newsfirstkannada.com

ಭಾರೀ ಭೂಕಂಪಕ್ಕೆ ತತ್ತರಿಸಿದ ಆಫ್ರಿಕಾದ ಮೊರಾಕ್ಕೋ; 2000ಕ್ಕೂ ಅಧಿಕ ಮಂದಿ ದುರ್ಮರಣ

Share :

10-09-2023

    ಸುಖ ನಿದ್ರೆಯಲ್ಲಿರುವಾಗಲೇ ಉಸಿರು ಚೆಲ್ಲಿದ ಸಾವಿರಾರು ಮಂದಿ

    ಸಾವಿರಾರು ಮಂದಿಗೆ ಗಂಭೀರ ಗಾಯ, ಆಸ್ಪತ್ರೆಗೆ ದಾಖಲು

    ಭೀಕರ ಭೂಕಂಪದಲ್ಲಿ ಮೃತಪಟ್ಟವರಿಗೆ ಪ್ರಧಾನಿ ಮೋದಿ ಸಂತಾಪ

ರಾತ್ರಿ ಸುಖ ನಿದ್ರೆಯಲ್ಲಿದ್ದ ಜನರ ಮೇಲೆ ಯಮರಾಜ ಭೂಕಂಪನ ರೂಪದಲ್ಲಿ ದಾಳಿ ಮಾಡಿದ್ದಾನೆ. ರಾತ್ರೋರಾತ್ರಿ ಸಂಭವಿಸಿದ ಭೂಕಂಪನಕ್ಕೆ ಆಫ್ರಿಕಾದ ಮೊರಾಕ್ಕೋ ತತ್ತರಿಸಿದೆ. ನೋಡ ನೋಡ್ತಿದ್ದಂತೆ ಕಟ್ಟಡಗಳು ಧರಾಶಾಹಿಯಾಗ್ತಿದ್ದು ಜನರು ದಿಕ್ಕೇ ತೋಚದಂತೆ ಚೆಲ್ಲಾಪಿಲ್ಲಿಯಾಗಿ ಓಡ್ತಿದ್ದಾರೆ. ಒಂದು ಭೂಕಂಪ ಇಡೀ ನಗರವನ್ನೇ ಅಧ್ವಾನ ಮಾಡಿದೆ. ಈಗ ಮೊರಾಕ್ಕೋ ತತ್ತರಿಸಿದೆ.

ಕಳೆದ ತಡರಾತ್ರಿ ಸಂಭವಿಸಿದ 6.8 ತೀವ್ರತೆಯ ಪ್ರಬಲ ಭೂಕಂಪದಿಂದಾಗಿ ಮೊರಾಕ್ಕೋ ಅಕ್ಷರಶಃ ನರಕಸದೃಶವಾಗಿ ಮಾರ್ಪಟ್ಟಿದೆ. ಆರಾಮಾಗಿ ಮನೆಮಂದಿಯೆಲ್ಲ ಮನೆಯಲ್ಲಿ ಸುಖನಿದ್ರೆಗೆ ಜಾರಿದಾಗ ಭೂಕಂಪದ ರೂಪದಲ್ಲಿ ವಕ್ಕರಿಸಿದ ಜವರಾಯನ ಅಟ್ಟಹಾಸಕ್ಕೆ ನೂರಾರು ಮಂದಿ ಉಸಿರು ಚೆಲ್ಲಿದ್ದಾರೆ. ನೂರಾರು ಮಂದಿ ಆಸ್ಪತ್ರೆಯ ಪಾಲಾಗಿ ನೋವಿನಲ್ಲಿ ನರಳುತ್ತಿದ್ದಾರೆ.

ಭಾರೀ ಭೂಕಂಪಕ್ಕೆ 800ಕ್ಕೂ ಅಧಿಕ ಮಂದಿ ದುರ್ಮರಣ

ಆಫ್ರಿಕಾದ ಮೊರಾಕ್ಕೋದಲ್ಲಿ ಸಂಭವಿಸಿದ ಭಾರೀ ಭೂಕಂಪನಕ್ಕೆ ಇದುವರೆಗೂ 2000 ಮಂದಿ ಸಾವನ್ನಪ್ಪಿದ್ದಾರೆ. ಮರ್ರಾಕೆಶ್​, ಅಲ್-ಹೌಜ್, ಔರ್ಜಾಜೆಟ್, ಅಜಿಲಾಲ್, ಚಿಚೌವಾ ಮತ್ತು ತಾರೌಡಾಂಟ್ ಎಂಬ ಪ್ರದೇಶದಲ್ಲಿ ಈ ಭೂಕಂಪವಾಗಿದೆ. ಕಟ್ಟಡಗಳ ಅವಶೇಷಗಳು ಬಿದ್ದು ಕೆಲವರು ಮಲಗಿದ್ದಲ್ಲೇ ಪ್ರಾಣ ಬಿಟ್ರೆ ಇನ್ನೂ ಕೆಲವರು ಆಸ್ಪತ್ರೆಗೆ ದಾಖಲಿಸುವ ಮಾರ್ಗ ಮಧ್ಯದಲ್ಲೇ ಉಸಿರು ಚೆಲ್ಲಿದ್ದಾರೆ.

ಮಾತ್ರವಲ್ಲದೇ 2,028ಕ್ಕೂ ಅಧಿಕ ಜನರು ಗಾಯಗೊಂಡಿದ್ದು ಆಸ್ಪತ್ರೆಗೆ ದಾಖಲಾಗಿದ್ದಾರೆ. ಅದರಲ್ಲಿ 1404 ಮಂದಿ ಸಾವು-ನೋವಿನ ಸನಿಹದಲ್ಲಿದ್ದಾರೆ ಎಂದು ತಿಳಿದುಬಂದಿದೆ. ಅಲ್ಲದೇ ಭೂಕಂಪನದಿಂದ ವಿದ್ಯುತ್ ಮತ್ತು ದೂರವಾಣಿ ಸಂಪರ್ಕವೂ ಕಡಿತಗೊಂಡಿದೆ. ಭೂಕಂಪ ಎಷ್ಟು ಪ್ರಬಲವಾಗಿದೆ ಅಂದ್ರೆ, ಮರ್ರಾಕೇಚ್​ನಿಂದ ಸುಮಾರು 350 ಕಿಲೋಮೀಟರ್ ದೂರದ ರಾಜಧಾನಿ ರಬಾತ್‌ನಲ್ಲಿಯೂ ಇದರ ಪ್ರಭಾವ ಕಂಡುಬಂದಿದೆ. ಇನ್ನು ಭೂಕಂಪನಕ್ಕೆ ಪೀಡಿತವಾದ ಪ್ರದೇಶ ಪ್ರವಾಸಿ ತಾಣವಾಗಿದ್ದು ಫ್ರಾನ್ಸ್​, ಚೀನಾ, ಭಾರತ ಸೇರಿದಂತೆ ಹಲವು ದೇಶಗಳ ಪ್ರವಾಸಿಗರು ಸಿಲುಕಿದ್ದಾರೆ.

ಭರದಿಂದ ಸಾಗಿದ ಜನರ ರಕ್ಷಣಾ ಕಾರ್ಯಾಚರಣೆ

ನೋಡನೋಡ್ತಿದ್ದಂತೆ ಕಟ್ಟಡಗಳು ಕುಸಿಯುತ್ತಿದ್ದು ಜನರು ಭಯ-ಭೀತಿಯಿಂದ ಚೆಲ್ಲಾಪಿಲ್ಲಿಯಾಗಿ ಮನೆಯಿಂದ ಹೊರ ಓಡಿದ್ದಾರೆ. ಇನ್ನೂ ಕೆಲವರು ಯಾವುದೇ ಕಟ್ಟಡಗಳಿಲ್ಲದ ಪಾರ್ಕ್​ಗಳಲ್ಲಿ ಆಶ್ರಯ ಪಡೆದಿದ್ದಾರೆ. ಮನೆಗಳು, ಕಟ್ಟಡಗಳ ಅವಶೇಷಗಳ ಅಡಿಯಲ್ಲಿ ಹಲವಾರು ಜನರು ಸಿಲುಕಿಕೊಂಡಿದ್ದು ರಕ್ಷಣಾ ಕಾರ್ಯಗಳು ಭರದಿಂದ ನಡೆಯುತ್ತಿವೆ. ಸಾವು ನೋವಿನ ಸಂಖ್ಯೆ ಹೆಚ್ಚಾಗುವ ಸಾಧ್ಯತೆಗಳಿಗೆ ಎಂದು ಮೊರಾಕ್ಕೊ ಪೊಲೀಸರು ಹೇಳಿದ್ದಾರೆ.

ಮೃತಪಟ್ಟವರಿಗೆ ಸಂತಾಪ ಸೂಚಿಸಿದ ಪ್ರಧಾನಿ ಮೋದಿ

ಭೂಕಂಪದಿಂದ ಮೃತಪಟ್ಟವರಿಗೆ ಭಾರತದ ಪ್ರಧಾನಿ ನರೇಂದ್ರ ಮೋದಿ ಸಂತಾಪ ಸೂಚಿಸಿದ್ದಾರೆ. ಸಾಮಾಜಿಕ ಮಾಧ್ಯಮ ಎಕ್ಸ್‌ನಲ್ಲಿ ಟ್ವೀಟ್‌ ಮಾಡಿರುವ ಅವರು, ಮೊರಾಕ್ಕೋದಲ್ಲಿ ಭೂಕಂಪದಿಂದ ಆಗಿರುವ ಜೀವಹಾನಿಯಿಂದ ತೀವ್ರ ನೋವಾಗಿದೆ. ತಮ್ಮ ಪ್ರೀತಿ ಪಾತ್ರರನ್ನು ಕಳೆದುಕೊಂಡವರಿಗೆ ಸಂತಾಪಗಳು. ಗಾಯಾಳುಗಳು ಆದಷ್ಟು ಬೇಗ ಚೇತರಿಸಿಕೊಳ್ಳಲಿ. ಈ ಕಷ್ಟದ ಸಮಯದಲ್ಲಿ ಮೊರಾಕ್ಕೋಗೆ ಸಾಧ್ಯವಿರುವ ಎಲ್ಲ ನೆರವು ನೀಡಲು ಭಾರತ ಸಿದ್ಧವಾಗಿದೆ ಎಂದು ತಿಳಿಸಿದ್ದಾರೆ. ಒಟ್ಟಾರೆ ಪ್ರವಾಸಿ ತಾಣ ಮೊರಾಕ್ಕೋದಲ್ಲಿ ಭೂಕಂಪನ ಸಂಭವಿಸಿ 800ಕ್ಕೂ ಅಧಿಕ ಮಂದಿಯನ್ನು ಬಲಿ ಪಡೆದಿದೆ. ಇನ್ನೂ ಕೂಡ ಸಾವಿನ ಸಂಖ್ಯೆ ಹೆಚ್ಚಾಗುವ ಸಾಧ್ಯತೆ ಇದೆ ಅಂತ ಪೊಲೀಸರು ತಿಳಿಸಿದ್ದು ಸರ್ಕಾರ ಹಾಗೂ ರಕ್ಷಣಾ ತಂಡಗಳು ರಕ್ಷಣೆಯಲ್ಲಿ ತೊಡಗಿವೆ. ಭಾರತ, ಇಂಗ್ಲೆಂಡ್​ ಸೇರಿದಂತೆ ವಿವಿಧ ದೇಶಗಳು ಮೊರಾಕ್ಕೋ ನೆರವಿಗೆ ಧಾವಿಸಿವೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಭಾರೀ ಭೂಕಂಪಕ್ಕೆ ತತ್ತರಿಸಿದ ಆಫ್ರಿಕಾದ ಮೊರಾಕ್ಕೋ; 2000ಕ್ಕೂ ಅಧಿಕ ಮಂದಿ ದುರ್ಮರಣ

https://newsfirstlive.com/wp-content/uploads/2023/09/morocco-earthquake-2.jpg

Load More