newsfirstkannada.com

Morocco Earthquake: ಸಾವನ್ನಪ್ಪಿದವರ ಸಂಖ್ಯೆ 632 ಏರಿಕೆ.. ಸಂತಾಪ ಸೂಚಿಸಿದ ಪ್ರಧಾನಿ ಮೋದಿ

Share :

09-09-2023

  ಮೊರಾಕ್ಕೊ ಒಳಾಡಳಿತ ಸಚಿವಾಲಯ ಹಂಚಿಕೊಳ್ತು ಮಾಹಿತಿ

  ಭಯಾನಕ ಭೂಕಂಪನಕ್ಕೆ ತತ್ತರಿಸಿ ಹೊಸ ಮೊರಾಕ್ಕೊ ಜನರು

  ಶುಕ್ರವಾರ ರಾತ್ರಿ ನಡೆದ ಅವಘಡದ, 300ಕ್ಕೂ ಅಧಿಕ ಜನರಿಗೆ ಗಾಯ

ಭಯಾನಕ ಭೂಕಂಪನದಿಂದ ಮೊರಕ್ಕೊ ತತ್ತರಿಸಿದೆ. ಶುಕ್ರವಾರ ರಾತ್ರಿ ನಡೆದ ಈ ಅವಘಡದಲ್ಲಿ ಅನೇಕರು ಸಾವನ್ನಪ್ಪಿದ್ದು, ಇಲ್ಲಿಯವರೆಗೆ 600ಕ್ಕೂ ಹೆಚ್ಚು ಜನರು ಭೀಕರತೆಗೆ ಬಲಿಯಾಗಿದ್ದಾರೆ.
ಮೊರಾಕ್ಕೊ ಒಳಾಡಳಿತ ಸಚಿವಾಲಯ ಶನಿವಾರದಂದು ಭೂಕಂಪನದಿಂದಾದ ಸಾವು ನೋವಿನ ಬಗ್ಗೆ ಮಾಹಿತಿ ಹಂಚಿಕೊಂಡಿದೆ. ಸದ್ಯದ ಮಾಹಿತಿ ಪ್ರಕಾರ 632 ಜನರು ಈ ಭಯಾನಕ ಭೂಕಂಪನಕ್ಕೆ ಸಾವನ್ನಪ್ಪಿದ್ದಾರೆ ಎಂದು ತಿಳಿಸಿದೆ.

300ಕ್ಕೂ ಅಧಿಕ ಜನರು ಗಾಯಗೊಂಡಿದ್ದು, ವಿವಿಧ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇನ್ನು ಭೂಕಂಪನಕ್ಕೆ ನಗರಗಳು ಪಟ್ಟಣಗಳು ಸೇರಿದಂತೆ ಭಾರೀ ಪ್ರಮಾಣದಲ್ಲಿ ಹಾನಿಯಾಗಿದೆ ಎಂದು ತಿಳಿಸಿದೆ.

ಸಂತಾಪ ಸೂಚಿಸಿದ ಪ್ರಧಾನಿ

ನವದೆಹಲಿಯಲ್ಲಿ ಇಂದು ಜಿ20 ಶೃಂಗಸಭೆ ನಡೆಯುತ್ತಿದ್ದು, 21 ರಾಷ್ಟ್ರಗಳು ಈ ಸಭೆಯಲ್ಲಿ ಭಾಗಿಯಾಗಿವೆ. ಈ ವೇಳೆ ಪ್ರಧಾನಿ ನರೇಂದ್ರ ಮೋದಿ ಮೊರಾಕ್ಕೊ ಭೂಕಂಪನವನ್ನು ಪ್ರಸ್ತಾಪಿಸಿದ್ದು, ಸಂತಾಪ ಸೂಚಿಸಿದ್ದಾರೆ.

ಟ್ವೀಟ್​ ಕೂಡ ಮಾಡಿರುವ ಪ್ರಧಾನಿ ಮೋದಿ ‘ಮೊರಾಕ್ಕೊದಲ್ಲಿ ಸಂಭವಿಸಿದ ಭೂಕಂಪದಿಂದಾಗಿ ಪ್ರಾಣಹಾನಿಯಿಂದ ತೀವ್ರ ನೋವಾಗಿದೆ. ಈ ದುರಂತದ ಸಮಯದಲ್ಲಿ, ನನ್ನ ಆಲೋಚನೆಗಳು ಮೊರಾಕ್ಕೊದ ಜನರೊಂದಿಗೆ ಇದೆ. ತಮ್ಮ ಪ್ರೀತಿಪಾತ್ರರನ್ನು ಕಳೆದುಕೊಂಡವರಿಗೆ ಸಂತಾಪ ಸೂಚಿಸುತ್ತಿದ್ದೇನೆ. ಗಾಯಾಳುಗಳು ಆದಷ್ಟು ಬೇಗ ಚೇತರಿಸಿಕೊಳ್ಳಲಿ. ಈ ಸಂಕಷ್ಟದ ಸಮಯದಲ್ಲಿ ಮೊರಾಕ್ಕೊಗೆ ಸಾಧ್ಯವಿರುವ ಎಲ್ಲ ನೆರವು ನೀಡಲು ಭಾರತ ಸಿದ್ಧವಿದೆ ಎಂದು ಬರೆದುಕೊಂಡಿದ್ದಾರೆ.
https://twitter.com/AEzenyili/status/1700404766889607338?s=20
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Morocco Earthquake: ಸಾವನ್ನಪ್ಪಿದವರ ಸಂಖ್ಯೆ 632 ಏರಿಕೆ.. ಸಂತಾಪ ಸೂಚಿಸಿದ ಪ್ರಧಾನಿ ಮೋದಿ

https://newsfirstlive.com/wp-content/uploads/2023/09/Morocco.jpg

Load More