newsfirstkannada.com

×

ತಾಯಿ ಕತ್ತು ಹಿಸುಕಿ ಕೊಂ*ದ ಕೇಸ್‌ಗೆ ಹೊಸ ಟ್ವಿಸ್ಟ್‌; ಪ್ರಿಯಕರನ ಜೊತೆ ಮಲಗಿದ್ದ ಮಗಳು ಮಾಡಿದ್ದೇನು?

Share :

Published September 13, 2024 at 10:23pm

Update September 13, 2024 at 10:24pm

    ಸುರೇಶ್ ಎಂಬಾತನೊಂದಿಗೆ ಮಗಳ ಮದುವೆ ಮಾಡಿದ್ದ ತಾಯಿ ಜಯಲಕ್ಷ್ಮಿ

    ಗಂಡ ಕೆಲಸಕ್ಕೆ ಹೋಗುತ್ತಿದ್ದಂತೆ ಪ್ರಿಯಕರನ ಜೊತೆ ಮಗಳ ಸಂಬಂಧ

    ಬೆಡ್‌ ರೂಂನಲ್ಲಿ ಪ್ರಿಯಕರನ ಜೊತೆ ಮಗಳು ಇರುವಾಗ ತಾಯಿ ಎಂಟ್ರಿ!

ಬೆಂಗಳೂರು: ಪ್ರಿಯಕರನೊಂದಿಗೆ ಸೇರಿ ಹೆತ್ತ ತಾಯಿಯನ್ನೇ ಕೊಲೆ ಮಾಡಿರೋ ಭಯಾನಕ ಘಟನೆ ನಗರದ ಹೊಂಗಸಂದ್ರದಲ್ಲಿ ಬೆಳಕಿಗೆ ಬಂದಿದೆ. 46 ವರ್ಷದ ಜಯಲಕ್ಷ್ಮಿ ಮೃತ ದುರ್ದೈವಿ. ಈಕೆಯ ಸಾವಿಗೆ ಕಾರಣವಾಗಿರೋದು ಬೇರೆ ಯಾರೂ ಅಲ್ಲ. 20 ವರ್ಷ ಕಷ್ಟಪಟ್ಟು ಸಾಕಿದ ಮುದ್ದಿನ ಮಗಳು ಪವಿತ್ರಾ.

ಮೃತ ಜಯಲಕ್ಷ್ಮಿ ಅವರು 12 ವರ್ಷದ ಹಿಂದೆ ಸುರೇಶ್ ಎಂಬಾತನೊಂದಿಗೆ ಮಗಳ ಮದುವೆ ಮಾಡಿದ್ದರು. ಸುರೇಶ್ ದಿನಸಿ ಅಂಗಡಿ ನಡೆಸುತ್ತಿದ್ದ. ಇವರಿಬ್ಬರ ಸಂಸಾರ ಚೆನ್ನಾಗಿಯೇ ಇತ್ತು. ಆದರೆ ಪವಿತ್ರಾ, ಲವಲೀಶ್ ಅನ್ನೋ ಪ್ರಿಯಕರನ ಜೊತೆ ಅಕ್ರಮ ಸಂಬಂಧ ಹೊಂದಿದ್ದಳು.

ಇದನ್ನೂ ಓದಿ: ನಾನಿನ್ನೂ ಆರೋಪಿ ಅಪರಾಧಿ ಅಲ್ಲ.. ಬಳ್ಳಾರಿ ಜೈಲಲ್ಲಿ ದರ್ಶನ್ ಮತ್ತೊಂದು ಕಿರಿಕ್‌; ಏನಂದ್ರು? 

ಮನೆಯಲ್ಲಿ ಯಾರು ಇಲ್ಲದ ವೇಳೆ ಪವಿತ್ರಾ ತನ್ನ ಪ್ರಿಯಕರ ಲವಲೀಶ್ ಜೊತೆ ಮಲಗಿದ್ದಳು. ಇದನ್ನು ನೋಡಿದ ಜಯಲಕ್ಷ್ಮಿ ಮಗಳನ್ನು ಪ್ರಶ್ನಿಸಿದ್ದಾರೆ. ಆಗ ಇಬ್ಬರ ಜೊತೆ ಮನೆಯಲ್ಲಿ ಗಲಾಟೆ ಮಾಡಿದ್ದಾರೆ. ಕೊನೆಗೆ ಮಗಳು ಹಾಗೂ ಪ್ರಿಯಕರ ಪಕ್ಕದಲ್ಲೇ ಇದ್ದ ಟವಲ್‌ನಿಂದ ಜಯಲಕ್ಷ್ಮಿ ಅವರ ಕುತ್ತಿಗೆಗೆ ಬಿಗಿದು ಕೊಲೆ ಮಾಡಿದ್ದಾರೆ.

ಪವಿತ್ರಾ, ಲವಲೀಶ್ ಪರಿಚಯ ಹೇಗಾಯ್ತು?
ಪವಿತ್ರಾ ವಾಸವಿದ್ದ ಮನೆಯಲ್ಲಿ ತಮಿಳುನಾಡು ಮೂಲದ ಲವಲೀಶ್ ಬಾಡಿಗೆಗೆ ಬಂದಿದ್ದ. ಸ್ವಲ್ಪ ದಿನದ ಬಳಿಕ ಲವಲೀಶ್‌ ಮದುವೆಯಾಗಿದ್ದ ಪವಿತ್ರಾ ಜೊತೆ ಸ್ನೇಹ ಬೆಳೆಸಿದ್ದಾನೆ. ಗಂಡ ಅಂಗಡಿಗೆ ಹೋಗ್ತಿದ್ದಂತೆ ಪವಿತ್ರಾ ಮನೆಗೆ ಲವಲೀಶ್ ಬರುತ್ತಿದ್ದ. ಇದನ್ನು ಗಮನಿಸಿದ ತಾಯಿ ಜಯಲಕ್ಷ್ಮಿ ಹಲವು ಬಾರಿ ಎಚ್ಚರಿಕೆ ನೀಡಿದ್ದಾರೆ.

ಇದನ್ನೂ ಓದಿ: ಯಾರು ಇಲ್ಲದಿದ್ದಾಗ ಸ್ನೇಹಿತನೊಂದಿಗೆ ಮಲಗಿದ್ದ ಮಗಳು; ಪ್ರಶ್ನಿಸಿದ್ದಕ್ಕೆ ತಾಯಿ ಜೀವವನ್ನೇ ತೆಗೆದುಬಿಟ್ಳು! 

ಕಳೆದ ಸೆಪ್ಟೆಂಬರ್ 11ರಂದು ಮನೆಯಲ್ಲಿ ಯಾರು ಇಲ್ಲದ ವೇಳೆ ಪವಿತ್ರಾ ಹಾಗೂ ಲವಲೀಶ್ ಇಬ್ಬರು ರೂಂನೊಳಗೆ ಸೇರಿಕೊಂಡಿದ್ದರು. ಆಗ ಮನೆಗೆ ಬಂದ ಜಯಲಕ್ಷ್ಮಿ ಇಬ್ಬರ ಜೊತೆ ಜಗಳ ಮಾಡಿದ್ದಾರೆ. ಕೊನೆಗೆ ಇಬ್ಬರೂ ಸೇರಿ ಪವಿತ್ರಾ ತಾಯಿಯ ಪ್ರಾಣ ತೆಗೆದಿದ್ದಾರೆ.

ಜಯಲಕ್ಷ್ಮಿ ಸಾವನ್ನಪ್ಪಿದ ಬಳಿಕ ಪವಿತ್ರಾ ಬಾತ್ ರೂಂನಲ್ಲಿ ಬಿದ್ದು ಸತ್ತಿದ್ದಾರೆ ಎಂದು ನಾಟಕ ಮಾಡಿದ್ದಾರೆ. ಆದರೆ ಮೃತದೇಹ ನೋಡಿದ ಪೊಲೀಸರಿಗೆ ಅನುಮಾನ ಬಂದಿದೆ. ಪೋಸ್ಟ್‌ ಮಾರ್ಟಮ್ ವೇಳೆ ಉಸಿರುಗಟ್ಟಿಸಿ ಪ್ರಾಣ ತೆಗೆದಿರುವುದು ದೃಢವಾಗಿದೆ.

ಪೋಸ್ಟ್‌ ಮಾರ್ಟಮ್ ವರದಿ ಬಂದ ಮೇಲೆ ಬೊಮ್ಮನಹಳ್ಳಿ ಪೊಲೀಸರು FIR ದಾಖಲಿಸಿಕೊಂಡಿದ್ದಾರೆ. ನಂತರ ಪವಿತ್ರಾ ಅವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಭೀಕರ ಘಟನೆಯ ರಹಸ್ಯ ಬಾಯ್ಬಿಟ್ಟಿದ್ದಾರೆ. ಪವಿತ್ರಾ ಮತ್ತು ಪ್ರಿಯಕರ ಲವಲೀಶ್ ಅನ್ನ ಬಂಧಿಸಿರುವ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ತಾಯಿ ಕತ್ತು ಹಿಸುಕಿ ಕೊಂ*ದ ಕೇಸ್‌ಗೆ ಹೊಸ ಟ್ವಿಸ್ಟ್‌; ಪ್ರಿಯಕರನ ಜೊತೆ ಮಲಗಿದ್ದ ಮಗಳು ಮಾಡಿದ್ದೇನು?

https://newsfirstlive.com/wp-content/uploads/2024/09/Bangalore-lady-Death-2.jpg

Load More