/newsfirstlive-kannada/media/post_attachments/wp-content/uploads/2024/08/raichur-4.jpg)
ರಾಯಚೂರು: ಪಾದಯಾತ್ರೆ ಹೊರಟಿದ್ದ ತಾಯಿ ಮಗಳು ರಸ್ತೆ ಅಪಘಾತದಲ್ಲಿ ಬಲಿಯಾದ ಘಟನೆ ಲಿಂಗಸೂಗೂರು ತಾಲ್ಲೂಕಿನ ನಾಗಲಾಪೂರು ಗ್ರಾಮದ ಹೊರವಲಯದಲ್ಲಿ ನಡೆದಿದೆ. ಅಪಘಾತದಲ್ಲಿ ತಾಯಿ ಸಾವನ್ನಪ್ಪಿದ್ದು, ಮಗಳು ಗಂಭೀರವಾಗಿ ಗಾಯಗೊಂಡಿದ್ದಾಳೆ.
ಬೆಳ್ಳಂ ಬೆಳಗ್ಗೆ ತಾಯಿ-ಮಗಳಿಗೆ ಟಾಟಾ ಏಸ್​ ವಾಹನ ಡಿಕ್ಕಿ ಹೊಡೆದಿದೆ. ಡಿಕ್ಕಿ ಹೊಡೆದ ಪರಿಣಾಮ ಭಾಗ್ಯಮ್ಮ (35) ಅಪಘಾತದಲ್ಲಿ ಮೃತಪಟ್ಟಿದ್ದಾರೆ.
ಇದನ್ನೂ ಓದಿ: 81ನೇ ವಯಸ್ಸಿಗೆ ಎರಡನೇ ಮದುವೆಯಾದ ನಿವೃತ್ತ IPS​ ಅಧಿಕಾರಿ.. ಮತ್ತೊಂದು ಮದುವೆಯಾಗಲು ಕಾರಣ?
ಭಾಗ್ಯಮ್ಮ ವ್ಯಾಸ ನಂದಿಹಾಳ ಗ್ರಾಮದ ನಿವಾಸಿಯಾಗಿದ್ದು, ಭಾಗ್ಯಮ್ಮಳ ಮಗಳು ಸಾವು -ಬದುಕಿನ ಮಧ್ಯೆ ಹೋರಾಟ ನಡೆಸುತ್ತಿದ್ದಾಳೆ.
ಇದನ್ನೂ ಓದಿ: Alto K10ನಲ್ಲಿ ಕಾಣಿಸಿಕೊಂಡ ದೋಷ.. 2555 ಕಾರುಗಳನ್ನು ಹಿಂಪಡೆಯಲು ಮುಂದಾದ ಮಾರುತಿ ಸುಜುಕಿ
ಭಾಗ್ಯಮ್ಮ ಛತ್ತರದ ಹನುಮಾನ್ ದೇವಸ್ಥಾನಕ್ಕೆ ಇಬ್ಬರೂ ಪಾದಯಾತ್ರೆ ಹೊರಟಿದ್ದರು. ದೇವರನ್ನು ಕಾಣಲೆಂದು ಮಗಳ ಜೊತೆಗೆ ಹೋಗುತ್ತಿದ್ದರು. ಈ ವೇಳೆ ಟಾಟಾ ಏಸ್ ವಾಹನ ಡಿಕ್ಕಿ ಹೊಡೆದಿದೆ. ಮುದಗಲ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us