ಕುಡಿದು ತಾಯಿಗೆ ಹಲ್ಲೆ ಮಾಡ್ತಿದ್ದ ಚಾಂದ್ ಪಾಷಾ
ಹಣ ಕೊಡುವಂತೆ ತಾಯಿಯನ್ನ ನಿತ್ಯ ಪೀಡಿಸುತ್ತಿದ್ದ
ಪಾಷಾನ ಕಾಟದಿಂದ ಬಿಟ್ಟು ಹೋಗಿದ್ದ ಆತನ ಹೆಂಡತಿ
ಅಮ್ಮ ಅಂದ್ರೆ, ತ್ಯಾಗದ ಸ್ವರೂಪ. ಮಕ್ಕಳನ್ನ ಹೆತ್ತು ಹೊತ್ತು ಸಾಕಿ ಸಲುಹುವ ತ್ಯಾಗಮಯಿ. ಆದ್ರೆ, ಇಂತಹ ತಾಯಿಗೆ ಪುತ್ರನೇ ದಿನನಿತ್ಯ ಕುಡಿದು ಹಲ್ಲೆ ಮಾಡಿದ್ರೆ ಹೇಗಾಗಬೇಡಿ ಹೇಳಿ. ಮಗನ ಕಾಟಕ್ಕೆ ಬೇಸತ್ತ ತಾಯಿ ತಾನೇ ಹೆತ್ತ ಪುತ್ರನಿಗೆ ಪೆಟ್ರೋಲ್ ಹಾಕಿ ಕೊಂದಿದ್ದಾಳೆ.
ಹೆತ್ತ ಮಗನನ್ನೇ ಪೆಟ್ರೋಲ್ ಹಾಕಿ ಕೊಂದ ತಾಯಿ
ಹೌದು. ಈ ವಿಷಯವನ್ನ ಕೇಳೋಕೆ ಮನಸ್ಸಿಗೆ ಘಾಸವಾಗುತ್ತೆ. ಕಿವಿಗಳಿಗೆ ಕಷ್ಟವಾಗುತ್ತೆ. ತಾಯಿಯೊಬ್ಬಳು ತಾನು ಹೆತ್ತ ಮಗನನ್ನೆ ಕೊಂದಳು ಅಂದಾಗ ಒಂದು ಕ್ಷಣ ನಂಬಲು ಅಸಾಧ್ಯವೆನಿಸುತ್ತೆ. ಆದ್ರೆ, ಇದು ಸತ್ಯ. ನಂಬಲಾಗದ ಕಟು ಸತ್ಯ.
ಹಣ ಕೇಳ್ತಿದ್ದ ಮಗನಿಗೆ ಪೆಟೋಲ್ ಹಾಕಿದ ತಾಯಿ
ಬೆಂಗಳೂರಿನ ಸೋಲದೇವನಹಳ್ಳಿ ಭೀಕರ ಘಟನೆಯೊಂದು ನಡೆದುಬಿಟ್ಟಿದೆ. ತಾಯಿಯೊಬ್ಬಳು ಹೆತ್ತ ಮಗನನ್ನೆ ಪೆಟ್ರೋಲ್ ಹಾಕಿ ಸುಟ್ಟಿದ್ದಾಳೆ. ಕುಡಿದು ಬಂದು ಪ್ರತಿದಿನ ಗಲಾಟೆ ಮಾಡ್ತಿದ್ದಕ್ಕೆ ರೊಚ್ಚಿಗೆದ್ದ ತಾಯಿ, ಮಗನ ಮೇಲೆ ಪೆಟ್ರೋಲ್ ಎರಚಿ ಕೊಂದಿದ್ದಾಳೆ.
ಈತನ ಹೆಸರು ಚಾಂದ್ ಪಾಷಾ. ಈತನ ಕಾಯಕ ನಿತ್ಯ ಕಂಠ ಫೂರ್ತಿ ಕುಡಿಯೋದು. ಮನೆಗೆ ಹೋಗಿ ಅಮ್ಮನ ಬಳಿ ಹಣ ಕೊಡುವಂತೆ ಪೀಡಿಸೋದು. ಅತ್ತ, ಮಗ ನಿತ್ಯ ಕೊಡ್ತಿದ್ದ ಕಾಟದಿಂದ ತಾಯಿ ಸೊಫೀಯಾ ರೋಸಿ ಹೋಗಿದ್ಲು..
ಮಾತಿಗೆ ಮಾತು ಬೆಳದು ಬೆಂಕಿ ಹಂಚಿದ ಪಾಪಿ ತಾಯಿ
ನಿತ್ಯ ಕಂಠ ಪೂರ್ತಿ ಕುಡಿದು ಚಾಂದ್ ಪಾಷಾ, ತಾಯಿ ಮೇಲೆ ಹಲ್ಲೆ ಮಾಡ್ತಿದ್ದ. ಹಣ ಕೊಡುವಂತೆ ಪೀಡುಸ್ತಿದ್ದ. ಈತನ ಕಾಟ ತಾಳಲಾರದೇ ಹೆಂಡತಿ ಕೂಡ ಬಿಟ್ಟು ಹೋಗಿದ್ಲು. ಸಾಕಾಷ್ಟು ಬಾರಿ ಸೋಫಿಯಾ ಮಗನಿಗೆ ಬುದ್ಧಿ ಹೇಳಿದ್ಲಂತೆ. ಆದ್ರೂ, ಮಾತು ಕೇಳದ ಚಾಂದ್ ಪಾಷಾ ಕುಡಿತದ ದಾಸಾನಾಗಿದ್ದ. ಎಂದಿನಂತೆ ನಿನ್ನೆ ಕೂಡ ಸುಮಾರು ಸಂಜೆ 4:30ಕ್ಕೆ ಕಂಠ ಪೂರ್ತಿ ಕುಡಿದು ಮನೆಗೆ ಬಂದಿದ್ದಾನೆ. ತಾಯಿ ಸೋಫಿಯಾಳ ಜೊತೆ ಜಗಳಕ್ಕಿಳಿದಿದ್ದಾನೆ. ಈ ವೇಳೆ ಕೋಪಗೊಂಡ ತಾಯಿ ಆತನ ಮೇಲೆ ಪೆಟ್ರೋಲ್ ಸುರಿದು ಹೆದರಿಸೋಕೆ ಮುಂದಾಗಿದ್ದಾಳೆ. ಬಳಿಕ ತಾಯಿ ಮನಗ ಮಧ್ಯೆ ಮಾತಿಗೆ ಮಾತು ಬೆಳೆದು ತಾಯಿ ಸೋಫಿಯಾ ಕೊನೆಗೂ ಆತನಿಗೆ ಬೆಂಕಿ ಹಚ್ಚಿದ್ದಾಳೆ.
ಇನ್ನು, ಈ ವೇಳೆ ಸ್ಥಳೀಯರು ಕೂಡ ರಕ್ಷಣೆಗೆ ಮುಂದಾಗಿದ್ದಾರೆ. ಬೆಂಕಿಯಲ್ಲಿ ಬೇಯುತ್ತಿದ್ದ ಚಾಂದ್ ಪಾಷಾನಿಗೆ ನೀರು ಎರಚಿದ್ದಾರೆ. ಆದ್ರೆ, ಅದಾಗ್ಲೇ, ಚಾಂದ್ ಪಾಷಾನ ಪ್ರಾಣ ಪಕ್ಷಿ ಹಾರಿ ಹೋಗಿತ್ತು. ಘಟನೆ ನಡೆದ ಸ್ಥಳಕ್ಕೆ ಪೊಲೀಸರು ಜಮಾಸಿದ್ದು, ಪರಿಶೀಲನೆ ನಡೆಸಿದ್ದಾರೆ.
ಒಟ್ಟಾರೆ, ಮಗನನ್ನೇ ಕೊಂದ ತಾಯಿಯನ್ನ ನಗರದ ಸೋಲದೇವನಹಳ್ಳಿ ಪೊಲೀಸರು ಜೈಲಿಗಟ್ಟಿದ್ದಾರೆ. ಅದೇನೆ ಇರ್ಲಿ, ಇತ್ತೀಚೆಗೆ ಬೆಂಗಳೂರಲ್ಲಿ ಕ್ರೈಂ ಕೇಸ್ಗಳೂ ಹೆಚ್ಚಾಗ್ತಿದೆ. ದಿನ ಬೆಳಗಾದ್ರೆ ಸಾಕು ಚಾಕು ಇರಿತ, ಹಲ್ಲೆ, ದರೋಡೆ, ಪೆಟ್ರೋಲ್ ಸುರಿದು ಹತ್ಯೆಯಂತಹ ಪ್ರಕರಣಗಳು ಜನರನ್ನ ಆತಂಕಕ್ಕೆ ದೂಡಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ