newsfirstkannada.com

ಹೊಲದಲ್ಲಿ ಮೇಯ್ದ 200ಕ್ಕೂ ಹೆಚ್ಚು ಕುರಿಗಳು ದಿಢೀರ್​ ಸಾವು; ಇದಕ್ಕೆ ಕಾರಣವೇನು ಗೊತ್ತಾ?

Share :

27-08-2023

    ನೀರು ಕುಡಿದು ಮುಂದೆ‌‌ ಸಾಗುತ್ತಲೇ ಪ್ರಾಣ ಬಿಟ್ಟ ಕುರಿಗಳು!

    ಮುಂಡರಗಿ ತಾಲೂಕಿನ ಬೀಡನಾಳ ಗ್ರಾಮದ ಬಳಿ ಘಟನೆ

    ಏಕಾಏಕಿ 200ಕ್ಕೂ ಹೆಚ್ಚು ಸಾವನ್ನಪ್ಪಿದ್ದಕ್ಕೆ ಮಾಲೀಕರಿಗೆ ಆತಂಕ!

ಗದಗ: ಸೂರ್ಯಕಾಂತಿ ಕಟಾವು ಮಾಡಿದ ಹೊಲದಲ್ಲಿ ಮೇಯ್ದ 200ಕ್ಕೂ ಹೆಚ್ಚು ಕುರಿಗಳು ದಿಢೀರ್ ಸಾವನ್ನಪ್ಪಿರೋ ಘಟನೆ ಮುಂಡರಗಿ ತಾಲೂಕಿನ ಬೀಡನಾಳ ಗ್ರಾಮದ ಬಳಿ ನಡೆದಿದೆ.

ಸೂರ್ಯಕಾಂತಿ ಕಟಾವ್ ಮಾಡಿದ ಜಮೀನಿನಲ್ಲಿ‌ ಮೇಯ್ದು‌ ಬಳಿಕ ಹಳ್ಳದಲ್ಲಿ ಹರಿಯುವ ನೀರು ಕುಡಿದಿದ್ದ ಕುರಿಗಳು ಮೃತಪಟ್ಟಿವೆ. ಇನ್ನು ನೀರು ಕುಡಿದು ಮುಂದೆ‌‌ ಸಾಗುತ್ತಲೇ ಕುರಿಗಳು ಏಕಾಏಕಿ ಪ್ರಾಣಬಿಟ್ಟಿವೆ. ಮೃತಪಟ್ಟ 200ಕ್ಕೂ ಹೆಚ್ಚು ಕುರಿಗಳು ಸುಮಾರು 20ಕ್ಕೂ ಹೆಚ್ಚು ರೈತರಿಗೆ ಸೇರಿವೆ. ಸಾವನ್ನಪ್ಪಿರೋ 200 ಕುರಿಗಳು ಹೊಟ್ಟೆ ಉಬ್ಬಿರೋ ರೀತಿಯಲ್ಲಿ ಕಾಣಿಸಿಕೊಂಡಿವೆ.

ವಿಷಯ ತಿಳಿದ ಕೂಡಲೇ ಘಟನಾ ಸ್ಥಳಕ್ಕೆ ಸ್ಥಳಕ್ಕೆ ಪಶು ವೈದ್ಯರು ಹಾಗೂ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಮಾಲೀಕರು ಸುಮಾರು 2 ಸಾವಿರ ಕುರಿಗಳನ್ನ ಮೇಯಿಸಲು ಕರೆದುಕೊಂಡು ಹೋಗಿದ್ದರು. ಈ ಪೈಕಿ 200 ಕ್ಕೂ ಹೆಚ್ಚು ಕುರಿಗಳು ಹೊಲದಲ್ಲಿ ಮೇಯ್ದ ದಾರುಣವಾಗಿ ಸಾವನ್ನಪ್ಪಿವೆ. ತಮ್ಮ ಕುರಿಗಳನ್ನು ಕಳೆದುಕೊಂಡು ಮಾಲೀಕರು ಕಣ್ಣೀರು ಹಾಕುತ್ತಿದ್ದಾರೆ. ಕುರಿಗಳ ಸಾವಿಗೆ ಕಾರಣ ತಿಳಿದುಬರಬೇಕಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಹೊಲದಲ್ಲಿ ಮೇಯ್ದ 200ಕ್ಕೂ ಹೆಚ್ಚು ಕುರಿಗಳು ದಿಢೀರ್​ ಸಾವು; ಇದಕ್ಕೆ ಕಾರಣವೇನು ಗೊತ್ತಾ?

https://newsfirstlive.com/wp-content/uploads/2023/08/death-17.jpg

Load More