newsfirstkannada.com

×

ರಾಮಾಚಾರಿ ತಾಳಿ ಕಟ್ಟುವಾಗ ಭಯ ಆಗ್ತಿತ್ತಂತೆ.. ಏಕೆ ಗೊತ್ತಾ? ಕಾರಣ ಬಿಚ್ಚಿಟ್ಟ ಮೌನ ಗುಡ್ಡೆಮನೆ

Share :

Published September 8, 2024 at 8:53am

    ರಾಮಾಚಾರಿ ಸೀರಿಯಲ್ ಮೂಲಕ ಖ್ಯಾತಿ ಪಡೆದ ಮೌನ ಗುಡ್ಡೆಮನೆ

    ಟ್ವಿಸ್ಟ್ ಮೇಲೆ ಟ್ವಿಸ್ಟ್​ ಪಡೆದುಕೊಳ್ಳುತ್ತಿದೆ ರಾಮಾಚಾರಿ ಧಾರಾವಾಹಿ

    ಕನ್ನಡ ಕಿರುತೆರೆಯ ಬ್ಯೂಟಿಫುಲ್ ನಟಿಯರಲ್ಲಿ ಚಾರು ಕೂಡ ಒಬ್ಬರು

ಕಲರ್ಸ್​ ಕನ್ನಡದಲ್ಲಿ ಪ್ರಸಾರವಾಗುತ್ತಿರೋ ರಾಮಾಚಾರಿ ಸೀರಿಯಲ್ ವೀಕ್ಷಕರ ಫೇವರೆಟ್​ ಆಗಿ ಉಳಿದುಕೊಂಡಿದೆ. ಇದೇ ಧಾರಾವಾಹಿಯಲ್ಲಿ ಇತ್ತೀಚೆಗೆ ಶುರುವಾಗಿದ್ದ ರಾಮಾಚಾರಿ ಹಾಗೂ ಚಾರು ಮದುವೆಯ ರೋಚಕ ತಿರುವು ಕೊನೆಗೂ ಅಂತ್ಯ ಕಂಡಿದೆ. ಆದರೆ ವೀಕ್ಷಕರು ರಾಮಾಚಾರಿ ಹಾಗೂ ಚಾರುವಿನ ಅದ್ಧೂರಿ ಮದುವೆಯನ್ನು ಮರೆತಿಲ್ಲ.

ಇದನ್ನೂ ಓದಿ: ಕುಟುಂಬಸ್ಥರ ಸಮ್ಮುಖದಲ್ಲಿ ರಾಮಾಚಾರಿ ಚಾರು ಅದ್ದೂರಿ ಮದುವೆ.. ಹೇಗಿತ್ತು ತೆರೆ ಹಿಂದಿನ ಝಲಕ್..! Video​​

ಹೌದು, ರಾಮಾಚಾರಿಗೆ ಕೆಟ್ಟ ಹೆಸರು ತಂದು ಸಂಸಾರವನ್ನು ಹಾಳು ಮಾಡಬೇಕು ಅಂತಾ ಅಂದುಕೊಂಡಿದ್ದ ಮಾನ್ಯತಾ ಪ್ಲ್ಯಾನ್​ ಪ್ಲಾಫ್​ ಆಗಿತ್ತು. ಅಲ್ಲದೇ ಮುದ್ದಾದ ಮಗಳಿಗೆ ರಾಮಾಚಾರಿಯನ್ನು ಬಿಟ್ಟು ಬೇರೆ ಹುಡುಗನ ಜೊತೆಗೆ ಮದುವೆ ಮಾಡಿಸಬೇಕು ಅಂತ ಅಂದುಕೊಂಡಿದ್ದ ಮಾನ್ಯತಾ ಪ್ಲಾನ್​ ಕೊನೆಗೂ ವರ್ಕ್​ ಆಗಿಲ್ಲ. ಕೊನೆಗೂ ಕುಟುಂಬಸ್ಥರ ಸಮ್ಮುಖದಲ್ಲಿ ಅದರಲ್ಲೂ ಪ್ರೀತಿಯ ತಮ್ಮ ಕೃಷ್ಣನ ಸಮ್ಮುಖದಲ್ಲಿ ರಾಮಾಚಾರಿ ಹಾಗೂ ಚಾರು ಅದ್ಧೂರಿಯಾಗಿ ಮದುವೆಯಾಗಿದ್ದಾರೆ. ರಾಮಾಚಾರಿ ಕುಟುಂಬದ ಮೇಲೆ ಕೆಟ್ಟು ಕಣ್ಣು ಹಾಕಿದ್ದ ವೈಶಾಖ ಹಾಗೂ ಮಾನ್ಯತಾಗೆ ತಕ್ಕ ಪಾಠ ಕಲಿಸುಲು ಚಾರು ಮುಂದಾಗಿದ್ದಾಳೆ.

ಅದ್ಧೂರಿ ಮದುವೆಯಲ್ಲಿ ರಾಮಾಚಾರಿ ತಾಳಿ ಕಟ್ಟುತ್ತಿದ್ದಾಗ ಚಾರು ಭಯ ಪಟ್ಟಿದ್ದಳಂತೆ. ಚಾರು ಪಾತ್ರದಲ್ಲಿ ಅಭಿನಯಿಸುತ್ತಿರೋ ನಟಿ ಮೌನ ಗುಡ್ಡೆಮನೆ ಅವರಿಗೆ ಭಯ ಆಗುತ್ತಿತ್ತಂತೆ. ಹೀಗಾಗಿ ಮೂರು ಗಂಟು ಬದಲು ನಟ ರಿತ್ವಿಕ್ ಕೃಪಾಕರ್ 9 ಗಂಟು ಕಟ್ಟಿದ್ದರಂತೆ. ಈ ಬಗ್ಗೆ ನ್ಯೂಸ್​ ಫಸ್ಟ್​ನೊಂದಿಗೆ ಈ ಇಬ್ಬರು ಮಾತಾಡಿದ್ದಾರೆ. ಮೊದಲ ಸಲ ಮದುವೆಯಾಗಿದ್ದಾಗ ಬೆಟ್ಟದ ಮೇಲೆ ಆಗಿದ್ವಿ. ಬಳಿಕ ಕುಟುಂಬಸ್ಥರ ಸಮ್ಮುಖದಲ್ಲಿ ಅದ್ಧೂರಿಯಾಗಿ ಮದುವೆ ಆದ್ವಿ. ನಾನು ರಾಮಾಚಾರಿಗೆ ಹೇಳುತ್ತಾ ಇದ್ದೆ. ತಾಳಿ ಕಟ್ಟಬೇಡ ಅಂತ. ಆದರೆ ಮದುವೆ ದಿನಗಳು ತುಂಬಾ ಚೆನ್ನಾಗಿತ್ತು ಎಂದಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ರಾಮಾಚಾರಿ ತಾಳಿ ಕಟ್ಟುವಾಗ ಭಯ ಆಗ್ತಿತ್ತಂತೆ.. ಏಕೆ ಗೊತ್ತಾ? ಕಾರಣ ಬಿಚ್ಚಿಟ್ಟ ಮೌನ ಗುಡ್ಡೆಮನೆ

https://newsfirstlive.com/wp-content/uploads/2024/09/ramachari1.jpg

Load More