ಇಂದಿನಿಂದ ಮಾನ್ಸೂನ್ ಚುರುಕಾಗುವ ನಿರೀಕ್ಷೆ, ರೈತರಿಗೆ ತರುತ್ತಾ ಹರ್ಷ..?
ಕಲಬುರಗಿಯಲ್ಲಿ ಗುರುರಾಯರ ಗುಡಿಯಲ್ಲಿ ಮಳೆಗಾಗಿ ವಿಶೇಷ ಪೂಜೆ
ಜೂನ್ ಮುಗಿದರು ಮುಂಗಾರು ಮಂಕು, ನೀರಿನ ಕೊರತೆ ಉಂಟಾಗುತ್ತಾ?
ಮುಂಗಾರು ಮಳೆ ದಿನೇ ದಿನೇ ವಿಳಂಬವಾಗುತ್ತಿದೆ. ಬಿಸಿಲ ನಡುವೆ ತುಂತುರು ಮಳೆಯ ಲಕ್ಷಣ. ಮೋಡ ಕವಿದ ವಾತಾವರಣ ಇದ್ದರೂ ಬಾರದ ಮಳೆರಾಯ. ನದಿ- ತೊರೆ, ಜಲಾಶಯಗಳ ಒಡಲು ಬರಿದಾಗಿದೆ. ಮಳೆ ವಿಳಂಬದಿಂದ ಕೃಷಿಕ ವರ್ಗ ಆತಂಕಗೊಂಡಿದೆ.
ಕಳೆದ 28 ವರ್ಷಗಳಲ್ಲಿ ಎದುರಾದ ಹೆಚ್ಚಿನ ಮಳೆಯ ಕೊರತೆ!
ಪ್ರತಿವರ್ಷ ಜೂನ್ ಮೊದಲ ವಾರದಲ್ಲೇ ಕರುನಾಡಿಗೆ ಹಾಜರಿ ನೀಡುತ್ತಿದ್ದ ವರುಣ ಈ ಬಾರಿ ತನ್ನ ವೇಳಾಪಟ್ಟಿ ಬದಲಿಸಿಕೊಂಡಿದ್ದಾನೆ. ಕಳೆದ ಜೂನ್ ಮೊದಲ ವಾರದಲ್ಲೇ ಕೇರಳಕ್ಕೆ ಲಗ್ಗೆ ಹಾಕಿದ್ದ ಮಳೆರಾಯ ಕರುನಾಡಿಗೂ ಕಾಲಿಡಬೇಕಿತ್ತು. ಇದರ ಪರಿಣಾಮ ಹವಾಮಾನ ವೈಪರೀತ್ಯಗೊಂಡಿದ್ದು ಮಳೆಯ ಗೆರೆಗಳು ಮೂಡುತ್ತಿಲ್ಲ. ಇನ್ನು ಕಳೆದ 28 ವರ್ಷಗಳಲ್ಲೇ ಹೆಚ್ಚು ಮಳೆಯ ಕೊರತೆ ಎದುರಾಗಿದೆ ಎನ್ನಲಾಗಿದೆ. ಜೂನ್ ಮೊದಲ ವಾರವೇ ಶೇ.72ರಷ್ಟು ಮಳೆ ಕೊರತೆ ಉಂಟಾಗಿದೆ. ಈ ವರ್ಷ ಒಂದು ವಾರ ತಡವಾಗಿ ಮುಂಗಾರು ಆರಂಭ ಆಗಲಿದೆ ಎನ್ನಲಾಗಿದೆ.
ಮುಂಗಾರು ಮಳೆ ದುರ್ಬಲವಾದ ಕಾರಣ ಮಳೆ ಕೊರತೆ ಉಂಟಾಗಿದೆ. ವಾಡಿಕೆಯಂತೆ ಜೂನ್ 1ರಿಂದ ಜೂನ್ 10ರವರೆಗೆ 51.20 ಮಿ.ಮೀ ಮಳೆಯಾಗಬೇಕು. ಆದ್ರೆ ಈ ಬಾರಿ ಕೇವಲ 14 ಮಿ.ಮೀ ಮಾತ್ರ ಮಳೆಯಾಗಿದೆ. ಇನ್ನು ಕಳೆದ 28 ವರ್ಷಗಳಲ್ಲಿ ಇದೇ ಮೊದಲ ಬಾರಿಗೆ ಜೂನ್ ತಿಂಗಳಲ್ಲಿ ಮಳೆ ಕೊರತೆ ಆಗಿದೆ. 1972ರಲ್ಲಿ ಜೂನ್ ಮೊದಲ ವಾರದಲ್ಲಿ ಶೇ.78ರಷ್ಟು ಮಳೆ ಕೊರತೆ ಆಗಿತ್ತು. 1995ರಲ್ಲಿ ಜೂನ್ ಮೊದಲ ವಾರದಲ್ಲಿ ಶೇ.74ರಷ್ಟು ಮಳೆ ಕೊರತೆ ಹಾಗೂ 2003ರಲ್ಲಿ ಶೇ.62ರಷ್ಟು, 2012ರಲ್ಲಿ ಶೇ.63.7ರಷ್ಟು ಮಳೆ ಕೊರತೆ ಉಂಟಾಗಿತ್ತು. ವಾಡಿಕೆ ಪ್ರಕಾರ ಜೂನ್ 17ರವರೆಗೆ 102 ಮಿ.ಮೀ ಮಳೆಯಾಗಬೇಕು, ಆದ್ರೆ ಈ ಬಾರಿ ಕೇವಲ ಸರಾಸರಿ 29 ಮಿ.ಮೀ ಮಾತ್ರ ಮಳೆಯಾಗಿದೆ.
ದುರ್ಬಲಗೊಂಡಿದ್ದ ಮಳೆ ಇಂದಿನಿಂದ ಚುರುಕಾಗುವ ನಿರೀಕ್ಷೆ!
ಇನ್ನು, ದುರ್ಬಲಗೊಂಡಿದ್ದ ಮುಂಗಾರು ಇಂದಿನಿಂದ ಚುರುಕಾಗುವ ನಿರೀಕ್ಷೆ ಇದೆ. ಸಿಲಿಕಾನ್ಸಿಟಿ ಬೆಂಗಳೂರು ಸೇರಿ ರಾಜ್ಯದ ಹಲವು ಭಾಗಗಳಲ್ಲಿ ಇವತ್ತು ರಾತ್ರಿ ಉತ್ತಮ ಮಳೆಯಾಗುವ ಸಾಧ್ಯತೆ ಇದೆ. ದಕ್ಷಿಣ ಒಳನಾಡಿನ ಜಿಲ್ಲೆಗಳಲ್ಲಿ ಉತ್ತಮ ಮಳೆಯಾಗಲಿದ್ದು, ಉತ್ತರ ಒಳನಾಡಿನ ಹಲವು ಪ್ರದೇಶಗಳಲ್ಲಿ ಅಲ್ಲಲ್ಲಿ ಸಾಧಾರಣ ಮಳೆಯಾಗುವ ಸಾಧ್ಯತೆ ಇದೆ. ಕರಾವಳಿ ಭಾಗದಲ್ಲಿ ಮುಂದಿನ ಎರಡು ದಿನಗಳ ಕಾಲ ಗುಡುಗು, ಮಿಂಚು ಸಹಿತ ವ್ಯಾಪಕ ಮಳೆಯಾಗಲಿದೆ ಅಂತ ಹವಾಮಾನ ಇಲಾಖೆ ತಿಳಿಸಿದೆ. ಇನ್ನು ಗಾಳಿಯ ವೇಗ ಗಂಟೆಗೆ 30ರಿಂದ 40 ಕಿ.ಮೀ ಇರಲಿದೆ, ಹೀಗಾಗಿ ಮೀನುಗಾರರು
ಕಲಬುರಗಿಯಲ್ಲಿ ವರುಣ ಮಂತ್ರ ಜಪ, ಮಳೆಗಾಗಿ ಪ್ರಾರ್ಥನೆ!
ಅತ್ತ ಕಲ್ಯಾಣ ಕರ್ನಾಟಕ ಭಾಗದಲ್ಲಿ ಮಳೆ ಕೈಕೊಟ್ಟಿದ್ದು ಕಲಬುರಗಿಯ ಜೇವರ್ಗಿ ಕಾಲೋನಿ ಗುರು ರಾಯರ ಗುಡಿಯಲ್ಲಿ ಮಳೆಗಾಗಿ ವಿಶೇಷ ಪೂಜೆ ನಡೆದಿದೆ. ವಿಶ್ವ ಮಹಾಮಧ್ವ ಪರಿಷತ್ ವತಿಯಿಂದ 108 ಬಾರಿ ವರುಣ ಮಂತ್ರ ಪಾರಾಯಣ ನಡೆದಿದೆ. ಶೀಘ್ರ ಮಳೆಯಾಗಿ ರೈತರಿಗೆ ಅನುಕೂಲ ಆಗಲೆಂದು ಜಪ-ತಪ ನಡೆದಿದೆ. ಮುಂಗಾರು ವಿಳಂಬದಿಂದ ಕುಡಿಯುವ ನೀರು ಸೇರಿ ಕೃಷಿ ಚಟುವಟಿಕೆಗಳಿಗೂ ಸಮಸ್ಯೆಯಾಗಿದೆ. ಇಂದಿನಿಂದ ಮುಂಗಾರು ಚುರುಕಾಗುವ ನಿರೀಕ್ಷೆ ಗರಿಗೆದರಿದೆ. ಒಂದು ವೇಳೆ ಮಳೆ ಕೈಕೊಟ್ಟರೆ ಹಾಹಾಕಾರ ಸೃಷ್ಟಿಯಾಗಲಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ