newsfirstkannada.com

VIDEO: ಕೊನೇ ಆ 10 ಸೆಕೆಂಡ್‌ನಲ್ಲಿ ಆಗಿದ್ದೇನು?; ಟೈಟಾನ್ ಸಬ್‌ಮರ್ಸಿಬಲ್ ನೌಕೆಯ ಮತ್ತಷ್ಟು ಸ್ಫೋಟಕ ವಿಷಯ ಇಲ್ಲಿದೆ

Share :

29-06-2023

    ಟೈಟಾನಿಕ್ ಹಡಗಿನ ಅವಶೇಷಗಳನ್ನು ನೋಡಲು ಹೋಗಿದ್ದ ಐವರು

    ಟೈಟಾನ್ ಸಬ್‌ಮರ್ಸಿಬಲ್ ನೌಕೆಯ ಅವಶೇಷಗಳು ಕೊನೆಗೂ ಪತ್ತೆ

    ಕೆನಡಾ ಸಮುದ್ರದಾಳದಲ್ಲಿ ಕರಾವಳಿಯ ಪಡೆಯ ಮೆಗಾ ಆಪರೇಷನ್

ಟೈಟಾನಿಕ್ ಹಡಗಿನ ಅವಶೇಷಗಳನ್ನು ನೋಡಲು 12,500 ಮೀಟರ್ ಸಮುದ್ರದಾಳಕ್ಕೆ ಹೋಗಿದ್ದ ಟೈಟಾನ್ ಸಬ್‌ಮರ್ಸಿಬಲ್ ನೌಕೆಯ ಅವಶೇಷಗಳು ಕೊನೆಗೂ ಪತ್ತೆಯಾಗಿದೆ. ನಾರ್ತ್ ಅಟ್ಲಾಂಟಿಕ್ ಸಮುದ್ರಕ್ಕೆ 96 ಗಂಟೆಯ ಆಕ್ಸಿಜನ್ ಜೊತೆಗೆ ಹೋಗಿದ್ದ 5 ಬಿಲಿಯನೇರ್‌ಗಳು ಸಾವನ್ನಪ್ಪಿರೋದು ಖಚಿತವಾಗಿತ್ತು. ನಾಲ್ಕೈದು ದಿನ ಅತ್ಯಾಧುನಿಕ ತಂತ್ರಜ್ಞಾನದ ಮುಖಾಂತರ ರಕ್ಷಣಾ ಕಾರ್ಯಾಚರಣೆ ನಡೆದರೂ ಸಫಲವಾಗಿರಲಿಲ್ಲ. ಈ ಶೋಧ ಕಾರ್ಯಾಚರಣೆಯಲ್ಲಿ 5 ಶ್ರೀಮಂತ ಪ್ರವಾಸಿಗರನ್ನ ಬದುಕುಳಿಸಲು ಸಾಧ್ಯವಾಗಲಿಲ್ಲ.

ಟೈಟಾನಿಕ್ ಹಡಗಿನ ಅವಶೇಷಗಳನ್ನು ನೋಡಲು ಹೋಗಿದ್ದ ಟೈಟಾನ್ ಸಬ್‌ಮರ್ಸಿಬಲ್ ಸ್ಫೋಟಗೊಂಡಿತ್ತು. ಸಮುದ್ರದೊಳಗಿನ ಸ್ಫೋಟದಲ್ಲಿ ನಜ್ಜುಗುಜ್ಜಾಗಿದ್ದ ಸಬ್‌ಮರ್ಸಿಬಲ್‌ನ ಅವಶೇಷಗಳನ್ನು ಇದೀಗ ಪತ್ತೆ ಮಾಡಲಾಗಿದೆ. ಸಮುದ್ರದ ಆಳದಿಂದ ಸಬ್‌ಮರ್ಸಿಬಲ್‌ನ ಅವಶೇಷಗಳನ್ನು ಕೆನಡಾಕ್ಕೆ ತರಲಾಗಿದೆ ಎಂದು ಅಮೆರಿಕಾದ ಕರಾವಳಿ ಪಡೆ ತಿಳಿಸಿದೆ.

ಟೈಟಾನ್ ಸಬ್‌ಮರ್ಸಿಬಲ್‌ನ ಅವಶೇಷಗಳನ್ನು, ಛಿದ್ರಗೊಂಡ ಬಿಡಿ ಭಾಗಗಳನ್ನು ಕೆನಡಾದ ಹಡಗಿನ ಮೂಲಕ ಹೊತ್ತು ತರಲಾಗಿದೆ. ಟೈಟಾನ್ ಸಬ್‌ಮರ್ಸಿಬಲ್‌ ಅವಶೇಷಗಳ ಜೊತೆಗೆ ಮಾನವನ ಅವಶೇಷಗಳು ಪತ್ತೆಯಾಗಿರುವ ಸಂಭವವಿದೆ. ಇದೀಗ ಅವಶೇಷಗಳನ್ನು ದುರಂತ ಸಂಭವಿಸಿದ 650 ಕಿಲೋ ಮೀಟರ್ ದೂರಕ್ಕೆ ಕೊಂಡೊಯ್ಯಲಾಗಿದ್ದು, ಅಮೆರಿಕಾದ ಬಂದರಿಗೆ ಸಾಗಿಸಲು ಸಿದ್ಧತೆ ಮಾಡಲಾಗಿದೆ. ಸಬ್‌ಮರ್ಸಿಬಲ್ ಅವಶೇಷಗಳ ಮೂಲಕ ಸ್ಫೋಟಕ್ಕೆ ಕಾರಣವಾದ ಅಂಶಗಳೇನು ಅನ್ನೋದರ ಬಗ್ಗೆ ತನಿಖೆ ನಡೆಸಲಾಗುತ್ತಿದೆ.

ಇದನ್ನೂ ಓದಿ: ಟೈಟಾನ್ ಸಬ್ ಮರ್ಸಿಬಲ್‌ನಲ್ಲಿ ಹೋದವರು ಯಾರು? ಮುಂದುವರಿದ ಶೋಧ; ಆ್ಯಕ್ಸಿಜನ್ ಲೆವೆಲ್ ಇನ್ನು 7 ಗಂಟೆಯಷ್ಟೇ ಬಾಕಿ

ಟೈಟಾನ್ ಸಬ್ ಮರ್ಸಿಬಲ್‌ನಲ್ಲಿ ಪ್ರಯಾಣ ಬೆಳೆಸಿದ್ದ ಐವರು ಫೇಮಸ್ ಬಿಲಿಯನೇರ್‌ಗಳೇ ಆಗಿದ್ದರು. ಬ್ರಿಟಿಷ್ ಬಿಲಿಯನೇರ್ ಹಮೀಶ್‌ ಹಾರ್ಡಿಂಗ್, ಓಷಿಯನ್ ಗೇಟ್ ಎಕ್ಸ್‌ಪಿಡಿಯೇಷನ್ ಸ್ಥಾಪಕ ಸಿಇಓ ಸ್ಟಾಕಟನ್ ರುಶ್ ಪತ್ನಿ, ಪಾಕಿಸ್ತಾನದ ಬ್ಯುಸಿನೆಸ್ ಮೆನ್ ಶಾಹಜಾದ್ ದಾವೂದ್, 19 ವರ್ಷದ ಸುಲೇಮಾನ್ ದಾವೂದ್, ಫ್ರೆಂಚ್ ಡ್ರೈವರ್ ಪೌಲ್ ಹೆನ್ರಿ ನಾರ್ಗೋಲೆಟ್ ಸಬ್ ಮರ್ಸಿಬಲ್‌ನಲ್ಲಿ ಪ್ರಯಾಣ ನಡೆಸಿದ್ದರು. ಇವರು ಸಬ್‌ ಮರ್ಸಿಬಲ್‌ ಸ್ಫೋಟಗೊಳ್ಳುವ ಕೊನೇ 10 ಸೆಕೆಂಡ್‌ನ ಆಡಿಯೋ ಕೂಡ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದು, ಕೊನೆಯ ಗಳಿಗೆಯಲ್ಲಿ ಬಿಲಿಯನರೇಗಳು ಕಿರುಚಾಡಿದ ಶಬ್ಧ ಭಯಾನಕವಾಗಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ 

VIDEO: ಕೊನೇ ಆ 10 ಸೆಕೆಂಡ್‌ನಲ್ಲಿ ಆಗಿದ್ದೇನು?; ಟೈಟಾನ್ ಸಬ್‌ಮರ್ಸಿಬಲ್ ನೌಕೆಯ ಮತ್ತಷ್ಟು ಸ್ಫೋಟಕ ವಿಷಯ ಇಲ್ಲಿದೆ

https://newsfirstlive.com/wp-content/uploads/2023/06/Titan-Sub-1.jpg

Load More