ಗಂಧಮಹೋತ್ಸವದ ವೇಳೆ ಬೆಲ್ಲದಿಂದ ಮಾಡಿದ್ದ ಸಿಹಿ ಪ್ರಸಾದ
ರಾಮನಗರ ಎಂ.ಜಿ ರಸ್ತೆಯಲ್ಲಿರೋ ಪಿಎಸ್‌ವಿ ದರ್ಗಾದಲ್ಲಿ ಘಟನೆ
ಜಿಲ್ಲಾಸ್ಪತ್ರೆಯಲ್ಲಿ ಅಸ್ವಸ್ಥರಾದವವರ ಸಂಖ್ಯೆ ಮತ್ತಷ್ಟು ಏರಿಕೆ
ರಾಮನಗರ: ಪ್ರಸಾದ ಸೇವಿಸಿ 50ಕ್ಕೂ ಹೆಚ್ಚು ಮಂದಿ ಅಸ್ವಸ್ಥರಾದ ಆಘಾತಕಾರಿ ಘಟನೆ ರಾಮನಗರದ ಎಂ.ಜಿ ರಸ್ತೆಯಲ್ಲಿರೋ ಪಿಎಸ್‌ವಿ ದರ್ಗಾದಲ್ಲಿ ನಡೆದಿದೆ. ಹೊಟ್ಟೆನೋವಿನಿಂದ ಒದ್ದಾಡುತ್ತಿದ್ದವರನ್ನ ಕೂಡಲೇ ಜಿಲ್ಲಾಸ್ಪತ್ರೆಗೆ ದಾಖಲು ಮಾಡಲಾಗಿದೆ. ಹಿರಿಯ ಅಧಿಕಾರಿಗಳು ಆಸ್ಪತ್ರೆಗೆ ಭೇಟಿ ನೀಡಿ ರೋಗಿಗಳ ಆರೋಗ್ಯ ವಿಚಾರಿಸಿದ್ದಾರೆ.
ಪಿಎಸ್‌ವಿ ದರ್ಗಾದಲ್ಲಿ ಗಂಧಮಹೋತ್ಸವದ ವೇಳೆ ಬೆಲ್ಲದಿಂದ ಮಾಡಿದ್ದ ಸಿಹಿ ಪ್ರಸಾದವನ್ನು ಹಂಚಲಾಗಿತ್ತು. ಇಂದು ಮಧ್ಯಾಹ್ನ 12 ಗಂಟೆಗೆ ಈ ಪ್ರಸಾದವನ್ನು 70ಕ್ಕೂ ಹೆಚ್ಚು ಮಂದಿ ಸ್ವೀಕರಿಸಿದ್ದರು. ಪ್ರಸಾದ ಸ್ವೀಕರಿಸಿದವರಲ್ಲಿ ಹಲವರು ವಾಂತಿ ಮಾಡಿಕೊಂಡು ಅಸ್ವಸ್ಥರಾಗಿದ್ದಾರೆ. 10ಕ್ಕೂ ಹೆಚ್ಚು ಮಕ್ಕಳು ಸೇರಿದಂತೆ 30ಕ್ಕೂ ಹೆಚ್ಚು ಮಂದಿಗೆ ಆರೋಗ್ಯದಲ್ಲಿ ವ್ಯತ್ಯಾಸವಾಗಿದೆ.
ಪ್ರತಿ ವರ್ಷ ಉರುಸ್ ಹಬ್ಬದ ಪ್ರಯುಕ್ತ ರಾಮನಗರದ ಯಾರಬ್ ನಗರದಲ್ಲಿ ಸಿಹಿ ವಿತರಣೆ ಮಾಡಲಾಗುತ್ತೆ. ಈ ಬಾರಿ ಸಿಹಿ ಸ್ವೀಕರಿಸಿದ 30ಕ್ಕೂ ಹೆಚ್ಚು ಮಂದಿಗೆ ಹೊಟ್ಟೆನೋವು ಹಾಗೂ ವಾಂತಿ ಕಾಣಿಸಿಕೊಂಡಿದೆ. ಜಿಲ್ಲಾಸ್ಪತ್ರೆಯಲ್ಲಿ ಪ್ರಸಾದ ಸ್ವೀಕರಿಸಿ ಅಸ್ವಸ್ಥರಾದವವರ ಸಂಖ್ಯೆ ಮತ್ತಷ್ಟು ಏರಿಕೆಯಾಗಿದೆ. ರಾಮನಗರದ ಜಿಲ್ಲಾಸ್ಪತ್ರೆಯಲ್ಲಿ ಅಸ್ವಸ್ಥರಿಗೆ ಚಿಕಿತ್ಸೆ ನೀಡಲಾಗುತ್ತಿದೆ. ರಾಮನಗರ ಟೌನ್ ಪೊಲೀಸರು ಆಸ್ಪತ್ರೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ