newsfirstkannada.com

ಜೈಲಿನಲ್ಲಿ ಗಳಗಳನೆ ಕಣ್ಣೀರಿಟ್ಟ ನಟ ದರ್ಶನ್​​.. ತನ್ನ ತಾಯಿ ಜೊತೆಗೆ ಹೇಳಿದ್ದೇನು?

Share :

Published July 1, 2024 at 11:01pm

Update July 1, 2024 at 11:02pm

  9 ದಿನಗಳ ಬಳಿಕ ಪುತ್ರನನ್ನು ನೋಡಲು ಬಂದ ತಾಯಿ

  ಅಮ್ಮನನ್ನ ನೋಡಿ ಕಣ್ಣೀರು ಹಾಕಿದ ನಟ ದರ್ಶನ್..!

  ಮಗನಿಗೆ ನಾನಿದ್ದೇನೆ ಎಂದು ಧೈರ್ಯ ತುಂಬಿದ ಅಮ್ಮ

ಬೆಂಗಳೂರು: ನಟ ದರ್ಶನ್ ಜೈಲು ವಾಸ 10ನೇ ದಿನಕ್ಕೆ ಕಾಲಿಟ್ಟಿದೆ. ಇಷ್ಟು ದಿನ ಬೇಜಾರಿನಲ್ಲಿದ್ದ ದಾಸ ಈಗ ಕೊಂಚ ರಿಲ್ಯಾಕ್ಸ್ ಆಗಿದ್ದಾರಂತೆ. ಜೈಲಿಗೆ ನಿನ್ನೆ ಪತ್ನಿ ಹಾಗೂ ಪುತ್ರನ ಭೇಟಿ ಬೆನ್ನಲ್ಲೇ ಇಂದು ತಾಯಿ ಹಾಗೂ ಸಹೋದರ ಭೇಟಿ ನೀಡಿದ್ದು, ದರ್ಶನ್ ಕಣ್ಣೀರಿಟ್ಟಿದ್ದಾರೆ.

ರೇಣುಕಾಸ್ವಾಮಿ ಕೊಲೆ ಕೇಸ್​ನಲ್ಲಿ ನಟ ದರ್ಶನ್, ಪವಿತ್ರಾ ಌಂಡ್​ ಗ್ಯಾಂಗ್ ಜೈಲು ಪಾಲಾಗಿದ್ದಾರೆ. ದಾಸನ ಜೈಲುವಾಸ 10ನೇ ದಿನಕ್ಕೆ ಕಾಲಿಟ್ಟಿದೆ. ಈ ನವರಾತ್ರಿಗಳಲ್ಲಿ ಐಷಾರಾಮಿ ಬದುಕಿನಿಂದ ಜೈಲು ವಾಸಕ್ಕೆ ಬಂದಿರುವ ದರ್ಶನ್ ನಡೆವಳಿಕೆಯಲ್ಲಿ ಸಾಕಷ್ಟು ಬದಲಾವಣೆಯಾಗಿದೆ. ಮಾಡಿದ ತಪ್ಪಿಗಾಗಿ ದರ್ಶನ್ ಮೌನಂ ಶರಣಂ ಗಚ್ಚಾಮಿ ಅಂತಿದ್ದಾರೆ. ಪೂರ್ಣ ದುಃಖದಲ್ಲಿರುವ ದಾಸ ತನ್ನ ನೋವನ್ನೆಲ್ಲ ಹೊರಗೆಡವಿ ಸಮಾಧಾನವಾಗಿದ್ದಾರೆ.

9 ದಿನಗಳ ಬಳಿಕ ಪುತ್ರನನ್ನು ನೋಡಲು ಬಂದ ತಾಯಿ

ಇಡೀ ದಿನ ಮೌನವಾಗಿರ್ತಿದ್ದ ದರ್ಶನ್ ಬೇಜಾರಿನಲ್ಲೇ 9 ದಿನ ಕಾಲ ಕಳೆದಿದ್ದರು. ಆ ನೋವನ್ನು ಮರೆಸುವಂತೆ ನಿನ್ನೆ ಪತ್ನಿ ವಿಜಯಲಕ್ಷ್ಮೀ ಹಾಗೂ ಪುತ್ರ ವಿನೀಶ್​ ಜೈಲಿಗೆ ಬಂದು ದರ್ಶನ್ ಭೇಟಿಯಾದಾಗ ದರ್ಶನ್ ಭಾವುಕರಾಗಿದ್ದರು. ನೋವಿನಲ್ಲೇ ತಮ್ಮ ಪರಿಸ್ಥಿತಿಯನ್ನು ನೆನೆದು ದು:ಖಿತರಾಗಿದ್ದರು. ಈ ಬೆನ್ನಲ್ಲೇ ಇಂದು ದರ್ಶನ್​ ಅವರ ತಾಯಿ ಮೀನಾ ಹಾಗೂ ಸಹೋದರ ದಿನಕರ್ ಜೈಲಿಗೆ ಭೇಟಿ ನೀಡಿದ್ದಾರೆ.

ಕೊಲೆ ಕೇಸ್​ನಲ್ಲಿ ಜೈಲು ಪಾಲಾಗಿರುವ ಪುತ್ರ ದರ್ಶನ್​ನನ್ನು ತಾಯಿ ಮೀನಾ ಹಾಗೂ ಸಹೋದರ ದಿನಕರ್ ಭೇಟಿಯಾಗಿದ್ದಾರೆ. ಅಮ್ಮನನ್ನು ಕಂಡು ದಾಸ ಭಾವುಕರಾಗಿ ಕಣ್ಣೀರಾಕಿದ್ದಾರೆ. ಇತ್ತ ಪವಿತ್ರಾ ಭಾವುಕರಾಗಿದ್ದು ದರ್ಶನ್ ಸಮಾಧಾನ ಮಾಡಿದ್ದಾರೆ.

ಅಮ್ಮನನ್ನ ನೋಡಿ ಪರಿಸ್ಥಿತಿ ನೆನೆದು ಕಣ್ಣೀರಾಕಿದ ದರ್ಶನ್

ದರ್ಶನ್​ರಿಂದ ಅಂತರ ಕಾಯ್ದುಕೊಂಡಿದ್ದ ಕುಟುಂಬ ಈಗ ಮಗ ಜೈಲಲ್ಲಿರುವುದನ್ನು ತಾಳಲಾಗದೇ 9 ದಿನಗಳ ಬಳಿಕ ನೋಡಲು ಬಂದಿದ್ರು. ಮಾಧ್ಯಮಗಳ ಕಣ್ತಪ್ಪಿಸಿ ಕುಟುಂಬವನ್ನ ಸಿಬ್ಬಂದಿ ಕರೆದೊಯ್ದಿದ್ದಾರೆ. ಅಮ್ಮ-ಮಗ ಭೇಟಿಯಾದಾಗ ಇಬ್ಬರೂ ಕೂಡ ಭಾವುಕರಾಗಿದ್ದಾರಂತೆ. ದರ್ಶನ್ ಅಮ್ಮನ ಮುಂದೆ ಘಟನೆ ಬಗ್ಗೆ ವಿವರಿಸಿ ತನ್ನ ಪಾತ್ರದ ಬಗ್ಗೆ ಸ್ಪಷ್ಟನೆ ಕೊಟ್ಟಿದ್ದಾರೆ. ಇದಕ್ಕೆ ಪ್ರತಿಕ್ರಿಯಿಸಿದ ಮೀನಾ ತೂಗುದೀಪ ಚಾಮುಂಡೇಶ್ವರಿ ನಮ್ಮ ಜೊತೆಗಿದ್ದಾಳೆಂದು ಪುತ್ರನಿಗೆ ಧೈರ್ಯ ತುಂಬಿದ್ದಾರೆ. ಪ್ರತ್ಯೇಕ ಕೊಠಡಿಯಲ್ಲಿ 45 ನಿಮಿಷ ಮಗನೊಂದಿಗೆ ಮೀನಾ ಮಾತಾಡಿದ್ದಾರೆ. ಇದೇ ವೇಳೆ ಸಹೋದರ ದಿನಕರ್ ಕೂಡ ದರ್ಶನ್​ಗೆ ಸಾಂತ್ವನ ಹೇಳಿದ್ದಾರೆ.

ಇದನ್ನೂ ಓದಿ: ಅಮ್ಮ, ತಮ್ಮನನ್ನು ಕಂಡು ದರ್ಶನ್​ ಕಣ್ಣೀರು.. 45 ನಿಮಿಷಗಳ ಕಾಲ ಜೈಲಿನಲ್ಲಿ ಏನು ಮಾತನಾಡಿದ್ರು ಗೊತ್ತಾ?

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಜೈಲಿನಲ್ಲಿ ಗಳಗಳನೆ ಕಣ್ಣೀರಿಟ್ಟ ನಟ ದರ್ಶನ್​​.. ತನ್ನ ತಾಯಿ ಜೊತೆಗೆ ಹೇಳಿದ್ದೇನು?

https://newsfirstlive.com/wp-content/uploads/2024/07/DARSHAN_FAMILY.jpg

Load More