newsfirstkannada.com

ದುಡ್ಡಿಗಾಗಿ ಕತ್ತೆಗಳ ಮಾರಾಟಕ್ಕೆ ಮುಂದಾದ ಪಾಕಿಸ್ತಾನ.. ಅಯ್ಯೋ! ಇದೆಂಥಾ ದುಸ್ಥಿತಿ!

Share :

Published June 14, 2024 at 6:23am

  ಪಾಕಿಸ್ತಾನದಲ್ಲಿ ದಿನದಿಂದ ದಿನಕ್ಕೆ ಏರಿಕೆಯಾಗುತ್ತಿದೆ ಕತ್ತೆಗಳ ಸಂಖ್ಯೆ

  ಹೆಚ್ಚೆಚ್ಚು ನಮಗೆ ಕತ್ತೆಗಳು ಬೇಕು ಎನ್ನುತ್ತಿದೆ ನೆರೆಯ ರಾಷ್ಟ್ರ ಚೀನಾ

  ಕತ್ತೆ ಚರ್ಮದಿಂದ ಸೌಂದರ್ಯವರ್ಧಕ ಉತ್ಪನ್ನಗಳ ತಯಾರಿಗೆ ಸಿದ್ಧ

ತೀವ್ರವಾಗಿ ಆರ್ಥಿಕ ಬಿಕ್ಕಟ್ಟಿಗೆ ಸಿಕ್ಕಿಹಾಕಿಕೊಂಡಿರೋ ಪಾಕಿಸ್ತಾನವು ಇತ್ತೀಚೆಗೆ ತನ್ನ ಆರ್ಥಿಕ ಸಮೀಕ್ಷೆಯನ್ನು ಬಿಡುಗಡೆ ಮಾಡಿದೆ. ಪಾಕಿಸ್ತಾನದ ಆರ್ಥಿಕತೆಯಲ್ಲಿ ಜಾನುವಾರುಗಳು ನಿರ್ಣಾಯಕ ಪಾತ್ರವನ್ನು ವಹಿಸುತ್ತವೆ. ಆದ್ದರಿಂದ ಆರ್ಥಿಕ ಸಮೀಕ್ಷೆಯು ದನ, ಎಮ್ಮೆ, ಕುರಿ, ಆಡುಗಳು, ಒಂಟೆಗಳು, ಕುದುರೆಗಳು, ಕತ್ತೆಗಳು ಮತ್ತು ಹೇಸರಗತ್ತೆಗಳು ಸೇರಿದಂತೆ ಎಲ್ಲಾ ಜಾನುವಾರು ಜನಸಂಖ್ಯೆಯ ಅಂಕಿ-ಅಂಶಗಳನ್ನು ಬಹಿರಂಗಪಡಿಸುತ್ತದೆ.

ಇದನ್ನೂ ಓದಿ: ನಟ ದರ್ಶನ್​ಗೆ ಬೇಲ್ ಸಿಗೋದು ಡೌಟ್? ಆರೋಪ ಸಾಬೀತಾದ್ರೆ ಎಷ್ಟು ವರ್ಷ ಜೈಲು ಶಿಕ್ಷೆ..?

ಪಾಕಿಸ್ತಾನದಲ್ಲಿ ಕಳೆದ ಒಂದು ವರ್ಷದಲ್ಲಿ ಕತ್ತೆಗಳ ಪ್ರಮಾಣ ಗಣನೀಯವಾಗಿ ಏರಿಕೆಯಾಗಿದೆ. ಇದರಿಂದ ದೇಶದ ಕೃಷಿ ಚಟುವಟಿಕೆಗಳಲ್ಲಿ ಭರವಸೆಯ ಬೆಳವಣಿಗೆಯಾಗುತ್ತಿದೆ. ದಿನದಿಂದ ದಿನಕ್ಕೆ ಪಾಕಿಸ್ತಾನದಲ್ಲಿ ಕತ್ತೆಗಳ ಸಂಖ್ಯೆಯಲ್ಲಿ ಏರಿಕೆ ಕಂಡಿದೆ. 2022-23ರಲ್ಲಿ 5.9 ಮಿಲಿಯನ್‌ ನಷ್ಟಿದ್ದ ಕತ್ತೆಗಳು ಒಂದು ವರ್ಷದಲ್ಲಿ ಎರಡು ಲಕ್ಷಕ್ಕೆ ಹೆಚ್ಚಳ ಕಂಡಿದೆ. ವರದಿ ಪ್ರಕಾರ, 2023-24ರ ಆರ್ಥಿಕ ವರ್ಷದಲ್ಲಿ ಜನಸಂಖ್ಯೆಯು 5.9 ಮಿಲಿಯನ್ ತಲುಪಲು 1.72% ರಷ್ಟು ಹೆಚ್ಚಾಗಿದೆ.

2019-2020 ರಲ್ಲಿ 5.5 ಮಿಲಿಯನ್, 2020-21ರಲ್ಲಿ 5.6 ಮಿಲಿಯನ್, 2021-22ರಲ್ಲಿ 5.7 ಮಿಲಿಯನ್, ಮತ್ತು 2022-23 ರಲ್ಲಿ 5.8 ಮಿಲಿಯನ್, ಆದರೆ 2023ರಲ್ಲಿ 5.9 ಮಿಲಿಯನ್‌ಗೆ ಕತ್ತೆಗಳ ಸಂಖ್ಯೆಗಳಲ್ಲಿ ಏರಿಕೆ ಕಂಡಿದೆ ಅಂತ ಡೇಟಾದಿಂದ ಬಹಿರಂಗಪಡಿಸುತ್ತದೆ. ಆದರೆ ಇದರ ಮಧ್ಯೆ ಪಾಕಿಸ್ತಾನದಲ್ಲಿ ಕತ್ತೆಗಳ ಪ್ರಮಾಣ ಗಣನೀಯವಾಗಿ ಏರಿಕೆಯಾಗುತ್ತಿದ್ದಂತೆ ಚೀನಾಕ್ಕೆ ಸಾಗಾಟ ಮಾಡಲಾಗುತ್ತಿದೆಯಂತೆ. 2022ರಲ್ಲಿ ಚೀನಾ ಪಾಕಿಸ್ತಾನದಿಂದ ಕತ್ತೆ ಮತ್ತು ನಾಯಿಗಳನ್ನು ಆಮದು ಮಾಡಿಕೊಳ್ಳಲು ತನ್ನ ಆಸಕ್ತಿಯನ್ನು ವ್ಯಕ್ತಪಡಿಸಿದೆ ಎಂದು ವರದಿಯೊಂದು ಹೇಳಿದೆ.

ಹೌದು, ಇ-ಜಿಯಾವೋ ಎಂದು ಕರೆಯಲ್ಪಡುವ ಚೀನಾದ ಸಾಂಪ್ರದಾಯಿಕ ಔಷಧಕ್ಕೆ ಪ್ರತಿ ವರ್ಷ ಲಕ್ಷಾಂತರ ಕತ್ತೆಗಳು ಬಲಿಯಾಗುತ್ತಿದೆ. ಹೀಗಾಗಿ ಕತ್ತೆ ಚರ್ಮದಿಂದ ಹೊರತೆಗೆಯಲಾಗುವ ಕಾಲಜನ್ ಬಳಸಿ ತಯಾರಿಸಲಾದ ಇ-ಜಿಯಾವೊ ಆಹಾರ ಮತ್ತು ಸೌಂದರ್ಯವರ್ಧಕ ಉತ್ಪನ್ನಗಳಲ್ಲಿ ಬಳಸುವ ಪ್ರಮುಖ ಅಂಶವಾಗಿದೆ. ಈ ಔಷಧವು ರಕ್ತವನ್ನು ಸಮೃದ್ಧಗೊಳಿಸುತ್ತದೆ. ರೋಗನಿರೋಧಕ ಶಕ್ತಿಯನ್ನು ಸುಧಾರಿಸುತ್ತದೆ. ಜೊತೆಗೆ ರೋಗಗಳನ್ನು ತಡೆಯುತ್ತದೆ ಎನ್ನಲಾಗುತ್ತದೆ. ಹೀಗಾಗಿ ಚೀನಾವು ಬೇರೆ ಬೇರೆ ದೇಶಗಳಿಂದ ಕತ್ತೆಗಳನ್ನು ಆಮದು ಮಾಡಿಕೊಳ್ಳುತ್ತಿದಯಂತೆ. ಅಲ್ಲದೇ ಪಾಕಿಸ್ತಾನವು ತನ್ನ ಸ್ನೇಹಿತ ರಾಷ್ಟ್ರವಾದ ಚೀನಾದಿಂದ ಈ ಮೂಲಕ ಸ್ವಲ್ಪ ಲಾಭ ಪಡೆಯಲು ಪ್ರಯತ್ನಿಸುತ್ತಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ದುಡ್ಡಿಗಾಗಿ ಕತ್ತೆಗಳ ಮಾರಾಟಕ್ಕೆ ಮುಂದಾದ ಪಾಕಿಸ್ತಾನ.. ಅಯ್ಯೋ! ಇದೆಂಥಾ ದುಸ್ಥಿತಿ!

https://newsfirstlive.com/wp-content/uploads/2024/06/donkey.jpg

Load More