ಭೀಮಾ ನದಿ ಪಾಲಾದ ತಾಯಿ ಮತ್ತು 2 ಮಕ್ಕಳು
ನೀರಿಗಿಳಿದ ತಮ್ಮನನ್ನು ಉಳಿಸಲು ಹೋದ ಅಕ್ಕ
ಬಟ್ಟೆ ತೊಳೆಯಲು ಹೋದ ಮೂವರು ನೀರು ಪಾಲು
ವಿಜಯಪುರ: ಬಟ್ಟೆ ತೊಳೆಯಲು ಹೋಗಿ ತಾಯಿ ಹಾಗೂ ಇಬ್ಬರು ಮಕ್ಕಳು ನದಿ ಪಾಲಾದ ಹೃದಯ ವಿದ್ರಾವಕ ಘಟನೆ ಇಂಡಿ ತಾಲ್ಲೂಕಿನ ಖೇಡಗಿ ಗ್ರಾಮದ ಬಳಿ ನಡೆದಿದೆ. ಭೀಮಾ ನದಿಯಲ್ಲಿ ಬಟ್ಟೆ ತೊಳೆಯಲು ಹೋಗಿದ್ದ ಮೂವರು ಸಾವನ್ನಪ್ಪಿದ್ದಾರೆ.
ತಾಯಿ ಗೀತಾ ಹೊನ್ನೂರ(38), 1ಶೋಭಿತಾ(12), ವಾಸುದೇವ (10) ಮೃತಪಟ್ಟಿರುವ ದುರ್ದೈವಿಗಳು. ಭೀಮಾ ನದಿಯಲ್ಲಿ ತಾಯಿ ಗೀತಾ ಬಟ್ಟೆ ತೊಳೆಯುವಾಗ ವಾಸುದೇವ ನದಿಗೆ ಇಳಿದಿದ್ದಾನೆ. ಇದನ್ನು ಕಂಡು ಅಕ್ಕ ಶೋಭಿತಾ ತಮ್ಮನ್ನು ಉಳಿಸಿಲು ಹೋಗಿದ್ದಾಳೆ. ಆದರೆ ಇಬ್ಬರಿಗೂ ಈಜಲು ಬಾರದೇ ಮುಳುಗಿದ್ದಾರೆ. ಇದನ್ನು ಕಂಡ ತಾಯಿ ತನ್ನ ಮಕ್ಕಳನ್ನು ಉಳಿಸಲು ನೀರಿಗೆ ಹಾರಿದ್ದಾರೆ. ಆಕೆಯೂ ಈಜು ಬಾರದೆ ಇರುವ ಕಾರಣ ಮೂವರು ನೀರು ಪಾಲಾಗಿದ್ದಾರೆ. ಇಂಡಿ ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ