newsfirstkannada.com

ಬೇರೆಯವರ ಮನೆ ಪಾತ್ರೆ ತೊಳೆದು ಗಂಡನ ಓದಿಸಿದ ಪತ್ನಿ.. ಸರ್ಕಾರಿ ನೌಕರಿ ಸಿಗ್ತಿದ್ದಂತೆ ಹೆಂಡ್ತಿಗೆ ಕೈಕೊಟ್ಟು ಬೇರೆ ಮಹಿಳೆ ಜೊತೆ ಪತಿ ಪರಾರಿ..!

Share :

10-07-2023

    ತೆರಿಗೆ ಆಫೀಸರ್​ ಆಗುತ್ತಿದ್ದಂತೆ ಪತ್ನಿಗೆ ಗುಡ್​ಬಾಯ್ ಹೇಳಿಬಿಟ್ಟ

    ಪತ್ನಿಗೆ ಕೈಕೊಟ್ಟು ಇನ್ನೊಬ್ಬಳ ಜೊತೆ ಹೋದ ಸರ್ಕಾರಿ ಅಧಿಕಾರಿ

    ಪ್ರೀತಿಸಿ ಮದುವೆಯಾದರೂ ನಂಬಲಿಲ್ಲ, ಹಣನೂ ಕೊಡುತ್ತಿಲ್ಲ ಪತಿ

ಇದೊಂದು ಅಪರೂಪದ ಸ್ಟೋರಿ. ಒಂದು ಹೆಣ್ಣು ಹೇಗೆ ಸಮಾಜಕ್ಕೆ ಮಾದರಿ ಆಗಬಲ್ಲಳು ಎಂಬುವುದನ್ನು ಹೇಳ್ತಿದ್ರೆ, ಇನ್ನೊಂದು ಸಿಕ್ಕ ಅವಕಾಶವನ್ನು ಬಳಸಿಕೊಂಡು ಬದುಕಲು ಹೆಗಲುಕೊಟ್ಟ ವ್ಯಕ್ತಿಯ ಬೆನ್ನಿಗೆ ಜನ ಹೇಗೆಲ್ಲ ಚೂರಿ ಹಾಕಿ ಹೋಗ್ತಾರೆ ಅನ್ನೋದು. ಈ ಕತೆಯಲ್ಲಿ ಬದುಕಿನ ಸಾರ್ಥಕತೆಯ ಭಾವ ಇದೆ. ಜೊತೆಗೆ ನಂಬಿದ ವ್ಯಕ್ತಿಗಾಗಿ ವೈಯಕ್ತಿಕ ಬದುಕನ್ನು ತ್ಯಾಗ್ಯ ಮಾಡಿ, ಮೋಸ ಹೋದ ಘಾಸಿಯೂ ಮಾಯವಾಗದಂತೆ ಕೊರೆಯುತ್ತಿರುವ ತಳಮಳವೂ ಇದೆ!

ಈ ಘಟನೆ ನಡೆದಿರೋದು ಮಧ್ಯಪ್ರದೇಶದ ದೇವಾಸ್​ ನಗರದಲ್ಲಿ. ನಗರದ ಮಮತಾ ಅನ್ನೋ ಮಹಿಳೆಗೆ ಈಗಾಗಲೇ ಮದುವೆ ಆಗಿತ್ತು. ಮದುವೆಯಾಗಿ ಕೇವಲ ಎರಡೂವರೆ ವರ್ಷ ಆಗಿತ್ತಷ್ಟೇ. ಅಷ್ಟರಲ್ಲೇ, ಅಕಾಲಿಕವಾಗಿ ಪತಿಯನ್ನು ಕಳೆದುಕೊಳ್ಳುತ್ತಾರೆ ಮಮತಾ. ಈ ಜೋಡಿಗೆ ಮುದ್ದಾದ ಒಂದು ಗಂಡು ಮಗು ಕೂಡ ಇತ್ತು. ಪತಿಯನ್ನು ಕಳೆದುಕೊಂಡ ಮಮತಾ, ಪುತ್ರನ ಜೊತೆ ವಾಸವಿದ್ದಳು.

ಡಿಗ್ರಿ ಓದಿದ್ದ, ನಿರುದ್ಯೋಗಿಯಾಗಿದ್ದ

ಮಗನ ಸಾಕುವ ಜವಾಬ್ದಾರಿ ಮಮತಾಗೆ ಹೆಗಲಿಗೆ ಬಿದ್ದಿತ್ತು. ಹಿನ್ನೆಲೆಯಲ್ಲಿ ಆಕೆ ಬೇರೆಯವರ ಮನೆಗೆ ಕೆಲಸ ಮಾಡಲು ಹೋಗುತ್ತಿದ್ದಳು. ಆಗ, ಕಮ್ರು ಎಂಬಾತನ ಪರಿಚವಾಗುತ್ತದೆ. ಇಬ್ಬರ ನಡುವೆ ಸ್ನೇಹ ಬೆಳೆದು, ಆ ಸ್ನೇಹ ಪ್ರೀತಿಯಾಗಿ ತಿರುಗಿತ್ತು. 2015ರಲ್ಲಿ ಈ ಪ್ರೀತಿ, ಮದುವೆ ಎಂಬ ಬಂಧನಕ್ಕೆ ಬಿಗಿಮುದ್ರೆ ಒತ್ತಿತ್ತು. ಮದುವೆಯಾದ ಹೊಸತರಲ್ಲಿ, ಕಮ್ರು ಆಗಿನ್ನು ಡಿಗ್ರಿ ಮುಗಿಸಿದ್ದ ಅಷ್ಟೇ. ಯಾವುದೇ ಕೆಲಸ ಸಿಗದ ಹಿನ್ನೆಲೆಯಲ್ಲಿ ಆತ ನಿರುದ್ಯೋಗಿ ಆಗಿದ್ದ.

ಪತಿ ಕಮ್ರು ಡಿಗ್ರಿ ಓದಿದ ನಂಬಿಕೆಯಲ್ಲಿದ್ದ ಮಮತಾ, ಸರ್ಕಾರಿ ಕೆಲಸಕ್ಕೆ ಪ್ರಯತ್ನ ಮಾಡುವಂತೆ ಸಲಹೆ ನೀಡುತ್ತಾಳೆ. ಮಾತ್ರವಲ್ಲ, ಆತನಿಗೆ ಓದಲು ಬೇಕಾದ ಎಲ್ಲಾ ರೀತಿಯ ಸಹಾಯ ಮಾಡುತ್ತಾಳೆ. ಪ್ರೋತ್ಸಾಹಿಸುತ್ತಾಳೆ. ನಿನ್ನ ಓದಿನ ಖರ್ಚು ಹಾಗೂ ಮನೆ ಜವಾಬ್ದಾರಿಯನ್ನು ನಾನೇ ನೋಡಿಕೊಳ್ಳುತ್ತೇನೆ ಅಂತಾ ಹೇಳಿ ಓದಿಸಲು ಶುರುಮಾಡ್ತಾಳೆ.

ಪತಿ ನಿಧನ ಬೆನ್ನಲ್ಲೇ ಮಗನೂ ಸಾವು

ಅಷ್ಟರಲ್ಲೇ ಪತಿಯನ್ನು ಕಳೆದುಕೊಂಡಿದ್ದ ಮಮತಾಗೆ ಮತ್ತೊಂದು ಆಘಾತ ಆಗುತ್ತದೆ. ಏನಂದರೆ ಮಗ 15 ತಿಂಗಳು ಪೂರೈಸುತ್ತಿದ್ದಂತೆಯೇ, ಅಮ್ಮನನ್ನು ಬಿಟ್ಟು ಬಾರದ ಲೋಕಕಕ್ಕೆ ಹೋಗ್ತಾನೆ. ನೋವುಗಳ ಸರಮಾಲೆಯೇ ಬಂದರೂ ಧೃತಿಗೆಡದ ಮಮತಾ, ಪತಿಯ ಗೋಲ್​​ಗಾಗಿ ಮನೆಗೆಲಸಕ್ಕೆ ಹೋಗೋದನ್ನು ನಿಲ್ಲಿಸಲಿಲ್ಲ. ಮನೆಯಲ್ಲಿ ಆಶ್ರಯ ನೀಡಿ, ಓದುವಂತೆ ಹುರಿದುಂಬಿಸುತ್ತಾಳೆ.

ಅದರಂತೆ ಕಮ್ರು ಪರೀಕ್ಷೆ ಪಾಸ್ ಆಗಿ 2019-20ರಲ್ಲಿ ವಾಣಿಜ್ಯ ತೆರಿಗೆ ಇಲಾಖೆಯಲ್ಲಿ ಅಧಿಕಾರಿ ಆಗ್ತಾನೆ. ರತ್ಲಾಮ್​ ನಗರಕ್ಕೆ ನೂತನ ಅಧಿಕಾರಿಯಾಗಿ ಸರ್ಕಾರ ನೇಮಕ ಮಾಡಿತ್ತು. ಆದರೆ ಅಧಿಕಾರಿ ಆಗುತ್ತಿದ್ದಂತೆ ಓದಿಸಿದ್ದ ಪತ್ನಿಯನ್ನು ತವರು ಮನೆಗೆ ಕಳುಹಿಸಿದ ಕಮ್ರು, ನಗರದಲ್ಲಿ ಬೇರೆ ಮಹಿಳೆ ಜೊತೆ ಸಂಬಂಧ ಬೆಳಸಿ ಆಕೆಯ ಜೊತೆ ಸಂಸಾರ ಹೂಡಿದ್ದಾನೆ. ಅಂದು ಗಂಡನ ಓದಿಗಾಗಿ ಬೇರೆಯವರ ಮನೆಯಲ್ಲಿ ಮನೆಗೆಲಸ ಮಾಡಿದ್ದ ಮಮತಾಳ ಬದುಕು ಬೀದಿಗೆ ಬಿದ್ದಿದೆ.

ನ್ಯಾಯ ನೀಡುತ್ತಾ ಘನ ನ್ಯಾಯಾಲಯ..? 

‘ಅವರ ಓದಿಗಾಗಿ ಮನೆಗೆಲಸ ಮಾಡಿ, ಹಣ ಸಂಪಾದಿಸಲು ಶ್ರಮ ಪಟ್ಟಿದ್ದೇನೆ. ಈಗ ನನ್ನನ್ನೇ ಬಿಟ್ಟು ಬೇರೆ ಮಹಿಳೆ ಜೊತೆ ವಾಸವಾಗಿದ್ದಾನೆ. ನನಗೆ ಪರಿಹಾರ ಕೊಡಿಸಿ. ಬೇರೆಯವರ ಮನೆಯ ಪಾತ್ರೆಗಳನ್ನು ತೊಳೆದು, ಸಾಕಷ್ಟು ಅಂಗಡಿಗಳಲ್ಲಿ ಕೆಲಸ ಮಾಡಿದ್ದೇನೆ. ಅವರಿಗೆ ಬುಕ್ಸ್, ನೋಟ್ಸ್​ ತೆಗೆದುಕೊಳ್ಳಲು ಹಣ ಸಹಾಯ ಮಾಡಿದ್ದೇನೆ. ಈಗ ನನ್ನ ಬಿಟ್ಟು ಬೇರೆ ಮಹಿಳೆ ಜೊತೆ ಹೋಗಿದ್ದಾರೆ. ನನಗೆ ಸಹಾಯ ಮಾಡಿ ಎಂದು ಮೋಸ ಹೋದ ಮಮತಾ ಕೋರ್ಟ್​​ ಮೆಟ್ಟಿಲೇರಿದ್ದಾರೆ.

2021ರಲ್ಲಿ ಮೋಸ ಹೋಗಿದ್ದು ಗೊತ್ತಾಗುತ್ತಿದ್ದಂತೆಯೇ, ಕಮ್ರು ವಿರುದ್ಧ ಮಮತಾ ಠಾಣೆ ಮೆಟ್ಟಿಲೇರಿದ್ದಳು. ಕೇಸ್ ದಾಖಲಿಸಿದ ಕೂಡಲೇ ಆಕೆಯ ಜೊತೆ ಇರಲು ನಿರಾಕರಿಸಿದ ಕಮ್ರು, ಪ್ರತಿ ತಿಂಗಳು ಆಕೆಗೆ 12 ಸಾವಿರ ರೂಪಾಯಿ ನೀಡಲು ಒಪ್ಪಿದ್ದ. ಆದರೆ ಹಣವನ್ನೇ ಹಾಕಿಲಿಲ್ಲ. ಹೀಗಾಗಿ ನೊಂದ ಮಹಿಳೆ ನ್ಯಾಯಕ್ಕಾಗಿ ಕೋರ್ಟ್​ ಮೆಟ್ಟಿಲೇರಿದ್ದಾಳೆ. ಓದುವ ನೆಪದಲ್ಲಿ ಅದೆಷ್ಟೋ ಮಂದಿ, ಉಳ್ಳವರ ಜೊತೆ ತಮ್ಮ ನೋವುಗಳನ್ನು ಹೇಳಿಕೊಂಡು ಕೊನೆಗೆ ಯಾಮಾರಿಸಿದ ಉದಾಹರಣೆಗಳು ಕಣ್ಮುಂದೆ ಇವೆ. ಆದರೆ, ಪತಿಯ ಓದಿಗಾಗಿ ಪತ್ನಿ ತ್ಯಾಗ ಮಾಡಿ. ಕೊನೆಗೊಂದು ದಿನ ಪತಿಯೇ ಆಕೆಗೆ ಮೋಸ ಮಾಡಿ ಹೋದ ಟ್ರ್ಯಾಜಿಡಿ ಎಂಡಿಂಗ್ ದೊಡ್ಡ ವಿಪರ್ಯ.

ವಿಶೇಷ ವರದಿ: ಭೀಮಪ್ಪ, ಡಿಜಿಟಲ್ ಡೆಸ್ಕ್

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಬೇರೆಯವರ ಮನೆ ಪಾತ್ರೆ ತೊಳೆದು ಗಂಡನ ಓದಿಸಿದ ಪತ್ನಿ.. ಸರ್ಕಾರಿ ನೌಕರಿ ಸಿಗ್ತಿದ್ದಂತೆ ಹೆಂಡ್ತಿಗೆ ಕೈಕೊಟ್ಟು ಬೇರೆ ಮಹಿಳೆ ಜೊತೆ ಪತಿ ಪರಾರಿ..!

https://newsfirstlive.com/wp-content/uploads/2023/07/MARRIAGE-2.jpg

Load More