newsfirstkannada.com

ಇತಿಹಾಸದಲ್ಲೇ ಮಾನ್ಸೂನ್ ಕೊರತೆಯ ಅತ್ಯಂತ ಕೆಟ್ಟ ತಿಂಗಳಿದು! ಬೆಂಗಳೂರಿಗರ ಪರಿಸ್ಥಿತಿ ಮಾತ್ರ..

Share :

Published August 31, 2023 at 8:13pm

Update August 31, 2023 at 8:14pm

    ಜೂನ್​​ನಿಂದ ಇಲ್ಲಿವರೆಗೂ ಶೇಕಡ 31 ಮಳೆ

    122 ವರ್ಷಗಳಲ್ಲಿ ಈ ವರ್ಷ ಅತ್ಯಂತ ಕಡಿಮೆ ಮಳೆ

    ಉಷ್ಣಾಂಶದ ಪ್ರಮಾಣ 29 ರಿಂದ 30 ಡಿಗ್ರಿಗೆ ಏರಿಕೆ

ಸಾಮಾನ್ಯವಾಗಿ ಜುಲೈ ಮುಗಿದು ಆಗಸ್ಟ್ ನಲ್ಲಿ ಸಿಲಿಕಾನ್ ಸಿಟಿ ಫುಲ್ ಕೂಲ್ ಆಗಿರ್ತಾ ಇತ್ತು. ಅದೇಕೋ ಗೊತ್ತಿಲ್ಲ ಮಳೆರಾಯನ ಮುನಿಸು ಮುಗಿಯುವಂತೆ ಕಾಣ್ತಿಲ್ಲ. ಇನ್ನು ಬೆಂಗಳೂರಿಗರಿಗೆ ಆಗಸ್ಟ್‌ ತಿಂಗಳಿನಲ್ಲೂ ಬೇಸಿಗೆಯ ಫಿಲ್ ಕೊಡ್ತಾಯಿದ್ದು, ರಾಜಧಾನಿ ಬೆಂಗಳೂರಿನಲ್ಲಿ 10 ವರ್ಷಗಳಲ್ಲಿ ಅತೀ ಹೆಚ್ಚು ತಾಪಮಾನ ದಾಖಲಾಗಿದೆ.

ಬೇಸಿಗೆಯ ವಾತಾವರಣ ಸೃಷ್ಟಿ

ಕಳೆದ ಕೆಲವು ದಿನಗಳಿಂದ ಹೀಟ್ ನ ವಾತಾವರಣವಿದ್ದು, ಮಳೆ ಕೊರತೆಯಿಂದಾಗಿ ಉಷ್ಣಾಂಶ ಗಣನೀಯ ಪ್ರಮಾಣದಲ್ಲಿ ಏರಿಕೆಯಾಗಿದೆ. ಅಲ್ಲಲ್ಲಿ ಕೊಂಚ ಸಾಧಾರಣ ಮಳೆ ಆಗಿರೋದು ಬಿಟ್ಟರೆ, ಮಳೆ ಕೊರತೆ ಎದ್ದು ಕಾಣ್ತಾ ಇದೆ. ಆಗಾಗ ಮೋಡ ಕವಿದ ವಾತಾವರಣ ಇದ್ರು ಕೂಡಾ ಮಳೆರಾಯನ ಮುನಿಸು ಮಾತ್ರ ಮುಗಿಯುವಂತೆ ಕಾಣ್ತಿಲ್ಲ. ಈ ರೀತಿ 1885ರಲ್ಲಿ ಬಿಟ್ರೆ ಈಗ ಆಗುತ್ತಿದೆ ಎಂದು ತಜ್ಞರು ಮಾಹಿತಿ ಕೊಟ್ಟಿದ್ದಾರೆ.

ರಾಜ್ಯದಲ್ಲಿ‌ ಜೂನ್ ಯಿಂದ ಇಲ್ಲಿವರೆಗೂ ಶೇಕಡ 31 ಮಳೆ ಕಡಿಮೆಯಾಗಿದೆ. ಈ ಬೆನ್ನಲೆ ಸಿಲಿಕಾನ್‌ ಸಿಟಿಯಲ್ಲಿ ವಾಡಿಕೆಗಿಂತ ಹೆಚ್ಚು ತಾಪಮಾನ ದಾಖಲೆ ಬಗ್ಗೆ ಸೂಚನೆ ಸಿಕ್ಕಿದೆ. ಈ ರೀತಿಯ ವಾತಾವರಣ 10 ವರ್ಷಗಳ‌ ಹಿಂದೆ ಇತ್ತು. ಆದರೆ ಈಗ ಮತ್ತೆ ಬಂದಿದೆ. 51.6 ಸೆ.ಮಿ ಮಳೆಯಾಗಬೇಕಿತ್ತು. ಆದರೆ ಈ ಬಾರಿ 36.5 ಸೆ.ಮಿ ಮಳೆಯಾಗಿದೆ. ಅದಕ್ಕೆ ಮಳೆ ಕೊರತೆಯಿದೆ. ಆಗಸ್ಟ್ ನಲ್ಲಿ ವಾಡಿಕೆಯಷ್ಟು‌ ಮಳೆಯಾಗದ ಪರಿಣಾಮ ಮುಂದಿನ ತಿಂಗಳು ಇನ್ನ ಕಷ್ಟವಾಗಲಿದೆ ಎಂದು ಹವಮಾನ ಇಲಾಖೆ ಮಾಡುತ್ತಿದೆ.

ಇದೇ ವರ್ಷ ಅತಿ ಕಡಿಮೆ ಮಳೆ

1901 ರಿಂದ ದಾಖಲಾದ ಮಾಹಿತಿ ಪ್ರಕಾರ. ಇದೇ ವರ್ಷ ಅದರಲ್ಲೂ ಆಗಸ್ಟ್ ತಿಂಗಳಿನಲ್ಲಿ ಇಡೀ ದೇಶಕ್ಕೆ ಅತ್ಯಂತ ಕಡಿಮೆ ಮಳೆ ಬಿದ್ದಿದೆ. ಕಳೆದ 122 ವರ್ಷಗಳಲ್ಲಿ ಅತ್ಯಂತ ಕಡಿಮೆ ಮಳೆಯಾಗಿದೆ. ಹಾಗಾಗಿ ವಾತಾವರಣದಲ್ಲಿ ವ್ಯತ್ಯಾಸ ಕಾಣಬಹುದಾಗಿದೆ.  ಮತ್ತೊಂದು ಸಂಗತಿ ಎಂದರೆ ಇತಿಹಾಸದಲ್ಲಿ ಮಾನ್ಸೂನ್ ಕೊರತೆಯ ಅತ್ಯಂತ ಕೆಟ್ಟ ತಿಂಗಳುಗಳಲ್ಲಿ ಇದು ಒಂದಾಗಿದೆ.

ರಾಜಧಾನಿಯ ಮಟ್ಟಿಗೆ ಮಳೆಗಾಲವೇ ಮುಗಿತಾ ಎನ್ನುವ ಫಿಲ್ ಉಂಟಾಗಿದೆ. ಬೇಸಿಗೆ ಹೊತ್ತಲ್ಲಿ ಇರುವಷ್ಟೇ ಬಿಸಿಲ ಬೇಗೆ ಮಳೆಗಾಲದಲ್ಲಿ ಈಗ ಕಾಣ್ತಿದೆ. ಆಗಸ್ಟ್‌ ಅಂತ್ಯ ಬಂದ್ರು ಮಳೆ ನಿರೀಕ್ಷೆ ಕೂಡಾ ಇಲ್ಲಿ. ಈವರೆಗೆ ನಗರದ ಕೆಲವೆಡೆ ಮಾತ್ರ ಅಲ್ಲಲ್ಲಿ ಚೆದುರಿದಂತೆ ಮಳೆ ಆಗಿದ್ದು, ನಿರೀಕ್ಷಿತ ಪ್ರಮಾಣದಲ್ಲಿ ಮುಂಗಾರು ಮಳೆ ಆಗಿಲ್ಲ. ನೈರುತ್ಯ ಮುಂಗಾರು ಮಾರುತಗಳು ಜೂನ್ ತಿಂಗಳಲ್ಲಿ ತಡವಾಗಿ ಆರಂಭವಾಗಿದೆ. ಹೀಗಾಗಿ ರಾಜ್ಯದಲ್ಲಿ ಮಳೆ ಕೊರತೆ ಉಂಟಾಗಿದೆ. ಜುಲೈನಲ್ಲಿ ಅಲ್ಪ ಪ್ರಮಾಣದಲ್ಲಿ ಮಳೆ ಅಬ್ಬರಿಸಿತಾದರೂ, ಆಗಸ್ಟ್‌ನಲ್ಲಿ ಮತ್ತೆ ಮಳೆ ಮಾಯವಾಗಿದೆ. ರಾಜ್ಯದ ಕರಾವಳಿ ಹಾಗೂ ದಕ್ಷಿಣ ಒಳನಾಡಿನಲ್ಲಿ ಮಾತ್ರ ಅಲ್ಲಲ್ಲಿ ಭಾರೀ ಮಳೆ ಸುರಿದಿದೆ. ಆದರೆ. ಅದು ಕೆಲವು ಪ್ರದೇಶಗಳಿಗೆ ವಾಡಿಕೆಗಿಂತ ಕಡಿಮೆಯಾಗಿದೆ ಎಂದು ಹವಾಮಾನ ಇಲಾಖೆ ಮಾಹಿತಿ ನೀಡಿದೆ.

ಇನ್ನು ಬೆಂಗಳೂರಿಗರಿಗರಂತು ಬಿಸಿಲಿನ ಬೇಗೆಗೆ ಬೆಂಡಾಗಿ ಹೋಗಿದ್ದಾರೆ. ಆಗಸ್ಟ್‌ ಆರಂಭದಿಂದ ದಿನವೂ ಸರಾಸರಿ 26 ರಿಂದ 27 ಡಿಗ್ರಿ ಸೆಲ್ಸಿಯಸ್ ಉಷ್ಣಾಂಶ ದಾಖಲಾಗುತ್ತಿತ್ತು. ಈಗ ಉಷ್ಣಾಂಶದ ಪ್ರಮಾಣ 29 ರಿಂದ 30 ಡಿಗ್ರಿ ಏರಿಕೆಯಾಗಿದೆ. ಇನ್ನು ಬೆಂಗಳೂರಿನಲ್ಲಿ ಹೆಚ್ಚುತ್ತಿರುವ ವಾಹನಗಳಿಂದ ಪರಿಸರ ಮಾಲಿನ್ಯ ಉಂಟಾಗುತ್ತಿದೆ.

ಒಟ್ಟಿನಲ್ಲಿ ಬೆಂಗಳೂರಿನ ಮಟ್ಟಿಗೆ ಹೇಳೋದಾದ್ರೆ, ಆಗಸ್ಟ್‌ ನಲ್ಲಿ ಮಳೆ ಸರಿಯಾಗಿ ಆಗಿಲ್ಲ. ಸೆಪ್ಟೆಂಬರ್ ನಲ್ಲಿ ಮಳೆ ಹೆಚ್ಚು ಸಾಧ್ಯತೆಯಿಂದೆ ಎಂದು ಹವಮಾನ ಇಲಾಖೆ ಸೂಚನೆ ಕೊಟ್ಟಿದೆ. ಸೆಪ್ಟೆಂಬರ್ ಮೊದಲ ವಾರದಲ್ಲೇ ಹೆಚ್ಚಿನ ಪ್ರಮಾಣದಲ್ಲಿ ಮಳೆಯಾಗಲಿದೆ ಎಂಬ ಭರವಸೆ ಕೊಟ್ಟಿದ್ದಾರೆ. ಇದು ಜನರು ನಿರಳವಾಗಿ ಉಸಿರು ಬಿಡುವಂತೆ ಮಾಡಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಇತಿಹಾಸದಲ್ಲೇ ಮಾನ್ಸೂನ್ ಕೊರತೆಯ ಅತ್ಯಂತ ಕೆಟ್ಟ ತಿಂಗಳಿದು! ಬೆಂಗಳೂರಿಗರ ಪರಿಸ್ಥಿತಿ ಮಾತ್ರ..

https://newsfirstlive.com/wp-content/uploads/2023/07/bangalore-Cirty.jpg

Load More