ನೇಣು ಬಿಗಿದುಕೊಂಡ ಸ್ಥಿತಿಯಲ್ಲಿ ಶವ ತಾಯಿ ಮತ್ತು ಇಬ್ಬರು ಮಕ್ಕಳ ಶವ ಪತ್ತೆ!
ಮೇಘಾ ಮತ್ತು ಇಬ್ಬರು ಮಕ್ಕಳ ಸಾವಿನ ಬಗ್ಗೆ ತವರು ಮನೆಯವರ ಸಂಶಯ!
ಇದು ಆತ್ಮಹತ್ಯೆಯಲ್ಲ ಕೊಲೆ, ತನಿಖೆ ನಡೆಸುತ್ತಿರೋ ತೆರಕಣಾಂಬಿ ಪೊಲೀಸ್!
ಚಾಮರಾಜನಗರ: ಮದುವೆಯಾಗಿ ಎಂಟು ವರ್ಷ. ಆ ಕುಟುಂಬಕ್ಕೆ ಮುದ್ದಾದ ಎರಡು ಕಂದಮ್ಮಗಳು. ಆದರೆ ಪತಿಯ ಹಣದ ದಾಹ ಆಕೆಯ ಜೀವವನ್ನೇ ಬಲಿ ಪಡೆದಿದೆ. ಜಿಲ್ಲೆಯಲ್ಲಿ ಎರಡು ಮಕ್ಕಳು ಹಾಗೂ ಪತ್ನಿ ಬಾರದ ಲೋಕಕ್ಕೆ ತೆರಳಿದ್ದು ಗಂಡ ಎನಿಸಿಕೊಂಡವ ಪೊಲೀಸರ ಅತಿಥಿಯಾಗಿದ್ದಾನೆ. ಇನ್ನು, ಮೃತಳ ಕುಟುಂಬಸ್ಥರು ಇದೊಂದು ವ್ಯವಸ್ಥಿತ ಕೊಲೆ ಅಂತ ಆರೋಪ ಮಾಡ್ತಿದ್ದಾರೆ. ಯಾವ ತಂದೆ-ತಾಯಿನೂ ತಮ್ಮ ಕಣ್ಣೆದುರು ಆಡಿ ಬೆಳೆದ, ತಾವೇ ಲಾಲಿಸಿ, ಪಾಲಿಸಿ ಬೆಳೆಸಿದ ಮಕ್ಕಳ ಸಾವನ್ನ ಬಯಸೋದಿಲ್ಲ! ಆದರೆ ಮನುಷ್ಯತ್ವ ಇಲ್ಲದ ಕೆಲವು ಕಡೆ ಇಂಥಾ ಅಮಾನವೀಯ ಕೃತ್ಯಗಳು ನಡೆದು ಹೋಗುತ್ತವೆ. ಅದಕ್ಕೆ ನಿದರ್ಶನ ಈ ಘನಘೋರ ಸಾವು. ಗಂಡು ಮಕ್ಕಳು ಇಲ್ಲದ ಮನೆಯಲ್ಲಿ ಹೆಣ್ಣು ಮಕ್ಕಳಿದ್ರೆ ಅವರ ಮೇಲೆ ವಿಶೇಷವಾದ ಪ್ರೀತಿ, ವಾತ್ಸಲ್ಯ, ಕಾಳಜಿ ಇರುತ್ತೆ. ಅವರನ್ನ ಮದುವೆಯಾಗೋ ಅಳಿಯನನ್ನೇ ಮನೆ ಮಗ ಅಂತಾನೇ ನಂಬ್ತಾರೆ. ಮಗ ಎಂದು ನಂಬಿದ್ದ ಅಳಿಯನೇ ಮಗಳ ಬದುಕನ್ನ ನಾಶ ಮಾಡಿಬಿಟ್ಟ ಎಂಬ ಆರೋಪ ಕೇಳಿ ಬಂದಿದ್ದು, ಅಳಿಯನ ಕುಟುಂಬದ ವಿರುದ್ಧ ಪೋಷಕರು ಆಕ್ರೋಶದ ಜ್ವಾಲೆ ಎದ್ದಿದೆ.
ಮಕ್ಕಳ ಜೊತೆ ತಾಯಿ ಸಾವು.. ಮನಕುಲುತ್ತಿದೆ ಈ ಘೋರ ಘಟನೆ!
ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆ ತಾಲೂಕಿನ ಬೊಮ್ಮನಹಳ್ಳಿ ಗ್ರಾಮದಲ್ಲಿ 25 ವರ್ಷದ ಮೇಘಾ ತನ್ನ ಇಬ್ಬರು ಮಕ್ಕಳೊಂದಿಗೆ ನೇಣು ಬಿಗಿದುಕೊಂಡ ಸ್ಥಿತಿಯಲ್ಲಿ ಶವವಾಗಿ ಪತ್ತೆಯಾಗಿದ್ದಾರೆ. ಈ ಪೈಕಿ ಆರು ವರ್ಷದ ಪುನ್ವಿತಾ ಹಾಗೂ ಮೂರು ವರ್ಷದ ಮಾನ್ವಿತಾ ಇಬ್ಬರು ಪುಟ್ಟ ಕಂದಮ್ಮಗಳು. ಕಳೆದ ಎಂಟು ವರ್ಷಗಳ ಹಿಂದೆ ಗುಂಡ್ಲುಪೇಟೆ ತಾಲೂಕಿನ ಬರಟಹಳ್ಳಿ ಗ್ರಾಮದ ಮಹೇಶ್ ಎಂಬುವರ ಪುತ್ರಿ ಮೇಘಾಳನ್ನ ಬೊಮ್ಮನಹಳ್ಳಿಯ ಅಭಿ ಎಂಬಾತನಿಗೆ ವಿವಾಹ ಮಾಡಿಕೊಡಲಾಗಿತ್ತು. ಇದಾದ ಬಳಿಕ ಕೆಲ ವರ್ಷಗಳು ಇಬ್ಬರು ಸುಖ ಜೀವನ ನಡೆಸಿದ್ದರು. ಇವರ ಸುಖ ಸಂಸಾರಕ್ಕೆ ಇಬ್ಬರು ಮುದ್ದಾದ ಮಕ್ಕಳು ಸಹ ಇದ್ದರು. ಎಲ್ಲಾ ಕುಟುಂಬದಲ್ಲಿ ಇದ್ದಂತೆ ಇವರ ಕುಟುಂಬದಲ್ಲೂ ಸಣ್ಣ ಪುಟ್ಟ ಗಲಾಟೆಗಳು ಇದ್ದವು. ಪ್ರತಿ ಸಲ ಗಲಾಟೆಯಾದಾಗಲೂ ತವರು ಮನೆಯವರು ಬಂದು ಸಮಾಧಾನ ಪಡಿಸಿ ಸಮಸ್ಯೆ ಬಗೆಹರಿಸಿ ಹೋಗ್ತಿದ್ದರಂತೆ. ಆದರೆ ಈ ಸಲ ತವರು ಮನೆಗೆ ಗೊತ್ತಾಗುವಷ್ಟರಲ್ಲೇ ಮೇಘಾ ಮತ್ತು ಇಬ್ಬರು ಮಕ್ಕಳು ಬದುಕು ಅಂತ್ಯವಾಗಿದೆ.
ಮೇಘಾ ಸಾವಿಗೆ ಅಸಲಿ ಕಾರಣವೇನು?
ಇದು ಕೊಲೆಯೋ? ಆತ್ಮಹತ್ಯೆಯೋ?
ಮೇಘಾ ಮತ್ತು ಮಕ್ಕಳ ಸಾವಿನ ಬಗ್ಗೆ ತವರು ಮನೆಯವರು ಸಂಶಯ ವ್ಯಕ್ತಪಡಿಸ್ತಿದ್ದಾರೆ. ಅಳಿಯ ಹಾಗೂ ಆತನ ಮನೆಯವರು ಹಲ್ಲೆ ಮಾಡಿ ಹಿಂಸಿಸಿ ಕೊಂದಿದ್ದಾರೆ ಎಂದು ಆರೋಪ ಮಾಡ್ತಾ ಇದ್ದಾರೆ. ಈ ಕುರಿತು ಮೇಘಾ ಅವರ ತಂದೆ ಮಹೇಶ್ ಮಾತನಾಡಿದ್ದು, ನಮ್ಮ ಮಗಳನ್ನು ಹೊಡೆದು ಕೊಂದಿದ್ದಾರೆ ಎಂದು ಆರೋಪಿಸುತ್ತಿದ್ದಾರೆ. ‘ದುಡ್ಡಿಗಾಗಿ ಮಗಳಿಗೆ ನಿತ್ಯ ಕಿರುಕುಳ ನೀಡ್ತಿದ್ರು, ವ್ಯವಸಾಯ ಮಾಡ್ತಿದ್ದ ಅಳಿಯ ನಷ್ಟವಾದಗೆಲ್ಲಾ ಮಗಳನ್ನ ಹೊಡೆದು ದುಡ್ಡು ತಂದುಕೊಡು ಎಂದು ಪೀಡಿಸ್ತಿದ್ದು, ದುಡ್ಡು ಕೊಟ್ಟಿಲ್ಲ ಅಂತ ಹೊಡೆದು ಸಾಯಿಸಿದ್ದಾನೆ’ ಎಂದು ಭಾವುಕರಾಗಿದ್ದಾರೆ. ಘಟನೆ ನಡೆದ ಹಿಂದಿನ ದಿನವೂ ಸಂಜೆ ಮಗಳು ಮೇಘಾ ತಂದೆ ಮಹೇಶ್ಗೆ ಫೋನ್ ಮಾಡಿದ್ರಂತೆ. ಅಭಿ ಇನ್ನೂ ಮನೆಗೆ ಬಂದಿಲ್ಲ ಎಂದಿದ್ದರಂತೆ. ಆದ್ರೆ ರಾತ್ರಿ ಫೋನ್ ಮಾಡಿದ ಅಭಿ ಮಗಳನ್ನ ಹೊಡೆದು ಸಾಯಿಸಿಬಿಟ್ರು ಅಂತ ಪೋಚಕರಿಗೆ ಆಘಾತ ಕೊಟ್ಟಿದ್ದನಂತೆ. ವಿಷಯ ಕೇಳಿ ಮಗಳಿಗೆ ಏನಾಯ್ತು? ಮೊಮ್ಮಕ್ಕಳಿಗೆ ಏನಾಯ್ತು ಓಡೋಡಿ ಬಂದೋರಿಗೆ ಹೃದಯ ಛಿದ್ರಗೊಳಿಸುವ ದೃಶ್ಯ ಎದುರಾಯ್ತಂತೆ. ಮೇಘಾ ಸಾವಿನ ಬಳಿ ಪತಿ ಅಭಿಯನ್ನ ಪೊಲೀಸರು ಬಂಧಿಸಿದ್ದಾರೆ. ಅತ್ತೆ ಸರೋಜಮ್ಮ ಹಾಗೂ ಮಾವ ಮಲ್ಲಿಕಾರ್ಜುನ ನಾಪತ್ತೆಯಾಗಿದ್ದಾರೆ ಎನ್ನಲಾಗಿದೆ. ಪ್ರಾಥಮಿಕ ತನಿಖೆ ವೇಳೆ ಗಂಡನ ಮನೆಯವರು ಇದನ್ನ ಆತ್ಮಹತ್ಯೆ ಎಂದು ಬಿಂಬಿಸಿದ್ದಾರಂತೆ. ಆದರೆ ಇದು ಆತ್ಮಹತ್ಯೆಯಲ್ಲ ಕೊಲೆ ಎಂದು ಮೇಘಾ ಅವರ ತಂದೆ ಆರೋಪಿಸುತ್ತಿದ್ದಾರೆ.
ಇದನ್ನು ಓದಿ: ಇನ್ಫೋಸಿಸ್‌ಗೆ ಮತ್ತೊಂದು ಹೆಮ್ಮೆಯ ಗರಿ; ವಿಶ್ವದ 100 ಬೆಸ್ಟ್ ಕಂಪನಿಗಳಲ್ಲಿ ಸ್ಥಾನ ಪಡೆದ ಭಾರತದ ಏಕೈಕ ಸಂಸ್ಥೆ
ಪ್ರತಿಯೊಬ್ಬ ತಂದೆಗೂ ಮಕ್ಕಳು ಚೆನ್ನಾಗಿರಬೇಕು ಅನ್ನೋ ಆಸೆ. ಮಗಳ ಮನೆಯಲ್ಲೇ ಎಷ್ಟೇ ಕಷ್ಟಗಳಿದ್ದರೂ ತನ್ನ ಜೇಬಿನಿಂದ ದುಡ್ಡು ತೆಗೆದು ಮಗಳಿಗೆ ಬೇಕಾದುದ್ದನ್ನ ಮಾಡಿಕೊಡೋದನ್ನ ನೋಡಿಕೊಂಡಿರುತ್ತೆವೆ. ಇಲ್ಲಿ ಮೇಘಾ ವಿಷ್ಯದಲ್ಲೂ ಮಹೇಶ್ ಅದನ್ನೇ ಮಾಡಿದ್ದಾರೆ. ಮಗಳು ಚೆನ್ನಾಗಿ ಇರುತ್ತಾಳೆ ಅಂತ ನಂಬಿಕೆಯಿಂದ ಮದುವೆ ಮಾಡಿಕೊಟ್ಟಿದ್ದ ಮಹೇಶ್ ಅವರು ಈಗಲೂ ಮಗಳು-ಅಳಿಯನಿಗೆ ಬೇಕಾದುದ್ದನ್ನ ಮಾಡ್ತಿದ್ರಂತೆ. ಹಬ್ಬಗಳಿಗೆ ಬಟ್ಟೆ, ಒಡವೆ ಎಲ್ಲವೂ ತೆಗೆದುಕೊಡ್ತಿದ್ರಂತೆ. ಆದ್ರೆ ಆ ತಂದೆಯ ನಂಬಿಕೆ ಹುಸಿಯಾಯಿತು. ಈ ದುರ್ಘಟನೆ ನಡೆಯುವುದಕ್ಕೂ ಕೆಲವು ದಿನಗಳ ಹಿಂದೆಯೂ ಅಭಿ ಮತ್ತು ಮೇಘಾ ಮನೆಯಲ್ಲಿ ಜಗಳ ನಡೆದಿತ್ತಂತೆ. ಮೇಘಾ ಅವರ ತಂದೆ ಬಂದ ಊರಿನ ಗ್ರಾಮಸ್ಥರ ಸಮ್ಮುಖದಲ್ಲಿ ಮಾತಾಡಿ ಹಬ್ಬಕ್ಕೆ ಬರ್ತೀನಿ. ಮನೆಗೆ ಕರೆದುಕೊಂಡು ಹೋಗ್ತಿನಿ ಅಂತ ಬಿಟ್ಟು ಹೋಗಿದ್ರಂತೆ. ಆದರೆ ಹಬ್ಬಕ್ಕೆ ಮಗಳನ್ನ ಕರೆದುಕೊಂಡು ಹೋಗೋಕೆ ಬರಬೇಕಿದ್ದ ತಂದೆ ಮಗಳ ಸಾವಿನ ಸಮಾಚಾರ ತಿಳಿದು ಓಡೋಡಿ ಬಂದಿದ್ದಾರೆ.
ಮೇಘಾ ಅವರ ಮನೆಯಲ್ಲಿ ಯಾವಾಗಲೂ ಜಗಳ ನಡೀತಾನೆ ಇರುತ್ತಿತ್ತಂತೆ. ವ್ಯವಸಾಯ ಮಾಡಿ ನಷ್ಟ ಉಂಟಾದಾಗೆಲ್ಲ ತನ್ನ ಪತ್ನಿ ಮೇಘಾಗೆ ತವರು ಮನೆಯಿಂದ ಹಣ ತರುವಂತೆ ಕಿರುಕುಳ ನೀಡುತ್ತಿದ್ದನಂತೆ. ಅಗ್ಗಾಗೆ ಬೆಳೆ ಬೆಳೆಯಲು, ಮತ್ತೆ ವ್ಯವಸಾಯದ ಖರ್ಚಿಗೆ ಹಣ ತರುವಂತೆ ಗಲಾಟೆ ಮಾಡುತ್ತಿದ್ದ. ನಾವು ಎಷ್ಟು ಅಂತ ಹಣ ನೀಡುವುದು, ಹಣ ನೀಡದೆ ಇದ್ದ ಸಂದರ್ಭದಲ್ಲಿ ಗಂಡ ಅತ್ತೆ, ಮಾವ ಎಲ್ಲರೂ ಸೇರಿ ಮೇಘಾಗೇ ಮಾನಸಿಕ ಕಿರುಕುಳ ನೀಡುವುದರ ಜತೆಗೆ ದೈಹಿಕವಾಗಿಯೂ ಚಿತ್ರ ಹಿಂಸೆ ನೀಡುತ್ತಿದ್ದರು. ಇದನ್ನೆಲ್ಲಾ ಮೇಘಾ ವಿಡಿಯೋ ಮತ್ತು ಆಡಿಯೋ ರೆಕಾರ್ಡ್ ಮಾಡಿಟ್ಟುಕೊಂಡಿದ್ದಳು. ಇದೀಗ ರಾತ್ರಿಯೂ ದೈಹಿಕ ಹಿಂಸೆ ನೀಡಿ, ಹೊಡೆದು ನೇಣು ಹಾಕಿದ್ದಾರೆ.
ಗಂಡ ಅಭಿ, ಅತ್ತೆ ಸರೋಜಮ್ಮ ಹಾಗೂ ಮಾವ ಮಲ್ಲಿಕಾರ್ಜುನ ಮೂವರು ಸೇರಿ ಕೊಲೆ ಮಾಡಿ ಆತ್ಮಹತ್ಯೆ ಅಂತ ಬಿಂಬಿಸ್ತಿದ್ದಾರೆ, ಇದು ಆತ್ಮಹತ್ಯೆಯಲ್ಲ ಕೊಲೆ ಅಂತ ಮೇಘಾ ಅವರ ಸಂಬಂಧಿಕರು ಆಗ್ರಹಿಸ್ತಿದ್ದಾರೆ. ಸದ್ಯ ಈ ಸಂಬಂಧ ತೆರಕಣಾಂಬಿ ಪೊಲೀಸ್ ಠಾಣೆಯಲ್ಲಿ ಕೇಸ್ ದಾಖಲಾಗಿದೆ. ಪೊಲೀಸರು ತನಿಖೆನೂ ಆರಂಭಿಸಿದ್ದಾರೆ. ಕ್ಷುಲ್ಲಕ ಕಾರಣಕ್ಕೆ ಮೂರು ಜೀವಗಳು ಪ್ರಾಣ ಬಿಟ್ಟಿವೆ. ಕಣ್ಣ ಮುಂದೆಯೇ ಮಗಳನ್ನ ಕಳೆದುಕೊಂಡವರು ನೋವು ಹೇಳಾತೀರದ್ದು. ಘಟನೇ ಏನೇ ಆಗಿರಲಿ, ಈ ಪ್ರಕರಣದಲ್ಲಿ ತಪ್ಪಿತಸ್ಥರಿಗೆ ಶಿಕ್ಷೆಯಾಗಬೇಕು.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ