newsfirstkannada.com

ಮಳೆ ಆರ್ಭಟಕ್ಕೆ ಬೆಚ್ಚಿಬಿದ್ದ ರಾಜಸ್ಥಾನ ಜನತೆ; ಭೀಕರ ಭೂಕುಸಿತಕ್ಕೆ 26 ಸಾವು

Share :

23-07-2023

    ನದಿಯಂತಾದ ರಸ್ತೆ.. ಕೊಚ್ಚಿ ಹೋದ ಬೈಕ್ ಸವಾರ

    ಜನವಸತಿ ಪ್ರದೇಶಕ್ಕೆ ಲಗ್ಗೆ ಇಟ್ಟ ರಣಭೀಕರ ಪ್ರವಾಹ

    ಪ್ರವಾಹದಲ್ಲಿ ಸಿಲುಕಿದ ಹಸುವಿನ ರಕ್ಷಣೆಗೆ ಹರಸಾಹಸ

ಉತ್ತರ ಭಾರತದಲ್ಲಿ ಪ್ರವಾಹದ ಮಾರ್ಜಾಲವನ್ನ ಬಿಸಿ ಕೊಂಚ ತಣ್ಣಗಾಗಿದ್ದ ಮಳೆರಾಯ ಮತ್ತೆ ಕೆರಳಿದ್ದಾನೆ. ವರುಣಾರ್ಭಟಕ್ಕೆ ಉತ್ತರದಲ್ಲಿ ಮತ್ತೆ ಜನರ ಬದುಕು ತತ್ತರವಾಗ್ತಿದೆ. ಮರುಭೂಮಿ ನಾಡು ರಾಜಸ್ಥಾನ ಸದ್ಯ ಪ್ರವಾಹಸ್ಥಾನವಾಗಿ ಬದಲಾಗಿದೆ. ಜೋದ್​ಪುರ ಮತ್ತು ಬರ್ಮಾರ್​ನಲ್ಲಿ ಜಲಪ್ರಳಯವೇ ಸಂಭವಿಸಿ ಹೋಗಿದೆ. ಉತ್ತರ ಭಾರತವನ್ನ ಬೆಂಬಿಡದ ಬೇತಾಳದಂತೆ ಕಾಡುತ್ತಿರೋ ಮಳೆರಾಯ ಮತ್ತೆ ಅಬ್ಬರಿಸಿ ಬೊಬ್ಬಿರಿಯುತ್ತಿದ್ದಾನೆ. ಕೆಲ ದಿನಗಳ ಬ್ರೇಕ್ ತೆಗೆದುಕೊಂಡು ಮತ್ತೆ ಫೀಲ್ಡ್​ಗಿಳಿದಿರೋ ವರುಣ ಉತ್ತರದ ರಾಜ್ಯಗಳಲ್ಲಿ ರಣಕೇಕೆ ಹಾಕ್ತಿದ್ದಾನೆ.

ರಾಜಸ್ಥಾನದಲ್ಲಿ ಮಳೆ ಆರ್ಭಟಕ್ಕೆ ಬೆಚ್ಚಿಬಿದ್ದ ಜನತೆ

ಮರುಭೂಮಿ ನಾಡು ಅಂತಲೇ ಖ್ಯಾತಿ ಹೊಂದಿರೋ ರಾಜಸ್ಥಾನ ಸದ್ಯ ಪ್ರವಾಹಸ್ಥಾನವಾಗಿ ಬದಕಲಾಗಿದೆ. ಪ್ರವಾಹದ ಒಂದೊಂದು ಫೋಟೋಗಳು ಎದೆ ಝಲ್ಲೆನಿಸುವಂತಿವೆ. ವರ್ಷಧಾರೆಯೆ ಅಬ್ಬರಕ್ಕೆ ರಾಜಸ್ಥಾನದ ಜೋದ್​ಪುರ ಮತ್ತು ಬರ್ಮಾರ್​ನಲ್ಲಿ ಜಲಪ್ರಳಯವೇ ಸಂಭವಿಸಿದೆ. ಕಳೆದ 24 ಗಂಟೆಯಿಂದ ಎಡೆಬಿಡದೇ ಸುರಿಯುತ್ತಿರೋ ಮಳೆ ಪ್ರವಾಹದ ರೂಪ ತಾಳಿ ಜನರ ಬದುಕನ್ನ ಕೊಚ್ಚಿಕೊಂಡು ಹೋಗ್ತಿದೆ. ಹುನುಮಗರ್​ ಜಿಲ್ಲೆಯಲ್ಲಿ ಗಗ್ಗರ್​ ನದಿ ಉಕ್ಕಿ ಹರಿಯುತ್ತಿದ್ದು ಪ್ರವಾಹ ಪರಿಸ್ಥಿತಿ ನಿರ್ಮಾಣವಾಗಿದೆ. ಮಳೆ ಅಬ್ಬರಕ್ಕೆ ರಾಜಸ್ಥಾನದಾದ್ಯಂತ 114 ಡ್ಯಾಂಗಳು ಭರ್ತಿಯಾಗಿವೆ.

ಜಲಾಶಯಗಳಿಂದ ಹೆಚ್ಚಿನ ಪ್ರಮಾಣದ ನೀರನ್ನ ಹೊರಬಿಡ್ತಿರೋ ಕಾರಣ ನದಿ ಪಾತ್ರದಲ್ಲಿ ಪ್ರವಾಹ ಭೀತಿ ಸೃಷ್ಟಿಯಾಗಿದೆ. ಪ್ರವಾಹದ ಅವಾಂತರಕ್ಕೆ 100ಕ್ಕೂ ಅಧಿಕ ಕುಟುಂಬಗಳು ನೆಲೆ ಕಳೆದುಕೊಂಡು ಬೀದಿಗೆ ಬಂದಿವೆ. ಗುಜರಾತ್​ನಲ್ಲೂ ಮಳೆರಾಯ ಅಬ್ಬರಿಸಿ ಬೊಬ್ಬಿರಿಯುತ್ತಿದ್ದಾನೆ. ನವಸಾರಿಯಲ್ಲಿ ಕೇವಲ ಮೂರೇ ಗಂಟೆಯಲ್ಲಿ 264 ಮಿಲಿಮೀಟರ್ ಮಳೆಯಾಗಿದ್ದು, ತಗ್ಗುಪ್ರದೇಶಕ್ಕೆ ನೀರು ನುಗ್ಗಿದೆ.

ಗುಜರಾತ್​ ನವಸಾರಿಯಲ್ಲಿ ಪ್ರವಾಹದ ಅಬ್ಬರಕ್ಕೆ ಮನೆ, ಅಂಗಡಿ, ಕಮರ್ಷಿಯಲ್ ಕಾಂಪ್ಲೆಕ್ಸ್​, ಅಪಾರ್ಟ್ ಮೆಂಟ್​ಗಳ ಬೇಸ್​ಮೆಂಟ್‌ ಸಂಪೂರ್ಣ ಜಲಾವೃತ್ತವಾಗಿದೆ. ಬೈಕ್​ ಮತ್ತು ಕಾರುಗಳೆಲ್ಲಾ ಮುಳುಗಡೆಯಾಗಿದೆ. ರಸ್ತೆಗಳ ಮೇಲೆಲ್ಲಾ ನೀರು ಹರಿಯುತ್ತಿದ್ದು, ವಾಹನ ಸವಾರರು ಪರದಾಟ ನಡೆಸಿದ್ದಾರೆ. ಮಳೆ ನೀರಿನಲ್ಲಿ ಗೋಡೌನ್​ ಒಂದರಲ್ಲಿದ್ದ ಗ್ಯಾಸ್​ ಸಿಲಿಂಡರ್​ಗಳು ಆಟಿಕೆಗಳಂತೆ ಕೊಚ್ಚಿಕೊಂಡು ಹೋಗಿವೆ. ಅಮರೇಲಿಯಲ್ಲಿ ನದಿಯ ಪ್ರವಾಹಕ್ಕೆ ಇಡೀ ಗ್ರಾಮವೊಂದು ಮುಳುಗಿಹೋಗಿದೆ. ಸೌರಾಷ್ಟ್ರ ಮತ್ತು ಜುನಾಗಢ್​ನಲ್ಲೂ ಪ್ರವಾಹದ ಅಬ್ಬರಕ್ಕೆ ವಾಹನಗಳು ತೇಲಿಹೋಗಿವೆ.

ಜಮ್ಮು-ಕಾಶ್ಮೀರದಲ್ಲೂ ಜೋರಾದ ವರುಣಾರ್ಭಟ

ಜಮ್ಮು ಕಾಶ್ಮೀರದಲ್ಲೂ ಸಹ ವರುರ್ಣಾಭಟ ಜೋರಾಗಿದೆ. ಮೂರುನಾಲ್ಕು ದಿನದಿಂದ ಸುರಿಯುತ್ತಿರುವ ಮಳೆಗೆ ಜನ ಜೀವನ ಸಂಪೂರ್ಣ ಅಸ್ಥವ್ಯಸ್ಥವಾಗಿದೆ. ಮಳೆ ನೀರಿನಲ್ಲಿ ಸಿಲುಕಿದವರ ರಕ್ಷಣಾ ಕಾರ್ಯಾಚರಣೆ ಮುಂದುವರೆದಿದೆ. ಇನ್ನು ನದಿಗಳು ತುಂಬಿ ಹರಿಯುತ್ತಿದ್ದು ದಡದಲ್ಲಿದ್ದ ಮರ, ಮನೆಗಳು ಕೊಚ್ಚಿ ಹೋಗಿವೆ.

ಪ್ರವಾಹದ ನೀರಿನಲ್ಲಿ ಸಿಲುಕಿದ ಬಸ್​.. ಪ್ರಯಾಣಿಕರ ಪರದಾಟ

ಉತ್ತರ ಪ್ರದೇಶದ ಬಿಜನೋರ್ ಜಿಲ್ಲೆಯ ಕೊಟವಾಲಿ ನದಿ ಉಕ್ಕಿಹರಿಯುತ್ತಿದೆ.. ಸೇತುವೆ ಮೇಲೆ ಸಂಚಾರ ನಡೆಸುತ್ತಿದ್ದ ಬಸ್​ ಒಂದು ಪ್ರವಾಹದ ನೀರಿನಲ್ಲಿ ಸಿಲುಕಿ ಕೊಂಡಿದೆ. ಬಳಿಕ ಸ್ಥಳಕ್ಕೆ ಹಿಟಾಚಿಯನ್ನ ತಂದ ಸ್ಥಳೀಯರು ಬಸ್​ನಲ್ಲಿದ್ದವರನ್ನ ರಕ್ಷಣೆ ಮಾಡಿದ್ದಾರೆ.

ಮಹಾರಾಷ್ಟ್ರದಲ್ಲಿ ಭೀಕರ ಭೂಕುಸಿತ.. 26 ಮಂದಿ ಸಾವು

ಧಾರಾಕಾರ ಮಳೆಗೆ ಮಹಾರಾಷ್ಟ್ರದ ರಾಯ್​ಗಢ್​ನ ಇರ್​ಶಾಲ್ವಾಡಿ ಗ್ರಾಮದಲ್ಲಿ ಭೂಕುಸಿತ ಸಂಭವಿಸಿ 26 ಮಂದಿ ಸಾವನ್ನಪ್ಪಿದ್ದಾರೆ. ಘಟನೆಯಲ್ಲಿ 86 ಮಂದಿ ನಾಪತ್ತೆಯಾಗಿದ್ದು ಎನ್​ಡಿಆರ್​ಎಫ್​ ತಂಡ ರಕ್ಷಣಾ ಕಾರ್ಯಾಚರಣೆಯಲ್ಲಿ ತೊಡಗಿದೆ. ಭೂಕುಸಿತದಿಂದ ನಿರಾಶ್ರಿತರಾದ 37 ಕುಟುಂಬಗಳಿಗೆ ಖಾಲಾಪುರದಲ್ಲಿ ತಾತ್ಕಾಲಿಕ ಮನೆಗಳನ್ನ ನಿರ್ಮಿಸಿಕೊಡಲಾಗಿದೆ. ಒಟ್ಟಿನಲ್ಲಿ ಉತ್ತರ ಭಾರತದಲ್ಲಿ ಅಬ್ಬರಿಸಿ ಬೊಬ್ಬರಿಯುತ್ತಿರೋ ವರುಣ ಜನರ ಜೀವದ ಜೊತೆ ಚೆಲ್ಲಾಟವಾಡ್ತಿದ್ದಾನೆ. ಮಳೆ ಅಬ್ಬರ ಹೀಗೆ ಮುಂದುವರೆದರೆ ಉತ್ತರ ಭಾರತೀಯರ ಬದುಕು ಮತ್ತಷ್ಟು ಸಂಕಷ್ಟಕ್ಕೆ ಸಿಲುಕುವ ಸಾಧ್ಯತೆ ಇದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಮಳೆ ಆರ್ಭಟಕ್ಕೆ ಬೆಚ್ಚಿಬಿದ್ದ ರಾಜಸ್ಥಾನ ಜನತೆ; ಭೀಕರ ಭೂಕುಸಿತಕ್ಕೆ 26 ಸಾವು

https://newsfirstlive.com/wp-content/uploads/2023/07/rain-8-1.jpg

Load More