ಮಣಿಪುರದ ಪರಿಸ್ಥಿತಿ ಪ್ರಸ್ತಾಪಿಸಿದ ರಾಹುಲ್ ಗಾಂಧಿ
ರಾಹುಲ್ ಪ್ರಶ್ನೆಗೆ ಮೋದಿ ಹೂಡ್ತಾರಾ ಕೌಂಟರ್ ಬಾಣ?
ಮೋದಿ ಬಗ್ಗೆಯ ಅಂಶಗಳನ್ನು ಕಡತದಿಂದ ತೆಗೆದ ಸ್ಪೀಕರ್
ಮುಂಗಾರು ಅಧಿವೇಶನದ ಮಹಾಯುದ್ಧ ಕ್ಲೈಮ್ಯಾಕ್ಸ್ಗೆ ಬಂದು ನಿಂತಿದೆ. ಸಂಸದ ಸ್ಥಾನವೇ ಕಳೆದುಕೊಂಡು ಸದನದಿಂದ ಹೊರನಡೆದಿದ್ದ ರಾಹುಲ್ ಗಾಂಧಿ, ಸ್ಟ್ರಾಂಗ್ ಕಮ್ ಬ್ಯಾಕ್ ಮಾಡಿಯಾಗಿದೆ. ರಾಮ-ರಾವಣರ ಕಥೆಯನ್ನೂ ಹೇಳಿರೋ ರಾಹುಲ್, ಮೋದಿಗೆ ಡೈರೆಕ್ಟ್ ಹಿಟ್ ಕೊಟ್ಟಾಗಿದೆ. ಇಂದು ಉತ್ತರ ಕೊಡೋಕೆ ಲೋಕಸಭೆ ಮೋದಿಯೇ ವಾರ್ಫೀಲ್ಡ್ಗಿಳೀತಿದ್ದಾರೆ.
ಒಂದೊಂದು ಮಾತುಗಳೂ ಸಿಡಿಗುಂಡು. ಪ್ರತೀ ಬುಲೆಟ್ ಹಾರಿದ್ದು, ಕೇಂದ್ರ ಸರ್ಕಾರದ ವಿರುದ್ಧವೇ. ಅದರಲ್ಲೂ ಪ್ರಧಾನಿ ಮೋದಿಯೇ ನೇರ ಟಾರ್ಗೆಟ್. ಹೀಗೆ ನಿನ್ನೆ ಲೋಕಸಭಾ ಅಧಿವೇಶನದಲ್ಲಿ ಮಾತಿನ ಅಸ್ತ್ರಗಳನ್ನ ಹೂಡಿದ ರಾಹುಲ್ ಗಾಂಧಿ, ಕತ್ತಿಯನ್ನ ಬೀಸದೇ ವೀರಗಾಸೆ ಪ್ರದರ್ಶಿಸಿದ್ರು.
ಅವಿಶ್ವಾಸ ನಿರ್ಣಯ ಮಂಡನೆ ಬಳಿಕ ಮಾತಿನ ಮಿಸೈಲ್ಸ್ ಫೈರಿಂಗ್ ಶುರುವಾಯ್ತು. ಮಣಿಪುರದ ಪರಿಸ್ಥಿತಿ ಪ್ರಸ್ತಾಪಿಸಿದ ರಾಹುಲ್ ಗಾಂಧಿ ಬೆಂಕಿಯುಂಡೆಗಳನ್ನ ಬೀಸಿದ್ರು. ಪ್ರಧಾನಿ ಅಲ್ಲಿಗೇಕೆ ಹೋಗಿಲ್ಲ ಅಂತಾ ಪ್ರಶ್ನೆ ಮಾಡಿದ್ರು. ನೀವು ಮಣಿಪುರದಲ್ಲಿ ಭಾರತ ಮಾತೆಯನ್ನ ಕೊಂದಿದ್ದೀರಿ ಅಂತಾ ತೀಕ್ಣವಾಗಿ ರಾಹುಲ್ ಕಿಡಿಕಾರಿದ್ರು.
ಭಾರತ ಒಂದು ಧ್ವನಿ, ಭಾರತ ನಮ್ಮ ಜನರ ಧ್ವನಿ, ಹೃದಯದ ದನಿಯಾಗಿದೆ. ಆ ದನಿಯನ್ನು ನೀವು ಮಣಿಪುರದಲ್ಲಿ ಹತ್ಯೆ ಮಾಡಿದ್ದೀರಿ, ಇದರರ್ಥ ನೀವು ಮಣಿಪುರದಲ್ಲಿ ಭಾರತ ಮಾತೆಯ ಹತ್ಯೆ ಮಾಡಿದ್ದೀರಿ. ಮಣಿಪುರದಲ್ಲಿನ ಜನರನ್ನು ಹತ್ಯೆ ಮಾಡುವ ಮೂಲಕ ನೀವು ಭಾರತವನ್ನು ಕೊಂದಿದ್ದೀರಿ. ನೀವು ದೇಶಭಕ್ತರಲ್ಲ, ನೀವು ದೇಶಪ್ರೇಮಿಗಳಲ್ಲ. ನೀವು ಹೀಗಾಗಿ ಮಣಿಪುರಕ್ಕೆ ಹೋಗೋದಕ್ಕೆ ಆಗ್ತಿಲ್ಲ. ಯಾಕಂದ್ರೆ ನೀವು ಮಣಿಪುರದಲ್ಲಿ ದೇಶದ ಹತ್ಯೆ ಮಾಡಿದ್ದೀರಿ. ನೀವು ಭಾರತಮಾತೆಯ ರಕ್ಷಕರಲ್ಲ. ನೀವು ಭಾರತ ಮಾತೆಯನ್ನ ಕೊಂದಿದ್ದೀರಿ ಎಂದು ರಾಹುಲ್ ಹೇಳಿದ್ದರು.
ಭಾರತ ಮಾತೆಯನ್ನ ಕೊಂದಿದ್ದೀರಿ ಅನ್ನೋ ಮಾತಿಗೆ ಕೇಸರಿ ಕೆರಳಿ ಕೆಂಡವಾಯ್ತು. ಬಳಿಕ ಮಾತನ್ನ ಬದಲಿಸಿಕೊಂಡ ರಾಹುಲ್, ಮಣಿಪುರದಲ್ಲಾದ ನನ್ನ ತಾಯಿಯ ಹತ್ಯೆ ಬಗ್ಗೆ ಮಾತಾಡ್ತಿದ್ದೀನಿ ಎಂದ್ರು.
ನಂತರ ಮಾತನಾಡಿದ ರಾಹುಲ್ ಗಾಂಧಿ ನಾನು ನನ್ನ ತಾಯಿಯ ಹತ್ಯೆಯ ಬಗ್ಗೆ ಮಾತಾಡ್ತಿದ್ದೀನಿ. ನಾನು ಮಣಿಪುರದಲ್ಲಾಗ್ತಿರೋ ನನ್ನ ತಾಯಿಯ ಹತ್ಯೆಯ ಬಗ್ಗೆ ಮಾತಾಡ್ತಿದ್ದೀನಿ. ನೀವು ನನ್ನ ತಾಯಿಯನ್ನ ಮಣಿಪುರದಲ್ಲಿ ಹತ್ಯೆ ಮಾಡಿದ್ದೀರಾ. ನನ್ನ ಒಬ್ಬ ತಾಯಿ ಇಲ್ಲಿ ಕುಳಿತಿದ್ದಾಳೆ ಮತ್ತು ಇನ್ನೊಬ್ಬ ತಾಯಿಯನ್ನು ಮಣಿಪುರದಲ್ಲಿ ಕೊಲ್ಲಲಾಗಿದೆ. ಪ್ರತಿದಿನ ಎಲ್ಲಿಯವರೆಗೆ ನೀವು ಹಿಂಸೆಯನ್ನ ನಿಲ್ಲಿಸೋದಿಲ್ವೋ? ಅಲ್ಲಿಯವರೆಗೆ ನನ್ನ ತಾಯಿಯನ್ನ ಹತ್ಯೆ ಮಾಡಿದಂತೆ. ಭಾರತೀಯ ಸೇನೆ ಮಣಿಪುರದಲ್ಲಿ ಒಂದೇ ದಿನದಲ್ಲಿ ಶಾಂತಿಯನ್ನು ತರಬಹುದು ಆದರೆ ನೀವು ಸೇನೆಯನ್ನ ಬಳಸುತ್ತಿಲ್ಲ. ಯಾಕಂದ್ರೆ ಮಣಿಪುರದಲ್ಲಿ ದೇಶ ಸಾಯಬೇಕೆಂದು ಬಯಸುತ್ತೀರಿ ಎಂದು ಹೇಳಿದ್ದಾರೆ.
ಇವಿಷ್ಟು ಅಧಿವೇಶನದಲ್ಲಿ ರಾಹುಲ್ ಗಾಂಧಿ ಮಾಡಿದ ಅಗ್ರೆಸ್ಸಿವ್ ಬ್ಯಾಟಿಂಗ್. ಆದ್ರೆ ಈ ಕೋಪಾವೇಷ ಲೋಕಸಭಾ ಕಡತಗಳಿಂದಲೇ ಕಿಕ್ಔಟ್ ಆಗಿದೆ.
ಪ್ರಧಾನಿ ಬಗ್ಗೆ ರಾಹುಲ್ ಗಾಂಧಿ ಮಾಡಿದ ಭಾಷಣಕ್ಕೆ ಕತ್ತರಿ
ಇನ್ನು, ಪ್ರಧಾನ ಮಂತ್ರಿಯ ಬಗ್ಗೆ ಪ್ರಧಾನಮಂತ್ರಿ ಬಗ್ಗೆ ರಾಹುಲ್ ಗಾಂಧಿ ಮಾಡಿದ ಭಾಷಣಕ್ಕೆ ಕತ್ತರಿ ಹಾಕಲಾಗಿದೆ. ಮೋದಿ ಬಗ್ಗೆ ರಾಹುಲ್ ಗಾಂಧಿಯ ಟೀಕಾ ಪ್ರಹಾರಗಳನ್ನ ಲೋಕಸಭಾ ಸಚಿವಾಲಯ ಕಡತದಿಂದ ತೆಗೆದು ಹಾಕಿದೆ.
ಇಂದು ಲೋಕಸಭೆಯಲ್ಲಿ ಪ್ರಧಾನಿ ಮೋದಿ ಭಾಷಣ
ವಿರೋಧ ಪಕ್ಷಗಳು ಮಂಡಿಸಿರೋ ಅವಿಶ್ವಾಸ ನಿರ್ಣಯ ಸಂಬಂಧ ಇಂದು ಪ್ರಧಾನಿ ಮೋದಿ ಲೋಕಸಭೆಯಲ್ಲಿ ಭಾಷಣ ಮಾಡಲಿದ್ದಾರೆ. ಮಣಿಪುರ ವಿಷಯವನ್ನೂ ಪ್ರಸ್ತಾಪಿಸುವ ಸಾಧ್ಯತೆ ಇದೆ. ಪ್ರಮುಖವಾಗಿ ನಿನ್ನೆ ಆರ್ಭಟಿಸಿದ್ದ ರಾಹುಲ್ ಗಾಂಧಿ ಆರೋಪಕ್ಕೆ ಕೌಂಟರ್ಗಳನ್ನೂ ಕೊಡಲಿದ್ದಾರೆ. ಪರಿಣಾಮ ಹೈವೋಲ್ಟೇಜ್ ವಾರ್ಗೆ ಸಂಸತ್ ಕಲಾಪ ಸಾಕ್ಷಿಯಾಗಲಿದೆ.
ಒಟ್ಟಿನಲ್ಲಿ, ಮೊದಲೇ ಹೇಳಿದಂತೆ ಮುಂಗಾರು ಅಧಿವೇಶನದ ಮಹಾಯುದ್ಧ ಕ್ಲೈಮ್ಯಾಕ್ಸ್ನಲ್ಲಿದೆ. ರಾಮಯಾಣದ ಕಥೆ ಹೇಳೀರೋ ರಾಹುಲ್ ಗಾಂಧಿಗೆ ಉತ್ತರ ಕೊಡೋದಕ್ಕೆ ಮೋದಿಯೇ ರಣರಂಗಕ್ಕೆ ಶಸ್ತ್ರಸಜ್ಜಿತವಾಗಿ ಧುಮುಕ್ತಿದ್ದಾರೆ. ರಾವಣ ಅಂತಾ ಕಿಚಾಯಿಸಿರೋ ರಾಹುಲ್ಗೆ ರಾಮಭಕ್ತನ ಉತ್ತರ ಏನು. ಕಾದು ನೋಡಬೇಕಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ