newsfirstkannada.com

ಧಾರಾಕಾರ ಮಳೆಗೆ ಚಿಕ್ಕೋಡಿಯ 7, ಬೆಳಗಾವಿಯ 16ಕ್ಕೂ ಹೆಚ್ಚು ಸೇತುವೆಗಳು ಜಲಾವೃತ

Share :

21-07-2023

    ಬೆಳಗಾವಿ ಭಾಗದಲ್ಲಿ ವರುಣಾರ್ಭಟ ಭಾರೀ ಜೋರು

    ಕೃಷ್ಣಾಗೆ ಅಡ್ಡಲಾಗಿ ನಿರ್ಮಾಣವಾಗಿರುವ ಸೇತುವೆ ಮುಳುಗಡೆ

    ಸೇತುವೆ ಮೇಲೆ ಸಂಚರಿಸದಂತೆ ಪೋಲಿಸ್ ಇಲಾಖೆಯಿಂದ ಸೂಚನೆ

ಮಹಾರಾಷ್ಟ್ರದ ಘಟ್ಟ ಪ್ರದೇಶದಲ್ಲಿ ಕಳೆದ ಒಂದು ವಾರದಿಂದ ಧಾರಾಕಾರ ಮಳೆಯಾಗುತ್ತಿದ್ದು, ಈ ಹಿನ್ನಲೆ ಬೆಳಗಾವಿ ಜಿಲ್ಲೆಯ 16 ಕ್ಕೂ ಹೆಚ್ಚು ಸೇತುವೆಗಳು ಮತ್ತು‌ ಚಿಕ್ಕೋಡಿ ಉಪವಿಭಾಗದ ಏಳು ಸೇತುವೆಗಳು ಜಲಾವೃತಗೊಂಡಿವೆ. ಕೃಷ್ಣಾ, ವೇದಗಂಗಾ, ದೂದಗಂಗಾ, ಪಂಚಗಂಗಾ, ಹಿರಣ್ಯಕೇಶಿ ನದಿಗೆ ಅಡ್ಡಲಾಗಿ ನಿರ್ಮಾಣವಾಗಿರುವ ಸೇತುವೆ ಮುಳುಗಿವೆ.

ಚಿಕ್ಕೋಡಿ ತಾಲೂಕಿನ ಮಲಿಕವಾಡದಲ್ಲಿ ಹರಿಯುತ್ತಿರುವ ದತ್ತವಾಡ, ನಿಪ್ಪಾಣಿ ತಾಲೂಕಿನ ಕಾರದಗಾದ ಮೂಲಕ ಹಾದು ಹೋಗುವ ಭೋಜ ನದಿ, ಸಿದ್ನಾಳದ ಅಕ್ಕೊಳ, ಭೋಜವಾಡಿಯ ಕುನ್ನೂರ, ಜತ್ರಾಟ ಬಳಿ ಹರಿಯುವ ಭೀವಶಿ ಮತ್ತು ಮಮದಾಪುರ ಹುನ್ನರಗಿ ನದಿಗಳು ವೇಗವಾಗಿ ಹರಿಯುತ್ತಿದ್ದು, ಅಲ್ಲಿನ ಸೇತುವೆಗಳು ಮುಳುಗಡೆಯಾಗಿವೆ. ಇದರ ಜೊತೆಗೆ ಕುನ್ನೂರದ ಬಾರವಾಡ ಗ್ರಾಮಗಳಿಗೆ ಸಂಪರ್ಕ ಕಲ್ಪಿಸುವ ಕೆಳ ಹಂತದ ಸೇತುವೆಗಳು ಮುಳುಗಡೆಯಾಗಿವೆ.

ಇನ್ನು ಕೃಷ್ಣಾ, ಘಟಪ್ರಭಾ, ಮಲಪ್ರಭಾ, ವೇದಗಂಗಾ ದೂದಗಂಗಾ ಸೇತುವೆ ಮೇಲೆ ಸಂಚರಿಸದಂತೆ ಪೋಲಿಸ್ ಇಲಾಖೆಯಿಂದ ಸೂಚನೆ ನೀಡಿದ್ದು ಬಂದೋಬಸ್ತ್ ಮಾಡಿವೆ. ಜನವಾಸಿಗರು ಈ ಸೇತುವೆಗಳು ಮುಳುಗಡೆಯಾಗಿದ್ದರಿಂದ ಅನ್ಯ ಮಾರ್ಗದ ಮೂಲಕ ಪ್ರಯಾಣ ಬೆಳೆಸುವಂತಾಗಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಧಾರಾಕಾರ ಮಳೆಗೆ ಚಿಕ್ಕೋಡಿಯ 7, ಬೆಳಗಾವಿಯ 16ಕ್ಕೂ ಹೆಚ್ಚು ಸೇತುವೆಗಳು ಜಲಾವೃತ

https://newsfirstlive.com/wp-content/uploads/2023/07/Bridge-1.jpg

Load More