newsfirstkannada.com

ಫ್ರೀ ಬಸ್​​ನಲ್ಲಿ 29 ಕೋಟಿಗೂ ಹೆಚ್ಚು ಮಹಿಳೆಯರು ಪ್ರಯಾಣ; ಸರ್ಕಾರಕ್ಕೆ 687 ಕೋಟಿ ಲಾಸ್​​​!

Share :

03-08-2023

  ರಾಜ್ಯಾದ್ಯಂತ ಶಕ್ತಿ ಯೋಜನೆಗೆ ಭರ್ಜರಿ ರೆಸ್ಪಾನ್ಸ್​​

  29 ಕೋಟಿಗೂ ಹೆಚ್ಚು ಮಹಿಳೆಯರು ಪ್ರಯಾಣ!

  ರಾಜ್ಯ ಸರ್ಕಾರಕ್ಕೆ ಎಷ್ಟು ಕೋಟಿ ಲಾಸ್​ ಗೊತ್ತಾ..?

ಬೆಂಗಳೂರು: ಒಂದೂವರೆ ತಿಂಗಳ ಹಿಂದೆ ಜೂನ್​​ 11ನೇ ತಾರೀಕು ನಾರಿ ಮಣಿಯರಿಗೆ ಕಾಂಗ್ರೆಸ್‌ ಸರ್ಕಾರ ಭರ್ಜರಿ ಗಿಫ್ಟ್‌ ಕೊಟ್ಟಿತ್ತು. ರೆಸ್ಟ್​​ ಇಲ್ಲದ ಹಾಗೇ ರೌಂಡ್ಸ್​​ ಹೊಡೆಯೋಕೆ ಶುರು ಮಾಡಿದ್ರು. ಮತ್ತೊಂದೆಡೆ ಇದೇ ಫ್ರೀ ಬಸ್​ ರಾಜ್ಯದಲ್ಲಿ ನಾನಾ ಚರ್ಚೆಗಳಿಗೆ ದಾರಿ ಮಾಡಿ ಕೊಡ್ತು. ಅದ್ರಲ್ಲೂ ಸಾರಿಗೆ ನಿಗಮಗಳಿಗೆ ಶಕ್ತಿ ಯೋಜನೆ ಸಂಕಟ ತಂದು ಕೊಡ್ತಾ? ತಿಂಗಳಾದ್ರೂ ಹಣ ಬಿಡುಗಡೆ ಆಗಲಿಲ್ಲವೇ ಅನ್ನೋ ಮಾತು ಕೇಳಿ ಬರುತ್ತಿದ್ದಂತೆಯೇ ಈಗ ಸರ್ಕಾರ ಅದಕ್ಕೂ ಉತ್ತರ ಕೊಟ್ಟಿದೆ.

ಅಂತೂ ಇಂತೂ ಸರ್ಕಾರ ಶಕ್ತಿ ಯೋಜನೆ ಟಿಕೆಟ್​​ನ ಒಟ್ಟು ಮೊತ್ತದ ಮೊದಲ ಕಂತನ್ನು ರಿಲೀಸ್​ ಮಾಡಿದೆ. ನಾಲ್ಕೂ ನಿಗಮಗಳು ಒಟ್ಟಾಗಿ ವಿತರಿಸಿರುವ ಶೂನ್ಯ ಟಿಕೆಟ್‌ ದರ 687 ಕೋಟಿಯ 49 ಲಕ್ಷದ 57 ಸಾವಿರದ 753 ರೂಪಾಯಿ ಆಗಿದ್ದು, ಈ ಮೂಲಕ ಮೊದಲ ಕಂತಿನ ಹಣವಾಗಿ 125.48 ಕೋಟಿ ರೂಪಾಯಿ ಬಿಡುಗಡೆ ಮಾಡಿದೆ.

ಯಾವ ನಿಗಮಕ್ಕೆ ಎಷ್ಟು ಸಿಕ್ತು?

ಅಂಕಿ ಅಂಶಗಳ ಪ್ರಕಾರ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮಕ್ಕೆ 47.15 ಕೋಟಿ ರೂಪಾಯಿ ಹಣ ಬಿಡುಗಡೆಯಾದ್ರೆ, ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಗೆ 21.85 ಕೋಟಿ ರೂ. ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಗೆ 32.57 ಕೋಟಿ ರೂಪಾಯಿ ರಿಲೀಸ್​ ಮಾಡಲಾಗಿದೆ. ಹಾಗೇ ಕಲ್ಯಾಣ ಕರ್ನಾಟಕ ಸಾರಿಗೆ ನಿಗಮಕ್ಕೆ 23.90 ಕೋಟಿ ರೂಪಾಯಿ ಬಿಡುಗಡೆ ಮಾಡಲಾಗಿದ್ದು ಈ ಮೂಲಕ ನಾಲ್ಕು ನಿಗಮಗಳಿಗೂ ಪ್ರತೇಕವಾಗಿ ಹಣ ಬಿಡುಗಡೆ ಮಾಡಲಾಗಿದೆ.

ಇನ್ನು ಈವರೆಗೆ 4 ನಿಗಮಗಳಲ್ಲಿ 29 ಕೋಟಿಯ 32 ಲಕ್ಷದ 49 ಸಾವಿರದ 151 ಶಕ್ತಿ ಟಿಕೆಟ್‌ನ ವಿತರಿಸಲಾಗಿದೆ. ಇದ್ರರ ಜೊತೆ ಸಿಎಂ ಸಿದ್ದರಾಮಯ್ಯ ಕೂಡ ಶಕ್ತಿಗೆ ಮತ್ತಷ್ಟು ಪವರ್​ ಕೊಟ್ಟಿದ್ದಾರೆ. ಮಹಿಳೆಯರು, ವಿದ್ಯಾರ್ಥಿಗಳಿಂದ ಶಕ್ತಿಗೆ ಉತ್ತಮ ರೆಸ್ಪಾನ್ಸ್ ಸಿಕ್ತಿದೆ. ಆ ನಿಟ್ಟಿನಲ್ಲಿ ಬಸ್​ ಸಮಸ್ಯೆ ನಿವಾರಿಸಲು 4 ಸಾವಿರ ಹೊಸ ಬಸ್​ ಖರೀದಿಸೋದಾಗಿ ಟ್ವೀಟ್​ ಮಾಡಿ ಜನ್ರಿಗೆ ಸಿಹಿ ಸುದ್ದಿ ನೀಡಿದ್ದಾರೆ.

ಸದ್ಯ ಮೊದಲ ಕಂತನ್ನ ರಿಲೀಸ್‌ ಮಾಡಿರೋ ಸರ್ಕಾರ ಉಳಿದ ಕಂತನ್ನೂ ಅಷ್ಟೇ ಶೀಘ್ರದಲ್ಲಿ ರಿಲೀಸ್ ಮಾಡುತ್ತಾ ಅನ್ನೋ ಕುತೂಹಲ ಇದೆ. ಯಾಕಂದ್ರೆ ಮಾಡದೇ ಇದ್ರೆ ನಿಗಮಗಳಿಗೆ ತೊಂದ್ರೆ ತಪ್ಪಿದ್ದಲ್ಲ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಫ್ರೀ ಬಸ್​​ನಲ್ಲಿ 29 ಕೋಟಿಗೂ ಹೆಚ್ಚು ಮಹಿಳೆಯರು ಪ್ರಯಾಣ; ಸರ್ಕಾರಕ್ಕೆ 687 ಕೋಟಿ ಲಾಸ್​​​!

https://newsfirstlive.com/wp-content/uploads/2023/06/free-bus-4.jpg

Load More