ಸನಾತನ ಧರ್ಮ ಡೆಂಗ್ಯೂ, ಮಲೇರಿಯಾ ಇದ್ದಂತೆ ಎಂದಿದ್ದರು
‘ಸನಾತನ’ ವಿರೋಧಿಸಿದರೆ ಸಾಲಲ್ಲ. ನಿರ್ಮೂಲನೆ ಮಾಡಬೇಕು
DMK ಅಂದ್ರೆ ಡೆಂಗ್ಯೂ, ಮಲೇರಿಯಾ ಸೊಳ್ಳೆ ಎಂದಿದ್ದ ಅಣ್ಣಾಮಲೈ
ಸನಾತನ ಧರ್ಮ ಡೆಂಗ್ಯೂ, ಮಲೇರಿಯಾ ಇದ್ದಂತೆ ಎಂದಿದ್ದ ತಮಿಳುನಾಡು ಸಚಿವ ಉದಯನಿಧಿ ಸ್ಟಾಲಿನ್ ಅವರು ವಿರೋಧಿಗಳಿಗೆ ಮತ್ತೆ ಸೆಡ್ಡು ಹೊಡೆದಿದ್ದಾರೆ. ಸನಾತನ ಧರ್ಮವನ್ನು ಡೆಂಗ್ಯೂ, ಮಲೇರಿಯಾಗೆ ಹೋಲಿಸಿದ್ದ ಡಿಎಂಕೆ ನಾಯಕನ ವಿಡಿಯೋ ದೇಶಾದ್ಯಂತ ವೈರಲ್ ಆಗಿತ್ತು. ಸನಾತನ ಧರ್ಮ ವಿವಾದಕ್ಕೆ ತೀವ್ರ ಆಕ್ರೋಶ ವ್ಯಕ್ತವಾದ ಮೇಲೆ ರಾಜಕೀಯ ತಿರುವು ಪಡೆದುಕೊಂಡಿತ್ತು. ಉರಿಯುತ್ತಿರೋ ಸನಾತನ ಧರ್ಮದ ಜ್ವಾಲೆಯನ್ನು ಉದಯನಿಧಿ ಅವರು ಮತ್ತೊಂದು ಹಂತಕ್ಕೆ ತೆಗೆದುಕೊಂಡು ಹೋಗಿದ್ದಾರೆ.
ಇದನ್ನೂ ಓದಿ: BREAKING: ‘ಸನಾತನ’ ಧರ್ಮ ಸಮರ.. ಏಡ್ಸ್, ಕುಷ್ಠರೋಗಕ್ಕೆ ಹೋಲಿಸಿದ ಡಿಎಂಕೆಯ ಮತ್ತೊಬ್ಬ ನಾಯಕ
ಸೋಷಿಯಲ್ ಮೀಡಿಯಾ X ಖಾತೆಯಲ್ಲಿ ಉದಯನಿಧಿ ಸ್ಟಾಲಿನ್ ಅವರು ಸೊಳ್ಳೆ ಬತ್ತಿ ಉರಿಯುತ್ತಿರೋ ಪೋಸ್ಟ್ ಒಂದನ್ನ ಮಾಡಿದ್ದಾರೆ. ಇದು ತೀವ್ರ ಚರ್ಚೆಗೆ ಗ್ರಾಸವಾಗಿದೆ. ಸನಾತನ ಧರ್ಮ ಡೆಂಗ್ಯೂ, ಮಲೇರಿಯಾ ಇದ್ದಂತೆ. ಅದನ್ನು ವಿರೋಧಿಸಿದರೆ ಸಾಲಲ್ಲ. ನಿರ್ಮೂಲನೆಯೇ ಮಾಡಬೇಕು ಎಂದು ಉದಯನಿಧಿ ಸ್ಟಾಲಿನ್ ಹೇಳಿಕೆ ನೀಡಿದ್ದರು. ಈ ವಿವಾದಾತ್ಮಕ ಹೇಳಿಕೆ ಬೆನ್ನಲ್ಲೇ ಸೊಳ್ಳೆ ಬತ್ತಿಯನ್ನು ಪೋಸ್ಟ್ ಮಾಡುವ ಮೂಲಕ ಡೆಂಗ್ಯೂ, ಮಲೇರಿಯಾ ನಿರ್ಮೂಲನೆಯ ಅಸ್ತ್ರ ಇದೇ ಅನ್ನೋ ಸಂದೇಶ ಸಾರಿದ್ದಾರೆ.
— Udhay (@Udhaystalin) September 11, 2023
ಸನಾತನ ಧರ್ಮದ ಬಗ್ಗೆ ಉದಯನಿಧಿ ಸ್ಟಾಲಿನ್ ನೀಡಿದ ಹೇಳಿಕೆ ತೀವ್ರ ಸಂಚಲನ ಮೂಡಿಸಿದೆ. ಹಿಂದೂ ಸಂಘಟನೆಗಳು ಉದಯನಿಧಿ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ. ಅಯೋಧ್ಯೆ ದೇವಸ್ಥಾನದ ಅರ್ಚಕರು ಉದಯನಿಧಿ ಸ್ಟಾಲಿನ್ ತಲೆ ಕಡಿದು ತಂದವರಿಗೆ 10 ಕೋಟಿ ರೂಪಾಯಿ ಬಹುಮಾನವನ್ನು ಘೋಷಿಸಿದ್ದಾರೆ. ತಮಿಳುನಾಡು ಬಿಜೆಪಿ ರಾಜ್ಯಾಧ್ಯಕ್ಷ ಅಣ್ಣಾಮಲೈ ಅವರು ಡಿಎಂಕೆ ಅಂದ್ರೆ ಡೆಂಗ್ಯೂ, ಮಲೇರಿಯಾ ಸೊಳ್ಳೆ ಎಂದೇ ವ್ಯಂಗ್ಯವಾಡಿದ್ದರು. ಇಷ್ಟೆಲ್ಲಾ ವಿವಾದ ಸೃಷ್ಟಿಯಾದ ಮೇಲೂ ಉದಯನಿಧಿ ಸ್ಟಾಲಿನ್ ತಮ್ಮ ಹೇಳಿಕೆಯನ್ನು ಸಮರ್ಥಿಸಿಕೊಳ್ಳುತ್ತಿದ್ದಾರೆ. ಇದೀಗ ಸೊಳ್ಳೆಗಳ ನಿರ್ಮೂಲನೆಗೆ ಬಳಸೋ ಸೊಳ್ಳೆ ಬತ್ತಿಯನ್ನು ಪೋಸ್ಟ್ ಮಾಡೋ ಮೂಲಕ ವಿರೋಧಿಗಳಿಗೆ ಖಡಕ್ ತಿರುಗೇಟು ನೀಡಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ