡೆಸಿದೆ. ಹೀಗಾಗಿ 20 ಜನ ಆಸ್ಪತ್ರೆ ಸೇರುವಂತಾಗಿತ್ತು, ಇದ್ರಿಂದ ಇಡೀ ಗ್ರಾಮದ ಜನ ಭೀತಿಯಲ್ಲೇ ಕಾಲ ಕಳೆಯುವಂತಾಗಿತ್ತು. ನ್ಯಾಮತಿ ತಾಲೂಕಿನ ಸುರಹೊನ್ನೆ ಗ್ರಾಮದಲ್ಲೂ ಮುಷ್ಯಾ ಕೋತಿ ಜಮೀನಿಗೆ ಹೊರಟ್ಟಿದ್ದವರ ಮೇಲೆ ದಾಳಿ ನಡೆಸಿತ್ತು. ಮಕ್ಕಳು ಸೇರಿ ಇಬ್ಬರೂ ಕೋತಿ ದಾಳಿಯಿಂದ ಗಾಯಗೊಂಡು ಆಸ್ಪತ್ರೆ ಸೇರಿದ್ದರು.
ನಾಲ್ಕು ದಿನಗಳ ಹಿಂದೆ ಮುಷ್ಯಾ ದಾಳಿಗೆ ವ್ಯಕ್ತಿಯೇ ಬಲಿ
ಹೌದು ಹೊನ್ನಾಳಿ ತಾಲೂಕಿನ ಅರಕೆರೆ ಗ್ರಾಮದ ಗುತ್ಯಪ್ಪ ಎಂಬಾತನನ್ನ ಕರಿ ಮೂತಿ ಕೋತಿ ಕಚ್ಚಿ ಕಚ್ಚಿ ಸಾಯಿಸಿತ್ತು. ಅದೇ ಗ್ರಾಮದ ಪ್ರಭು ಎಂಬಾತನ ಮೇಲೆಯೂ ಕೋತಿ ಮಾರಣಾಂತಿಕ ದಾಳಿ ಮಾಡಿ ಗಾಯಗೊಳಿಸಿತ್ತು. ಹರಿಹರ ತಾಲೂಕಿನ ಮಲೆಬೆನ್ನೂರು ಪಟ್ಟಣದಲ್ಲಿ ಮುಷ್ಯಾ ಹಾವಳಿಗೆ ಜನ ತತ್ತರಿಸಿ ಹೋಗಿದ್ರು. ಮಲೆ ಬೆನ್ನೂರಿನಲ್ಲಿ ಐದಕ್ಕೂ ಹೆಚ್ಚು ಜನರ ಮೇಲೆ ಕೋತಿಗಳು ದಾಳಿ ನಡೆಸಿದ್ವು. ದುರಂತ ಅಂದ್ರೆ ಒಂದೇ ತಿಂಗಳಲ್ಲಿ ಕೋತಿಗಳು ನಾಲ್ಕು ಕಡೆ ದಾಳಿ ನಡೆಸಿವೆ. ಸದ್ಯ ಈ ನಾಲ್ಕು ಮಂಗಗಳನ್ನ ಸೆರೆ ಹಿಡಿದು ಕಾಡಿಗೆ ಬಿಡಲಾಗಿದೆ. ಆದ್ರೂ ಗ್ರಾಮದ ಜನರಲ್ಲಿ ಆತಂಕ ಕಡಿಮೆಯಾಗಿಲ್ಲ. ದಾವಣಗೆರೆ ಜಿಲ್ಲೆಯ ಏನಿಲ್ಲ ಅಂದ್ರು ವರ್ಷಕ್ಕೆ 10 ಕ್ಕೂ ಹೆಚ್ಚು ಕೋತಿ ಪ್ರಕರಣಗಳು ದಾಖಲಾಗ್ತಿವೆ. ಕೋತಿಗಳನ್ನ ಸೆರೆ ಹಿಡಿದು ಕಾಡಿಗೆ ಬಿಟ್ರೂ, ಮತ್ತೆ ಊರಿಗೆ ಬರುವ ಕೋತಿಗಳು ಜನರ ಮೇಲೆ ದಾಳಿ ನಡೆಸಿ ಅಟ್ಟಹಾಸ ತೋರ್ತಿವೆ. ಹೀಗಾಗಿ ಈ ಕೋತಿಗಳ ದಾಳಿಗೆ ಅಸಲಿ ಕಾರಣ ಏನೂ ಅನ್ನೋದೆ ರಹಸ್ಯವಾಗಿ ಉಳಿದಿದೆ. ಕೋತಿಗಳನ್ನ ಊರಿಂದ ಖಾಲಿ ಮಾಡಿದ್ರೂ ಜನರ ಭಯ ಮಾತ್ರ ಇನ್ನೂ ಕಮ್ಮಿಯಾಗಿಲ್ಲ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ