ಗೃಹಲಕ್ಷ್ಮೀ ಯಾರು? ಮಹಾಲಕ್ಷ್ಮೀ ಯಾರು? ಅತ್ತೆಯಾ ಸೊಸೆಯಾ?
ಒಬ್ಬರಿಗೆ ಕೊಟ್ರೆ ಮತ್ತೊಬ್ಬರಿಗೆ ಅನ್ಯಾಯ ಆಗುತ್ತೆ ಎಂದ ಅತ್ತೆಯರು
ಲಕ್ಷ್ಮೀ ಹೆಬ್ಬಾಳ್ಕರ್ ಕ್ಷೇತ್ರದ ಅತ್ತೆ ಹಾಗೂ ಸೊಸೆಯಂದಿರ ವಾದವೇನು?
ಬೆಳಗಾವಿ: ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಸ್ತಿತ್ವಕ್ಕೆ ಬರುತ್ತಿದ್ದಂತೆ ಗ್ಯಾರಂಟಿ ಯೋಜನೆಗಳ ಗದ್ದಲವೇ ಜೋರಾಗಿದೆ. ಅದರಲ್ಲೂ ಗೃಹಲಕ್ಷ್ಮೀ ಯೋಜನೆಯ ಸದ್ದು, ಗದ್ದಲ ಮನೆ, ಮನೆಗಳಿಗೂ ತಲುಪಿದೆ. ಗೃಹಲಕ್ಷ್ಮೀ ಯೋಜನೆಯ 2000 ರೂಪಾಯಿ ಅತ್ತೆಗಾ, ಸೊಸೆಗಾ ಅನ್ನೋ ಚರ್ಚೆ ಮಾತಿನ ಗುದ್ದಾಟಕ್ಕೆ ಕಾರಣವಾಗಿದೆ.
ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಅವರ ಜಿಲ್ಲೆ ಬೆಳಗಾವಿಯಲ್ಲೂ ಗೃಹಲಕ್ಷ್ಮೀ ಯೋಜನೆಯ ಗಲಾಟೆ ಜೋರಾಗಿದೆ. ಅತ್ತೆಗೆ ಹೇಗಿದ್ರೂ ಮಾಸಾಶನ ಸಿಗುತ್ತೆ. ಅವರಿಗೆ ಅಷ್ಟೊಂದು ಖರ್ಚು ಇರುವುದಿಲ್ಲ. ಹಾಗಾಗಿ ಸೊಸೆಗೆ 2000 ರೂಪಾಯಿ ಮಾಸಾಶನ ನೀಡಬೇಕು ಅಂತಾ ಸೊಸೆಯಂದಿರುವ ಪಟ್ಟು ಹಿಡಿದಿದ್ದಾರೆ. ಇತ್ತ ಸೊಸೆಗೆ ಬೇಡ, ದುಡಿಯಲು ಶಕ್ತಿ ಇಲ್ಲದ ಅತ್ತೆಗೆ ಮಾಸಾಶನ ನೀಡಬೇಕು ಎಂದು ಅತ್ತೆಯರು ವಾದಿಸುತ್ತಿದ್ದಾರೆ.
ನಮ್ಮ ಮನೆಯಲ್ಲಿ ನಾಲ್ಕು ಮಂದಿ ಸೊಸೆಯರಿದ್ದೇವೆ. ಕೊಟ್ಟರೆ ಎಲ್ಲರಿಗೂ ಕೊಡಬೇಕು. ಒಬ್ಬರಿಗೆ ಕೊಟ್ಟರೆ ಮತ್ತೊಬ್ಬರಿಗೆ ಅನ್ಯಾಯ ಆಗುತ್ತೆ. ಅದಕ್ಕಾಗಿ ಕೊಟ್ಟರೆ ಎಲ್ಲರಿಗೂ ಕೊಡಲಿ ಎಂದು ಮನವಿ ಮಾಡಿಕೊಳ್ಳುತ್ತೇವೆ ಎಂದರು. ಈ ಕುರಿತು ಮಾತಾಡಿದ ಮತ್ತೊಬ್ಬ ಕುಟುಂಬದ ಅತ್ತೆ, ಅತ್ತೆ ಹಾಗೂ ಸೊಸೆಗೆ ಇಬ್ಬರಿಗೂ ಕೊಟ್ಟರೆ ಒಳ್ಳೆಯದು. ಮನೆಯ ಒಡತಿ ಎಂದರೆ ಅದು ಅತ್ತೆನೆ. ಹೀಗಾಗಿ ಇಬ್ಬರಲ್ಲೂ ಮನಸ್ತಾಪ ಉಂಟಾಗುತ್ತದೆ. ಹೀಗಾಗಿ ಕೊಟ್ಟರೆ ಇಬ್ಬರಿಗೂ ಕೊಡಲಿ ಎಂದರು.
ಈ ಕುರಿತು ಮಾತಾಡಿದ ಸೊಸೆ, ಸೊಸೆಗೆ 2 ಸಾವಿರ ರೂಪಾಯಿಗಳನ್ನು ಕೊಡಬೇಕು. ಏಕೆಂದರೆ ಅತ್ತೆಯಂದಿರಿಗೆ ವೃದ್ಧಾಪ್ಯ ವೇತನ ಬರುತ್ತದೆ. ಹೀಗಾಗಿ ಸೊಸೆಗೆ ಕೊಡುವುದೇ ಉತ್ತಮ ಎಂದು ಹೇಳಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ