ತಪ್ಪದೇ ಎಲ್ಲರೂ ನ್ಯೂಸ್ ಫಸ್ಟ್ ವಿಡಿಯೋ ನೋಡಿ ಎಂದ ಸಂಸದ
ಕವಿಗಳು ನಾಡಗೀತೆಯನ್ನು ಹಾಡುವಂತೆ ವಿಡಿಯೋ ಸೃಷ್ಟಿಸಿದ್ದ ಚಾನೆಲ್
ಈಗಾಗಲೇ ರಾಜ್ಯಾದ್ಯಂತ ಮೆಚ್ಚುಗೆ ಗಳಿಸಿರುವ ನ್ಯೂಸ್ ಫಸ್ಟ್ ವಿಡಿಯೋ
ಕನ್ನಡ ರಾಜ್ಯೋತ್ಸವ ಆಚರಣೆ ಹಿನ್ನೆಲೆಯಲ್ಲಿ ನ್ಯೂಸ್ಫಸ್ಟ್ ಚಾನೆಲ್ ಕನ್ನಡದ ಜ್ಞಾನಪೀಠ ಪುರಸ್ಕೃತರು ತಮ್ಮದೇ ಧ್ವನಿಯಲ್ಲಿ ನಾಡಗೀತೆ ಹಾಡಿರುವಂತೆ AI ತಂತ್ರಜ್ಞಾನದ ಮೂಲಕ ವಿಡಿಯೋ ಸೃಷ್ಟಿ ಮಾಡಿತ್ತು. ಇದಕ್ಕೆ ರಾಜ್ಯದ ಸಾಕಷ್ಟು ಜನರು ಮೆಚ್ಚುಗೆ ವ್ಯಕ್ತಪಡಿಸಿರುವ ಬೆನ್ನಲ್ಲೇ ಇದೀಗ ಶಿವಮೊಗ್ಗ ಲೋಕಸಭಾ ಕ್ಷೇತ್ರದ ಸಂಸದ ಬಿ.ವೈ ರಾಘವೇಂದ್ರ ಅವರು ನ್ಯೂಸ್ಫಸ್ಟ್ ಟೀಮ್ಗೆ ಅಭಿನಂದನೆಗಳನ್ನು ತಿಳಿಸಿದ್ದಾರೆ.
ಈ ಬಗ್ಗೆ ತಮ್ಮ ಅಧಿಕೃತ ಫೇಸ್ಬುಕ್ನಲ್ಲಿ ನ್ಯೂಸ್ಫಸ್ಟ್ನ ವಿಡಿಯೋ ಶೇರ್ ಮಾಡಿರುವ ಸಂಸದ ಬಿ.ವೈ ರಾಘವೇಂದ್ರ ಅವರು, ಇದೊಂದು ಅದ್ಭುತ ಪ್ರಯತ್ನ, ಒಂದು ಬೆರಗಿನ ಸೃಷ್ಟಿ. ಯಾಂತ್ರಿಕ ಬುದ್ಧಿಮತ್ತೆ (AI)ಯನ್ನು ಬಳಸಿ ಕನ್ನಡದ ಜ್ಞಾನಪೀಠ ಪುರಸ್ಕೃತರು ತಮ್ಮದೇ ಧ್ವನಿಯಲ್ಲಿ ನಾಡಗೀತೆಯನ್ನು ಹಾಡಿರುವ ಹಾಗೆಯೇ ಸೃಷ್ಟಿಸಿದ್ದಾರೆ. ತಪ್ಪದೇ ಎಲ್ಲರೂ ಈ ವಿಡಿಯೋ ನೋಡಿ, ಕನ್ನಡಿಗರು ಕೇಳಲೇಬೇಕಾದ ಅದ್ಭುತ ದೃಶ್ಯವಿದು ಎಂದು ಹೇಳಿದ್ದಾರೆ.
ಇದನ್ನೂ ಓದಿ: ನಾಡಗೀತೆ ಹಾಡಿದ ಜ್ಞಾನಪೀಠ ಪುರಸ್ಕೃತರು.. ರಾಜ್ಯೋತ್ಸವಕ್ಕೆ ನ್ಯೂಸ್ ಫಸ್ಟ್ನಿಂದ ವಿಶೇಷ ಕೊಡುಗೆ; ತಪ್ಪದೇ ವಿಡಿಯೋ ನೋಡಿ
ತಂತ್ರಜ್ಞಾನದ ಸಾಧ್ಯತೆಗಳನ್ನು ಪಾಸಿಟಿವ್ ಆಗಿ, ಪ್ರೇರಣಾದಾಯಕವಾಗಿ ಬಳಸಿಕೊಳ್ಳುವುದಕ್ಕೆ ಚಾನೆಲ್ನ ಎಂ.ಡಿ, ಸಿಇಓ ರವಿಕುಮಾರ್ ಅವರ ನೇತೃತ್ವದ ತಂಡ ಉತ್ತಮವಾದ ದಾರಿ ತೋರಿಸಿದೆ. ಕರ್ನಾಟಕ ರಾಜ್ಯೋತ್ಸವದ ಸಂದರ್ಭದಲ್ಲಿ ಇದು ಕನ್ನಡ ನಾಡಿಗೆ ನಿಜವಾಗಿಯೂ ಒಂದು ವಿಶೇಷ ಕೊಡುಗೆ. ನ್ಯೂಸ್ ಫಸ್ಟ್ ತಂಡಕ್ಕೆ ಹಾರ್ದಿಕ ಅಭಿನಂದನೆಗಳು ಎಂದು ಸಂಸದ ಬಿ.ವೈ ರಾಘವೇಂದ್ರ ಅವರು ತಿಳಿಸಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ