newsfirstkannada.com

ಒಂದೊಂದು ರೂಪಾಯಿಗೂ ಪರದಾಡ್ತಿರೋ ಪಾಕ್​ಗೆ ಮತ್ತೊಂದು ಸಂಕಷ್ಟ; ಏನದು?

Share :

Published August 24, 2024 at 3:22pm

    ಪಾಕಿಸ್ತಾನದಲ್ಲಿ ಇಂದಿಗೂ ನಿರ್ಮೂಲವಾಗದ ಪೋಲಿಯೋ ಮಹಾಮಾರಿ

    ಈ ವರ್ಷದಲ್ಲೇ 16 ಹೊಸ ಪೋಲಿಯೋ ಪ್ರಕರಣಗಳು ಪಾಕ್​ನಲ್ಲಿ ಪತ್ತೆ

    ಸಿಂಧ, ಹೈದ್ರಾಬಾದ್, ಬಲೂಚಿಸ್ತಾನ್ ಹಾಗೂ ಪಂಜಾಬ್​ ಪ್ರಾಂತ್ಯದಲ್ಲಿ ಪತ್ತೆ

ಇಸ್ಲಾಮಾಬಾದ್​: ಪ್ರಪಂಚದ ಬಹುತೇಕ ರಾಷ್ಟ್ರಗಳು ಪೋಲಿಯೋ ಎಂಬ ಮಹಾಮಾರಿಯಿಂದ ಮುಕ್ತಗೊಂಡಿವೆ. ಭಾರತ 2011ರಲ್ಲಿಯೇ ಪೋಲಿಯೋ ಮುಕ್ತ ರಾಷ್ಟ್ರ ಎಂಬ ಹಣೆಪಟ್ಟಿ ಕಟ್ಟಿಕೊಂಡಿದೆ. ಆದ್ರೆ ನೆರೆಯ ರಾಷ್ಟ್ರಗಳಾದ ಪಾಕಿಸ್ತಾನ ಹಾಗೂ ಅಪಘಾನಿಸ್ತಾನ ಇಂದಿಗೂ ಕೂಡ ಪೋಲಿಯೋ ಅನ್ನೋ ಮಹಾಮಾರಿಯೊಂದಿಗೆ ಹೋರಾಡುತ್ತಲೇ ಇವೆ. ಅತಿ ಹೆಚ್ಚು ಜನಸಂಖ್ಯೆ ಹೊಂದಿರುವ ರಾಷ್ಟ್ರಗಳಾದ ಚೀನಾ ಹಾಗೂ ಭಾರತ ಎರಡೂ ರಾಷ್ಟ್ರಗಳು ಪೋಲಿಯೋ ಎಂಬ ಮಹಾಮಾರಿಯನ್ನು ಸರಳವಾಗಿ ಸೋಲಿಸಿದರು, ಈ ನೆರೆಯ ರಾಷ್ಟ್ರಗಳಲ್ಲಿ ಕಡಿಮೆ ಜನಸಂಖ್ಯೆ ಇದ್ದರೂ ಕೂಡ ಇನ್ನೂ ಈ ಮಹಾಮಾರಿ ಅಲ್ಲಿ ತನ್ನ ಹುಚ್ಚು ನರ್ತನವನ್ನು ಮುಂದುವರಿಸಿದೆ.

ಇದನ್ನೂ ಓದಿ: ಪಾಪ್​ ಸಿಂಗರ್​ ಜಸ್ಟಿನ್ ಬೀಬರ್ ಮನೆಗೆ ಹೊಸ ಅತಿಥಿ ಆಗಮನ; ಪುತ್ರನ ಹೆಸರು ಏನು ಗೊತ್ತಾ?

ಪಾಕಿಸ್ತಾನದಲ್ಲಿ ಇಂದಿಗೂ ಕೂಡ ಹೊಸ ಪೋಲಿಯೋ ಪ್ರಕರಣಗಳು ದಾಖಲಾಗುತ್ತಿವೆ. ಒಂದೇ ವರ್ಷದಲ್ಲಿ 16 ಹೊಸ ಪೋಲಿಯೋ ದಾಖಲಾಗಿವೆ. ಇತ್ತೀಚೆಗೆ ಸಿಂಧ ಪ್ರಾಂತ್ಯದಲ್ಲಿ ಹಸುಗೂಸಿನಲ್ಲಿ ಪತ್ತೆಯಾದ ಪೋಲಿಯೋ ವೈರಸ್ ದೇಶದಲ್ಲಿ 2024ರ ವರ್ಷದಲ್ಲಿ ಪೋಲಿಯೋಗೆ ಈಡಾದ ಹದಿನಾರನೇ ಪ್ರಕರಣ ಎಂದು ಹೇಳಲಾಗುತ್ತಿದೆ.

ಇದನ್ನೂ ಓದಿ: 120 ವರ್ಷಗಳ ಬಳಿಕ ವಿಶ್ವದ 2ನೇ ಅತಿ ದೊಡ್ಡ ವಜ್ರ ಪತ್ತೆ; ಏನಿದರ ವಿಶೇಷ?

ದಕ್ಷಿಣ ಏಷಿಯಾದ ಒಟ್ಟು 62 ಜಿಲ್ಲೆಗಳಲ್ಲಿ ಇನ್ನೂ ಪೋಲಿಯೋ ಸಂಪೂರ್ಣವಾಗಿ ತೊಳೆದು ಹಾಕಲು ಆಗಿಲ್ಲ. ಪಾಕಿಸ್ತಾನದವೊಂದರಲ್ಲಿಯೇ ಸುಮಾರು 16 ಕೇಸ್​ಗಳು ಈ ವರ್ಷ ಪತ್ತೆಯಾಗಿವೆ. ಹೈದ್ರಾಬಾದ್ ಪ್ರಾಂತ್ಯದಲ್ಲಿ ಒಂದು, ಸಿಂಧ ಪ್ರಾಂತ್ಯದಲ್ಲಿ ಮೂರು ಹಾಗೂ ಬಲೂಚಿಸ್ತಾನ ಪ್ರಾಂತ್ಯದಲ್ಲಿ ಒಟ್ಟು 12 ಪ್ರಕರಣಗಳು ಇತ್ತೀಚೆಗಷ್ಟೇ ಕಂಡು ಬಂದಿವೆ.

ವ್ಯಾಕ್ಸಿನ್ ಅಭಿಯಾನ ಸಮರ್ಪಕವಾಗಿ ನಡೆದಿದ್ದರೂ ಕೂಡ ಇಂದಿಗೂ ಪೋಲಿಯೋವನ್ನು ಪಾಕಿಸ್ತಾನದಲ್ಲಿ ಸಂಪೂರ್ಣವಾಗಿ ನಾಶ ಮಾಡಲು ಸಾಧ್ಯವಾಗಿಲ್ಲ. ಈ ಹಿನ್ನೆಲೆ ಪೋಲಿಯೋ ಲಿಸಿಕೆಯ ಅಭಿಯಾನವನ್ನು ಮತ್ತಷ್ಟು ವೇಗವಾಗಿ ನಡೆಸಬೇಕು ಎಂದು ಅಲ್ಲಿನ ಸರ್ಕಾರ ಆದೇಶ ನೀಡಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಒಂದೊಂದು ರೂಪಾಯಿಗೂ ಪರದಾಡ್ತಿರೋ ಪಾಕ್​ಗೆ ಮತ್ತೊಂದು ಸಂಕಷ್ಟ; ಏನದು?

https://newsfirstlive.com/wp-content/uploads/2024/08/PAKISTAN-POLIO-CASES-1.jpg

Load More