newsfirstkannada.com

ಮೇಜರ್ ಆಶಿಶ್ ತಾಯಿಯಿಂದ ಹೆಮ್ಮೆಯ ಸೆಲ್ಯೂಟ್‌; ಈ ವಿಡಿಯೋ ನೋಡಿದ್ರೆ ಕರುಳು ಕಿತ್ತು ಬರುತ್ತೆ

Share :

15-09-2023

  ಉಗ್ರರ ಜತೆಗಿನ ಎನ್‌ಕೌಂಟರ್ ವೇಳೆ ಜೀವ ಕಳೆದುಕೊಂಡ ಮೇಜರ್ ಆಶಿಶ್

  ದೇಶಕ್ಕಾಗಿ ಪ್ರಾಣ ತ್ಯಾಗ ಮಾಡಿದ ವೀರಯೋಧನಿಗೆ ಜನರಿಂದ ಅಂತಿಮ ನಮನ

  ಪಾನಿಪತ್‌ನಲ್ಲಿ ಮೇಜರ್ ಆಶೀಶ್ ಧೊಂಚಕ್ ಅವರಿಗೆ ಕಣ್ಣೀರಿನ ಬೀಳ್ಕೊಡುಗೆ

ಪಾಣಿಪತ್: ಕಾಶ್ಮೀರದ ಅನಂತ್‌ನಾಗ್ ಜಿಲ್ಲೆಯಲ್ಲಿ ಉಗ್ರರ ವಿರುದ್ಧ ಭಾರತೀಯ ಯೋಧರ ಕಾರ್ಯಾಚರಣೆ ಇನ್ನೂ ನಿಂತಿಲ್ಲ. ಸತತ 50 ಗಂಟೆಗಳಿಂದ ಗುಂಡಿನ ಚಕಮಕಿ ನಡೆದಿದ್ದು, ಭಾರತದ ಮೂವರು ಯೋಧರು ವೀರಮರಣವನ್ನಪ್ಪಿದ್ದಾರೆ. ಎನ್​ಕೌಂಟರ್ ಕಾರ್ಯಾಚರಣೆಯಲ್ಲಿ ಸಾವನ್ನಪ್ಪಿದ ಭಾರತೀಯ ಯೋಧರ ಪಾರ್ಥಿವ ಶರೀರವನ್ನು ಇಂದು ಅವರ ಹುಟ್ಟೂರಿಗೆ ತಲುಪಿಸಲಾಗಿದೆ. ಯೋಧರ ಅಂತಿಮ ದರ್ಶನ ಪಡೆದ ಕುಟುಂಬಸ್ಥರು, ಹೆತ್ತವರ ಆಕ್ರಂದನ ಮುಗಿಲು ಮುಟ್ಟಿದೆ.

ಉಗ್ರರ ಎನ್‌ಕೌಂಟರ್‌ನಲ್ಲಿ ಹರಿಯಾಣದ ಪಾಣಿಪತ್‌ನ ಮೇಜರ್ ಆಶಿಶ್ ಧೋಂಚಕ್ ಅವರು ಹುತಾತ್ಮರಾಗಿದ್ದಾರೆ. ಮೇಜರ್ ಆಶಿಶ್ ಪಾರ್ಥಿವ ಶರೀರವನ್ನು ಮೊಹಾಲಿ ಜಿಲ್ಲೆಯ ಮುಲ್ಲನ್‌ಪುರ ಗರೀಬ್ದಾಸ್ ಟೌನ್‌ಶಿಪ್‌ನಲ್ಲಿರುವ ಭರೌಂಜಿಯಾನ್ ಗ್ರಾಮಕ್ಕೆ ತರಲಾಗಿತ್ತು. ಈ ವೇಳೆ ಮೇಜರ್ ಆಶಿಶ್ ಅವರ ತಾಯಿಯು ಮಗನ ಶೌರ್ಯಕ್ಕೆ ದಾರಿಯುದ್ದಕ್ಕೂ ಸೆಲ್ಯೂಟ್ ಮಾಡುತ್ತಾ ತಮ್ಮ ವಂದನೆ ಸಲ್ಲಿಸಿದ್ದಾರೆ. ಈ ಭಾವನಾತ್ಮಕ ದೃಶ್ಯವನ್ನು ನೋಡಿದ ಅದೆಷ್ಟೋ ಜನರು ಕಂಬನಿ ಮಿಡಿದಿದ್ದಾರೆ.

ಇದನ್ನು ಓದಿ: ಗಣಪತಿ ಹಬ್ಬದ ಎಫೆಕ್ಟ್​​; ದುಬಾರಿ ಆಯ್ತು ಬಸ್​ ಟಿಕೆಟ್​​ ದರ; ರೇಟ್​ ಕೇಳಿದ್ರೆ ಶಾಕ್​ ಆಗ್ತೀರಾ!

ಪಾಣಿಪತ್‌ನ ಭರೌಂಜಿಯಾನ್‌ನ ಇಡೀ ಗ್ರಾಮಸ್ಥರೇ ಭಾರತದ ವೀರಪುತ್ರನಿಗೆ ಅಂತಿಮವಾಗಿ ನಮಸ್ಕರಿಸಲು ಜಮಾಯಿಸಿತ್ತು. ಮೇಜರ್ ಆಶಿಶ್ ಅವರ ಕೊನೆಯ ಯಾತ್ರೆ ಭಾರತ್ ಮಾತಾ ಕೀ ಜೈ ಎಂಬ ಘೋಷಣೆಯೊಂದಿಗೆ ಪ್ರಾರಂಭವಾಯಿತು. ಮಗ ದೇಶಕ್ಕಾಗಿ ಪ್ರಾಣ ತ್ಯಾಗ ಮಾಡಿದ, ತನ್ನ ಮಗ ಎಂದಿಗೂ ಬರುವುದಿಲ್ಲ ಎಂದು ತಾಯಿ ಅತೀವ ದುಃಖಿತರಾಗಿದ್ದರು. ಮಗನ ಹುತಾತ್ಮತೆಗೆ ಕೈ ಎತ್ತಿ ನಮಸ್ಕರಿದ್ದರು. ಹುತಾತ್ಮರ ಕುಟುಂಬದ ಮನೋಭಾವ ಹೇಗಿರುತ್ತದೆ ಎಂಬುದನ್ನು ಇಂದು ಇಡೀ ದೇಶ ಮತ್ತೊಮ್ಮೆ ನೋಡಿದೆ. ಮೇಜರ್ ಆಶಿಶ್ ಸಹೋದರಿ ವಂದೇ ಮಾತರಂ ಕೂಗುತ್ತಾ ಅಣ್ಣನಿಗೆ ಹೆಮ್ಮೆಯಿಂದ ನಮಸ್ಕರಿಸುತ್ತಿದ್ದಳು. ಅತೀವ ದುಃಖದಲ್ಲಿದ್ದ ಆಶಿಶ್ ಅವರ ತಾಯಿ ನನ್ನ ಮೊಮ್ಮಗಳು ತನ್ನ ತಂದೆಯ ಕೆಲಸವನ್ನು ಪೂರ್ಣಗೊಳಿಸುತ್ತಾಳೆ. ಭಯೋತ್ಪಾದಕರ ಸರ್ವನಾಶಕ್ಕೆ ಹೋಗುತ್ತಾಳೆ. ಅವರ ವಿರುದ್ಧ ಸೇಡು ತೀರಿಸಿಕೊಳ್ಳುತ್ತಾಳೆ ಎಂದು ಭಾವುಕರಾಗಿ ಹೇಳಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಮೇಜರ್ ಆಶಿಶ್ ತಾಯಿಯಿಂದ ಹೆಮ್ಮೆಯ ಸೆಲ್ಯೂಟ್‌; ಈ ವಿಡಿಯೋ ನೋಡಿದ್ರೆ ಕರುಳು ಕಿತ್ತು ಬರುತ್ತೆ

https://newsfirstlive.com/wp-content/uploads/2023/09/death-60.jpg

Load More