ಹಣದ ಆಸೆಗೆ ಮಗಳನ್ನು ಮಾರಾಟ ಮಾಡಿದ ತಾಯಿ
ಪ್ರಿಯಕರನೊಂದಿಗೆ ಜೀವಿಸಲು ಮಗಳಲ್ಲೇ ಮಾರಾಟ ಮಾಡಿದ ಹೆತ್ತಬ್ಬೆ
ಮತ್ತೊಬ್ಬ ಮಗನನ್ನು ಈ ತಾಯಿ ಏನು ಮಾಡಿದ್ದಾಳೆ ಗೊತ್ತಾ?
ಗಂಡನ ಸಾವಿನ ಬಳಿಕ ಹೆಂಡತಿಯೊಬ್ಬಳು ತನ್ನ ಅಪ್ರಾಪ್ತ ಮಗಳನ್ನು ದುಡ್ಡಿಗಾಗಿ ಮಾರಾಟ ಮಾಡಿ ಬಳಿಕ ಪ್ರಿಯಕರನೊಂದಿಗೆ ಪರಾರಿಯಾದ ಘಟನೆ ಜಾರ್ಖಂಡ್ನಲ್ಲಿ ಬೆಳಕಿಗೆ ಬಂದಿದೆ.
ತಾನೇ ಹೆತ್ತ ಮಗಳನ್ನು ಎರಡುವರೆ ಲಕ್ಷಕ್ಕೆ ಬಿಹಾರದ ಮುಜಾಫರ್ಪುರದಲ್ಲಿ ಮಾರಾಟ ಮಾಡಿದ್ದಾಳೆ. ಬಳಿಕ ದೆಹಲಿಯಲ್ಲಿ ನೆಲೆಸಿದ್ದ ಪ್ರಿಯಕರನೊಂದಿಗೆ ಓಡಿ ಹೋಗಿದ್ದಾಳೆ.
ಮಗುವಿನ ಅಜ್ಜ ಮತ್ತು ಚಿಕ್ಕಪ್ಪನ ನೀಡಿದ ದೂರಿನ ಅನ್ವಯ ಮಹಿಳೆ ಮತ್ತು ಆಕೆಯ ಪ್ರಿಯಕರನನ್ನು ಬಂಧಿಸಲಾಗಿದೆ. ಬಳಿಕ ಕೋರ್ಟ್ಗೆ ಹಾಜರುಪಡಿಸಲಾಗಿದೆ.
ಮಹಿಳೆ ಪ್ರಾರಂಭದಲ್ಲಿ ಪುರುಷನೋರ್ವನನ್ನು ವಿವಾಹವಾಗಿ ಮುಜಾಫರ್ ನಗರಕ್ಕೆ ಬಂದು ಬಾಡಿಗೆ ಮನೆಯಲ್ಲಿ ವಾಸಿಸುತ್ತಿದ್ದರು. ಈ ದಂಪತಿಗೆ 2 ಮಕ್ಕಳಿದ್ದರು. ಆದರೆ ಆಕೆಯ ಪತಿ 2 ವರ್ಷದ ಹಿಂದೆ ಸಾವನ್ನಪ್ಪಿದ್ದ. ಇದರಿಂದ ಆಕೆಗೆ ಒಂಟಿಯಾಗಿ ಜೀವನ ನಡೆಸುವುದು ಕಷ್ಟವಾಗಿತ್ತು. ಈ ವೇಳೆ ಯುವಕನೊಬ್ಬನ ಪರಿಚಯವಾಗಿತ್ತು. ಪರಿಚಯ ಪ್ರೀತಿಗೆ ತಿರುಗಿ ಆತನನ್ನು ವಿವಾಹವಾಗಲು ತೀರ್ಮಾನಿಸುತ್ತಾಳೆ.
ಮಹಿಳೆಯ ಮೊದಲ ಮಕ್ಕಳನ್ನು ನೋಡಿಕೊಳ್ಳಲು ಪ್ರಿಯಕರ ಹಿಂದೆ ಸರಿಯುತ್ತಾನೆ. ಇದರಿಂದಾಗಿ ಮಹಿಳೆ ತಾನು ಜನ್ಮ ಕೊಟ್ಟ ಹೆಣ್ಣು ಮಗಳನ್ನು ಮಾರಾಟ ಮಾಡಲು ಮುಂದಾಗುತ್ತಾಳೆ. ಮಗನನ್ನು ಖಾಸಗಿ ಹಾಸ್ಟೇಲ್ನಲ್ಲಿ ಬಿಟ್ಟು ಪ್ರಿಯಕರನನ್ನು ವಿವಾಹವಾಗುತ್ತಾಳೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ