newsfirstkannada.com

×

ಬೆಂಗಳೂರಲ್ಲಿ ಮುಂಗಾರು ಚುರುಕು.. ರಾಜ್ಯಕ್ಕೆ ಹವಾಮಾನ ಇಲಾಖೆ ಕೊಟ್ಟ ಎಚ್ಚರಿಕೆ ಏನು?

Share :

Published June 20, 2023 at 9:40pm

    ಬೆಂಗಳೂರಲ್ಲಿನ ಮಳೆಗೆ ಅಸ್ತವ್ಯಸ್ತವಾಯ್ತು ಜನಜೀವನ

    ಬಂಗಾಳ ಕೊಲ್ಲಿಯಲ್ಲಿ ಮೇಲ್ಮೈ ಸುಳಿಗಾಳಿ

    ಮುಂಗಾರಿನ ಆಗಮನ, ಮಳೆಯತ್ತವೇ ಜನರ ಗಮನ

ರಾಜಧಾನಿಯಲ್ಲಿ ಮುಂಗಾರು ಚುರುಕುಗೊಂಡಿದೆ. ಬಿಸಿಲಿನಿಂದ ಕಂಗೆಟ್ಟಿದ ಬೆಂಗಳೂರಲ್ಲಿ ಮೋಡ ಕವಿದ ವಾತಾವರಣ ಸೃಷ್ಟಿ ಆಗಿದೆ. ಬೆಳಗ್ಗೆಯೇ ವರ್ಷಧಾರೆ ಆಗಮನ ಜನರಲ್ಲಿ ಹರ್ಷ ತಂದಿದೆ. ಮುಂಗಾರು ಸಿಂಚನದಿಂದ ನಗರದಲ್ಲಿ ಸ್ವಲ್ಪ ಹೊತ್ತು ಜನಜೀವನ ಅಸ್ತವ್ಯಸ್ತ ಕೂಡ ಆಯ್ತು. ಮಳೆಯ ತುಂತುರು ಹಾಡು, ಸವಾರರನ್ನ ಕಾಡಿತು.

ಮುಂಗಾರಿನ ಆಗಮನ, ಮಳೆಯತ್ತವೇ ಜನರ ಗಮನ!

ಇವತ್ತು ಬೆಳಗ್ಗೆಯೇ ಮುಂಗಾರಿನ ದರ್ಶನ.. ಮಳೆಯ ಆಗಮನದಿಂದ ಜನ ಕೊಡೆ ಹಿಡಿದು ಸಂಧಾನಕ್ಕಿಳಿದ್ರು.. ರೈನ್​ ಕೋಟ್​, ರೈನ್​ ಜಾಕೇಟ್​, ಛತ್ರಿ ಹಿಡಿದು ಬೆಂಗಳೂರು ಮಂದಿ ಆಫಿಸ್​ಗೆ ತೆರಳಿದ್ರು.. ಜಿಟಿಜಿಟಿ ಮಳೆ ಕಾಟದಿಂದ ಜನಜೀವನ ಅಸ್ತವ್ಯಸ್ತವೂ ಆಯ್ತು.. ಆದ್ರೂ ಈ ಕೂಲ್​​ ವೆದರ್​​ ಕಾಣದೆ ಬರಗೆಟ್ಟಿದ್ದ ಜನ ಎಂಜಾಯ್​​ ಮಾಡಿದ್ರು.

ಮಳೆಯಿಂದಾಗಿ ಕಬ್ಬನ್​ ಪಾರ್ಕ್​ ಸೇರಿದಂತೆ ಹಲವೆಡೆ ಸಣ್ಣಪ್ರಮಾಣದಲ್ಲಿ ಟ್ರಾಫಿಕ್​ ಉಂಟಾಗಿದೆ. ಅತ್ತ ದ್ವಿಚಕ್ರ ವಾಹನ ಸವಾರರಿಗೆ ಜಿಟಿಜಿಟಿ ಮಳೆ ಸ್ವಲ್ಪ ಪ್ರಮಾಣದಲ್ಲಿ ಕಿರಿಕಿರಿ ಕೂಡ ಉಂಟು ಮಾಡಿದೆ.. ವಿಲ್ಸನ್ ಗಾರ್ಡನ್, ಲಾಲ್​ಬಾಗ್, ಮೆಜೆಸ್ಟಿಕ್, ಹೆಬ್ಬಾಳ, ಯಲಹಂಕ, ವಿದ್ಯಾರಣ್ಯಪುರ, ಯಶವಂತಪುರ, ಮಲ್ಲೇಶ್ವರಂ, ರಾಜಾಜಿನಗರ, ಹೊರಮಾವು, ಮಹದೇವಪುರ ಸೇರಿ ಹಲವೆಡೆ ಮಳೆ ಸುರಿದಿದ್ದು, ಕೆಲಕಾಲ ವಾಹನ ಸವಾರರು ಪರದಾಡಿದ್ರು.

ರಾಜ್ಯದಲ್ಲಿ ಇನ್ನೂ 5 ದಿನ ಮಳೆ ಮುನ್ಸೂಚನೆ

ಬೆಂಗಳೂರಲ್ಲಿ ಮಳೆ, ಮೋಡ ಕವಿದ ವಾತಾವರಣ ಸೃಷ್ಟಿಸಿದೆ.. ಇದಕ್ಕೆ ಕಾರಣ ಬಂಗಾಳ ಕೊಲ್ಲಿಯಲ್ಲಿ ಸೃಷ್ಟಿಯಾಗಿರುವ ಮೇಲ್ಮೈ ಸುಳಿಗಾಳಿ.. ಈ ಕಾರಣಕ್ಕೆ ಬೆಳಗ್ಗೆ ಎಂಟ್ರಿಯಾದ ವರುಣ, ಐದು ದಿನ ಎಡೆಬಿಡದೇ ಕಾಟ ಕೊಡಲಿದ್ದಾನೆ.. ಮುಂದಿನ ಐದು ದಿನಗಳ ಕಾಲ ಮಳೆ ಆಗಲಿದೆ ಅಂತ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

ಬೆಂಗಳೂರು ಅಷ್ಟೇ ಅಲ್ಲ, ಮಂಡ್ಯ, ಹಾಸನ, ಕೋಲಾರ, ಚಿಕ್ಕಬಳ್ಳಾಪುರ, ತುಮಕೂರು ಜಿಲ್ಲೆಗಳಲ್ಲಿ ಯೆಲ್ಲೊ ಅಲರ್ಟ್ ಎಚ್ಚರಿಕೆ ನೀಡಲಾಗಿದೆ. ವಾಡಿಕೆಯಂತೆ ಈ ಬಾರಿಯೂ ಮುಂಗಾರು ಮಳೆ ಆಗಲಿದೆ ಅಂತ ಹವಾಮಾನ ಇಲಾಖೆ ವಿಜ್ಞಾನಿ ಎ.ಪ್ರಸಾದ್ ಮಾಹಿತಿ ನೀಡಿದ್ದಾರೆ. ಮುಂಗಾರು ಕೈಕೊಡುವ,‌ ಕಡಿಮೆಯಾಗುವ ಯಾವುದೇ ಮುನ್ಸೂಚನೆ ಇಲ್ಲ.. ಜೂನ್ 21ರಿಂದ ರಾಜ್ಯದಲ್ಲಿ ಮುಂಗಾರು ಮಳೆ‌ ಚುರುಕು ಪಡೆಯಲಿದೆ ಅಂತ ತಿಳಿಸಿದ್ರು.

ಒಟ್ಟಾರೆ, ನಿನ್ನೆ ರಾತ್ರಿಯಿಂದ ಜಿಟಿಜಿಟಿ ಮಳೆ ಸುರಿಯಿತ್ತಿದ್ದು, ಸಿಲಿಕಾನ್​ ಸಿಟಿ ಮಂದಿಗೆ ಬೆಳ್ಳಂಬೆಳಗ್ಗೆ ತುಂತುರು ಮಳೆ ದರ್ಶನವಾಗಿದೆ. ಒಂದುಕಡೆ ಚುಮುಚುಮು ಚಳಿ ಜೊತೆಗೆ ತುಂತುರು ಮಳೆ ಬೀಳ್ತಿದ್ರೆ, ಮತ್ತೊಂದು ಕಡೆ ಗಾರ್ಡನ್​ ಸಿಟಿ ನೆತ್ತಿ ಮೇಲೆ ಕಪ್ಪು ಮೋಡ ಆವರಿಸಿದೆ. ಮಲೆನಾಡಿನಂತಾಗಿರುವ ಬೆಂಗಳೂರು ಕೂಲ್, ಕೂಲ್ ವೆದರ್​ ಅನ್ನ ಎಂಜಾಯ್​​ ಮಾಡ್ತಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಬೆಂಗಳೂರಲ್ಲಿ ಮುಂಗಾರು ಚುರುಕು.. ರಾಜ್ಯಕ್ಕೆ ಹವಾಮಾನ ಇಲಾಖೆ ಕೊಟ್ಟ ಎಚ್ಚರಿಕೆ ಏನು?

https://newsfirstlive.com/wp-content/uploads/2023/06/RAIN-3.jpg

Load More